Latest Updates
-
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ!
ಅಕ್ಟೋಬರ್ ಮಾಸ ಸಿಂಹ ರಾಶಿಯವರಿಗೆ ಈ ವಿಷಯದಲ್ಲಿ ತುಂಬಾನೇ ಶುಭವಾಗಿದೆ
ಅಕ್ಟೋಬರ್ ತಿಂಗಳು ಸಿಂಹ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ
ವೃತ್ತಿ ಜೀವನದಿಂದ ಗುರುವು ಒಂಬತ್ತನೇ ಮನೆಯಲ್ಲಿರುವುದರಿಂದ ಈ ತಿಂಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ವೃತ್ತಿಜೀವನದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದಾಗಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ವಲ್ಪ ಜಾಗರೂಕರಾಗಿರಬೇಕು.

ಸ್ವಂತ ವ್ಯವಹಾರ ನಡೆಸುತ್ತಿರುವವರು ಒಂಬತ್ತನೇ ಮನೆಯಲ್ಲಿ ಸ್ಥಿತವಿರುವುದರಿಂದ ಉತ್ತಮ ಲಾಭದ ಸಾಧ್ಯತೆಗಳಿವೆ. ಈ ತಿಂಗಳು ಪಾಲುದಾರಿಕೆಯಲ್ಲಿ ನೀವು ಹೊಸ ಸಂಸ್ಥೆಯನ್ನು ಕೂಡ ಪ್ರಾರಂಭಿಸಬಹುದು. ಅಕ್ಟೋಬರ್ 2023 ರ ಆರಂಭದಲ್ಲಿ ಶುಕ್ರ ನಿಮ್ಮ ಲಗ್ನ ಮನೆಯಲ್ಲಿ ಇರಲಿದೆ. ಇದರ ಪರಿಣಾಮವಾಗಿ ನಿಮ್ಮ ಜೀವನದಲ್ಲಿ ಪ್ರಗತಿಯನ್ನು ಪಡೆಯಲು ನೀವು ವೃತ್ತಿ ಜೀವನದಲ್ಲಿ ಬದಲಾವಣೆಯನ್ನು ಮಾಡಲು ಆಲೋಚಿಸಬಹುದು.
ಆರ್ಥಿಕ ದೃಷ್ಟಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ಉತ್ತಮವಾಗಿದೆ. ಈ ತಿಂಗಳಿನಲ್ಲಿ ಹಣವನ್ನು ಉಳಿಸಲು ಸಾಧ್ಯವಾಗುವುದು. ಶನಿ 7ನೇ ಮನೆಯಲ್ಲಿ ಇರುವುದರಿಂದ ದುಂದುಗಾರಿಕೆ ಹೆಚ್ಚಾಗಬಹುದು. ಸಂಗಾತಿಯ ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬಹುದು. ಸ್ವಂತ ವ್ಯವಹಾರವನ್ನು ನಡೆಸುತ್ತಿರುವವರು ನಿರೀಕ್ಷಿತ ಲಾಭವನ್ನು ಗಳಿಸುವಲ್ಲಿ ತೊಂದರೆಗಳನ್ನು ಎದುರಿಸಬಹುದು, ಆದರೆ ದೊಡ್ಡ ಸಮಸ್ಯೆ ಇರುವುದಿಲ್ಲ. ಒಟ್ಟಿನಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಗಳಿವೆ. ಹಣದ ಉಳಿತಾಯವೂ ಸಾಧ್ಯವಾಗುತ್ತದೆ.
ಜೀವನ
ಈ ತಿಂಗಳ ರಾಹು-ಕೇತುಗಳ ಸಂಕ್ರಮದಿಂದಾಗಿ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು, ಕಣ್ಣಿನ ಸಮಸ್ಯೆಗಳನ್ನು ಉಂಟುಮಾಡಬಹುದು, ಈ ಅವಧಿಯಲ್ಲಿ ನಿಮ್ಮ ಆಹಾರಕ್ರಮದ ಕಡೆಗೆ ಗಮನಹರಿಸಿ. ಯೋಗ, ಧ್ಯಾನ ಮಾಡಿದರೆ ಒಳ್ಳೆಯದು.
ಪ್ರೀತಿ,ಮದುವೆ, ಕುಟುಂಬ
ಸಂಬಂಧ, ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಈ ತಿಂಗಳು ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದೆ. ಐದನೇ ಮನೆಯ ಅಧಿಪತಿಯಾದ ಗುರುವು ಒಂಬತ್ತನೇ ಮನೆಯಲ್ಲಿ ಸ್ಥಿತನಾಗಿರುವುದರಿಂದ ಪ್ರೇಮ ಸಂಬಂಧಗಳಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಪ್ರೇಮಿಗಳು ಮದುವೆಯಾಗಲು ನಿರ್ಧರಿಸಬಹುದು. ಅವಾಹಿತರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಈ ತಿಂಗಳು ಕೌಟುಂಬಿಕ ಜೀವನ ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಪರಿಹಾರ
"ಓಂ ಭಾಸ್ಕರಾಯ ನಮಃ" ಎಂದು ಪ್ರತಿದಿನ 21 ಬಾರಿ ಜಪಿಸಿ.
ಪ್ರತಿದಿನ ಆದಿತ್ಯ ಹೃದಯಂ ಪಠಿಸಿ.



Click it and Unblock the Notifications