Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಭೂಮಿ ಮಾತ್ರವಲ್ಲ ಚಂದ್ರನಿಗೂ ತಟ್ಟಿತ್ತು ಲಾಕ್‌ಡೌನ್ ಬಿಸಿ.! ಚಂದ್ರನಲ್ಲಿ ಏನಾಗಿತ್ತು ಗೊತ್ತಾ?
ಚಂದ್ರ ಹಾಗೂ ಭೂಮಿಯ ನಡುವೆ ನೇರಾನೇರ ಸಂಬಂಧವಿದೆ ಎಂಬುದು ತಿಳಿದುರುವ ವಿಚಾರ, ಹುಣ್ಣಿಮೆ, ಅಮಾವಾಸ್ಯೆಯಲ್ಲಾಗುವ ಭೂಮಿಯ ಮೇಲಿನ ಬದಲಾವಣೆ ಸೇರಿ ಭೂಮಿಯ ಹಲವು ಬದಲಾವಣೆಗೆ ಚಂದ್ರ ಕಾರಣ. ಭೂಮಿ ಮೇಲಿನ ಕೆಲವೊಂದು ವಾತಾವರಣದ ಸಂಬಂಧಿ ಬದಲಾವಣೆಗೆ ಚಂದ್ರನೂ ಕೂಡ ಒಂದು ಕಾರಣ. ಹಾಗೆ ಚಂದ್ರನಲ್ಲಿನ ಬದಲಾವಣೆ ಭೂಮಿ ಕೂಡ ಕಾರಣ.
ಭೂಮಿ ತಿರುಗುವ ವೇಗ ಹಾಗೂ ಹಗಲು ರಾತ್ರಿಯ ನಿರ್ಧರಿತ ಅಂಶವು ಚಂದ್ರನ ಇರುವಿಕೆಗೆ ಸಂಬಂಧಿಸಿದೆ. ನಾವೀಗ ಚಂದ್ರನ ಮೇಲೂ ಇಳಿದಿದ್ದೇವೆ. ಚಂದ್ರನ ಕುರಿತು ಅಧ್ಯಯನ ನಿರಂತರವಾಗಿ ಸಾಗುತ್ತಲೇ ಇದೆ. ಇನ್ನು ಭೂಮಿಯ ಮೇಲಿನ ವಾತಾವರಣದಲ್ಲಿನ ಬದಲಾವಣೆ ಚಂದ್ರನಲ್ಲಿಯೂ ಬದಲಾವಣೆಗೆ ಕಾರಣವಾಗುತ್ತಿದೆ ಎಂಬುದು ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ.

ಕೋವಿಡ್ ಸಮಯದಲ್ಲಿ ಭೂಮಿಯ ಮೇಲಿನ ಮಾಲಿನ್ಯ ಎಷ್ಟು ಕಡಿಮೆಯಾಗಿತ್ತು ಎಂಬುದು ನಮಗೆಲ್ಲಾ ತಿಳಿದಿದೆ. ಗಾಳಿಯಲ್ಲಿ ಕಾರ್ಬನ್ ಮಟ್ಟ ಅತ್ಯಧಿಕ ಮಟ್ಟಕ್ಕೆ ಇಳಿಕೆ ಕಂಡಿತ್ತು, ಇದರಿಂದ ಭೂಮಿ ಒಂದಿಷ್ಟು ಕಾಲ ಹೊಸತನದಿಂದ ಕೂಡಿತ್ತು. ಮಾಲಿನ್ಯ ಕಡಿಮೆಯಾಗಿ ದೆಹಲಿಯಂತಹ ನಗರಗಳು ಕೂಡ ಪರಿಶುದ್ಧ ಗಾಳಿಯಲ್ಲಿ ಉಸಿರಾಡಿತ್ತು.
ನಾವ್ಯಾರು ಅಂದುಕೊಳ್ಳದಷ್ಟು ಮಾಲಿನ್ಯ ಪ್ರಮಾಣ ಕಡಿಮೆಯಾಗಿತ್ತು. ಇಡೀ ವಿಶ್ವದಾದ್ಯಂತ ಮಾಲಿನ್ಯ ಇಳಿಕೆ ಕಂಡಿದ್ದರಿಂದ ಭೂಮಿಯ ಮೇಲೆ ಹಲವು ಬದಲಾವಣೆಗೆ ಕಾರಣವಾಗಿತ್ತು. ಈಗ ಭಾರತೀಯ ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಲ್ಲಿ ಚಂದ್ರನ ಮೇಲೆ ಕೋವಿಡ್ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.
ಲಾಕ್‌ಡೌನ್ ಸಮಯದಲ್ಲಿ ಚಂದ್ರನ ಮೇಲ್ಮೈಯಲ್ಲಿ ತಾಪಮಾನದಲ್ಲಿ ಗಮನಾರ್ಹ ಕುಸಿತವನ್ನು ಕಂಡುಕೊಂಡಿದ್ದಾರೆ. ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ನೋಟೀಸ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ 2020ರ ಏಪ್ರಿಲ್‌ನಿಂದ ಮೇ ತಿಂಗಳ ಜಾಗತಿಕ ಲಾಕ್‌ಡೌನ್ ಸಮಯದಲ್ಲಿ ಚಂದ್ರನ ಮೇಲೆ ರಾತ್ರಿಯ ಮೇಲ್ಮೈ ತಾಪಮಾನದಲ್ಲಿ 8-10 ಕೆಲ್ವಿನ್‌ನಷ್ಟು ಕುಸಿತ ಆಗಿರುವುದು ತಿಳಿದುಬಂದಿದೆ.
ಭೌತಿಕ ಸಂಶೋಧನಾ ಪ್ರಯೋಗಾಲಯದ (PRL) ವಿಜ್ಞಾನಿಗಳಾದ ಕೆ ದುರ್ಗಾ ಪ್ರಸಾದ್ ಮತ್ತು ಜಿ ಅಂಬಿಲಿ 2017 ಮತ್ತು 2023 ರ ನಡುವೆ ಚಂದ್ರನ ಸಮೀಪದಲ್ಲಿರುವ ಆರು ವಿಭಿನ್ನ ಸ್ಥಳಗಳಲ್ಲಿನ ರಾತ್ರಿಯ ಮೇಲ್ಮೈ ತಾಪಮಾನವನ್ನು ವಿಶ್ಲೇಷಿಸಿದ್ದು, ಈ ಅಧ್ಯಯನದಲ್ಲಿ ಚಂದ್ರನ ಮೇಲೆ ತಾಪಮಾನ ಕುಸಿತ ಆಗಿರುವುದು ಕಂಡುಬಂದಿದೆ.
ಲಾಕ್‌ಡೌನ್‌ನಲ್ಲಿ ಭೂಮಿ ಮೇಲೆ ಮಾನವನ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು, ಇದರಿಂದ ಹಸಿರುಮನೆ ಪರಿಣಾಮ ಹಾಗು ಏರೋಸಾಲ್‌ಗಳ ಕುಸಿತಕ್ಕೆ ಕಾರಣವಾಗಿತ್ತು. ಇದು ಭೂಮಿಯಿಂದ ಹೊರಸೂಸುವ ವಿಕಿರಣ ಕಡಿಮೆ ಮಾಡಿತ್ತು, ಹೀಗಾಗಿ ಚಂದ್ರನ ಮೇಲೆ ಪರಿಣಾಮ ಉಂಟು ಮಾಡಲು ಸಾಧ್ಯವಾಗಿದೆ. ಭೂಮಿ ಮತ್ತು ಚಂದ್ರನ ಮೇಲೆ ಒಂದೇ ರೀತಿಯ ಕಾಸ್ಮಿಕ್ ಪರಿಸರ ವ್ಯವಸ್ಥೆ ಇದೆ. ಹೀಗಾಗಿ ಚಂದ್ರನ ಮೇಲೂ ಪರಿಣಾಮಕಾರಿಯಾಗಿ ತಾಪಮಾನ ಇಳಿಕೆಯಾಗಿದೆ.
ಈ ಸಮಯದಲ್ಲಿ ಭೂಮಿಯ ತಾಪಮಾನದಲ್ಲೂ ಬದಲಾವಣೆಯಾಗಿತ್ತು. ಇನ್ನು ಚಂದ್ರನ ಮೇಲೆ ಸುಮಾರು 6 ವರ್ಷದ ಡೇಟಾವನ್ನು ಅಧ್ಯಯನ ಮಾಡಲಾಗಿದೆ. ಚಂದ್ರನ ಮೇಲೆ ಭೂಮಿಯಿಂದ ಹೊರಡುವ ಟಿಆರ್ ವಿಕಿರಣಗಳು ನೇರವಾಗಿ ಪರಿಣಾಮ ಬೀರುತ್ತವೆ. ಆದರೆ ಲಾಕ್‌ಡೌನ್ ಸಮಯದಲ್ಲಿ ಈ ವಿಕಿರಣಗಳ ಹೊರಸೂಸುವಿಕೆಯ ಪ್ರಮಾಣ ಶೇ.20ರಷ್ಟು ಕಡಿಮೆಯಾಗಿದ್ದರಿಂದ ಚಂದ್ರನಲ್ಲಿ ತಾಪಮಾನ ಇಳಿಕೆಗೆ ಕಾರಣವಾಗಿದೆ ಎಂದು ಅಧ್ಯಯನ ತಿಳಿಸಿದೆ.



Click it and Unblock the Notifications