Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸ ಭವಿಷ್ಯ: ನವೆಂಬರ್ ತಿಂಗಳು ವೃಷಭ ರಾಶಿಯವರಿಗೆ ಶುಭವೇ?
ನವೆಂಬರ್ ತಿಂಗಳಿನಲ್ಲಿ ಶುಕ್ರ 6ನೇ ಮನೆಯಲ್ಲಿ, ಬುಧ 7ನೇ ಮನೆಯಲ್ಲಿ ಇರಲಿದೆ. ಮಂಗಳ 3ನೇ ಮನೆಯಲ್ಲಿ ಇರಲಿದೆ. ಈ ಗ್ರಹಗಳ ಸ್ಥಾನದಿಂದಾಗಿ ವ್ಯವಹಾರ ಮತ್ತು ಸಂಬಂಧಗಳಲ್ಲಿ ಏರಿಳಿತಗಳನ್ನು ಎದುರಿಸಬಹುದು.
ವೃಷಭ ರಾಶಿಯವರಿಗೆ ಕೇತು ನಿಮ್ಮ ಆರನೇ ಮನೆಯಲ್ಲಿದ್ದರೆ ಶನಿಯು ಹತ್ತನೇ ಮನೆಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ. ಗ್ರಹಗಳ ಈ ಸ್ಥಾನದಿಂದಾಗಿ ವೃಷಭ ರಾಶಿಯವರು ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು, ನೀವು ಮೊದಲಿಗಿಂತ ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೆಲಸದಲ್ಲಿ ನೀವು ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಹಾಕಬೇಕಾಗುತ್ತದೆ. ಖರ್ಚು ಅಧಿಕವಿರಲಿದೆ, ಆದರೆ ಆದಾಯವು ಚೆನ್ನಾಗಿರುವುದರಿಂದ ದೊಡ್ಡ ಸಮಸ್ಯೆಯಿಲ್ಲ.

ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಭವಿಷ್ಯ ಹೇಳಲಾಗಿದೆ. ನವೆಂಬರ್ ತಿಂಗಳು ವೃಷಭ ರಾಶಿಯವರಿಗೆ ಹೇಗಿರಲಿದೆ? ಈ ತಿಂಗಳು ವೃತ್ತಿ ಜೀವನ, ಆರ್ಥಿಕ ಜೀವನ, ಕೌಟುಂಬಿಕ ಜೀವನ ಹೇಗಿರಲಿದೆ ಎಂದು ವಿವರವಾಗಿ ಹೇಳಲಾಗಿದೆ ನೋಡಿ:
ವೃತ್ತಿ ಜೀವನ
ಶನಿಯು ನಿಮ್ಮ ಹತ್ತನೇ ಮನೆಯಲ್ಲಿದೆ. ಶನಿಯು ಸವಾಲಿನ ಗ್ರಹವಾಗಿದೆ, ಆದ್ದರಿಂದ ನೀವು ಕಠಿಣ ಪರಿಶ್ರಮದಿಂದ ಮಾತ್ರ ಧನಾತ್ಮಕ ಫಲಿತಾಂಶಗಳನ್ನು ಸಾಧಿಸಬಹುದು, ಒಂದು ಚಿಕ್ಕ ಕೆಲಸ ಯಶಸ್ಸವಿಯಾಗಲು ಅಧಿಕ ಪರಿಶ್ರಮ ಬೇಕಾಗುವುದು. ಶನಿಯ ಹಿಮ್ಮುಖ ಚಲನೆ ಉದ್ಯೋಗದಲ್ಲಿ ಬದಲಾವಣೆ ಅಥವಾ ಅಭದ್ರತೆ ಉಂಟು ಮಾಡಬಹುದು. ನೀವು ಕೆಲಸದಲ್ಲಿ ಯಶಸ್ಸು ಕಾಣಲು ಯೋಜನೆ ಪ್ರಕಾರ ಕೆಲಸ ಮಾಡಬೇಕು.
ಗುರುವು ನಿಮ್ಮ ಚಂದ್ರನ ಹನ್ನೆರಡನೇ ಮನೆಯಲ್ಲಿ ಮತ್ತು ರಾಹು ಹನ್ನೊಂದನೇ ಮನೆಯಲ್ಲಿ ಇರಲಿದೆ. ಪರಿಣಾಮವಾಗಿ, ಉದ್ಯೋಗ ಬಡ್ತಿಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ವೃತ್ತಿ ಕ್ಷೇತ್ರದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಸ್ವಂತ ವ್ಯವಹಾರವನ್ನು ಮಾಡುತ್ತಿರುವವರು ನವೆಂಬರ್ ತಿಂಗಳು ಕಡಿಮೆ ಲಾಭವನ್ನು ಗಳಿಸಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಅನೇಕ ಸಮಸ್ಯೆಗಳು ಎದುರಾಗುವುದು.
ಆರ್ಥಿಕ ಜೀವನ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ಸರಾಸರಿಯಾಗಿರಲಿದೆ. ಏಕೆಂದರೆ ಗುರು ನಿಮ್ಮ ಹನ್ನೆರಡನೇ ಮನೆಯಲ್ಲಿ ಮತ್ತು ರಾಹು ಹನ್ನೊಂದನೇ ಮನೆಯಲ್ಲಿ ಸ್ಥಿತರಿರುತ್ತಾರೆ, ಇದರಿಂದಾಗಿ ಹಣಗಳಿಸುತ್ತೀರಿ ಆದರೆ ಖರ್ಚು ಕೂಡ ಅದೇ ರೀತಿ ಇರಲಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಸ್ವಲ್ಪ ಕಡಿಮೆ ಲಾಭ ಗಳಿಸಬಹುದು.
ಆರೋಗ್ಯ ಜೀವನ
ನವೆಂಬರ್ ತಿಂಗಳಿನಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಆದರೆ ಪ್ರಮುಖ ಆರೋಗ್ಯ ಸಮಸ್ಯೆಗಳಿರಲ್ಲ. ನೀವು ಆಹಾರಕ್ರಮ ಹಾಗೂ ವ್ಯಾಯಾಮದ ಕಡೆಗೆ ಗಮನಹರಿಸಿದರೆ ಕಾಯಿಲೆ ಬೀಳುವುದನ್ನು ತಡೆಗಟ್ಟಬಹುದು.
ಪ್ರೀತಿ ಜೀವನ
ವೈವಾಹಿಕ ಅಥವಾ ಪ್ರೀತಿ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಅವಾಹಿತರು ಮದುವೆಯಾಗಲು ಸಂಬಂಧ ನೋಡುತ್ತಿದ್ದರೆ ಈ ತಿಂಗಳ ನಂತರ ಪ್ರಯತ್ನಿಸುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಏರಳಿತಗಳಿರಲ್ಲಿದೆ, ಹೊಂದಾಣಿಕೆಯ ಕೊತೆ ಕಂಡು ಬರುವುದು. ಪರಿಸ್ಥಿತಿಯನ್ನು ಪರಸ್ಪರ ಮಾತನಾಡುವ ಮೂಲಕ ಬಗೆಹರಿಸಿ, ಈ ಅವಧಿಯಲ್ಲಿ ತಾಳ್ಮೆ ತುಂಬಾನೇ ಮುಖ್ಯ.
ಪರಿಹಾರ
"ಓಂ ದುರ್ಗಾಯ ನಮಃ" ಎಂದು ಪ್ರತಿದಿನ 108 ಬಾರಿ ಜಪಿಸಿ.



Click it and Unblock the Notifications