Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ ತಿಂಗಳಿನಲ್ಲಿ ಈ 6 ರಾಶಿಯವರು ಜಾಗ್ರತೆವಹಿಸಿದರೆ ಒಳ್ಳೆಯದು!
ಗ್ರಹಗತಿಗಳು ನಿಮ್ಮ ರಾಶಿಯಲ್ಲಿ ಇರುವ ಸ್ಥಾನಕ್ಕೆ ತಕ್ಕಂತೆ ಪ್ರಭಾವ ಬೀರಲಿದೆ. ಈ ನವೆಂಬರ್ ತಿಂಗಳಿನಲ್ಲಿ 6 ರಾಶಿಯವರು ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು, ಯಾವೆಲ್ಲಾ ರಾಶಿಯವರು ಈ ತಿಂಗಳಿನಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ಮಿಥುನ ರಾಶಿ
ಮಿಥುನ ರಾಶಿಯವರು ನವೆಂಬರ್ ತಿಂಗಳಿನಲ್ಲಿ ಜಾಗ್ರತೆವಹಿಸಿ, ಕೆಲಸದ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಿ. ಕೆಲಸದಲ್ಲಿ ನಿಮಗೆ ಸರಿ ಬರದಿದ್ದರೆ ಆತುರದಿಂದ ಕೆಲಸ ಬಿಡಬೇಡಿ. ನಕರಾತ್ಮಕ ವಿಚಾರಗಳು ನಿಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ, ಕೆಟ್ಟ ಆಲೋಚನೆಗಳನ್ನು ಮಾಡಬೇಡಿ. ಇನ್ನು ಯಾವುದೇ ಹೂಡಿಕೆಗೆ ಈ ಅವಧಿ ಉತ್ತಮವಲ್ಲ, ಆದ್ದರಿಂದ ಏನಾದರೂ ಹೊಸ ವ್ಯವಹಾರ ಪ್ರಾರಂಭಿಸಲಯ ಬಯಸಿದರೆ ಕಾಯುವುದು ಒಳ್ಳೆಯದು. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಒತ್ತಡದಿಂದ ಕೂಡಿರಲಿದೆ. ಆರೋಗ್ಯ ಸಮಸ್ಯೆಯೂ ಕಾಡುವುದು. ಈ ಅವಧಿಯಲ್ಲಿ ಹಣದ ಖರ್ಚು ಅಧಿಕವಿರಲಿದೆ.

ಕರ್ಕ ರಾಶಿ
ಈ ಅವಧಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಜಾಗರೂಕರಾಗಿರಿ. ಈ ಅವಧಿಯಲ್ಲಿ ಯಾವುದೇ ಹೊಸ ಕೆಲಸ ಪ್ರಾರಂಭಿಸಬೇಡಿ. ಹಣಕಾಸಿನ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಖರ್ಚು ಅಧಿಕವಿರಲಿದೆ. ಕುಟುಂಬದಲ್ಲಿಯೂ ಅನೇಕ ಸಮಸ್ಯೆ ಉಂಟಾಗುವುದು. ಹೆಚ್ಚುತ್ತಿರುವ ಒತ್ತಡದಿಂದಾಗಿ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ತಿಂಗಳಿನಲ್ಲಿ ಬಹಳ ಜಾಗರೂಕರಾಗಿರಲು ಸಲಹೆ ನೀಡಲಾಗುವುದು. ಈ ಅವಧಿಯಲ್ಲಿ ಕೆಲಸದ ಕೆಲಸದ ಕಡೆಗೆ ಗಮನಹರಿಸಲು ಕಷ್ಟವಾಗುವುದು, ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡುವುದು ಕಷ್ಟವಾಗುವುದು. ಹಣಕಾಸಿನ ಸಮಸ್ಯೆ ಹೆಚ್ಚಾಗಲಿದೆ, ಈ ಅವಧಿಯಲ್ಲಿ ಅಧಿಕ ಸಾಲ ಮಾಡಿಕೊಳ್ಳಬಹುದು. ಯಾವುದೇ ಪ್ರಮುಖ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು. ಆತುರದ ನಿರ್ದಾರ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಿಸಬಹುದು. ಪ್ರೇಮಿಗಳಿಗೂ ಈ ಅವಧಿ ಅನುಕೂಲಕರವಲ್ಲ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರಲಿದೆ, ಆರೋಗ್ಯ ಸಮಸ್ಯೆಯೂ ಕಾಡಬಹುದು.
ಮಕರ ರಾಶಿ
ಮಕರ ರಾಶಿಯರು ಈ ತಿಂಗಳಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕುಸಿತದ ಸಾಧ್ಯತೆಯಿದೆ. ನೀವು ಬಯಸಿದರೂ ಉಳಿತಾಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅನಗ್ಯತ ಖರ್ಚು ಹೆಚ್ಚಾಗುವುದು. ಕೆಲಸದಲ್ಲಿ ನೀವು ಬಯಸಿದಂತೆ ಫಲಿತಾಂಶ ದೊರೆಯುವುದು ಕಷ್ಟವಾಗುವುದು. ಕೆಲವು ಅಸೂಯೆ ಪಟ್ಟ ಸಹೋದ್ಯೋಗಿಗಳಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಈ ಅವಧಿಯಲ್ಲಿ ನೀವು ಎಷ್ಟು ಜಾಗ್ರತೆಯಿಂದ ಇರುತ್ತೀರೋ ಅಷ್ಟು ಒಳ್ಳೆಯದು. ಮನೆಯಲ್ಲಿ ಹಣದ ವಿಷಯದಲ್ಲಿ ಜಗಳಗಳು ಉಂಟಾಗಬಹುದು. ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆಯಿಂದಾಗಿ ಅಧಿಕ ಹಣ ಖರ್ಚಾಗುವುದು.
ಕುಂಭ ರಾಶಿ
ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಲ್ಲ. ಈ ತಿಂಗಳಿನಲ್ಲಿ ಕೆಲಸದ ಒತ್ತಡ ಅಧಿಕವಿರಲಿದೆ. ಮೇಲಾಧಿಕಾರಿಗಳು ನಿಮ್ಮ ಮೇಲೆ ಒತ್ತಡ ಹಾಕಬಹುದು. ಈ ತಿಂಗಳು ಉದ್ಯಮಿಗಳಿಗೆ ಮಿಶ್ರ ಫಲ, ಆದ್ದರಿಂದ ಹೊಸ ಹೂಡಿಕೆ ಮಾಡದಿರುವುದು ಒಳ್ಳೆಯದು. ನೀವು ಈ ಅವಧಿಯಲ್ಲಿ ಸಾಲ ಮಾಡಿದಿದ್ದರೆ ಒಳ್ಳೆಯದು. ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಈ ಅವಧಿಯಲ್ಲಿ ನೀವು ಜಾಗರೂಕರಾಗಿರಬೇಕು.
ಮೀನ ರಾಶಿ
ಈ ತಿಂಗಳು ಕೆಲಸದ ಹೊರೆ ಅಧಿಕವಿರಲಿದೆ. ಆರ್ಥಿಕ ಜೀವನದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ಹಣ ಸಂಪಾದಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಹಣದ ಕೊರತೆಯಿಂದ ನಿಮ್ಮ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ. ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಸಾಧ್ಯ. ಸಂಬಂಧದಲ್ಲಿ ಸಾಮರಸ್ಯದ ಕೊರತೆಯಿಂದಾಗಿ, ಸಣ್ಣ ವಿಷಯಗಳಲ್ಲಿ ಸಂಗಾತಿಯೊಂದಿಗೆ ಘರ್ಷಣೆಗಳು ಉಂಟಾಗಬಹುದು.



Click it and Unblock the Notifications