ಸಂಖ್ಯಾಶಾಸ್ತ್ರ ಪ್ರಕಾರ ಅಕ್ಟೋಬರ್ ತಿಂಗಳು ನಿಮ್ಮ ಸಂಖ್ಯೆಗೆ ಹೇಗಿರಲಿದೆ?

ಸಂಖ್ಯಾಶಾಸ್ತ್ರ ಪ್ರಕಾರ ಅಕ್ಟೋಬರ್ ತಿಂಗಳ ಭವಿಷ್ಯ ನೀಡಲಾಗಿದ್ದು ನಿಮ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಸಂಖ್ಯೆ 1 (ಜನ್ಮ ದಿನಾಂಕ 1,10,19,28)
ಅಕ್ಟೋಬರ್ ತಿಂಗಳು ನಿಮಗೆ ಮಿಶ್ರ ಫಲಿತಾಂಶ. ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದು. ಆದರೆ ಅನೇಕ ಸಂದರ್ಭಗಳಲ್ಲಿ ನೀವು ತುಂಬಾನೇ ಬುದ್ಧಿವಂತಿಕೆಯಿಂದ ವರ್ತಿಸಲು ಸಲಹೆ ನೀಡಲಾಗುವುದು. ತಿಂಗಳ ಅಂತ್ಯವು ನಿಮಗೆ ತುಂಬಾ ವಿಶೇಷವಾಗಿರಲಿದೆ. ಈ ಅವಧಿಯಲ್ಲಿ, ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿದೆ.

Numerology Prediction Of October

ಸಂಖ್ಯೆ 2 ( ಜನ್ಮ ದಿನಾಂಕ 2,11,20,29)
ಈ ತಿಂಗಳಿನಲ್ಲಿ ನೀವು ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ.ಈ ಅವಧಿಯಲ್ಲಿ ಹೊಸ ಉದ್ಯೋಗಗಳು ದೊರೆಯಲಿದೆ. ಸಂಬಂಧಗಳಲ್ಲಿ ಸಾಮರಸ್ಯ ಇರಲಿದೆ. ವಿಶೇಷವಾಗಿ ನಿಮ್ಮ ತಂದೆಯೊಂದಿಗೆ ನಿಮ್ಮ ಹೊಂದಾಣಿಕೆಯು ಇನ್ನೂ ಉತ್ತಮವಾಗಿರುತ್ತದೆ. ಈ ತಿಂಗಳಿನಲ್ಲಿ ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಈ ಪ್ರಯಾಣ ನಿಮಗೆ ಲಾಭದಾಯಕವಾಗಿರಲಿದೆ.

ಸಂಖ್ಯೆ 3 (ಜನ್ಮ ದಿನಾಂಕ 3,12,21,30)
ವೈವಾಹಿಕ ಜೀವನದಲ್ಲಿ ಸಂತ ಇರಲಿದೆ. ನಿಮ್ಮ ನಡುವಿನ ಪ್ರೀತಿ ಮತ್ತಷ್ಟು ಹೆಚ್ಚಾಗುವುದು. ಪ್ರೇಮಿಗಳು ಮದುವೆಯಾಗಲು ಬಯಸಿದರೆ ಕುಟುಂಬದ ಒಪ್ಪಿಗೆ ಪಡೆಯಲು ಈ ತಿಂಗಳು ಅನುಕೂಲಕರವಾಗಿದೆ. ಕೆಲಸದ ವಿಷಯದಲ್ಲಿ ಈ ತಿಂಗಳು ನಿಮಗೆ ತುಂಬಾನೇ ಉತ್ತಮವಾಗಿರಲಿದೆ. ವಿಶೇಷವಾಗಿ ನೀವು ಶಿಕ್ಷಣ ಕ್ಷೇತ್ರದ ಜೊತೆ ಸಂಬಂಧ ಹೊಂದಿದ್ದರೆ, ನೀವು ಉತ್ತಮ ಯಶಸ್ಸನ್ನು ಪಡೆಯಬಹುದು.

ಸಂಖ್ಯೆ 4 (ಜನ್ಮ ದಿನಾಂಕ 4,13,22,31)
ಈ ಸಮಯದಲ್ಲಿ ನೀವು ತುಂಬಾ ಸೌಜನ್ಯದಿಂದ ವರ್ತಿಸಬೇಕು. ಸಮಾಜ ಸೇವೆಯಲ್ಲಿ ಆಸಕ್ತಿ ತೋರಿಸಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು. ಈ ತಿಂಗಳು ನೀವು ನಿಮ್ಮ ನಿರ್ಧಾರಗಳನ್ನು ಬಹಳ ಆಲೋಚಿಸಿ ತೆಗೆದುಕೊಳ್ಳುವುದರಿಂದ ಈ ಅವಧಿ ಉತ್ತಮವಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ನೀವು ಆರೋಗ್ಯಕರ ದಿನಚರಿ ಪಾಲಿಸಿ. ಇದರ ಹೊರತಾಗಿ, ಮಾನಸಿಕವಾಗಿ ದೃಢವಾಗಿರಲು, ನೀವು ಪ್ರತಿದಿನ ಧ್ಯಾನ ಮಾಡಬೇಕು.

ಸಂಖ್ಯೆ 5 (ಜನ್ಮ ದಿನಾಂಕ 5,14,23)
ಕೋಪ ಮತ್ತು ಅಹಂಕಾರದಿಂದ ಸಂಬಂಧಗಳಲ್ಲಿ ಅಂತರ ಹೆಚ್ಚಾಗಬಹುದು. ತಿಂಗಳ ಮಧ್ಯದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ನೀವು ಯಾವುದೇ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಮಾಡುತ್ತಿದ್ದರೆ ಈ ಅವಧಿಯಲ್ಲಿ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವವರಿಗೆ ಒಳ್ಳೆಯ ಅವಕಾಶ ಸಿಗಬಹುದು. ಆರ್ಥಿಕ ಸಮಸ್ಯೆ ತಡೆಗಟ್ಟಲು ನೀವು ಉಳಿತಾಯದ ಕಡೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಖರ್ಚುಗಳ ಪಟ್ಟಿಯನ್ನು ಕಡಿತಗೊಳಿಸುವ ಮೂಲಕ ನೀವು ಆರ್ಥಿಕ ಬಿಕ್ಕಟ್ಟು ತಡೆಗಟ್ಟಬಹುದು. ಆರೋಗ್ಯದ ವಿಷಯದಲ್ಲಿ ಈ ತಿಂಗಳು ನಿಮಗೆ ಮಿಶ್ರಫಲ.

ಸಂಖ್ಯೆ 6 (ಜನ್ಮ ದಿನಾಂಕ 6,15,24)
ಇಂದು ತರಾತುರಿಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವಿಶೇಷವಾಗಿ ನೀವು ಯಾವುದೇ ರೀತಿಯ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಈ ಅವಧಿಯಲ್ಲಿ, ಸಂಘರ್ಷಗಳಿಂದ ದೂರವಿರಲು ನಿಮಗೆ ಸಲಹೆ ನೀಡಲಾಗುತ್ತದೆ, ಇಲ್ಲದಿದ್ದರೆ ನೀವು ಕಾನೂನು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ತಿಂಗಳ ಮಧ್ಯದಲ್ಲಿ ನೀವು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ನಿಮ್ಮ ಈ ಪ್ರಯಾಣವು ಕೆಲಸಕ್ಕೆ ಸಂಬಂಧಿಸಿದೆ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಸಂಖ್ಯೆ 7 (ಜನ್ಮ ದಿನಾಂಕ 7,16,25)
ವೈವಾಹಿಕ ಜೀವನವಿರಲಿ ಅಥವಾ ಪ್ರೇಮ ಜೀವನವಿರಲಿ ಯಾವುದೇ ರೀತಿಯ ತಪ್ಪುಗಳಾಗದಂತೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಸಂಬಂಧವನ್ನು ಬಲಪಡಿಸಲು, ನೀವು ಪರಸ್ಪರರ ಭಾವನೆಗಳನ್ನು ಗೌರವಿಸಬೇಕು. ಈ ತಿಂಗಳು ಉದ್ಯಮಿಗಳು ಎಚ್ಚರಿಕೆವಹಿಸಬೇಕು. ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ಕಾನೂನು ಅಡೆತಡೆಗಳು ಉಂಟಾಗುವುದು. ಅಂತಹ ಪರಿಸ್ಥಿತಿಯಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು.

ಸಂಖ್ಯೆ 8 (ಜನ್ಮ ದಿನಾಂಕ 8,17,26)
ಬೇಡದ ವಿಷಯಗಳಿಗೆ ನಿಮ್ಮ ಶಕ್ತಿಯನ್ನು ವ್ಯಯ ಮಾಡಬೇಡಿ. ನಿಮ್ಮ ಕೆಲಸದ ಬಗ್ಗೆ ಯಾವುದೇ ರೀತಿಯಲ್ಲಿ ಅಜಾಗರೂಕರಾಗಿರಬೇಡಿ. ನೀವು ನಿಮ್ಮ ಕೈಲಾದಷ್ಟು ನೀಡಿದರೆ, ನೀವು ಶೀಘ್ರದಲ್ಲೇ ಪ್ರಗತಿ ಹೊಂದುತ್ತೀರಿ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಈ ತಿಂಗಳು ಯಾವುದೇ ಕಾನೂನು ಬಾಹಿರ ಕೆಲಸ ಮಾಡದಂತೆ ಸೂಚಿಸಲಾಗಿದೆ.

ಸಂಖ್ಯೆ 9(ಜನ್ಮ ದಿನಾಂಕ 9,18,27)
ನೀವು ಮಾನಸಿಕವಾಗಿ ತುಂಬಾ ಸದೃಢರಾಗಿರುತ್ತೀರಿ, ಪ್ರತಿ ನಿರ್ಧಾರವನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುತ್ತೀರಿ. ತಿಂಗಳ ಮಧ್ಯದಲ್ಲಿ ನೀವು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಕೆಲಸವನ್ನು ಗಮನವಿಟ್ಟು ಮಾಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನೀವು ಹೊಸ ಆಸ್ತಿಯನ್ನು ಸಹ ಖರೀದಿಸಬಹುದು. ತಿಂಗಳ ಕೊನೆಯಲ್ಲಿ ನೀವು ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತೀರಿ.

English summary

Numerology Prediction Of October Month 2023

Here are numerology prediction of October month 2023, read on...
Story first published: Sunday, October 1, 2023, 10:37 [IST]
X
Desktop Bottom Promotion