Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Bank Holidays: ನವೆಂಬರ್‌ನಲ್ಲಿ 14 ದಿನ ಬ್ಯಾಂಕ್ ಬಂದ್! ರಾಜ್ಯವಾರು ರಜಾದಿನಗಳ ಪಟ್ಟಿ ಇಲ್ಲಿದೆ
ನವೆಂಬರ್ ತಿಂಗಳಲ್ಲಿ 14 ದಿನ ಬ್ಯಾಂಕ್ ಬಂದ್! ರಾಜ್ಯವಾರು ರಜಾದಿನಗಳ ಪಟ್ಟಿ ಇಲ್ಲಿದೆ. ಅಕ್ಟೋಬರ್ ತಿಂಗಳ ಹಬ್ಬಗಳ ಸಂಭ್ರಮ ಮುಗಿಯುತ್ತಿದ್ದಂತೆ, ನವೆಂಬರ್ ತಿಂಗಳ (November 2025) ಬ್ಯಾಂಕ್ ರಜಾದಿನಗಳ ಪಟ್ಟಿ ಹೊರಬಿದ್ದಿದೆ. ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ, ಗುರು ನಾನಕ್ ಜಯಂತಿ ಸೇರಿದಂತೆ ಅನೇಕ ಪ್ರಮುಖ ಹಬ್ಬಗಳು ಮತ್ತು ಘಟನೆಗಳು ಬರಲಿವೆ. ಈ ಕಾರಣದಿಂದಾಗಿ ದೇಶಾದ್ಯಂತ ಹಲವು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ (Bank Closed) ಆಗಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಪ್ರಕಾರ, ನವೆಂಬರ್ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ದಿನಾಂಕಗಳಂದು ಬ್ಯಾಂಕ್ ರಜೆಗಳು (Bank Holidays) ಇರುತ್ತವೆ. ಚೆಕ್ ಜಮಾ ಮಾಡುವುದು, ನಗದು ಹಿಂಪಡೆಯುವುದು, ಡಿಮ್ಯಾಂಡ್ ಡ್ರಾಫ್ಟ್ ಮಾಡಿಸುವುದು ಅಥವಾ ದಾಖಲೆಗಳಿಗೆ ಸಹಿ ಮಾಡಿಸುವುದು ಇತ್ಯಾದಿ ನಿಮ್ಮ ಬ್ಯಾಂಕ್ ಸಂಬಂಧಿತ ಪ್ರಮುಖ ಕೆಲಸಗಳಿದ್ದರೆ, ಮುಂಚಿತವಾಗಿಯೇ ಪ್ಲಾನ್ ಮಾಡಿಕೊಳ್ಳಿ.

ನಿಮ್ಮ ವಹಿವಾಟುಗಳು ಅಥವಾ ವ್ಯಾಪಾರ ವ್ಯವಹಾರಗಳು ಸ್ಥಗಿತಗೊಳ್ಳುವುದನ್ನು ತಪ್ಪಿಸಲು, ಈ ರಜಾದಿನಗಳ ಪಟ್ಟಿಯನ್ನು ಸೇವ್ ಮಾಡಿ. ನಿಮ್ಮ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವುದು ಅತ್ಯಗತ್ಯ. ನವೆಂಬರ್ 2025ರ ಸಂಪೂರ್ಣ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು (November 2025 Bank Holiday List) ಈ ಲೇಖನದಲ್ಲಿ ನೀಡಲಾಗಿದೆ. ಇದು ನೀವು ಬ್ಯಾಂಕ್‌ಗೆ ಯಾವಾಗ ಹೋಗಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ನವೆಂಬರ್ 1, 2025
ಕನ್ನಡ ರಾಜ್ಯೋತ್ಸವ (ಕರ್ನಾಟಕ ರಾಜ್ಯೋತ್ಸವ), ಹರಿಯಾಣ ದಿವಸ್ ಆಚರಣೆ.
ನವೆಂಬರ್ 5, 2025
ಗುರು ನಾನಕ್ ಜಯಂತಿ ಮತ್ತು ಕಾರ್ತಿಕ ಪೂರ್ಣಿಮೆ. ಇದರ ಪ್ರಯುಕ್ತ ಐಜ್ವಾಲ್, ಭೋಪಾಲ್, ಬೇಲಾಪುರ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಇಟಾನಗರ್, ಜೈಪುರ್, ಕಾನ್ಪುರ್, ಜಮ್ಮು, ಕೊಹಿಮಾ, ಲಕ್ನೋ, ಕೋಲ್ಕತ್ತಾ, ಮುಂಬೈ, ನಾಗಪುರ್, ನವದೆಹಲಿ, ರಾಯಪುರ್, ರಾಂಚಿ, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್ ಆಗಲಿವೆ.
ನವೆಂಬರ್ 7, 2025
ವಾಂಗಲಾ ಮಹೋತ್ಸವ: ಮೇಘಾಲಯದ ಗಾರೋ ಬುಡಕಟ್ಟು ಜನಾಂಗವು ಸುಗ್ಗಿಯ ಹಬ್ಬವಾದ ಪ್ರಸಿದ್ಧ ವಾಂಗಲಾ ಮಹೋತ್ಸವವನ್ನು ಆಚರಿಸುತ್ತದೆ. ಇದು ಏಳು ದಿನಗಳ ಉತ್ಸವವಾಗಿದ್ದು, ರಾಜ್ಯದಿಂದ ಪ್ರಾಯೋಜಿತವಾಗಿದೆ. ಮೇಘಾಲಯದಲ್ಲಿ ಸಾರ್ವಜನಿಕ ರಜಾದಿನವಾಗಿದೆ. ಈ ದಿನ ರಾಜಧಾನಿ ಶಿಲ್ಲಾಂಗ್‌ನಲ್ಲಿರುವ ಎಲ್ಲಾ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ನವೆಂಬರ್ 8, 2025
ಕನಕದಾಸ ಜಯಂತಿ: ಕರ್ನಾಟಕ ರಾಜ್ಯದ ಪ್ರಸಿದ್ಧ ಭಕ್ತಿ ಕವಿ, ಸಂಗೀತಗಾರ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರಾದ ಕನಕದಾಸರ 525ನೇ ಜನ್ಮದಿನವು ನವೆಂಬರ್ 8, 2025 ರಂದು ಬರುತ್ತದೆ. ಈ ದಿನ ಬ್ಯಾಂಕ್‌ಗಳಿಗೆ ಎರಡನೇ ಶನಿವಾರದ ರಜೆಯೂ ಇರುತ್ತದೆ.
ನವೆಂಬರ್ 11, 2025
ಲ್ಹಾಬಾಬ್ ದುಚೆನ್: ಸಿಕ್ಕಿಂನಲ್ಲಿ ಲ್ಹಾಬಾಬ್ ದುಚೆನ್ 2025 ಬೌದ್ಧರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ನವೆಂಬರ್ 11 ರಂದು ಮಂಗಳವಾರ ಆವರಿಸಲಾಗುತ್ತದೆ. ಹೀಗಾಗಿ, ಅಂದು ಬ್ಯಾಂಕ್ ರಜೆ ಇರುತ್ತದೆ.
ಈ 7 ದಿನಗಳು ದೇಶಾದ್ಯಂತ ಬ್ಯಾಂಕ್ ಬಂದ್
ಪ್ರಮುಖ ಹಬ್ಬಗಳ ಹೊರತಾಗಿ ಶನಿವಾರ ಮತ್ತು ಭಾನುವಾರದ ಸಾಮಾನ್ಯ ಸಾಪ್ತಾಹಿಕ ಬ್ಯಾಂಕ್ ರಜೆ ಇರಲಿದೆ. ಈ ದಿನಗಳಂದು ಸಹ ಬ್ಯಾಂಕ್‌ಗಳು ಮುಚ್ಚಲಿವೆ.
• ನವೆಂಬರ್ 2
• ನವೆಂಬರ್ 8
• ನವೆಂಬರ್ 9
• ನವೆಂಬರ್ 16
• ನವೆಂಬರ್ 22
• ನವೆಂಬರ್ 23
• ನವೆಂಬರ್ 30
ಎಟಿಎಂ ಮತ್ತು ಆನ್‌ಲೈನ್ ಸೇವೆಗಳು ಲಭ್ಯ
ಈ ರಜಾದಿನಗಳಲ್ಲಿ ನೀವು ಬ್ಯಾಂಕ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಎಟಿಎಂ ಸೇವೆಗಳು ಅಥವಾ ಆನ್‌ಲೈನ್ ಸೇವೆಗಳಲ್ಲಿ ಯಾವುದೇ ಅಡ್ಡಿಯಿರುವುದಿಲ್ಲ ಎಂಬುದು ಸಮಾಧಾನಕರ ಸುದ್ದಿ. ಆದ್ದರಿಂದ, ನಿಮ್ಮ ಕೆಲಸಗಳನ್ನು ಮತ್ತು ವಹಿವಾಟುಗಳನ್ನು ಇವುಗಳ ಮೂಲಕ ನಿರ್ವಹಿಸಬಹುದು.



Click it and Unblock the Notifications