Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಜೊಮ್ಯಾಟೋ, ಓಲಾ ಸೇರಿ ಸ್ನೇಹಿತರೇ ಕಟ್ಟಿದ ಬಹುಕೋಟಿ ಕಂಪನಿಗಳಿವು..!!
ರಕ್ತ ಸಂಬಂಧಕ್ಕಿಂತಲೂ ಗಟ್ಟಿಯಾದ ಸಂಬಂಧವೆಂದರೆ ಅದು ಸ್ನೇಹ ಎನ್ನಲಾಗುತ್ತೆ. ಒಬ್ಬ ವ್ಯಕ್ತಿ ತನ್ನ ಸಂಬಂಧಿಗಳು, ಪೋಷಕರು, ಪತಿ, ಪತ್ನಿ, ಮಕ್ಕಳ ಬಳಿ ಹೇಳಿಕೊಳ್ಳದ ವಿಚಾರಗಳನ್ನೂ ಹಂಚಿಕೊಳ್ಳುವುದು ಕೇವಲ ಸ್ನೇಹಿತರ ಬಳಿ ಮಾತ್ರವೇ. ಹೀಗಾಗಿಯೇ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ ಎಂದು ಹಿರಿಯರು ಹೇಳಿದ್ದಾರೆ. ಈ ಜಗತ್ತಿನಲ್ಲಿ ತಂದೆ-ತಾಯಿ ಇಲ್ಲದ ತಬ್ಬಲಿಗಳ ಅನಾಥರ ನಾವು ನೋಡಬಹುದು ಆದ್ರೆ ಸ್ನೇಹಿತರಿಲ್ಲದ ಮನುಷ್ಯರು ಕಾಣಸಿಗುವುದು ಬಲು ಅಪರೂಪ.
ಸ್ಮೇಹ ಅನ್ನೋದು ಹಣ, ಆಸ್ತಿ-ಅಂತಸ್ತು ನೋಡಿ ಯಾವತ್ತೂ ಹುಟ್ಟುವುದಿಲ್ಲ. ನಿಷ್ಕಲ್ಮಷ ಪ್ರೀತಿಗೆ, ಶುದ್ಧ ಮನಸ್ಸಿಗೆ ಸ್ನೇಹ ಒಲಿಯುತ್ತೆ. ನಿಮಗೂ ಕೂಡ ಜೀವಕ್ಕೆ ಜೀವ ನೀಡುವ ಸ್ನೇಹಿತರು ಇರಬಹುದು. ಹೀಗಾಗಿ ಸ್ನೇಹಿತರು ಒಬ್ಬ ವ್ಯಕ್ತಿಯ ಗುಣ, ವರ್ತನೆಗಳಿಗೆ ಹಿಡಿದ ಕೈಗನ್ನಡಿಯಾಗಿರುತ್ತಾರೆ. ಆದ್ರೆ ಈ ಭೂಮಿಯಲ್ಲಿ ಸ್ನೇಹಿತರ ಜೊತೆ ಸೇರಿ ಬದುಕನ್ನೇ ಕಟ್ಟಿಕೊಂಡ ಅದೇಷ್ಟೋ ಮಂದಿ ಸಿಗುತ್ತಾರೆ.

ಹೌದು ಸ್ನೇಹಿತರ ಜೊತೆಗೆ ಅವರು ಜೀವನ ಕಟ್ಟಿಕೊಂಡಿರುತ್ತಾರೆ. ಕೆಲವುರ ಸ್ನೇಹಿತರ ಜೊತೆ ಸೇರಿ ಉದ್ಯಮ ಕಟ್ಟುತ್ತಾರೆ, ಮತ್ತೆ ಕೆಲವರು ಸ್ನೇಹಿತೆಯನ್ನೆ ಮದುವೆಯಾಗಿ ಕುಟುಂಬವಾಗಿ ಜೀವನದ ಉದ್ದಕ್ಕೂ ಜೊತೆಗಿರುತ್ತಾರೆ. ಅಲ್ಲದೆ ಸ್ನೇಹಿತರೊಂದಿಗೆ ಸಾಧನೆಗಳಲ್ಲಿ ಭಾಗಿಯಾಗುತ್ತಾರೆ. ಕೊನೆಯ ದಿನಗಳ ವರೆಗೂ ಅತ್ಯುತ್ತಮ ಸ್ನೇಹಿತರಾಗಿ ಬದುಕುತ್ತಾರೆ.
ಹೀಗಾಗಿ ಈ ಸ್ನೇಹಿತರ ದಿನದ ಸಮಯದಲ್ಲಿ ನಾವು ಸಹ ಈ ರೀತಿ ಸ್ನೇಹಿತರಾಗಿ ಬದುಕು ಕಟ್ಟಿಕೊಂಡವರು ಹಾಗೂ ಸ್ನೇಹಿತರ ಜೊತೆ ಸೇರಿ ಇಡೀ ವಿಶ್ವಕ್ಕೆ ಮಾದರಿಯಾದ ಜೋಡಿಯ ಕುರಿತ ತಿಳಿದುಕೊಳ್ಳೋಣ. ಹಾಲ್ ಮಾರ್ಕ್ ಕಾರ್ಡ್ ತಯಾರಕರಾಗಿದ್ದ ಜೊಯ್ಸ್ ಹಾಲ್ ಎಂಬವರು ಸ್ನೇಹಿತರ ದಿನ ಆರಂಭಿಸಿದರು ಎಂಬುದು ನಮಗೆ ಗೊತ್ತೇ ಇದೆ. ಆದ್ರೆ ಕೆಲವೊಂದು ಸ್ನೇಹಿತರು ಇಡೀ ವಿಶ್ವವೇ ತಿರುಗಿ ಅವರತ್ತ ನೋಡುಂತೆ ಮಾಡಿದ ಉದಾಹರಣೆ ಸಹ ನಮ್ಮ ನಡುವೆಯೇ ಇದೆ.
ಮೀಶೋ ಹುಟ್ಟುಹಾಕಿದ್ದೇ ಸ್ಮೇಹಿತರು
ನೀವು ಆನ್‌ಲೈನ್ ಶಾಪಿಂಗ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರೆ ನಿಮಗೆ ಮೀಶೋ ಕುರಿತು ತಿಳಿದಿರುತ್ತದೆ. ಭಾರತದ ಬ್ರಾಂಡ್ ಆಗಿರುವ ಮೀಶೋ ಅನ್ನ ಹುಟ್ಟುಹಾಕಿದ್ದು ಇಬ್ಬರು ಸ್ನೇಹಿತರು. IIT-ದೆಹಲಿ ಪದವೀಧರರಾದ ವಿದಿತ್ ಆತ್ರೆ ಮತ್ತು ಸಂಜೀವ್ ಬರ್ನ್ವಾಲ್ ತಮ್ಮ ಬಳಿ ಇದ್ದ ಹಣವನ್ನೇಲ್ಲಾ ಹಾಕಿ ಮೀಶೋ ಎಂಬ ಬ್ರಾಂಡ್ ಕಟ್ಟಿದರು.
ಬೆಂಗಳೂರಿನ ಕೋರಮಂಗಲದಲ್ಲಿ ಸಣ್ಣ ರೂಮಿನಲ್ಲಿ ಮೀಶೋ ಹುಟ್ಟಿತು. ಇದಾದ ಬಳಿ ಈ ಮೀಶೋಗೆ ಫೇಸ್‌ಬುಕ್ ಸಂಸ್ಥೆ ಹೂಡಿಕೆ ಮಾಡಿತು ಇದು ಫೇಸ್‌ಬುಕ್ ಹೂಡಿಕೆ ಮಾಡಿದ ಭಾರತದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಸಹ ಪಡೆಯಿತು.
ಕಾಲೇಜು ಸ್ನೇಹಿತರು ಓಲಾ ಕಟ್ಟಿದರು
ರೈಡ್-ಹೇಲಿಂಗ್ ಯುನಿಕಾರ್ನ್ ಓಲಾವನ್ನು ಐಐಟಿ-ಮುಂಬೈ ಬ್ಯಾಚ್‌ಮೇಟ್‌ಗಳಾದ ಭವಿಶ್ ಅಗರ್ವಾಲ್ ಮತ್ತು ಅಂಕಿತ್ ಭಾಟಿ ಕಟ್ಟಿದ್ದಾರೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಇಬ್ಬರಿಗೆ ಉದ್ಯಮದ ಕಡೆಗೆ ಗಮನ ಹರಿಸಿದ್ದರು. ಆದರೆ ಪದವಿ ಪಡೆದ ಬಳಿಕ ಭವಿಶ್ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ್ರು. ಅಂಕಿತ್ ಮೇಕೆಸೆನ್ಸ್ ಮತ್ತು ವಿಲ್ಕಾಮ್ ಸೇರಿದಂತೆ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡಿದರು.
ಆದರೆ ಇಬ್ಬರು ಸೇರಿ 2010ರಲ್ಲಿ ಓಲಾವನ್ನು ಪರಿಚಯಿಸಿದರು. ಆರಂಭದಲ್ಲಿ ಇವರ ಉದ್ಯಮಕ್ಕೆ ರತನ್ ಟಾಟಾ ಕೈ ಜೋಡಿಸಿದ್ದರು. ಬಳಿಕ ಬಹುದೊಡ್ಡ ಕಂಪನಿಯಾಗಿ ಬೆಳೆಯಿತು. ಈಗ ಈ ಕಂಪನಿ ಮೌಲ್ಯ ಸಾವಿರಾರು ಕೋಟಿ ರೂಪಾಯಿ ಆಗಿದೆ.
ಜೊಮ್ಯಾಟೋ ಕಟ್ಟಿದ ಸ್ನೇಹಿತರು
ನಾವು ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವಂತಹ ಜೊಮ್ಯಾಟೋ ಸಂಸ್ಥೆಯ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಸಂಸ್ಥೆ ಹುಟ್ಟುಹಾಕಿದ್ದು ಸಹ ಇಬ್ಬರು ಸ್ನೇಹಿತರು. ಐಐಟಿ-ದೆಹಲಿ ಪದವೀಧರರಾದ ದೀಪಿಂದರ್ ಗೋಯಲ್ ಮತ್ತು ಪಂಕಜ್ ಚಡ್ಡಾ ಜೊಮ್ಯಾಟೋ ಆರಂಭಿಸಿದ ದೋಸ್ತಿಗಳು. FoodieBay ಎಂದು ಆರಂಭಗೊಂಡು ಈ ಉದ್ಯಮಕ್ಕೆ 2010ರಲ್ಲಿ ಜೊಮ್ಯಾಟೋ ಎಂದು ಮರು ನಾಮಕರಣ ಮಾಡಿದರು. ಅಲ್ಲಿಂದ ಇಬ್ಬರು ಈ ಸಂಸ್ಥೆ ಕಟ್ಟಿ ಬೆಳೆಸಿದರೆಲ್ಲದೆ ಈಗ ಬಹುಕೋಟಿ ಕಂಪನಿಯಾಗಿ ನಿಂತಿದೆ.



Click it and Unblock the Notifications


