Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸ ರಾಶಿಫಲ ಪ್ರಕಾರ ಅಕ್ಟೋಬರ್ ತಿಂಗಳು ಮಕರ ರಾಶಿಯವರಿಗೆ ಅನುಕೂಲಕರವೇ?
ಅಕ್ಟೋಬರ್ ತಿಂಗಳು ಮಕರ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ
ಮಕರ ರಾಶಿಯವರ ಅಕ್ಟೋಬರ್ ತಿಂಗಳ ಭವಿಷ್ಯ ನೋಡುವುದಾದರೆ ಈ ತಿಂಗಳಿನಲ್ಲಿ ಮಿಶ್ರಫಲಿತಾಂಶ ಪಡೆಯುವಿರಿ. ಏಕೆಂದರೆ ನಿಮ್ಮ ಎರಡನೇ ಮನೆಯಲ್ಲಿ ಶನಿ, ಹತ್ತನೇ ಮನೆಯಲ್ಲಿ ಕೇತು ಇದೆ. ಎರಡನೇ ಮನೆಯಲ್ಲಿ ಶನಿ ಇದ್ದು ನಿಮಗೆ ಶನಿ ಸಾಡೇಸಾತಿ ನಡೆಯುತ್ತಿದೆ. ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಈ ತಿಂಗಳು ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತೀರಿ. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ವಿದೇಶಕ್ಕೆ ಹೋಗುವ ಆಸೆ ಇರುವವರಿಗೆ ನಿಮ್ಮ ಆಸೆ ನೆರವೇರಲಿದೆ.

ತಿಂಗಳ ಕೊನೆಯಲ್ಲಿ ರಾಹು ಮೂರನೇ ಮನೆಯಲ್ಲಿ, ಕೇತು ಒಂಬತ್ತನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ವೃತ್ತಿಯಲ್ಲಿ ಯಶಸ್ಸು ಪಡೆಯುವಿರಿ. ಶುಕ್ರನು ಎಂಟನೇ ಮನೆಯಲ್ಲಿ ಇರುವುದರಿಂದ ವ್ಯವಹಾರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಸ್ವಂತ ವ್ಯವಹಾರವನ್ನು ಮಾಡುತ್ತಿರುವವರು ಒಳ್ಳೆಯ ಲಾಭ ಗಳಿಸುತ್ತೀರಿ, ಆದರೆ ಕಠಿಣ ಸ್ಪರ್ಧೆ ಕೂಡ ಎದುರಾಗಲಿದೆ. ವ್ಯವಹಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡುವುದು ಒಳ್ಳೆಯದು.
ಆರ್ಥಿಕ ಜೀವನ
ಆರ್ಥಿಕವಾಗಿ ಹೇಳುವುದಾದರೆ ಈ ತಿಂಗಳು ನೀವು ಲಾಭ ಮತ್ತು ನಷ್ಟ ಎರಡನ್ನೂ ಎದುರಿಸಬೇಕಾಗುತ್ತದೆ. ನಿಮ್ಮ ಎರಡನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿದೆ, ಈ ಕಾರಣದಿಂದಾಗಿ ನೀವು ಹಣದ ಸಮಸ್ಯೆಯನ್ನು ಎದುರಿಸಬಹುದು. ಹಣ ಉಳಿತಾಯ ಮಾಡಲು ಕಷ್ಟವಾಗುವುದು. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಖರ್ಚು ಕೂಡ ಅಧಿಕವಿರಲಿದೆ. ಖರ್ಚು ಹೆಚ್ಚಾಗುವುದರಿಂದ ನಿಮ್ಮ ಆರ್ಥಿಕತೆ ಮೇಲೆ ಹೊಡೆತ ಬೀಳಬಹುದು.
ಸ್ವಂತ ವ್ಯವಹಾರಮಾಡುತ್ತಿರುವವರು ಕೆಲವು ಸವಾಲುಗಳನ್ನು ಎದುರಿಸಬಹುದು. ಆದ್ದರಿಂದ ನೀವು ಬಯಸಿದ ಲಾಭವನ್ನು ಗಳಿಸಲು ಸಾಧ್ಯವಾಗದಿರಬಹುದು, ಆರ್ಥಿಕ ನಷ್ಟ ಕೂಡ ಉಂಟಾಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಹಲವು ಸವಾಲುಗಳನ್ನು ಎದುರಿಸಬಹುದು. ಶುಕ್ರನು ಕೂಡ ಅನುಕೂಲಕರ ಸ್ಥಾನದಲ್ಲಿ ಇಲ್ಲ, ಆದ್ದರಿಂದ ಉಳಿತಾಯ ಮಾಡುವುದು ಕಷ್ಟವಾಗುವುದು.
ಆರೋಗ್ಯ ಜೀವನ
ಆರೋಗ್ಯ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಸುಧಾರಣೆ ಕಾಣಬಹುದು. ಈ ತಿಂಗಳ ಕೊನೆಯಲ್ಲಿ ಅಂದರೆ 30 ಅಕ್ಟೋಬರ್ 2023 ರ ಸಮಯದಲ್ಲಿ, ಕೇತು ಒಂಬತ್ತನೇ ಮನೆಗೆ ಮತ್ತು ರಾಹು ಮೂರನೇ ಮನೆಗೆ ಸಂಚರಿಸಲಿದೆ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು. ಆದರೆ ದೊಡ್ಡ ಸಮಸ್ಯೆಗಳಿರಲ್ಲ.
ಪ್ರೀತಿ, ಮದುವೆ, ಕುಟುಂಬ ಜೀವನ
ನಾವು ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಈ ತಿಂಗಳು ನಿಮಗೆ ಸ್ವಲ್ಪ ಕಷ್ಟಕರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ, ಪರಸ್ಪರ ನಂಬಿಕೆಯ ಕೊರತೆ ಉಂಟಾಗಬಹುದು. ಹತ್ತನೇ ಮನೆಯಲ್ಲಿ ಮಂಗಳನ ಉಪಸ್ಥಿತಿಯಿಂದಾಗಿ, ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಕುಟುಂಬ ಜೀವನದಲ್ಲಿ ಏರಳಿತಗಳಿರಬಹುದು. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಈ ರೀತಿ ಉಂಟಾಗಲಿದೆ.
ಪರಿಹಾರ
ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications
