Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಾಸ ಭವಿಷ್ಯ: ನವೆಂಬರ್ ತಿಂಗಳಿನಲ್ಲಿ ಮಿಥುನ ರಾಶಿವರ ವೃತ್ತಿ, ಆರ್ಥಿಕ ಜೀವನ ಹೇಗಿರಲಿದೆ?
ನವೆಂಬರ್ ತಿಂಗಳು ಮಿಥುನ ರಾಶಿಯವರಿಗೆ ಅನುಕೂಲಕರವಾಗಿದೆ. ಗುರುಗ್ರಹವು ನಿಮ್ಮ ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಗಳಿಕೆ ಚೆನ್ನಾಗಿರಲಿದೆ. ಇದಲ್ಲದೆ, ರಾಹು ನಿಮ್ಮ ಹತ್ತನೇ ಮನೆಯಲ್ಲಿ ಸ್ಥಿತವಾಗಿರಲಿದೆ, ಇದರಿಂದ ಲಾಭ ಗಳಿಸುವ ಸಾಧ್ಯತೆ ತುಂಬಾನೇ ಇದೆ. ಶನಿಯು 9ನೇ ಮನೆಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿದೆ.
ಮಂಗಳ 16 ನವೆಂಬರ್ 2023 ರಿಂದ ನಿಮ್ಮ ಏಳನೇ ಮನೆಯಲ್ಲಿ ಸ್ಥಿತನಾಗುತ್ತಾನೆ. ಈ ತಿಂಗಳಲ್ಲಿ, ಆರನೇ ಮತ್ತು ಹನ್ನೆರಡನೇ ಮನೆಯಲ್ಲಿ ನೆರಳು ಗ್ರಹ ರಾಹು/ಕೇತು ಇರುವುದರಿಂದ ಫಲಿತಾಂಶಗಳ ವೇಗವು ಮಧ್ಯಮವಾಗಿರುತ್ತದೆ.
ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಭವಿಷ್ಯ ಹೇಳಲಾಗಿದೆ. ನವೆಂಬರ್ ತಿಂಗಳು ಮಿಥುನ ರಾಶಿಯವರಿಗೆ ಹೇಗಿರಲಿದೆ? ಈ ತಿಂಗಳು ವೃತ್ತಿ ಜೀವನ, ಆರ್ಥಿಕ ಜೀವನ, ಕೌಟುಂಬಿಕ ಜೀವನ ಹೇಗಿರಲಿದೆ ಎಂದು ವಿವರವಾಗಿ ಹೇಳಲಾಗಿದೆ ನೋಡಿ:

ವೃತ್ತಿ ಜೀವನ
ಒಂಬತ್ತನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ವೃತ್ತಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ನೀಡಲಿದೆ.
ಗುರು ನಿಮ್ಮ ನಿಮ್ಮ ಹನ್ನೊಂದನೇ ಮನೆಯಲ್ಲಿ ಸ್ಥಿತವಾಗಿರುತ್ತದೆ, ಈ ಕಾರಣದಿಂದಾಗಿ ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು, ಉದ್ಯೋಗದಲ್ಲಿ ಬಡ್ತಿ, ವಿದೇಶದಲ್ಲಿ ಉದ್ಯೋಗ ಅವಕಾಶ ಸಿಗುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರ ಮಾಡುವವರು ಉತ್ತಮ ಲಾಭ ಗಳಿಸಬಹುದು.
ಆರ್ಥಿಕ ಜೀವನ
ಆರ್ಥಿಕ ಜೀವನದ ದೃಷ್ಟಿಯಿಮದ ನೋಡುವುದಾದರೆ ಈ ತಿಂಗಳು ಮಿಥುನ ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ. ನೀವು ಸಾಕಷ್ಟು ಹಣವನ್ನು ಗಳಿಸಲು ಮತ್ತು ಉಳಿಸಲು ಸಾಧ್ಯವಾಗುತ್ತದೆ.
ಹತ್ತನೇ ಮನೆಯಲ್ಲಿ ರಾಹುವಿನ ಸ್ಥಾನವು ಪೂರ್ವಜರ ಆಸ್ತಿಯಿಂದ ಆರ್ಥಿಕ ಲಾಭವನ್ನು ಪಡೆಯಬಹುದು ಎಂಬ ಸೂಚನೆಯನ್ನು ನೀಡುತ್ತದೆ. ಷೇರುಗಳ ಖರೀದಿಯಿಂದ ಲಾಭದ ಸಾಧ್ಯತೆ ಇದೆ. ಮತ್ತೊಂದೆಡೆ, ರಾಹುವಿನ ಸ್ಥಾನವು ಹಣವನ್ನು ಗಳಿಸಲು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ನಿಮ್ಮ ಹತ್ತನೇ ಮನೆಯಲ್ಲಿ ರಾಹು ಇರುವುದರಿಂದ, ನಿಮ್ಮ ವೃತ್ತಿಪರ ಜೀವನದಲ್ಲಿ ಆರ್ಥಿಕ ಲಾಭ ಪಡೆಯುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಹತ್ತನೇ ಮನೆಯಲ್ಲಿ ರಾಹುವಿನ ಸ್ಥಾನವು ನಿಮಗೆ ಯೋಗ್ಯವಾದ ಲಾಭವನ್ನು ನೀಡುತ್ತದೆ.
ಶುಕ್ರನ ಸ್ಥಾನವು ಉತ್ತಮ ಆರ್ಥಿಕ ಲಾಭವನ್ನು ಸೂಚಿಸುತ್ತದೆ. ನೀವು ಆಸ್ತಿ ಖರೀದಿಸಲು ಯೋಚಿಸುತ್ತಿದ್ದರೆ ಈ ಸಮಯ ಉತ್ತಮವಾಗಿದೆ.
ಆರೋಗ್ಯ ಜೀವನ
ನವೆಂಬರ್ ತಿಂಗಳ ಭವಿಷ್ಯ ನೋಡುವುದಾದರೆ ನಿಮ್ಮ ಆರ್ಥಿಕ ಜೀವನ ಕೂಡ ತುಂಬಾ ಚೆನ್ನಾಗಿರಲಿದೆ. ಹನ್ನೊಂದನೇ ಮನೆಯಲ್ಲಿ ಗುರು ಇರುವುದರಿಂದ ಮಿಥುನ ರಾಶಿಯವರಿಗೆ ಆರೋಗ್ಯ ಉತ್ತಮವಾಗಿರುತ್ತದೆ. ಒಟ್ಟಾರೆಯಾಗಿ, ನವೆಂಬರ್ ತಿಂಗಳು ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ.
ಪ್ರೀತಿ, ಮದುವೆ, ಕುಟುಂಬ ಜೀವನ
ಪ್ರೇಮಿಗಳು ಈ ತಿಂಗಳಿನಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ಮನೆಯವರಿಗೆ ನಿಮ್ಮ ಪ್ರೀತಿ ಬಗ್ಗೆ ತಿಳಿಸಿ ಒಪ್ಪಿಗೆ ಪಡೆಯಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಅವೆಲ್ಲಾ ಬಗೆಹರಿದು ಇಬ್ಬರ ನಡುವೆ ಹೊಂದಾಣಿಕೆ ಹೆಚ್ಚಾಗಲಿದೆ. ಇನ್ನು ವಿವಾಹವಾಗಲು ಬಯಸುವುದಾದರೆ ಈ ತಿಂಗಳು ಅನುಕೂಲಕರವಾಗಿದೆ. ಕುಟುಂಬದಲ್ಲಿ ಸಾಮರಸ್ಯದ ವಾತಾವರಣ ಇರುತ್ತದೆ.
ಪರಿಹಾರ
"ಓಂ ನಮೋ ಭಗವತೇ ವಾಸುದೇವಾಯ" ಎಂದು ಪ್ರತಿದಿನ 4



Click it and Unblock the Notifications
