Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ರಾಮನವಮಿ ಮಾತ್ರವಲ್ಲ ಸೀತಾ ನವಮಿಯನ್ನೂ ಆಚರಿಸಲಾಗುತ್ತೆ..! ಯಾವಾಗ ಗೊತ್ತಾ?
ಯುಗಾದಿ ಮುಗಿಯುತ್ತಿದ್ದಂತೆ ರಾಮನವಮಿಯೂ ಬರಲಿದೆ. ಭಗವಾನ್ ಶ್ರೀ ರಾಮನ ಭಕ್ತರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀ ರಾಮನ ಜನ್ಮ ದಿನವನ್ನು ರಾಮ ನವಮಿಯೆಂದು ಆಚರಿಸಲಾಗುವುದು. ಇದೇ ತಿಂಗಳ 17ರಂದು ರಾಮನವಮಿ ಆಚರಿಸಲಾಗುತ್ತಿದೆ.
ಇನ್ನು ಈ ವರ್ಷ ರಾಮ ನವಮಿ ವಿಶೇಷವಾಗಿರಲಿದೆ. ಜೊತೆಗೆ ರಾಮ ನವಮಿ ಜೊತೆ ಸೀತಾ ನವಮಿ ಸಹ ಆಚರಣೆ ರೂಢಿಯಲ್ಲಿದೆ. ಹಾಗಾದ್ರೆ ಈ ವರ್ಷ ಯಾವಾಗ ಸೀತಾ ನವಮಿ ಆಚರಿಸುತ್ತಾರೆ. ಇದರ ಮಹತ್ವವೇನು? ಪೂಜೆ ಕುರಿತ ಇರುವ ಕಥೆ ಏನು ಎಂಬುದನ್ನು ನಾವಿಂದು ನೋಡೋಣ.

ರಾಮ ನವಮಿಯ ಒಂದು ತಿಂಗಳ ನಂತರ ಸೀತಾ ನವಮಿಯನ್ನು ಆಚರಿಸಲಾಗುತ್ತದೆ. ಆದರೆ ಕೆಲವರು ಪ್ರತಿ ತಿಂಗಳು ಸೀತಾ ನವಮಿ ಆಚರಿಸುತ್ತಾರೆ. ಆದರೆ ಈ ದಿನ ಸೀತಾ ದೇವಿಯನ್ನು ಕ್ರಮಬದ್ಧವಾಗಿ ಪೂಜಿಸಲಾಗುತ್ತದೆ. ಸೀತಾ ನವಮಿಯ ಮಹತ್ವವೇನು? ಪೂಜೆಗೆ ಶುಭ ಮುಹೂರ್ತ ಯಾವಾಗ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ
ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ ಸೀತಾ ನವಮಿ ಆಚರಿಸಲಾಗುವುದು. ಈ ವರ್ಷ ಮೇ 16ರಂದು ಆಚರಿಸಲಾಗುವುದು. ಹುಟ್ಟಿದ ದಿನಾಂಕವನ್ನು ಆಧರಿಸಿ ಮೇ 16 ರಂದು ಸೀತಾ ನವಮಿ ಅಥವಾ ಜಾನಕಿ ಜಯಂತಿಯನ್ನು ಆಚರಿಸಲಾಗುತ್ತದೆ.
ಸೀತಾ ಜಯಂತಿಯ ಮಹತ್ವ
ಜಾನಕಿ ಜಯಂತಿ ಅಥವಾ ಸೀತಾ ನವಮಿಯ ದಿನದಂದು, ವಿವಾಹಿತ ಮಹಿಳೆಯರು ಉಪವಾಸವಿದ್ದು ತಾಯಿ ಸೀತೆಯನ್ನು ಪೂಜಿಸುತ್ತಾರೆ. ಅಖಂಡ ಸೌಭಾಗ್ಯ ಪತಿಗೆ ದೀರ್ಘಾಯುಷ್ಯ ಪ್ರಾಪ್ತಿಗಾಗಿ ಸೀತಾ ಜಯಂತಿ ಆಚರಿಸಲಾಗುವುದು.
ಸೀತಾ ದೇವಿಯ ಜನನ
ದಂತಕಥೆಗಳ ಪ್ರಕಾರ ಮಿಥಿಲಾದ ರಾಜ ಜನಕ ಭೂಮಿಯನ್ನು ಉಳುಮೆ ಮಾಡುವಾಗ ಸಿಕ್ಕ ಮಗುವೇ ಸೀತೆ. ನಂತರ ಸೀತೆ ಶ್ರೀರಾಮನ ಮಡದಿಯಾಗುತ್ತಾಳೆ. ಲವ-ಕುಶರಿಗೆ ತಾಯಿಯಾಗುತ್ತಾಳೆ.
ಪತಿಧರ್ಮ ಪರಿಪಾಲನೆ
ಸೀತೆ ಪತಿಧರ್ಮ ಪಾಲನೆ ಮಾಡುತ್ತಾಳೆ. ರಾಣಿಯಾಗಿದ್ದರೂ ಶ್ರೀರಾಮ ಕಾಡಿಗೆ ಹೋದಾಗ ಆತನ ಜೊತೆ ತಾನೂ ಹೋಗುತ್ತಾಳೆ,ಅಲ್ಲಿ ತುಂಬಾ ಕಷ್ಟ ಅನುಭವಿಸಬೇಕಾಗುತ್ತೆ. ರಾವಣ ಅವಳನ್ನು ಅಪಹರಿಸುತ್ತಾನೆ. ಲಂಕೆಯಲ್ಲಿ 435 ದಿನ ಕಳೆಯಬೇಕಾಗುತ್ತದೆ, ಆದರೆ ಅಚ್ಚರಿಯ ವಿಷಯವೆಂದರೆ ಲಂಕಾದಲ್ಲಿ ಸೀತೆಯ ನೈಜ ರೂಪವಿರಲಿಲ್ಲ, ಅವಳ ನಿಜವಾದ ರೂಪ ಅಗ್ನಿ ದೇವನೊಂದಿಗೆ ಇದ್ದಿತ್ತು ಎಂಬ ಉಲ್ಲೇಖವಿದೆ. ಲಂಕೆಯಲ್ಲಿ ಸೀತಾ ಮಾತೆ ಇದ್ದಾಗ ದೇವತೆಗಳ ರಾಜ ಇಂದ್ರ ಆಕೆಗೆ ವಿಶೇಷ ಖೀರ್ ನೀಡುತ್ತಾನೆ, ಆದ್ದರಿಂದ ಲಂಕೆಯ ಸೆರೆಮನೆಯಲ್ಲಿ ಇದ್ದ ಅಷ್ಟೂ ದಿನ ಸೀತೆಗೆ ಹಸಿವು ಆಗಿರಲಿಲ್ಲ ಈ ರೀತಿ ಸೀತೆ ಬಗ್ಗೆ ಅನೇಕ ಅಚ್ಚರಿಯ ಸಂಗತಿಗಳನ್ನು ರಾಮಾಯಣದಲ್ಲಿ ಹೇಳಲಾಗಿದೆ.
ರಾಮ ನವಮಿ ಶುಭ ಮುಹೂರ್ತ
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ 16 ರಂದು ಮಧ್ಯಾಹ್ನ 01:23 ಕ್ಕೆ ಪ್ರಾರಂಭವಾಗುತ್ತದೆ. ಈ ದಿನಾಂಕವು ಏಪ್ರಿಲ್ 17 ರಂದು ಮಧ್ಯಾಹ್ನ 03:14 ಕ್ಕೆ ಕೊನೆಗೊಳ್ಳಲಿದೆ. ಉದಯ ತಿಥಿಯ ಪ್ರಕಾರ, ಏಪ್ರಿಲ್ 17 ರ ಬುಧವಾರದಂದು ರಾಮ ನವಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ರಾಮ ನವಮಿಯ ಶುಭ ಮುಹೂರ್ತ - ಬೆಳಗ್ಗೆ 11:03 ರಿಂದ ಮಧ್ಯಾಹ್ನ 1:38.
ಹಿ೦ದೂ ಚಾ೦ದ್ರಮಾನದ ಪ್ರಕಾರ, ಪ್ರತಿವರ್ಷವೂ ಚೈತ್ರಮಾಸದ ಒ೦ಭತ್ತನೆಯ ದಿನದ೦ದು (ಮಾರ್ಚ್ - ಏಪ್ರಿಲ್) ಈ ಮ೦ಗಳಕರ ದಿನವನ್ನು ಆಚರಿಸಲಾಗುತ್ತದೆ.ಭಗವಾನ್ ಶ್ರೀ ರಾಮಚ೦ದ್ರನ ಜನ್ಮದಿನವನ್ನು ಆಚರಿಸುವುದರೊ೦ದಿಗೆ, ಇದೇ ದಿನವನ್ನು ರಾಮ ಹಾಗೂ ಸೀತೆಯರ ವಿವಾಹದ ದಿನವನ್ನಾಗಿಯೂ ಆಚರಿಸಲಾಗುತ್ತದೆ.



Click it and Unblock the Notifications