Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಾಸ ಭವಿಷ್ಯ ಪ್ರಕಾರ ಅಕ್ಟೋಬರ್ ತಿಂಗಳು ಮೇಷ ರಾಶಿಯರಿಗೆ ಹೇಗಿರಲಿದೆ?
ಅಕ್ಟೋಬರ್ ತಿಂಗಳು ಮೇಷ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ . ಗ್ರಹಗಳು ನಿಮಗೆ ಅನುಕೂಲಕ ಸ್ಥಾನದಲ್ಲಿ ಇರುವುದರಿಂದ ವೃತ್ತಿ ಜೀವನಕ್ಕೆ ಉತ್ತಮವಾಗಿದೆ. ಅದರಲ್ಲೂ ಮಂಗಳನ ಸ್ಥಾನದಿಂದಾಗಿ ಈ ತಿಂಗಳು ತುಂಬಾನೇ ವಿಶೇಷವಾಗಿರಲಿದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿ ಉತ್ತಮ ಅವಕಾಶ ದೊರೆಯಲಿದೆ.

ರಾಹು ಮೊದಲ ಮನೆಯಲ್ಲಿ ಇರುವುದರಿಂದ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ನಿಮಗೆ ಉತ್ತಮ ಅವಕಾಶಗಳು ದೊರೆಯಲಿದೆ. ಈ ಅವಧಿಯಲ್ಲಿ ಸ್ವಂತ ವ್ಯವಹಾರ ಮಾಡುವವರಿಗೆ ತುಂಬಾನೇ ಚೆನ್ನಾಗಿರಲಿದೆ. ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯಬಹುದು. ಆದ್ದರಿಂದ ಈ ತಿಂಗಳು ವ್ಯಾಪಾರಸ್ಥರು ತುಂಬಾ ಖುಷಿಯಾಗಿರುವಿರಿ.
ಆರ್ಥಿಕ ಸ್ಥಿತಿ
ಈ ತಿಂಗಳು ಆರ್ಥಿಕ ದೃಷ್ಟಿಯಿಂದ ಸಾಧಾರಣವಾಗಿದೆ. ಮಂಗಳನ ಸ್ಥಾನದಿಂದಾಗಿ, ನೀವು ಈ ತಿಂಗಳು ಲಾಭವನ್ನು ಗಳಿಸಲು ಸಾಧ್ಯವಾಗುವುದು. ಆದರೆ ಮೊದಲ ಮನೆಯಲ್ಲಿ ಗುರು ಮತ್ತು ರಾಹು ಉಪಸ್ಥಿತಿಯು ನಿಮ್ಮ ಖರ್ಚುಗಳನ್ನು ಹೆಚ್ಚಿಸುವುದು. ಹನ್ನೊಂದನೇ ಮನೆಯಲ್ಲಿ ಶನಿಯು ಹಿಮ್ಮುಖ ಸ್ಥಿತಿಯಲ್ಲಿರುವುದರಿಂದ, ನೀವು ಹಣವನ್ನು ಗಳಿಸಲು ಸಾಧ್ಯವಾಗುವುದು. ಅಲ್ಲದೆ ಈ ತಿಂಗಳು ಅನಗ್ಯತ ಖರ್ಚು ಬರುವ ಸಾಧ್ಯತೆ ಇದೆ. ಆದರೆ ಪ್ರಯಾಣ ಮಾಡುವಾಗ ಜಾಗ್ರತೆವಹಿಸಿ, ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಆದ್ದರಿಂದ ಸ್ವಲ್ಪ ಜಾಗ್ರತೆವಹಿಸಿ.
ಸ್ವಂತ ವ್ಯವಹಾರವನ್ನು ನಡೆಸುತ್ತಿರುವವರು ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗುವುದು. ಆದರೆ ರಾಹು-ಕೇತು ಕ್ರಮವಾಗಿ ಮೊದಲ-ಏಳನೇ ಮನೆಯಲ್ಲಿ ಮತ್ತು ಗುರು ಮೊದಲ ಮನೆಯಲ್ಲಿ ಸ್ಥಿತರಿರುವುದರಿಂದ, ಈ ತಿಂಗಳಲ್ಲಿ ನೀವು ನಿಮ್ಮ ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಆದರೆ ಉತ್ತಮ ಲಾಭವನ್ನು ಗಳಿಸಲು ಕೂಡ ಸಾಧ್ಯವಾಗುವುದು.
ಆರೋಗ್ಯ
ಆರೋಗ್ಯದ ಬಗ್ಗೆ ಹೇಳುವುದಾದರೆ ಈ ತಿಂಗಳು ನೀವು ಜಾಗ್ರತೆವಹಿಸಬೇಕಾಗಿದೆ. ರಾಹು-ಕೇತು ಕ್ರಮವಾಗಿ ಮೊದಲ-ಏಳನೇ ಮನೆಯಲ್ಲಿ ಸ್ಥಿತರಿದ್ದಾರೆ. ಐದನೇ ಮನೆಯ ಮೇಲೆ ಗುರುಗ್ರಹದ ಮಂಗಳಕರ ಅಂಶವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಆದರೆ ಮೊದಲ ಮನೆಯಲ್ಲಿ ರಾಹು ಮತ್ತು ಏಳನೇ ಮನೆಯಲ್ಲಿ ಕೇತು ಇರುವುದರಿಂದ ನೀವು ನರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ಎದುರಿಸಬಹುದು. ನಿಮ್ಮ ದೈಹಿಕ ಆರೋಗ್ಯದಲ್ಲಿ ಸುಧಾರಣೆ ತರುತ್ತಾನೆ. ನೀವು ನಿಮ್ಮ ಸಂಗಾತಿಯ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು.
ಪ್ರೀತಿ, ಮದುವೆ
ಈ ತಿಂಗಳು ವಿವಾಹಿತರಿಗೆ, ಪ್ರೇಮಿಗಳಿಗೆ ಚೆನ್ನಾಗಿರಲಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಇನ್ನು ವಿವಾಹಕ್ಕೆ ಸಂಬಂಧ ಹುಡುಕುತ್ತಿದ್ದರೆ ಈ ತಿಂಗಳು ಒಳ್ಳೆಯ ಸಂಬಂಧ ಕೂಡಿ ಬರಬಹುದು.
ಕುಟುಂಬದಲ್ಲಿ ಕೆಲ ಏರಳಿತಗಳಿರಬಹುದು, ಆದರೆ ಕೋಪಗೊಳ್ಳದೆ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ವಿವಾದಗಳು ಉಂಟಾಗಬಹುದು.
ಪರಿಹಾರ
ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ
ಮಂಗಳವಾರ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.



Click it and Unblock the Notifications
