ಸಂಖ್ಯಾಶಾಸ್ತ್ರ: ಏಪ್ರಿಲ್ 23ರಿಂದ 29ರವರೆಗಿನ ವಾರ ಭವಿಷ್ಯ ಹೇಗಿರಲಿದೆ ನೋಡಿ

ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದಲ್ಲಿ 1-9 ಸಂಖ್ಯೆಗಳು ಬರುವುದು, ಉದಾಹರಣೆಗೆ ನಿಮ್ಮ ದಿನಾಂಕ 10 ಆದರೆ ನಿಮ್ಮ ಸಂಖ್ಯೆ 1+0=1 ಆಗಿದೆ. ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ದಿನಾಂಕಕ್ಕೆ ಅನುಸಾರ ಏಪ್ರಿಲ್ 23ರಿಂದ 29ರವರೆಗಿನ ವಾರ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಸಂಖ್ಯೆ1 ( ಜನ್ಮ ದಿನಾಂಕ 1,10,19,28)
ಈ ವಾರ ನಿಮಗೆ ಮಿಶ್ರಫಲ. ಈ ವಾರ ನಿಮ್ಮ ಮನಸ್ಸು ಸ್ವಲ್ಪಮಟ್ಟಿಗೆ ಖಿನ್ನತೆಗೆ ಒಳಗಾಗುತ್ತದೆ ಮತ್ತು ನೀವು ಹೆಚ್ಚಿನ ಸಮಯವನ್ನು ಏಕಾಂತದಲ್ಲಿ ಕಳೆಯಲು ಬಯಸುತ್ತೀರಿ. ನಿಮ್ಮ ಯಾವುದೇ ಪ್ರಮುಖ ಕೆಲಸದಲ್ಲಿ ಅಡಚಣೆಯಿಂದಾಗಿ ನಿಮ್ಮ ಆತಂಕವು, ಮಾನಸಿಕ ಒತ್ತಡ ಹೆಚ್ಚಾಗಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ವಾರದ ಕೊನೆಯ ದಿನಗಳು ನಿಮಗೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಆತ್ಮೀಯರ ಸಂಪೂರ್ಣ ಬೆಂಬಲವಿರುತ್ತದೆ ಮತ್ತು ಹಿರಿಯರ ಮಾರ್ಗದರ್ಶನ ದೊರೆಯುವುದರಿಂದ ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೀರಿ.

Numerology Prediction From Aprill 22 To April 29 In Kannada

ಸಂಖ್ಯೆ 2 ( ಜನ್ಮ ದಿನಾಂಕ 2,11,20,29)
ವಾರದ ಆರಂಭದ ದಿನಗಳು ಒತ್ತಡದಿಂದ ಕೂಡಿರಲಿದೆ. ಈ ಸಮಯದಲ್ಲಿ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ, ಆದರೆ ಇದರ ನಂತರದ ಸಮಯವು ನಿಮಗೆ ಉತ್ತಮವಾಗಿರುತ್ತದೆ. ನಿಮಗಾಗಿ ಸಮಯ ದೊರೆಯಲಿದೆ. ನೀವು ಕುಟುಂಬದ ಕಡೆಗ್ಗೆ ಸಂಪೂರ್ಣ ಗಮನ ಹರಿಸಲು ಸಹ ಸಾಧ್ಯವಾಗುತ್ತದೆ. ಪ್ರೀತಿ ಪಾತ್ರರಿಂದ ಖುಷಿಯ ವಿಚಾರಗಳನ್ನು ಕೇಳುತ್ತೀರಿ. ದೈನಂದಿನ ಉದ್ಯೋಗ ಕ್ಷೇತ್ರದಲ್ಲಿ ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ.

ಸಂಖ್ಯೆ 3 (ಜನ್ಮ ದಿನಾಂಕ 3,12,21,30)
ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆ ತುಂಬಾ ಖುಷಿಯಿಂದ ಸಮಯ ಕಳೆಯುವಿರಿ. ಉದ್ಯೋಗಿಗಳಿಗೆ ಈ ಅವಧಿಯಲ್ಲಿ ಸವಾಲುಗಳು ಹೆಚ್ಚಾಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕಾರ್ಯವೈಖರಿಯಿಂದ ಸ್ವಲ್ಪ ಅತೃಪ್ತರಾಗುತ್ತಾರೆ. ಇದಲ್ಲದೆ, ನೀವು ಸಹೋದ್ಯೋಗಿಯೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರಬಹುದು. ವಾರದ ಕೊನೆಯಲ್ಲಿ, ಮಗುವಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆದ ನಂತರ ಮನಸ್ಸು ತುಂಬಾ ಸಂತೋಷವಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ

ಸಂಖ್ಯೆ 4( ಜನ್ಮ ದಿನಾಂಕ 4,13,22,31)
ಈ ಸಂಖ್ಯೆಯವರಿಗೆ ಈ ವಾರ ತುಂಬಾ ಆಹ್ಲಾದಕರವಾಗಿರುತ್ತದೆ. ಈ ವಾರ ಯೋಜನೆಯ ಪ್ರಕಾರವೇ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಸಿಗಲಿದೆ. ಈ ವಾರ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಆರಾಮದಾಯಕವಾದ ದುಬಾರಿ ವಸ್ತುವನ್ನು ಸಹ ಖರೀದಿಸಬಹುದು. ಸಂಗಾತಿಯೊಂದಿಗೆ ಈ ವಾರ ಭವಿಷ್ಯದ ಯೋಜನೆಗಳನ್ನು ಮಾಡುತ್ತೀರಿ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ನೀವು ಕೆಲಸದಲ್ಲಿ ಉತ್ತಮವಾಗಿ ಗಮನಹರಿಸಲು ಸಾಧ್ಯವಾಗುವುದು.

ಸಂಖ್ಯೆ 5 ( ಜನ್ಮ ದಿನಾಂಕ 5,14,23)
ಈ ವಾರ ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ಈ ಸಮಯದಲ್ಲಿ ಯಾವುದೇ ಹಳೆಯ ಸಾಲದ ಚಿಂತೆ ಕಾಡಬಹುದು. ನಿಮ್ಮ ಖರ್ಚುಗಳನ್ನು ಮಿತಿಗೊಳಿಸಿದರೆ ಆರ್ಥಿಕ ತೊಂದರೆ ಉಂಟಾಗುವುದನ್ನು ತಡೆಗಟ್ಟಬಹುದು. ಉದ್ಯೋಗಿಗಳಿಗೆ ಈ ವಾರ ಕೆಲಸದ ಒತ್ತಡ ಅಧಿಕವಿರಲಿದೆ. ಆದರೆ, ಉನ್ನತ ಅಧಿಕಾರಿಗಳ ನೆರವಿನಿಂದ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಮನೆಯ ವಾತಾವರಣ ಚೆನ್ನಾಗಿರಲಿದೆ. ನಿಮ್ಮ ಮನೆಯಲ್ಲಿ ವಯಸ್ಸಾದವರು ಇದ್ದರೆ ಅವರ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ.

ಸಂಖ್ಯೆ 6 (ಜನ್ಮ ದಿನಾಂಕ 6,15,24)
ನೀವು ಪ್ರೀತಿಯಲ್ಲಿದ್ದರೆ ನಿಮ್ಮ ಪ್ರಣಯ ಜೀವನದಲ್ಲಿ ಹೊಸ ತಿರುವು ಸಿಗಬಹುದು. ನಿಮ್ಮ ಮದುವೆಗೆ ಮನೆಯವರ ಅನುಮತಿ ಸಿಗಬಹುದು. ನೀವು ಸದಸ್ಯರೊಂದಿಗೆ ದೂರವಾಗಿದ್ದರೆ, ನಿಮ್ಮ ಸಂಬಂಧವು ಸುಧಾರಿಸುತ್ತದೆ. ಕೆಲಸದ ಕಡೆ ಗಮನ ನೀಡಲು ಸಾಧ್ಯವಾಗುವುದು. ನೀವು ವ್ಯಾಪಾರ ಮಾಡುತ್ತಿದ್ದರೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವುದರಿಂದ ಲಾಭ ಗಳಿಸುವಿರಿ. ಆರೋಗ್ಯವಾಗಿರಲು, ನಿಮ್ಮ ಆಹಾರಕ್ರಮ ಕಡೆ ಗಮನಹರಿಸಿ.

ಸಂಖ್ಯೆ 7 (ಜನ್ಮ ದಿನಾಂಕ 7,16,25)
ಹಣದ ವಿಷಯದಲ್ಲಿ ಈ ವಾರ ನೀವು ತುಂಬಾ ಅದೃಷ್ಟಕರವಾಗಿದೆ. ನೀವು ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವಿರಿ. ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಪ್ರಗತಿಯ ಹೊಸ ಅವಕಾಶಗಳು ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಜೀವನ ಸಂಗಾತಿಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.

ಸಂಖ್ಯೆ 8 ( ಜನ್ಮ ದಿನಾಂಕ 8,17,26)
ನಿಮ್ಮ ಎಲ್ಲಾ ನೆಗೆಟಿವ್ ಚಿಂತೆ ದೂರಾಗುವುದು ಉತ್ತಮ ಮನಸ್ಥಿತಿಯಲ್ಲಿರುವಿರಿ. ಈ ವಾರ ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ ನೀವು ಧಾರ್ಮಿಕ ಸ್ಥಳಕ್ಕೆ ಹೋಗಬಹುದು ಆದರೆ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ, ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ, ನಿಮ್ಮ ತಾಯಿಯ ಮನಸ್ಸು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.

ಸಂಖ್ಯೆ 9 (ಜನ್ಮ ದಿನಾಂಕ 9,18,27)
ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಸಾಧ್ಯವಾಗುವುದು. ಈ ವಾರ ಅನಗತ್ಯ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಅಸಮತೋಲನಗೊಳಿಸಬಹುದು. ಹಣವನ್ನು ನೋಡಿಕೊಂಡು ಖರ್ಚು ಮಾಡುವುದು ಒಳ್ಳೆಯದು. ಸಂಗಾತಿಯ ಆರೋಗ್ಯ ಸ್ವಲ್ಪ ದುರ್ಬಲವಾಗಿರುತ್ತದೆ. ನಿಮ್ಮ ಹಾಗೂ ಮನೆಯವರ ಕಳಪೆ ಆರೋಗ್ಯದಿಂದ ಕೆಲ ಸಮಸ್ಯೆಗಳು ಎದುರಾಗಬಹುದು.

English summary

Numerology Prediction From Aprill 23 To April 29 In Kannada

Here are numerology prediction of April 22 to 29 as per your birth date read on.
X
Desktop Bottom Promotion