Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಿಥುನ ರಾಶಿಯವರೇ ಅಕ್ಟೋಬರ್ ತಿಂಗಳು ನಿಮಗೆ ಅದೃಷ್ಟದ ಮಾಸ
ಅಕ್ಟೋಬರ್ ತಿಂಗಳು ಮಿಥುನ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:

ವೃತ್ತಿ ಕ್ಷೇತ್ರ
ಮೀನ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ವೃತ್ತಿ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ, ಬರೀ ಅದೃಷ್ಟವನ್ನು ನಂಬಿ ಕೂತರೆ ಸಾಲದು ಶ್ರಮವೂ ಅಗ್ಯತ. ಗುರು ಹನ್ನೊಂದನೇ ಮನೆಯಲ್ಲಿ ಸ್ಥಿತನಾಗಿರುವುದರಿಂದ ನಿಮಗಾಗಿ ಹೊಸ ಉದ್ಯೋಗಾವಕಾಶಗಳನ್ನು ನೀಡುತ್ತಾನೆ. ವಿದೇಶದಲ್ಲಿ ಕೆಲಸದ ಪ್ರಯತ್ನ ಮಾಡುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಉದ್ಯೋಗಿಗಳು ಈ ಅವಧಿಯಲ್ಲಿ ಪ್ರಗತಿಯನ್ನು ಕಾಣುವಿರಿ. ಇನ್ನು ಸ್ವಂತ ವ್ಯವಹಾರ ಮಾಡುತ್ತಿರುವವರು ಈ ಅವಧಿಯಲ್ಲಿ ಲಾಭವನ್ನು ಗಳಿಸುವಿರಿ, ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೂ ಈ ಅವಧಿ ಉತ್ತಮವಾಗಿದೆ. ಒಟ್ಟಿನಲ್ಲಿ ಈ ಅವಧಿ ವೃತ್ತಿ ಜೀವನಕ್ಕೆ ತುಂಬಾನೇ ಅನುಕೂಲಕರವಾಗಿದೆ.
ಆರ್ಥಿಕ ಜೀವನ
ಆರ್ಥಿಕವಾಗಿ ಈ ಅವಧಿ ತುಂಬಾನೇ ಚೆನ್ನಾಗಿದೆ. ಈ ಅವಧಿಯಲ್ಲಿ ನೀವು ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗುವುದು. ಹನ್ನೊಂದನೇ ಮನೆಯಲ್ಲಿ ಇರುವ ರಾಹು ನೀವು ನಿರೀಕ್ಷಿಸಿದಂಎಯೇ ಫಲಿತಾಂಶ ನೀಡಲಿದ್ದಾನೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಉತ್ತಮ ಲಾಭ ಗಳಿಸುತ್ತೀರಿ. ಗುರು-ರಾಹು ಸಂಯೋಗವು ಹನ್ನೊಂದನೇ ಮನೆಯಲ್ಲಿ ನಡೆಯುತ್ತಿದೆ, ಇದರ ಪರಿಣಾಮವಾಗಿ ನಿಮ್ಮ ಗಳಿಕೆಯು ಹೆಚ್ಚಾಗುತ್ತದೆ , ನಿಮ್ಮ ಆರ್ಥಿಕ ಸ್ಥಿತಿಯು ಸಹ ಬಲಗೊಳ್ಳುತ್ತದೆ. ಸ್ವಂತ ವ್ಯಾಪಾರವನ್ನು ನಡೆಸುತ್ತಿರುವವರು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುವುದು. ಹೊಸ ವ್ಯವಹಾರ ಪ್ರಾರಂಭಿಸಲು ಈ ಅವಧಿ ಉತ್ತಮವಾಗಿದೆ. ಈ ಅವಧಿಯಲ್ಲಿ ಸಾಲವನ್ನು ಮರಳಿಸಲು ಸಾಧ್ಯವಾಗುವುದು. ಸ
ಆರೋಗ್ಯ
ಈ ತಿಂಗಳು ಆರೋಗ್ಯ ಕೂಡ ಚೆನ್ನಾಗಿರಲಿದೆ. ಆದರೆ ಮಾನಸಿಕ ಒತ್ತಡ ಸ್ವಲ್ಪ ಅಧಿಕವಾಗಲಿದೆ, ಬೆಳಗ್ಗೆ ಧ್ಯಾನ, ವ್ಯಾಯಾಮ ಮಾಡಿದರೆ ಒಳ್ಳೆಯದು. ಏನದರೂ ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರುವುದು. ಒಟ್ಟಾರೆಯಾಗಿ, ಈ ತಿಂಗಳು ನಿಮ್ಮ ಆರೋಗ್ಯ ಚೆನ್ನಾಗರುತ್ತದೆ.
ಪ್ರೀತಿ, ಕುಟುಂಬ ಜೀವನ
ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಈ ತಿಂಗಳು ಅನುಕೂಲಕರವಾಗಿರುತ್ತದೆ. ಹನ್ನೊಂದನೇ ಮನೆಯಲ್ಲಿ ಗುರು ಮತ್ತು ರಾಹು ಇರುವಿಕೆಯಿಂದಾಗಿ, ನೀವು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೋಡುತ್ತೀರಿ. ಸಂಗಾತಿಯೊಂದಿಗೆ ಹೊಂದಾಣಿಕೆ ಚೆನ್ನಾಗಿರಲಿದೆ. ಮದುವೆಯಾಗಲು ಬಯಸುವವರಿಗೆ ಈ ತಿಂಗಳು ಅನುಕೂಲಕರವಾಗಿದೆ. ಗುರು-ರಾಹು ಸಂಯೋಗದ ಅನುಗ್ರಹ ನಿಮ್ಮ ಮೇಲಿದೆ, ಆದ್ದರಿಂದ ಮದುವೆ ಮಾತುಕತೆಗೆ ಈ ಅವಧಿ ಅನುಕೂಲಕರವಾಗಿದೆ. ಕುಟುಂಬ ಜೀವನದಲ್ಲಿ ಸಂತೋಷ ಕಾಣುವಿರಿ. ಅಕ್ಟೋಬರ್ 1, 2023 ರಿಂದ ಗುರು, ರಾಹು ಮತ್ತು ಅಧಿಪತಿ ಬುಧವು ಜಾತಕದ ನಾಲ್ಕನೇ ಮನೆಯಲ್ಲಿ ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ಈ ಅಕ್ಟೋಬರ್ ತಿಂಗಳು ನಿಮಗೆ ಅದೃಷ್ಟದ ತಿಂಗಳಾಗಲಿದೆ.
ಈ ಮಂತ್ರ ಪಠಣೆ ಮಾಡಿದರೆ ಇನ್ನೂ ಒಳ್ಳೆಯದು
"ಓಂ ನಮೋ ಭಗವತೇ ವಾಸುದೇವಾಯ" ಎಂದು ಪ್ರತಿದಿನ 41 ಬಾರಿ ಜಪಿಸಿ.
"ಓಂ ಬುಧಾಯ ನಮಃ" ಎಂದು ಪ್ರತಿದಿನ 41 ಬಾರಿ ಜಪಿಸಿ.



Click it and Unblock the Notifications
