Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಸಂಖ್ಯಾಶಾಸ್ತ್ರ ಭವಿಷ್ಯ: ಆಗಸ್ಟ್ 6ರಿಂದ ಆಗಸ್ಟ್ 13ರವರೆಗೆ ನಿಮಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರದ ಭವಿಷ್ಯ ನೀಡಲಾಗಿದ್ದು ನಿಮ್ಮ ಸಂಖ್ಯೆಗೆ ಈ ವಾರ ಹೇಗಿರಲಿದೆ ಎಂದು ನೀಡಲಾಗಿದೆ ನೋಡಿ...
ಸಂಖ್ಯೆ 1 (ಜನ್ಮ ದಿನಾಂಕ 1, 10, 19 ಮತ್ತು 28 )
ಈ ವಾರ ನಿಮಗೆ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ಸಮಯದಲ್ಲಿ ಉಳಿತಾಯದ ಕಡೆಗೆ ಗಮನಹರಿಸಿ. ಆದರೆ ಯಾವುದೇ ಹೊಸ ಹೂಡಿಕೆ ಮಾಡಲು ಹೋಗಬೇಡಿ. ಆರ್ಥಿಕ ನಿರ್ಧಾರಗಳನ್ನು ಸ್ವತಃ ತೆಗೆದುಕೊಳ್ಳುವುದು ಒಳ್ಳೆಯದು. ಸಂಗಾತಿಯಿಂದ ಪ್ರೀತಿ ಸಿಗಲಿದೆ. ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಗುರಿಯತ್ತ ಗಮನಹರಿಸಿ, ಇದರಿಂದ ಪ್ರಗತಿಯಾಗಲಿದೆ.

ಸಂಖ್ಯೆ 2 (ಜನ್ಮ ದಿನಾಂಕ 2, 11, 20 ಮತ್ತು 29)
ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಆದರೆ ಉಳಿತಾಯ ಮಾಡಲು ಕಷ್ಟವಾಗುವುದು, ಇದರಿಂದ ಕಿರಿಕಿರಿ, ಕೋಪ ಉಂಟಾಗುವುದು. ಕೆಲವೊಂದು ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳಿಂದ ಸಲಹೆ ಪಡೆಯಿರಿ. ವೈವಾಹಿಕ ಹಾಗೂ ಪ್ರೀತಿ ಜೀವನ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು.
ಸಂಖ್ಯೆ 3 (ಜನ್ಮ ದಿನಾಂಕ 3, 12, 21 ಮತ್ತು 30)
ನಿಮ್ಮ ಮುಂದಿನ ಭವಿಷ್ಯಕ್ಕಾಗಿ ನೀವು ಆರ್ಥಿಕ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವುದಾದರೆ ತುಂಬಾನೇ ಎಚ್ಚರವಹಿಸಬೇಕು. ಪ್ರೀತಿ ಜೀವನ ಚೆನ್ನಾಗಿರಲಿದೆ. ನೀವು ನಿಮ್ಮ ಬಂಧ ಗಟ್ಟಿಯಾಗಿಸಲು ಒಂದು ಹೆಜ್ಜೆ ಮುಂದಿಡಲು ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಮದುವೆ ಮಾತುಕತೆ ಮಾಡಲು ಸಮಯ ಯೋಗ್ಯವಾಗಿದೆ. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ. ವೃತ್ತಿ ಬದುಕು ಹಾಗೂ ವೈಯಕ್ತಿಕ ಈ ಅವಧಿಯಲ್ಲಿ ಉತ್ತಮವಾಗಿರಲಿದೆ.
ಸಂಖ್ಯೆ 4 ( ಜನ್ಮ ದಿನಾಂಕ 4, 13, 22 ಮತ್ತು 31)
ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ ಈ ಅವಧಿಯಲ್ಲಿ ಎಚ್ಚರಿಕೆವಹಿಸಬೇಕು. ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಸಂಗಾತಿಯ ಜೊತೆಗೆ ನಿಮ್ಮ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ಈ ವಾರ ನಿಮಗೆ ಅನೇಕ ಹೊಸ ವಿಷಯಗಳನ್ನು ತಿಳಿಯಲು ಸಾಧ್ಯವಾಗುವುದು. ವೃತ್ತಿ ಬದುಕಿನಲ್ಲಿ ತುಂಬಾ ಎಚ್ಚರಿಕೆವಹಿಸಬೇಕು, ನಿಮ್ಮ ಕಠಿಣ ಪರಿಶ್ರಮಕ್ಕೆ ಶೀಘ್ರದಲ್ಲಿಯೇ ಉತ್ತಮ ಫಲಿತಾಂಶ ಪಡೆಯುತ್ತೀರಿ.
ಸಂಖ್ಯೆ 5 (ಜನ್ಮ ದಿನಾಂಕ 5, 14 ಮತ್ತು 23)
ನೀವು ಈ ಸಮಯದಲ್ಲಿ ಮಿತಿಯಲ್ಲಿ ಖರ್ಚು ಮಾಡಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ನೀವು ತುಂಬಾ ಶ್ರಮಿಸಬೇಕು. ಸಂಬಂಧದ ವಿಷಯಕ್ಕೆ ಬಂದಾಗ ನಿಮ್ಮ ಹೃದಯ ಏನು ಹೇಳುವುದೋ ಅದನ್ನು ಅನುಸರಿಸಿ. ಸಂಬಂಧದಲ್ಲಿ, ವೃತ್ತಿ ಬದುಕಿನಲ್ಲಿ ನಿಯತ್ತಿನಿಂದ ಇರಿ, ಇದರಿಂದ ಒಳ್ಳೆಯ ಫಲ ಪಡೆಯುವಿರಿ.
ಸಂಖ್ಯೆ 6 (ಜನ್ಮ ದಿನಾಂಕ 6, 15 ಮತ್ತು 24 )
ಈಗೀನ ನಿಮ್ಮ ಪರಿಸ್ಥಿತಿ ಮುಂದೆಕ್ಕೆ ನೀವು ಏನು ಮಾಡಬೇಕೆಂಬುವುದನ್ನು ತಿಳಿಸುತ್ತದೆ. ಇದರಿಂದ ಆರ್ಥಿಕ ನಷ್ಟ ಉಂಟಾಗದಂತೆ ಮುಂಜಾಗ್ರತೆವಹಿಸಬಹುದು. ಯಾವುದಾದರೂ ಅಪಾಯಕಾರಿ ಹೂಡಿಕೆ ಮಾಡದಂತೆ ಸಲಹೆ ನೀಡಲಾಗಿದೆ. ಪ್ರೀತಿ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆದರೆ ಮಾತ್ರ ಸಂಬಂಧ ತುಂಬಾ ಚೆನ್ನಾಗಿರಲಿದೆ. ಅಲ್ಲದೆ ನಿಮ್ಮ ವೈಯಕ್ತಿಕ, ವೃತ್ತಿ ಜೀವನ, ಆರ್ಥಿಕ ಜೀವನದ ಬೆಳವಣಿಗೆಗೆ ನೀವು ಈ ಅವಧಿಯಲ್ಲಿ ಹೆಚ್ಚು ಶ್ರದ್ಧೆಯಿಂದ ಪ್ರಯತ್ನಿಸಿ.
ಸಂಖ್ಯೆ 7 (ಜನ್ಮ ದಿನಾಂಕ 7, 16 ಮತ್ತು 25 )
ಈ ಅವಧಿಯಲ್ಲಿ ಆರ್ಥಿಕ ದೃಷ್ಟಿಯಿಂದ ಅನುಕೂಲಕರವಲ್ಲ. ಆರ್ಥಿಕ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ಸಂಬಂಧದಲ್ಲೂ ನೀವು ತುಂಬಾ ಜಾಗ್ರತೆವಹಿಸಬೇಕು, ಏನಾದರೂ ಸಮಸ್ಯೆವಿದ್ದರೆ ಬಗೆಹರಿಸಲು ಪ್ರಯತ್ನಿಸಿ. ಅಲ್ಲದೆ ನೀವು ನಿಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಇಲ್ಲದಿದ್ದರೆ ಜನರು ನಿಮಗೆ ಮೋಸ ಮಾಡಬಹುದು.
ಸಂಖ್ಯೆ 8 ( ಜನ್ಮ ದಿನಾಂಕ 8, 17 ಮತ್ತು 26 )
ಈ ಅವಧಿಯಲ್ಲಿ ನೀವು ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಫಲ ಸಿಗಲಿದೆ. ಆರ್ರಥಿಕ ಭದ್ರತೆ ಸರಿಯಾಗಿ ಯೋಜನೆ ಮಾಡಬೇಕಾಗಿದೆ. ಮದುವೆ ಸಂಬಂಧಕ್ಕೆ ಒಪ್ಪಂದ ಸೂಚಿಸುವ ಮುನ್ನ ನೀವು ತುಂಬಾ ಆಲೋಚಿಸಿ ತೆಗೆದುಕೊಳ್ಳುವುದು ಒಳ್ಳೆಯದು. ಸಂಬಂಧದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ನೀವು ಭವಿಷ್ಯದ ಕುರಿತು ತುಂಬಾ ತಲೆಕೆಡಿಸಿಕೊಳ್ಳದೆ ವರ್ತಮಾನದಲ್ಲಿ ಜೀವಿಸಿ, ಇದರಿಂದ ಖುಷಿಯಾಗಿ ಇರಬಹುದು.
ಸಂಖ್ಯೆ 9 ( ಜನ್ಮ ದಿನಾಂಕ 9, 18 ಮತ್ತು 27)
ಈ ಸಮಯದಲ್ಲಿ ಹೆಚ್ಚಿನ ಹಣ ಗಳಿಸಲು ಸಾಧ್ಯವಾಗುವುದು, ಹೆಚ್ಚಿನ ಆದಾಯ ಮೂಲಗಳು ಕೂಡ ದೊರೆಯಲಿದೆ. ಸಂಬಂಧ ಬಲಪಡಿಸಲು ಶ್ರಮಿಸಿ, ಯಾವುದೋ ಒಂದೇ ದಿನದಲ್ಲಿ ಸಂಭವಿಸುವುದಿಲ್ಲ ಎಂಬುವುದನ್ನು ನೀವು ಅರಿತುಕೊಳ್ಳಬೇಕು, ತಾಳ್ಮೆಯಿಂದ ನಿಭಾಯಿಸಲು ಪ್ರಯತ್ನಿಸಿ. ಎಂಥದ್ದೇ ಪರಿಸ್ಥಿತಿ ಇರಲಿ ಆತ್ಮವಿಶ್ವಾಸದಿಂದ ಎದುರಿಸಿ. ಅಗ್ಯತ ಬಿದ್ದರೆ ಪರಿಣಿತರಿಂದ ಸಲಹೆ ಪಡೆಯಿರಿ.



Click it and Unblock the Notifications