ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಆಗಸ್ಟ್‌ ತಿಂಗಳು ನಿಮಗೆ ಹೇಗಿರಲಿದೆ?

ಸಂಖ್ಯಾಶಾಸ್ತ್ರ ಪ್ರಕಾರ ಆಗಸ್ಟ್‌ ತಿಂಗಳಿನ ಭವಿಷ್ಯ ನೀಡಲಾಗಿದೆ. ನಿಮ್ಮ ಜನದಿನಾಂಕಕ್ಕೆ ತಕ್ಕಂತೆ ನಿಮ್ಮ ಸಂಖ್ಯೆ ಯಾವುದೆಂದು ತಿಳಿಯಬಹುದು. ಉದಾಹರಣೆ ನೀವು ಯಾವುದೇ ತಿಂಗಳಿನ 11ರಂದು ಜನಿಸಿದರೆ ನಿಮ್ಮ ಸಂಖ್ಯೆ 2 ಆಗಿರುತ್ತದೆ.

Numerology Prediction of August

ಸಂಖ್ಯೆ 1 ( ಜನ್ಮ ದಿನಾಂಕ 1, 10, 19 )
ಈ ತಿಂಗಳು ನಿಮಗೆ ಉತ್ತಮವಾಗಿದೆ. ಆದರೆ ಭಾವನಾತ್ಮಕವಾಗಿ ದೃಢವಾಗಿರಬೇಕು, ಸಾಧ್ಯವಾದಷ್ಟು, ನೀವು ಸ್ವಾವಲಂಬಿಗಳಾಗಿರಬೇಕು, ಇಲ್ಲದಿದ್ದರೆ ನೀವು ಅವಲಂಬಿಸಿರುವವರು ಸಮಯಕ್ಕೆ ಕೆಲಸ ಮಾಡುವುದಿಲ್ಲ ಇದರಿಂದ ನಿಮಗೆ ನಷ್ಟವಾಗುವುದು. ಈ ತಿಂಗಳು ಹೂಡಿಕೆ ಇತ್ಯಾದಿಗಳನ್ನು ಮಾಡುವಾಗ ನೀವು ಬಹಳ ಎಚ್ಚರಿಕೆಯಿಂದ ಮಾಡಬೇಕು. ನೀವು ಯಾವುದಾದರೂ ದಾಖಲೆಗಳಿಗೆ ಸಹಿ ಹಾಕುವಾಗ ಜಾಗ್ರತೆ, ಮೂರನೇಯವರ ಮಾತು ಕೇಳಿ ಯಾವುದೇ ನಿರ್ಧಾರಕ್ಕೆ ಬರಬೇಡಿ.
ಪರಿಹಾರ: ಗುರುವಾರ ದೇವಸ್ಥಾನಕ್ಕೆ ಹೆಸರುಕಾಳು ದಾನ ಮಾಡಿ.

ಸಂಖ್ಯೆ 2 (ಜನ್ಮ ದಿನಾಂಕ 2, 11, 20, 29 )
ಈ ತಿಂಗಳು ನಿಮಗೆ ಮಿಶ್ರಫಲ. ನಿಮ್ಮ ಕಾರ್ಯಗಳಿಗೆ ತಕ್ಕ ಫಲ ಸಿಗದೇ ಇರುವಾಗ ನಿರಾಸೆ ಉಂಟಾಗಬಹುದು. ಈ ಅವಧಿಯಲ್ಲಿ ನೀವು ತುಂಬಾ ತಾಳ್ಮೆಯಿಂದ ವರ್ತಿಸಬೇಕು. ಯಾವುದೇ ಕಾರ್ಯವಾಗಲಿ ಆತುರದಿಂದ ಮಾಡಲು ಹೋಗಬೇಡಿ, ಹಾಗೆ ಮಾಡುವುದರಿಂದ ತಪ್ಪಾಗುವುದು. ಅಗ್ಯತ ಬಿದ್ದರೆ ಪರಿಣಿತರಿಂದ ಸಲಹೆ ಪಡೆಯಿರಿ.
ಪರಿಹಾರ: ಬಡವರು ಮತ್ತು ನಿರ್ಗತಿಕರಿಗೆ ಆಹಾರ ನೀಡಿ.

ಸಂಖ್ಯೆ 3 (ಜನ್ಮ ದಿನಾಂಕ 3, 12, 21, 30)
ಈ ತಿಂಗಳು ನಿಮಗೆ ಉತ್ತಮ ಪ್ರಯೋಜನ ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ತಂಡದ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರೆ ತಂಡದಲ್ಲಿರುವ ಇತರರಿಗೂ ಆದ್ಯತೆ ನೀಡುವುದು ಒಳ್ಳೆಯದು. ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯಿರಿ. ಈ ತಿಂಗಳು ಅಪೂರ್ಣವಾಗಿರುವ ಕೆಲಸಗಳು ಪೂರ್ಣವಾಗಲಿದೆ. ನಿಮಗೆ ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ ಸಿಗಲಿದೆ.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಿ

ಸಂಖ್ಯೆ 4 (ಜನ್ಮ ದಿನಾಂಕ 4, 13, 22, 31)
ತಿಂಗಳ ಆರಂಭದಲ್ಲಿ ಸ್ವಲ್ಪ ಕಷ್ಟ ಅನಿಸಿದರೂ ನಂತರ ಉತ್ತಮ ಫಲಿತಾಂಶ ಪಡೆಯಬಹುದು. ಈ ಅವಧಿಯಲ್ಲಿ, ಆಡಳಿತಕ್ಕೆ ಸಂಬಂಧಿಸಿದ ಕೆಲಸದಿಂದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ತಂದೆ ಅಥವಾ ಮನೆಯ ಹಿರಿಯರು ಮಾರ್ಗದರ್ಶನ ನೀಡಿದರೆ ನೀವು ತಳ್ಳಿ ಹಾಕುವ ಪ್ರಯತ್ನ ಮಾಡಬೇಡಿ. ಈ ಅವಧಿಯಲ್ಲಿ ನಿಮ್ಮ ಕೆಲಸದಲ್ಲಿ ಉನ್ನತ ವ್ಯಕ್ತಿಗಳಿಂದ ಸಹಾಯವಾಗಲಿದೆ.
ಪರಿಹಾರ: ಸೂರ್ಯ ದೇವನಿಗೆ ಆರ್ಘ್ಯ ಅರ್ಪಿಸಿ

ಸಂಖ್ಯೆ 5 (ಜನ್ಮ ದಿನಾಂಕ 5, 14, 23 )
ಈ ತಿಂಗಳು ನಿಮಗೆ ಮಿಶ್ರಫಲ. ಕುಟುಂಬ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಲಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ಸಮಸ್ಯೆಯಾಗಬಹುದು. ಅವಾಹಿತರಾಗಿದ್ದು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ತಿಂಗಳು ಉತ್ತಮವಾಗುದೆ. ಈ ತಿಂಗಳಿನಲ್ಲಿ ಹೊಸ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಈ ಸಮಯದಲ್ಲಿ ನೀವು ತುಂಬಾ ಸೃಜನಶೀಲರಾಗಿರಬಹುದು. ನೀವು ಬರಹಗಾರ ಅಥವಾ ಕಲಾವಿದರಾಗಿದ್ದರೆ ಈ ತಿಂಗಳು ಉತ್ತಮವಾಗಿರಲಿದೆ.
ಪರಿಹಾರ: ನಿತ್ಯ ದುರ್ಗಾ ಮಾತೆಯನ್ನು ಪೂಜಿಸಿ.

ಸಂಖ್ಯೆ 6 (ಜನ್ಮ ದಿನಾಂಕ 6, 15, 24)
ಈ ತಿಂಗಳಿನಲ್ಲಿ ನೀವು ಬಯಸಿದಂತೆ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ವೃತ್ತಿ ಜೀವನದಲ್ಲಿ ಅಭದ್ರತೆ ಕಾಡಬಹುದು, ಉದ್ಯೋಗಿಗಳು ಅನೇಕ ಸವಾಲುಗಳನ್ನು ಎದುರಿಸಬಹುದು. ವ್ಯಾಪಾರಸ್ಥರು ನಷ್ಟವನ್ನು ತಡೆಗಟ್ಟಲು ಈ ಅವಧಿಯಲ್ಲಿ ಜಾಗ್ರತೆಯಿಂದ ವ್ಯವಹಾರ ಮಾಡಬೇಕು. ನೀವು ಯಾವುದೇ ಕೆಲಸವನ್ನು ಮಾಡುವಾಗ ಆತುರದಿಂದ ಮಾಡಬೇಡಿ, ತಾಳ್ಮೆಯಿಂದ ಮಾಡಿ, ಇದರಿಂದ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.
ಪರಿಹಾರ: ದೇವಾಲಯಕ್ಕೆ ಹೋಗಿ ಹಳದಿ ಧಾನ್ಯಗಳನ್ನು ದಾನ ಮಾಡಿ.

ಸಂಖ್ಯೆ 7 (ಜನ್ಮ ದಿನಾಂಕ 7, 16, 25 )
ಈ ತಿಂಗಳಿನಲ್ಲಿ ಕೆಲವು ಸಂದರ್ಭದಲ್ಲಿ ಉತ್ತಮವಾಗಿದ್ದರೆ, ಇನ್ನು ಕೆಲವೊಮ್ಮೆ ತಟಸ್ಥವಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕಾಗಿದೆ. ನೀವು ನಿಮ್ಮ ಕ್ಷೇತ್ರದಲ್ಲಿ ಅನುಭವಿ ವ್ಯಕ್ತಿಯಾಗಿದ್ದರೆ, ತಾಳ್ಮೆಯಿಂದ ಕೆಲಸ ಮಾಡಿದರೆ, ನೀವು ಉತ್ತಮ ಫಲಿತಾಂಶಗಳನ್ನುಪಡೆಯಲು ಸಾಧ್ಯವಾಗುವುದು. ಈ ತಿಂಗಳು ದುರಾಸೆಯಿಂದ ನಿಮ್ಮ ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ನೀವು ನಿಮ್ಮ ಶಕ್ತಿಯನ್ನು ಸರಿಯಾಗಿ ಬಳಸಿದರೆ ನೀವು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದು. ನೀವು ಮತ್ತೆ ಮತ್ತೆ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಹಿತೈಷಿಗಳು ಮತ್ತು ತಜ್ಞರಿಂದ ಸಲಹೆ ಪಡೆದು ಸರಿಯಾದ ಮಾರ್ಗವನ್ನು ಪಡೆಯಬಹುದು. ಈ ತಿಂಗಳಿನಲ್ಲಿ ನೀವು ಹಣದ ಬಗ್ಗೆ ಯಾವುದೇ ರಿಸ್ಕ್‌ ತೆಗೆದುಕೊಳ್ಳಬೇಡಿ.
ಪರಿಹಾರ: ನಿತ್ಯವೂ ಹಣೆಗೆ ಕುಂಕುಮ ಇಟ್ಟುಕೊಳ್ಳಿ.

ಸಂಖ್ಯೆ 8 ( ಜನ್ಮ ದಿನಾಂಕ 8, 17, 26)
ಈ ತಿಂಗಳು ಸೋಮಾರಿತನವನ್ನು ಬಿಟ್ಟುಕೆಲಸದ ಕಡೆ ಗಮನಹರಿಸಿ. ನಿಮ್ಮ ಅನುಭವ ಮತ್ತು ನಿಮ್ಮ ಶಕ್ತಿಯನ್ನು ಹೊಸ ಯೋಜನೆಗಳೊಂದಿಗೆ ಸಂಯೋಜಿಸಿದರೆ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ.ಈ ಅವಧಿಯಲ್ಲಿ ನೀವಾಡುವ ಮಾತಿನ ಮೇಲೆ ಗಮನಹರಿಸಬೇಕು, ನಿಮ್ಮ ವ್ಯಂಗ್ಯ ಮಾತುಗಳು ಇತರರನ್ನು ನೋಯಿಸದಂತೆ ಎಚ್ಚರವಹಿಸಿ. ಈ ತಿಂಗಳು ನೀವು ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದರೆ ಉತ್ತಮ ಫಲಿತಾಂಶ ಪಡೆಯುತ್ತೀರಿ.
ಪರಿಹಾರ: ಗಣಪತಿ ಅಥರ್ವಶೀರ್ಷ ಪಠಿಸಿ.

ಸಂಖ್ಯೆ 9 ( ಜನ್ಮ ದಿನಾಂಕ 9, 18, 27)
ಈ ತಿಂಗಳಿನಲ್ಲಿ ಅತಿಯಾದ ಉತ್ಸಾಹದಿಂದ ಅತಿ ರಿಸ್ಕ್‌ ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಇಮೇಜ್ ಅನ್ನು ಹಾಳುಮಾಡುವ ಯಾವುದೇ ಕೆಲಸದಿಂದ ನೀವು ದೂರವಿರಬೇಕು. ವಿವಾಹಿತರಿಗೆ, ಈ ತಿಂಗಳು ಸರಾಸರಿಗಿಂತ ಉತ್ತಮ ಫಲಿತಾಂಶ ನೀಡಲಿದೆ. ಮನೆ ರಿಪೇರಿ ಮಾಡಲು ಅಥವಾ ಮನೆಗೆ ಏನಾದರೂ ವಸ್ತುಗಳನ್ನು ತರಲು ಸಾಧ್ಯವಾದರೆ ಅದು ಸಾಧ್ಯವಾಗಲಿದೆ. ಒಟ್ಟಿನಲ್ಲಿ ಈ ತಿಂಗಳು ನಿಮಗೆ ಉತ್ತಮವಾಗಿದೆ.
ಪರಿಹಾರ: ದುರ್ಗೆಯನ್ನು ಆರಾಧಿಸಿ.

English summary

Numerology Prediction of August 2023 In Kannada

Here are numerology prediction of August month 2023 read on...
Story first published: Friday, July 28, 2023, 15:32 [IST]
X
Desktop Bottom Promotion