Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಅಕ್ಟೋಬರ್ ಮಾಸದಲ್ಲಿ ಕರ್ಕ ರಾಶಿಯವರೇ ಜಾಗ್ರತೆ
ಅಕ್ಟೋಬರ್ ತಿಂಗಳು ಕರ್ಕ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:

ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ನೀವು ಈ ತಿಂಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹತ್ತನೇ ಮನೆಯಲ್ಲಿ ಗುರುವಿನ ಸ್ಥಾನದಿಂದಾಗಿ, ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗಬಹುದು. ಕೆಲವು ಸಮಸ್ಯೆಗಳನ್ನು ಎದುರಿಸಬಹುದು.
ನಿಮ್ಮ ಎಂಟನೇ ಮನೆಯಲ್ಲಿ ಶನಿದೇವನ ಉಪಸ್ಥಿತಿಯಿಂದಾಗಿ, ನಿಮ್ಮಲ್ಲಿ ಕೆಲವರು ವೃತ್ತಿಯನ್ನು ಬದಲಾಯಿಸಲು ಯೋಚಿಸಬಹುದು. ನಿಮ್ಮ ಕೆಲಸದಲ್ಲಿ ನೀವು ಬಯಸಿದಂತೆ ಪ್ರತಿಫಲ ಸಿಗುವುದು ತಡವಾಗುವುದು. ಅಕ್ಟೋಬರ್ 3, 2023 ರಿಂದ ಹತ್ತನೇ ಮನೆಯ ಅಧಿಪತಿಯಾದ ಮಂಗಳ ನಾಲ್ಕನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ. ಇದರಿಂದ ಕೆಲಸದಲ್ಲಿ ಸವಾಲು, ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಅಕ್ಟೋಬರ್ ತಿಂಗಳಿನಲ್ಲಿ ಯಾವುದೇ ಹೊಸ ಹೂಡಿಕೆ ಮಾಡದಿದ್ದರೆ ಒಳ್ಳೆಯದು.
ಆರ್ಥಿಕ
ಅಕ್ಟೋಬರ್ ತಿಂಗಳಲ್ಲಿ, ಶನಿಯು ಎಂಟನೇ ಮನೆಯಲ್ಲಿ ಮತ್ತು ಗುರು-ರಾಹು ಹತ್ತನೇ ಮನೆಯಲ್ಲಿ ಸ್ಥಿತರಿದ್ದಾರೆ. ಈ ಕಾರಣದಿಂದಾಗಿ, ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹತ್ತನೇ ಮನೆಯಲ್ಲಿ ಗುರುವಿನ ಸ್ಥಾನದಿಂದಾಗಿ ಹಣ ಸಾಲ ಪಡೆದಿದ್ದರೆ ಅದನ್ನು ಮರಳಿಸಲು ಒತ್ತಡವಿರಬಹುದು, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗಲಿದೆ. ಗುರು ನಿಮ್ಮ ಕೆಲಸವನ್ನು ಬದಲಾಯಿಸಲು ಪ್ರಭಾವ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಆರ್ಥಿಕ ಏರಿಳಿತಗಳನ್ನು ಎದುರಿಸಬೇಕಾಗಬಹುದು.
ಸೂರ್ಯನು ನಿಮ್ಮ ಸ್ಥಾನದಲ್ಲಿ ದುರ್ಬಲ ಸ್ಥಾನದಲ್ಲಿದೆ. ಇದರಿಂದ ನೀವು ಹಣವನ್ನು ಪಡೆಯುವಲ್ಲಿ ವಿಳಂಬವಾಗಬಹುದು. ಈ ಅವಧಿಯಲ್ಲಿ ಖರ್ಚು ಅಧಿಕವಿರುವುದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ತಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿರುವವರಿಗೆ ಲಾಭ ಗಳಿಸಲು ಕಷ್ಟವಾಗುವುದು. ಶನಿಯು ಎಂಟನೇ ಮನೆಯಲ್ಲಿ ಸ್ಥಿತರಿರುವುದರಿಂದ ಹಣ ಗಳಿಸುವುದು ಸ್ವಲ್ಪ ಕಷ್ಟವಾಗಬಹುದು. ಈ ತಿಂಗಳಿನಲ್ಲಿ ಯಾವುದೇ ಹೊಸ ವ್ಯವಹಾರದಲ್ಲಿ ನಿಮ್ಮ ಅದೃಷ್ಟವನ್ನು ಪ್ರಯತ್ನಿಸದಿರುವುದು ಉತ್ತಮ. ಇರುವ ಕೆಲಸದ ಕಡೆಗೆ ಅಧಿಕ ಗಮನಹರಿಸಿ.
ಆರೋಗ್ಯ
ಆರೋಗ್ಯದ ದೃಷ್ಟಿಯಿಂದ ನೋಡುವುದಾರೆ ಆರೋಗ್ಯ ಸಮಸ್ಯೆಯಿಂದಾಗಿ ಅಧಿಕ ಹಣ ಖರ್ಚಾಗುವುದು. ಈ ತಿಂಗಳು, ಶನಿಯು ಒಂಬತ್ತನೇ ಮನೆಯಲ್ಲಿ ಸ್ಥಿತರಿದ್ದಾನೆ ಮತ್ತು ಎರಡನೇ ಮನೆಯಲ್ಲಿ ತನ್ನ ಅಂಶವನ್ನು ಹೊಂದಿದ್ದಾನೆ, ಇದರ ಪರಿಣಾಮವಾಗಿ ನಿಮಗೆ ಹಲ್ಲುನೋವು, ಕಾಲುಗಳಲ್ಲಿ ನೋವು ಮತ್ತು ಕಣ್ಣು ನೋವು ಈ ಬಗೆಯ ಸಮಸ್ಯೆ ಉಂಟಾಗಬಹುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಯೋಗ, ಧ್ಯಾನದ ಕಡೆಗೆ ಹೆಚ್ಚಿನ ಗಮನಹರಿಸುವುದು ಒಳ್ಳೆಯದು.
ಪ್ರೀತಿ , ಮದುವೆ, ಕುಟುಂಬ
ನಿಮ್ಮ ರಾಶಿಯಲ್ಲಿ ಎಂಟನೇ ಮನೆಯಲ್ಲಿ ಶನಿ ಮತ್ತು ಹತ್ತನೇ ಮನೆಯಲ್ಲಿ ಗುರು ಇರುವುದರಿಂದ, ಪ್ರೇಮ ಹಾಗೂ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಾಲ್ಕನೇ ಮನೆಯಲ್ಲಿ ಮಂಗಳ ಸ್ಥಿತರಿರುವುದರಿಂದ, ನಿಮ್ಮ ಸಂಬಂಧದಲ್ಲಿ ತರ್ಕಗಳ ಸಾಧ್ಯತೆ ಹೆಚ್ಚು. ಶುಕ್ರ ಕೂಡ ಎರಡನೇ ಮನೆಯಲ್ಲಿದೆ ಇದರ ಪ್ರಬಾವದಿಂದ ಕೂಡ ಕುಟುಂಬ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ತಿಂಗಳಿನಲ್ಲಿ ಸಂಬಂಧದ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು.
ಮದುವೆಯಾಗಲು ಬಯಸುವುದಾದರೆ ಇನ್ನೂ ಸ್ವಲ್ಪ ಸಮಯ ಕಾಯುವುದು ಒಳ್ಳೆಯದು, ಏಕೆಂದರೆ ಈ ಅವಧಿಯಲ್ಲಿ ಕುಟುಂಬದಲ್ಲಿ ಹಲವು ಸಮಸ್ಯೆಗಳು ಉಂಟಾಗುವುದರಿಂದ ಸ್ವಲ್ಪ ಮುಂದೂಡುವುದು ಒಳ್ಳೆಯದು. ಕುಟುಂಬದಲ್ಲಿನ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ. ಅಧಿಕ ಕೋಪ ಪಡುವುದು ಮಾಡಬೇಡಿ. ನೀವು ಮಾಡುವ ಚಿಕ್ಕ ಕಾರ್ಯ ವೈವಾಹಿಕ ಜೀವನದಲ್ಲಿ ದೊಡ್ಡ ಸಮಸ್ಯೆಯನ್ನು ಉಂಟು ಮಾಡಬಹುದು, ಆದ್ದರಿಂದ ಜಾಗ್ರತೆವಹಿಸಿ.
ಪರಿಹಾರ:
ಸೂರ್ಯನಿಗೆ ಆರ್ಘ್ಯ ಅರ್ಪಿಸಿ
ಸೋಮವಾರ ಉಪವಾಸ ಮಾಡಿದರೆ ಒಳ್ಳೆಯದು.



Click it and Unblock the Notifications