Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನವೆಂಬರ್ 10ಕ್ಕೆ ಧನ್ತೇರಸ್: ಪ್ರದೋಷ ಪೂಜೆಗೆ ಶುಭ ಸಮಯ ಯಾವಾಗ?
ಧನ್ತೇರಸ್ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿದೆ. ದೀಪಾವಳಿಯ ಮೊದಲ ದಿನ ಬರುವ ಧನ್ತೇರಸ್ ದಿನದಂದು ಚಿನ್ನ, ಬೆಳ್ಳಿ, ಮನೆಗೆ ಅಡುಗೆ ಸಾಮಾನು ಖರೀದಿಸಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ತುಂಬಿ ತುಳಕಲಿದೆ ಎಂಬ ನಂಬಿಕೆ.
ಕೃಷ್ಣಪಕ್ಷದ ತ್ರಯೋದಶಿ ತಿಥಿಯಂದು ಧನ್ತೇರಸ್ ಆಚರಿಸಲಾಗುವುದು. ಧನ್ತೇರಸ್ ದಿನದಂದು ಪೂಜೆಯನ್ನು ಮಾಡಲು ಶುಭ ಮುಹೂರ್ತ ಯಾವಾಗ? ಈ ಭಾರಿಯ ಧನ್ತೇರಸ್ ಮತ್ತಷ್ಟು ವಿಶೇಷವಾಗಿದೆ ಏಕೆ ಎಂದು ನೋಡೋಣ ಬನ್ನಿ:

ಧನ್ತೇರಸ್ 2023 ದಿನಾಂಕ ಮತ್ತು ಸಮಯ
ಧನ್ತೇರಸ್ ಹಬ್ಬವನ್ನು ಈ ವರ್ಷ ನವೆಂಬರ್ 10ರಂದು ಧನ್ತೇರಸ್ ಆಚರಿಸಲಾಗುವುದು. ದೀಪಾವಳಿಯನ್ನು ನವೆಂಬರ್ 12ರಂದು ಆಚರಿಸಲಾಗುವುದು.
ಧನ್ತೇರಸ್ ದಿನದಂದು ಆಯುರ್ವೇದ ದೇವರಾದ ಧನ್ವಂತರಿಯನ್ನು ಪೂಜಿಸಲಾಗುವುದು. ಅಲ್ಲದೆ ಈ ದಿನವನ್ನು ಕುಬೇರನನ್ನು ಆರಾಧಿಸಲಾಗುವುದು.
ಧನ್ತೇರಸ್ ದಿನಾಂಕ ಮತ್ತು ಮುಹೂರ್ತ
ಧನ್ತೇರಸ್ ದಿನಾಂಕ: ನವೆಂಬರ್ 10
ಧನ್ತೇರಸ್ ಮುಹೂರ್ತ ಸಂಜೆ 05:48:50ರಿಂದ 07:44:43ರವರೆಗೆ
ಪೂಜಾ ಅವಧಿ: ಒಂದು ಗಂಟೆ 55 ನಿಮಿಷ
ಪ್ರದೋಷ ಕಾಲ: ಸಂಜೆ 05:30:16ನಿಂದ 08:08:15
ವೃಷಭ ಅವಧಿ: ಸಂಜೆ 05:48:50ರಿಂದ 19:44:43ರವರೆಗೆ
30 ವರ್ಷದ ಬಳಿಕ ಬಂದ ಶುಭ ಯೋಗ
30 ವರ್ಷದ ಬಳಿಕ ಧನ್ತೇರಸ್ ದಿನದಂದು ಧನಯೋಗ ಏರ್ಪಟ್ಟಿದೆ.
ಈ ದಿನ ಶುಕ್ರ ಮತ್ತು ಚಂದ್ರ ಎರೂ ಕನ್ಯಾ ರಾಶಿಯಲ್ಲಿ ಇರುವುದರಿಂದ ಶಶಿ ಯೋಗ ಏರ್ಪಟ್ಟಿದೆ. ಈ ಗ್ರಹಗಳ ಜೊತೆ ಹಸ್ತ ನಕ್ಷತ್ರವೂ ಸಂಯೋಗವಾಗುವುದರಿಂದ ಈ ದಿನ ತುಂಬಾನೇ ಶುಭವಾಗಿದೆ.
ಈ ವರ್ಷ ತ್ರಯೋದಶಿ ನವೆಂಬರ್ 10 ರಮ್ಯಾಹ್ನ 12:35ರಿಂದ ಪ್ರಾರಂಭವಾಗಿ ಶನಿವಾರ ಮಧ್ಯಾಹ್ನ 01:57ರವರೆಗೆ ಇದೆ. ಆದ್ದರಿಂದ ನೀವು ಶನಿವಾರವನ್ನೂ ಶಾಪಿಂಗ್ ಮಾಡಬಹುದು.
ಈ ದಿನ ಚಿನ್ನಖರೀದಿಸುವುದು ಒಳ್ಳೆಯದು, ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ಬೆಳ್ಳಿಯನ್ನಾದರೂ ಖರೀದಿಸಬೇಕು ಎಂದು ಹೇಳಲಾಗುವುದು.
ಧನ್ತೇರಸ್ ದಿನದಂದು ಪೂಜಾ ವಿಧಾನಗಳು
* ಈ ದಿನ ಧನ್ವಂತರಿ, ಲಕ್ಷ್ಮಿ, ಕುಬೇರನಿಗೆ ಪೂಜೆ ಸಲ್ಲಿಸಬೇಕು
* ಮೊದಲು ಕುಬೇರನಿಗೆ, ನಂತರ ಧನ್ವಂತರಿಗೆ ಬಳಿಕ ಲಕ್ಷ್ಮಿಗೆ ಪೂಜೆ ಸಲ್ಲಿಸಿ
* ಪೂಜೆಗೆ ಮುನ್ನ ಗಣಪನ ಆರಾಧನೆ ಮಾಡಬೇಕು.
* ನಂತರ ಸಂಕಲ್ಪ ಮಾಡಿ ಪೂಜೆ ಆರಂಭಿಸಬೇಕು.
* ಪೂಜೆ ಬಳಿಕ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ದೇವರ ಬಳಿ ಕೇಳಿಕೊಳ್ಳಿ.



Click it and Unblock the Notifications
