Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಂಖ್ಯಾಶಾಸ್ತ್ರ: ಮೇ7-13ರವರೆಗಿನ ವಾರ ಭವಿಷ್ಯ ಹೇಗಿರಲಿದೆ ನೋಡಿ
ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದಲ್ಲಿ 1-9 ಸಂಖ್ಯೆಗಳು ಬರುವುದು, ಉದಾಹರಣೆಗೆ ನಿಮ್ಮ ದಿನಾಂಕ 10 ಆದರೆ ನಿಮ್ಮ ಸಂಖ್ಯೆ 1+0=1 ಆಗಿದೆ. ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ದಿನಾಂಕಕ್ಕೆ ಅನುಸಾರ ಮೇ7ರಿಂದ ಮೇ 13ರವರೆಗಿನ ವಾರ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಸಂಖ್ಯೆ 1 ( ಜನ್ಮ ದಿನಾಂಕ 1,10,19,28)
ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರಲಿದೆ. ನೀವು ದೀರ್ಘಕಾಲದವರೆಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ವಾರ ನೀವು ಉತ್ತಮ ಪರಿಹಾರವನ್ನು ಪಡೆಯಬಹುದು. ವಾರದ ಮಧ್ಯದಲ್ಲಿ ಆಸ್ತಿ-ಸಂಬಂಧಿತ ವಿಷಯ ಪರಿಹರಿಸಲು ಸಾಧ್ಯವಾಗುವುದರಿಂದ ಚಿಂತೆ ದೂರಾಗಲಿದೆ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ವ್ಯಾಪಾರಸ್ಥರು ಉತ್ತಮ ಲಾಭ ಪಡೆಯಬಹುದು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ.

ಸಂಖ್ಯೆ 2 ( ಜನ್ಮ ದಿನಾಂಕ 2,11,20,29)
ನಿಮ್ಮ ಮನಸ್ಸಿನಲ್ಲಿ ದೀರ್ಘಕಾಲದಿಂದ ಯಾವುದೇ ಆಸೆ ಇದ್ದರೆ, ಈ ಅವಧಿಯಲ್ಲಿ ಅದು ಈಡೇರುವ ಬಲವಾದ ಸಾಧ್ಯತೆಯಿದೆ. ಈ ದಿನ ನೀವು ತುಂಬಾ ಧನಾತ್ಮಕವಾಗಿರುತ್ತೀರಿ, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಸಂಖ್ಯೆಯ ಅವಿವಾಹಿತರಿಗೆ ಈ ವಾರ ಬಹಳ ಮುಖ್ಯವಾಗಿರಲಿದೆ. ಪ್ರೇಮಿಗಳು ಮದುವೆಗೆ ತೀರ್ಮಾನಿಸಿದರೆ ಮನೆಯವರ ಒಪ್ಪಿಗೆ ಇರಲಿದೆ. ವಾರದ ಮಧ್ಯದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗುವುದರಿಂದ ನಿಮ್ಮ ಮನಸ್ಸು ತುಂಬಾ ಸಂತೋಷವಾಗಿರಲಿದೆ. ಹಣದ ವಿಷಯದಲ್ಲಿ, ಈ ಅವಧಿಯಲ್ಲಿ ನೀವು ತುಂಬಾ ಅದೃಷ್ಟದ ದಿನವಾಗಿರಲಿದೆ. ಉದ್ಯಮಿಗಳು ಕಡಿಮೆ ಶ್ರಮದಿಂದ ಉತ್ತಮ ಲಾಭ ಗಳಿಸುವಿರಿ.
ಸಂಖ್ಯೆ 3 (ಜನ್ಮ ದಿನಾಂಕ 3,12,21,30)
ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಈ ಸಮಯದಲ್ಲಿ ನೀವು ಉತ್ತಮ ಯಶಸ್ಸು ಪಡೆಯುವ ಸಾಧ್ಯತೆಯಿದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು. ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಈ ವಾರ ನಿಮ್ಮ ನಡುವೆ ಇರುವ ಸಮಸ್ಯೆ ಬಗೆಹರಿಯಲಿದೆ. ಈ ಸಮಯದಲ್ಲಿ ನಿಮ್ಮ ಫಿಟ್ನೆಸ್ ಬಗ್ಗೆ ನೀವು ಬಹಳ ಜಾಗೃತರಾಗಿರಿ. ಪ್ರತಿದಿನ ವ್ಯಾಯಾಮ ಮಾಡಿ.
ಸಂಖ್ಯೆ 4 (ಜನ್ಮ ದಿನಾಂಕ 4,13,22,31)
ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಅದೃಷ್ಟದ ವಾರವಾಗಲಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ.ಈ ವಾರ ಸಾಲ ತೋರಿಸಲು ಸಾಧ್ಯವಾಗುವುದು. ಈ ವಾರ ಆತ್ಮವಿಶ್ವಾಸ ಹೆಚ್ಚಾಗಲಿದೆ. ನೀವು ಕೆಲಸದಲ್ಲಿ ಬದಲಾವಣೆಯನ್ನು ಯೋಜಿಸುತ್ತಿದ್ದರೆ ಈ ಸಮಯದಲ್ಲಿ ಪ್ರಯತ್ನಿಸುತ್ತಿದ್ದರೆ ನೀವು ಒಳ್ಳೆಯ ಅವಕಾಶಗಳು ದೊರೆಯುವುದು. ಈ ಅವಧಿಯಲ್ಲಿ ಪರಸ್ಪರ ಸಾಕಷ್ಟು ಸಮಯ ನೀಡಲು ಸಾಧ್ಯವಾಗುವುದು. ಒಟ್ಟಾರೆಯಾಗಿ ಈ ವಾರ ನಿಮಗೆ ತುಂಬಾ ಆಹ್ಲಾದಕರವಾಗಿರಲಿದೆ.
ಸಂಖ್ಯೆ 5 ( ಜನ್ಮ ದಿನಾಂಕ 5,14,23)
ವಾರದ ಆರಂಭದ ದಿನಗಳು ನಿಮಗೆ ತುಂಬಾ ಕಾರ್ಯನಿರತವಾಗಿರಲಿದೆ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸುವರ್ಣಾವಕಾಶ ದೊರೆಯಲಿದೆ. ಈ ಸಮಯದಲ್ಲಿ, ಬಾಸ್ ನಿಮ್ಮ ಕೆಲಸ ಮೆಚ್ಚಿಕೊಳ್ಳುತ್ತಾರೆ. ಉದ್ಯಮಿಗಳು ಅಪೇಕ್ಷಿತ ಲಾಭವನ್ನು ಗಳಿಸಬಹುದು, ಆದರೆ ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾವುದೇ ಆತುರಪಡದಿರಲು ಸಲಹೆ ನೀಡಲಾಗಿದೆ. ಪ್ರಣಯ ಜೀವನದಲ್ಲಿ ಸ್ಥಿರತೆ ಇರಲಿದೆ. ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಬೇಡ.
ಸಂಖ್ಯೆ 6 (ಜನ್ಮ ದಿನಾಂಕ 6,15,24)
ಈ ವಾರ ಅದೃಷ್ಟದ ವಾರವಾಗಿದೆ. ಈ ವಾರ ನಿಮ್ಮ ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳಲಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಯಾವುದೇ ಅಡೆತಡೆಯಿಲ್ಲದೆ ಪ್ರಾರಂಭಿಸಬಹುದು. ಹಣದ ವಿಷಯದಲ್ಲಿ, ಈ ವಾರ ಮಿಶ್ರ ಫಲಿತಾಂಶ ಪಡೆಯಬಹುದು. ನಿಮ್ಮ ಆದಾಯವು ಉತ್ತಮವಾಗಿರಲಿದೆ, ಈ ಅವಧಿಯಲ್ಲಿ ನಿಮ್ಮ ಖರ್ಚು ಹೆಚ್ಚಾಗಬಹುದು. ಆದರೆ ನೀವು ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಈ ವಾರ ನಿಮ್ಮ ಕೆಲಸ ಕಾರ್ಯಗಳಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲ ಸಿಗಲಿದೆ.
ಸಂಖ್ಯೆ 7 (ಜನ್ಮ ದಿನಾಂಕ 7,16,25)
ನೀವು ಕೆಲಸದ ಹೊರೆಯನ್ನು ಅನುಭವಿಸುತ್ತಿದ್ದರೆ, ಈ ವಾರ ನಿಮಗೆ ಪರಿಹಾರ ಸಿಗಲಿದೆ. ಈ ಅವಧಿಯಲ್ಲಿ ಕೆಲಸದ ಹೊರೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಟ್ರಿಪ್ ಹೋಗಬಹುದು. ಪ್ರತಿಕೂಲ ಸಂದರ್ಭಗಳಲ್ಲಿ ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ಸಂಗಾತಿ ಹಾಗೂ ನಿಮ್ಮ ನಡುವೆ ಬಾಂಧವ್ಯ ಹೆಚ್ಚಾಗಲಿದೆ. ಈ ವಾರ ನಿಮ್ಮ ಹೆಚ್ಚುತ್ತಿರುವ ವೆಚ್ಚಗಳ ಮೇಲೆ ಕಣ್ಣಿಡಲು ಸಲಹೆ ನೀಡಲಾಗಿದೆ.
ಸಂಖ್ಯೆ 8 (ಜನ್ಮ ದಿನಾಂಕ 8,17,26)
ಕಳಪೆ ಆರೋಗ್ಯದಿಂದಾಗಿ ನಿಮ್ಮ ಅನೇಕ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಈ ವಾರ ಚಿಂತೆ ಹೆಚ್ಚಾಗಲಿದೆ. ಹೆಚ್ಚುತ್ತಿರುವ ಮಾನಸಿಕ ಗೊಂದಲದಿಂದಾಗಿ, ನಿಮ್ಮ ನಡವಳಿಕೆಯಲ್ಲೂ ಕಿರಿಕಿರ ಕಂಡು ಬರಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ನೀವು ಆರಾಮದಾಯಕ ವಿಷಯಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡದಿದ್ದರೆ ಅದು ಉತ್ತಮವಾಗಿರಲಿದೆ. ನೀವು ನಿರುದ್ಯೋಗಿಯಾಗಿದ್ದರೆ , ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಅವಧಿಯಲ್ಲಿ ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ನಿಮ್ಮ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.
ಸಂಖ್ಯೆ 9 (ಜನ್ಮ ದಿನಾಂಕ 9,18,27)
ವ್ಯಾಪಾರಸ್ಥರಿಗೆ ಈ ವಾರ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ, ನೀವು ಕೆಲವು ದೊಡ್ಡ ಖರ್ಚುಗಳನ್ನು ಮಾಡಬೇಕಾಗಬಹುದು, ಆದರೆ ಹಣದ ಒಳಹರಿವು ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ಈ ಸಮಯವು ತುಂಬಾ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ತಂದೆಯ ಆರೋಗ್ಯ ಸುಧಾರಿಸಬಹುದು. ಈ ಸಮಯದಲ್ಲಿ ಅವರು ವಿಶ್ರಾಂತಿಗೆ ಹೆಚ್ಚು ಗಮನ ಹರಿಸಬೇಕಾಗಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಈ ಅವಧಿಯಲ್ಲಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸದೃಢರಾಗಿರುತ್ತೀರಿ.



Click it and Unblock the Notifications
