ಸಂಖ್ಯಾಶಾಸ್ತ್ರ ಪ್ರಕಾರ ಜೂನ್ ತಿಂಗಳು ನಿಮ್ಮ ಸಂಖ್ಯೆ ಶುಭನಾ ಅಥವಾ ಜಾಗ್ರತೆವಹಿಸಬೇಕಾ?

ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದಲ್ಲಿ 1-9 ಸಂಖ್ಯೆಗಳು ಬರುವುದು, ಉದಾಹರಣೆಗೆ ನಿಮ್ಮ ದಿನಾಂಕ 10 ಆದರೆ ನಿಮ್ಮ ಸಂಖ್ಯೆ 1+0=1 ಆಗಿದೆ. ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ದಿನಾಂಕಕ್ಕೆ ಅನುಸಾರ ಜೂನ್‌ ತಿಂಗಳ ಭವಿಷ್ಯ ಹೇಳಲಾಗಿದೆ ನೋಡಿ:

ಸಂಖ್ಯೆ 1(ಜನ್ಮ ದಿನಾಂಕ1, 10, 19, 28)
ಈ ತಿಂಗಳು ನಿಮಗೆ ತುಂಬಾ ಶುಭವಾಗಿರಲಿದೆ. ಅದೃಷ್ಟದ ಬೆಂಬಲವಿರುವುದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳಲಿದೆ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಉದ್ಯೋಗಿಗಳಿಗೆ ಬದಲಾವಣೆಯ ಸಮಯ ನಡೆಯುತ್ತಿದೆ. ನೀವು ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ನೀವು ಒಳ್ಳೆಯ ಕಂಪನಿಯಿಂದ ಆಫರ್ ಪಡೆಯಬಹುದು. ಹಣದ ವಿಷಯದಲ್ಲಿ ಈ ಸಮಯ ನಿಮಗೆ ತುಂಬಾ ಅದೃಷ್ಟಕರವಾಗಿದೆ. ಆದಾಯ ಉತ್ತಮವಾಗಿರುತ್ತದೆ. ತುಂಬಾ ಸಮಯದಿಂದ ನಿಮಗೆ ಬರಬೇಕಾಗಿದ್ದ ಹಣ ಕೂಡ ಕೈ ಸೇರಲಿದೆ.

Numerology Prediction Of June 2023 In Kannada

ಸಂಖ್ಯೆ 2 (ಜನ್ಮ ದಿನಾಂಕ 2, 11, 20, 29)
ಈ ತಿಂಗಳು ನೀವು ಅನಗತ್ಯ ಚಿಂತೆಗಳಿಂದ ಮಾನಸಿಕ ಒತ್ತಡ ಹೆಚ್ಚಿರಲಿದೆ. ಈ ಕಾರಣಕ್ಕೆ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ನಿಮಗೆ ಕಷ್ಟವಾಗುತ್ತದೆ. ಹಣದ ವಿಷಯದಲ್ಲಿ, ಈ ಸಮಯವು ನಿಮಗೆ ತುಂಬಾ ದುಬಾರಿಯಾಗಲಿದೆ. ಅನಗತ್ಯ ಖರ್ಚುಗಳು ಉಂಟಾಗಬಹುದು. ಆದರೆ ನಿಮ್ಮ ಆದಾಯ ಉತ್ತಮವಾಗಿರುತ್ತದೆ. ನೀವು ಕೆಲಸದಲ್ಲಿ ತುಂಬಾ ನಿರತರಾಗಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಶ್ರಮಿಸಿ. ತಿಂಗಳ ಕೊನೆಯ ವಾರದಲ್ಲಿ ನಿಮಗೆ ರಿಲ್ಯಾಕ್ಸ್ ಅನಿಸಬಹುದು.

ಸಂಖ್ಯೆ 3(ಜನ್ಮ ದಿನಾಂಕ 3, 12, 21, 30)
ತಿಂಗಳ ಆರಂಭವು ನಿಮಗೆ ತುಂಬಾ ಒಳ್ಳೆಯದುದೆ. ಈ ಅವಧಿಯಲ್ಲಿ ನಿಮ್ಮ ಕೆಲ ದೊಡ್ಡ ಸಮಸ್ಯೆ ಬಗೆಹರಿಯಲಿದೆ. ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರಲಿದೆ. ಪ್ರತಿಕೂಲ ಸಂದರ್ಭಗಳಲ್ಲಿ, ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ಸ್ವಲ್ಪ ಸಮಯದಿಂದ ಆರೋಗ್ಯ ಸಮಸ್ಯೆ ಹೊಂದಿದ್ದರೆ ಈ ಅವಧಿಯಲ್ಲಿ ಆ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ. ನಿಮಗಾಗಿ ಸಾಕಷ್ಟು ಸಮಯ ಸಿಗಲಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ತಿಂಗಳ ಕೊನೆಯಲ್ಲಿ, ನಿಮ್ಮ ಕುಟುಂಬದೊಂದಿಗೆ ಕೆಲವು ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು.

ಸಂಖ್ಯೆ 4(ಜನ್ಮ ಸಂಖ್ಯೆ 4,13,22,31)
ಕೆಲಸದ ವಿಷಯದಲ್ಲಿ, ಜೂನ್ ತಿಂಗಳು ನಿಮಗೆ ಅದೃಷ್ಟದ ತಿಂಗಳಾಗಲಿದೆ. ನೀವು ಒಂದು ಕೆಲಸವನ್ನು ಮಾಡಿದರೆ ನಿಮ್ಮ ಶ್ರಮವು ಯಶಸ್ವಿಯಾಗುತ್ತದೆ. ಈ ಸಮಯದಲ್ಲಿ, ನೀವು ಒಳ್ಳೆಯ ಬಡ್ತಿ ಪಡೆಯಬಹುದು, ನಿಮ್ಮ ಆದಾಯವೂ ಹೆಚ್ಚಾಗುತ್ತದೆ. ತಿಂಗಳ ಮಧ್ಯದಲ್ಲಿ ನಿಮಗೆ ದೊಡ್ಡ ಜವಾಬ್ದಾರಿ ಕೊಡಬಹುದು. ವ್ಯಾಪಾರಸ್ಥರು ಉತ್ತಮ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಸಾಲ ತೀರಿಸಲು ಸಹಾಯವಾಗುವುದು. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಯೋಜಿಸುತ್ತಿದ್ದರೆ ನಿಮ್ಮ ಯೋಜನೆ ಯಶಸ್ವಿಯಾಗುತ್ತದೆ.

ಸಂಖ್ಯೆ 5 (ಜನ್ಮಸಂಖ್ಯೆ 5,14,23)
ನೀವು ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ, ಈ ತಿಂಗಳು ನಿಮಗೆ ಪ್ರಗತಿಯೊಂದಲು ಹೊಸ ಮಾರ್ಗ ಸಿಗಲಿದೆ. ಉದ್ಯೋಗಿಗಳು ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತೀರಿ.ಸರ್ಕಾರಿ ಕೆಲಸ ಮಾಡುವವರ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ ಮಿಶ್ರಫಲ, ನೀವು ಸಮ ಚಿತ್ತದಿಂದ ವರ್ತಿಸಿ, ಈ ತಿಂಗಳು ಹಣವನ್ನು ನೋಡಿಕೊಂಡು ಖರ್ಚು ಮಾಡಿ.

ಸಂಖ್ಯೆ 6 (ಜನ್ಮ ಸಂಖ್ಯೆ 6, 15, 24)
ನಿಮಗೆ ಈ ತಿಂಗಳು ಮಿಶ್ರಫಲ, ಈ ತಿಂಗಳ ಆರಂಭವು ನಿಮಗೆ ಸ್ವಲ್ಪ ನಿಧಾನವಾಗಿರುತ್ತದೆ, ಆದರೆ ಇದರ ನಂತರದ ಸಮಯವು ಉತ್ತಮವಾಗಿರುತ್ತದೆ. ಉದ್ಯೋಗವಾಗಿರಲಿ, ವ್ಯಾಪಾರವಾಗಿರಲಿ ಕೆಲಸದ ಹೊರೆ ಅಧಿಕವಿರಲಿದೆ. ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಅನೇಕ ತೊಂದರೆಗಳನ್ನು ಎದುರಿಸಬಹುದು. ಕಚೇರಿಯಲ್ಲಿ ನಡೆಯುವ ರಾಜಕೀಯಕ್ಕೆ ನೀವೂ ಬಲಿಯಾಗದಂತೆ ಜಾಗ್ರತೆವಹಿಸಿ. ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬೇಕಾಗಬಹುದು. ತಿಂಗಳ ಕೊನೆಯಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು, ಈ ಸಮಯದಲ್ಲಿ ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತದೆ. ನೀವು ಈಗಾಗಲೇ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಈ ತಿಂಗಳು ನೀವು ಹೆಚ್ಚು ಜಾಗರೂಕರಾಗಿರಬೇಕು.

ಸಂಖ್ಯೆ 7 (ಜನ್ಮ ಸಂಖ್ಯೆ 7, 16, 25)
ಹಣದ ವಿಷಯದಲ್ಲಿ, ಈ ತಿಂಗಳು ನಿಮಗೆ ಏರಿಳಿತಗಳಿಂದ ಕೂಡಿರಬಹುದು. ರ್ಚುಗಳ ಹಠಾತ್ ಹೆಚ್ಚಳದಿಂದಾಗಿ, ನಿಮ್ಮ ಕಷ್ಟಗಳು ಹೆಚ್ಚಾಗಬಹುದು. ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸದಿದ್ದರೆ, ನೀವು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನೀವು ಕೆಲಸದ ಬಗ್ಗೆ ತುಂಬಾ ಚಿಂತಿತರಾಗುತ್ತೀರಿ. ನೀವು ಕೆಲಸ ಮಾಡುತ್ತಿದ್ದರೆ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಘರ್ಷಣೆ ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ, ನೀವು ತುಂಬಾ ಸಮತೋಲಿತ ರೀತಿಯಲ್ಲಿ ವರ್ತಿಸಬೇಕು, ಇಲ್ಲದಿದ್ದರೆ ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಮತ್ತೊಂದೆಡೆ, ವ್ಯಾಪಾರಸ್ಥರು ಲಾಭ ಗಳಿಸಲು ಕಷ್ಟಪಡಬೇಕಾಗಬಹುದು. ಆದರೆ ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಸಂಗಾತಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು. ಅನಾರೋಗ್ಯದ ಕಾರಣ ಅಧಿಕ ಹಣ ಖರ್ಚಾಗಬಹುದು.

ಸಂಖ್ಯೆ 8 (ಜನ್ಮ ಸಂಖ್ಯೆ 8,17,26)
ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಜೊತೆ ಸಮಯ ಕಳೆಯಲು ಸಾಧ್ಯವಾಗುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಬೆಂಬಲ ಸಿಗಲಿದೆ. ಈ ತಿಂಗಳು ದುಡಿಯುವ ಜನರಿಗೆ ಹೊಸ ಸವಾಲುಗಳು ಎದುರಾಗಬಹುದು. ಸಣ್ಣಪುಟ್ಟ ತಪ್ಪುಗಳಿಗೂ ಹಿರಿಯ ಅಧಿಕಾರಿಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ನೀವು ಉದ್ಯಮಿಯಾಗಿದ್ದರೆ, ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಅವಸರದಲ್ಲಿ ಮಾಡಬೇಡಿ. ಅಲ್ಲದೆ ಕೆಲವು ಬುದ್ಧಿವಂತ ಹಣಕಾಸಿನ ಯೋಜನೆಯಲ್ಲಿ ಸಿಕ್ಕಿಬೀಳಬಹುದು. ಇದಲ್ಲದೆ, ಇತರರ ಸಲಹೆಯ ಮೇರೆಗೆ ನಿಮ್ಮ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಆರೋಗ್ಯದಲ್ಲೂ ಭಾರೀ ಕುಸಿತ ಕಂಡು ಬರಬಹುದು.

ಸಂಖ್ಯೆ 9(ಜನ್ಮ ಸಂಖ್ಯೆ 9, 18, 27)
ತಿಂಗಳ ಆರಂಭವು ನಿಮಗೆ ಉತ್ತಮವಾಗಿರುತ್ತದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಕಾಣಬಹುದು. ಈ ಅವಧಿಯಲ್ಲಿ ನೀವು ತುಂಬಾ ಧನಾತ್ಮಕ ಮತ್ತು ಶಕ್ತಿಯುತವಾಗಿರುತ್ತೀರಿ. ಕಛೇರಿಯಲ್ಲಿ ನಿಮ್ಮ ಸಕಾರಾತ್ಮಕತೆಯು ಬಾಸ್ ಅನ್ನು ಹೆಚ್ಚು ಪ್ರಭಾವಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಅಥವಾ ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದರೆ, ನಿಮ್ಮ ಶ್ರಮವು ಯಶಸ್ವಿಯಾಗುತ್ತದೆ. ವ್ಯಾಪಾರಸ್ಥರ ಕೆಲಸದಲ್ಲಿ ಹೆಚ್ಚಳ ಸಾಧ್ಯ. ನೀವು ದೊಡ್ಡ ಆದೇಶವನ್ನು ಪಡೆಯಬಹುದು. ಈ ಅವಧಿಯಲ್ಲಿ ನೀವು ಹೂಡಿಕೆ ಮಾಡಬಹುದು. ಈ ತಿಂಗಳು ನಿಮ್ಮ ಜೀವನ ಸಂಗಾತಿಯೊಂದಿಗೆ ತುಂಬಾ ರೋಮ್ಯಾಂಟಿಕ್ ಆಗಿರಲಿದೆ. ನೀವು ಪರಸ್ಪರ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗುವುದು. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ನೀವು ಹೊಸ ವಾಹನ, ಮನೆ, ಭೂಮಿ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ತಿಂಗಳು ನಿಮ್ಮ ಆಸೆ ಈಡೇರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿರುತ್ತದೆ.

English summary

Numerology Prediction Of June 2023 In Kannada

Here are numerology prediction of June 2023, read on.
Story first published: Wednesday, May 24, 2023, 17:44 [IST]
X
Desktop Bottom Promotion