Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ ಪ್ರಕಾರ ಸೆಪ್ಟೆಂಬರ್ 3-9ರವರೆಗಿನ ಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಸೆಪ್ಟೆಂಬರ್ 3-9ರವರೆಗಿನ ಭವಿಷ್ಯ ನೀಡಲಾಗಿದೆ. ನಿಮ್ಮ ಜನ್ಮ ಸಂಖ್ಯೆಗೆ ಈ ವಾರ ಹೇಗಿರಲಿದೆ ಎಂದು ನೋಡೋಣ...
ನಿಮ್ಮ ಹುಟ್ಟಿದ ದಿನಾಂಕಕ್ಕೆ ತಕ್ಕಂತೆ ನಿಮ್ಮ ಸಂಖ್ಯೆ ಯಾವುದೆಂದು ತಿಳಿಯಬಹುದು. ಉದಾಹರಣೆಗೆ ನೀವು ಯಾವುದೇ ತಿಂಗಳಿನ 12ರಂದು ಜನಿಸಿದರೆ ನಿಮ್ಮ ಸಂಖ್ಯೆ 3 (2+1) ಆಗಿರುತ್ತದೆ.

ಸಂಖ್ಯೆ 1 (1,10,19,28)
ಈ ವಾರ ನಿಮಗೆ ತುಂಬಾ ಶುಭಕರವಾಗಿರುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ವಾರದ ಮಧ್ಯದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಚಿಂತೆಗಳು ದೂರವಾಗಲಿದೆ. ಯಾವುದೇ ಹಣದ ಕೊರತೆಯಿದ್ದರೆ ಅದು ಬಗೆಹರಿಯಲಿದೆ. ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಸಂಖ್ಯೆ 2 (2, 11, 20, 29)
ಪ್ರೇಮಿಗಳಿಗೆ ಈ ವಾರ ಅನುಕೂಲಕರವಲ್ಲ, ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಸಂಬಂಧದ ವಿಷಯದಲ್ಲಿ ಗೊಂದಲ್ಲಿರುತ್ತೀರಿ. ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ದುಬಾರಿಯಾಗಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಲಾಗುವುದು.
ಸಂಖ್ಯೆ 3 (3,12,21,30)
ಉದ್ಯೋಗಿಗಳಿಗೆ ಈ ವಾರ ಬಹಳ ಮಹತ್ವದ್ದಾಗಿದೆ. ಕೆಲಸದಲ್ಲಿ ಒಳ್ಳೆಯ ಅವಕಾಶ ಸಿಗಬಹುದು. ಪ್ರೀತಿಯ ಬಗ್ಗೆ ಹೇಳುವುದಾದರೆ ಈ ಅವಧಿ ಪ್ರೇಮಿಗಳಿಗೆ ಅನುಕೂಲಕರವಾಗಿದೆ. ಹಣದ ವಿಷಯದಲ್ಲಿ ಉತ್ತಮವಾಗಿದೆ, ಅದೃಷ್ಟದ ಬೆಂಬಲ ಇರುವುದರಿಂದ ಒಳ್ಳೆಯ ಉಳಿತಾಯ ಮಾಡಬಹುದು.
ಸಂಖ್ಯೆ 4 (4, 13, 22, 31)
ನಿಮ್ಮ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ನೀವು ಔಷಧಿಗಳಿಗೂ ಸಾಕಷ್ಟು ಹಣ ಖರ್ಚು ಮಾಡಬೇಕಾಗುವುದು. ನಿಮ್ಮ ಸಂಗಾತಿಯ ನಡವಳಿಕೆಯಿಂದ ಮನಸ್ಸಿಗೆ ನೋವಾಗುವುದು. ಸಣ್ಣಪುಟ್ಟ ವಿಷಯಗಳಿಗೆ ನಿಮ್ಮಿಬ್ಬರಿಗೆ ಮನಸ್ತಾಪ ಉಂಟಾಗಬಹುದು. ಈ ವಾರ ತಾಳ್ಮೆ ಕಳೆದುಕೊಳ್ಳಬೇಡಿ. ಹೊಸ ಕಾರ್ಯಕ್ಕೆ ದೊಡ್ಡ ಅಡಚಣೆ ಉಂಟಾಗಬಹುದು.
ಸಂಖ್ಯೆ 5 (5, 14, 23)
ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ಬಗೆಹರಿಯಲಿದೆ. ಈ ಅವಧಿಯಲ್ಲಿ ನಿರ್ಧಾರವು ನಿಮ್ಮ ಪರವಾಗಿ ಬರುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಚೆನ್ನಾಗಿರಲಿದೆ. ಮನೆಯ ವಾತಾವರಣದಲ್ಲಿ ಸುಧಾರಣೆ ಕಂಡುಬರುವುದು. ನೀವು ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ಅವಧಿಯಲ್ಲಿ ನೀವು ಪ್ರಗತಿ ಕಾಣುವಿರಿ. ವ್ಯಾಪಾರಸ್ಥರು ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು.
ಸಂಖ್ಯೆ 6 (6, 15, 24)
ಈ ಸಮಯವು ಕುಟುಂಬದೊಂದಿಗೆ ಉತ್ತಮವಾಗಿರಲಿದೆ. ನಿಮ್ಮ ಸಂಬಂಧಗಳು ಗಟ್ಟಿಯಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವ ಬಲವಾದ ಸಾಧ್ಯತೆಯಿದೆ. ಆದರೆ ನೀವು ಹಣಕ್ಕೆ ಸಂಬಂಧಿಸಿದ ಕೆಲಸವನ್ನು ಆಲೋಚಿಸಿ ಮಾಡಿದರೆ ಒಳ್ಳೆಯದು . ಕೆಲಸದ ವಿಷಯದಲ್ಲಿ ಈ ವಾರ ನಿಮಗೆ ಹೊಸ ಅವಕಾಶಗಳು ತುಂಬಿರುತ್ತವೆ. ನಿಮ್ಮ ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯ ಬಲದಿಂದ ನೀವು ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದು.
ಸಂಖ್ಯೆ 7 (7, 16, 25)
ಕೆಲಸದ ಜಾಗದಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ಈ ಅವಧಿಯಲ್ಲಿ ಕೆಲಸದ ಹೊರೆ ಕೂಡ ಕಡಿಮೆಯಾಗಿರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ, ನೀವು ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಈ ಸಮಯದಲ್ಲಿ ನೀವು ಅಗತ್ಯವಿರುವವರಿಗೆ ಸಹಾಯ ಮಾಡುವಿರಿ. ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗುವುದು. ಈ ಅವಧಿಯಲ್ಲಿ ನಿಮ್ಮ ದೊಡ್ಡ ಸಮಸ್ಯೆ ಬಗೆಹರಿಯಲಿದೆ.
ಸಂಖ್ಯೆ 8 (8, 17, 26)
ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ಅದು ದೂರಾಗಲಿದೆ. ನೀವು ಮಾನಸಿಕವಾಗಿಯೂ ಉತ್ತಮವಾಗುತ್ತೀರಿ. ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿದ್ದು ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಮತ್ತಷ್ಟು ಗಟ್ಟಿಯಾಗುತ್ತದೆ. ನೀವು ಅವಿವಾಹಿತರಾಗಿದ್ದರೆ ನಿಮ್ಮ ಮದುವೆ ಮಾತುಕತೆ ನಡೆಯಬಹುದು. ಹಣದ ವಿಚಾರದಲ್ಲಿ ಜಾಗರೂಕರಾಗಿರಿ.
ಸಂಖ್ಯೆ 9(9, 18, 27)
ಈ ದಿನ ನೀವು ಕೆಲವು ಬೆಲೆಬಾಳುವ ವಸ್ತುಗಳನ್ನು ಪಡೆಯಬಹುದು. ಈ ದಿನ ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರಲಿದೆ. ನೀವು ಚಿಕ್ಕ ನಿರ್ಧಾರಗಳನ್ನು ಸಹ ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುತ್ತೀರಿ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಚೆನ್ನಾಗಿರಲಿದೆ. ನೀವು ಪರಸ್ಪರ ಉತ್ತಮ ಸಮಯವನ್ನು ಕಳೆಯುತ್ತೀರಿ.



Click it and Unblock the Notifications