Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಮನೆ ಮಾತ್ರ ಅಲ್ಲ ವಿಧಾನಸಭೆಯಲ್ಲೂ ಪತಿಗೆ ಪ್ರಶ್ನೆ: ಮೇಘಾಲಯ ಸಿಎಂಗೆ ಪತ್ನಿಯ ಕ್ಲಾಸ್!
ರಾಜಕೀಯದಲ್ಲಿ ನೀವು ಒಂದೇ ಕುಟುಂಬದ ಮಂದಿ ಒಂದೇ ಪಾರ್ಟಿಯಲ್ಲಿ ಅಥವಾ ಬೇರೆ ಬೇರೆ ಪಾರ್ಟಿಯಲ್ಲಿ ಸ್ಪರ್ಧಿಸಿ ಗೆಲುವು ಕಾಣುವುದು ನೋಡಿರುತ್ತೀರಿ. ಹಾಗೆ ಕೆಲವು ಬಾರಿ ತಂದೆ ಮಗ, ಸಹೋದರರು, ಪತಿ ಪತ್ನಿ, ದೂರ ಸಂಬಂಧಿ ಹೀಗೆ ರಕ್ತ ಸಂಬಂಧಿಗಳು ರಾಜಕೀಯ ರಂಗದಲ್ಲಿ ಹೆಸರು ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆದ್ರೆ ಬೇರೆ ಬೇರೆ ಪಕ್ಷದಲ್ಲಿ ಅಥವಾ ಪರಸ್ಪರ ಎದುರಾಳಿಗಳಾಗಿ ನೋಡುವುದು ಬಹಳ ಅಪರೂಪದ.
ಆದ್ರೆ ಮೇಘಾಲಯದಲ್ಲಿ ಪತಿ ಸಿಎಂ ಹಾಗೆ ಪತ್ನಿ ಮತ್ತೊಂದು ಪಕ್ಷದ ಶಾಸಕಿಯಾಗಿರುವುದು ಅಪರೂಪದ ಹಾಗೆ ಅಧಿವೇಶನದಲ್ಲಿ ಪರಸ್ಪರ ಮುಖಾಮುಖಿಯಾಗಿರುವುದು ಅಚ್ಚರಿಯ ಘಟನೆಗಳಲ್ಲಿ ಒಂದಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಶಾಸಕಿ ಮೆಹ್ತಾಬ್ ಚಾಂಡಿ ಎ ಸಂಗ್ಮಾ ಅವರು ವಿಧಾನಸಭೆಯ ಅಧಿವೇಶನದಲ್ಲಿ ತಮ್ಮ ಪತಿ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರಿಗೆ ಪ್ರಶ್ನೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೇಘಾಲಯ ವಿಧಾನಸಭೆಯಲ್ಲಿ ಪತಿ ಮತ್ತು ಪತ್ನಿಯ ನಡುವಿನ ಈ ಅಪರೂಪದ ಮಾತುಕತೆ ರಾಜಕೀಯ ವಲಯದಲ್ಲಿ ವೈರಲ್ ಆಗುತ್ತಿದೆ. ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಗ್ಯಾಂಬೆಗ್ರೆ ಶಾಸಕರು 2022 ರಲ್ಲಿ ಸಂಪುಟವು ಅನುಮೋದಿಸಿದ ಪಶುವೈದ್ಯಕೀಯ ಕಾಲೇಜು ಎರಡು ಮೀನುಗಾರಿಕಾ ಕಾಲೇಜುಗಳು ಮತ್ತು ಡೈರಿ ಕಾಲೇಜಿನ ಪ್ರಗತಿಯ ಕುರಿತು ವಿವರಗಳನ್ನು ನೀಡುವಂತೆ ಕೋರುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಈ ಪ್ರಶ್ನೆಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಹಾಗೆ ಶಾಸಕಿಯ ಪತಿ ಎದ್ದುನಿಂತು ಉತ್ತರಿಸಿದರು. ರಾಜ್ಯದ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಬೆಂಬಲ ನೀಡುವ ಜಾನುವಾರು ವಲಯವನ್ನು ಬಲಪಡಿಸುವ ಗುರಿಯನ್ನು ಪ್ರಸ್ತಾವಿತ ಸಂಸ್ಥೆಗಳು ಹೊಂದಿವೆ, ರಾಜ್ಯದ ಹೆಚ್ಚಿನ ಜನಸಂಖ್ಯೆಯು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು, ತುರ್ತು ಅಗತ್ಯದ ಕಾರಣ ನಾವು ನಿರ್ಧರಿಸಿದ ಮೂರು ಕಾಲೇಜುಗಳು ಇವು ಎಂದು ಪತ್ನಿಯ ಪ್ರಶ್ನೆಗೆ ಪತಿ ಉತ್ತರಿಸಿದರು.
ಇದೇ ವೇಳೆ ಅವರು ಪತ್ನಿಯ ಮಾತಿಗೆ ಸಹಮತ ಕೂಡ ಸೂಚಿಸಿದರು. ಸಿಬ್ಬಂದಿ ಕೊರತೆಯು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಮಾನವಶಕ್ತಿಯ ಕೊರತೆಯನ್ನು ಆದಷ್ಟು ಬೇಗ ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಯಾರು?
ಕಾನ್ರಾಡ್ ಕೆ ಸಂಗ್ಮಾ 1978ರಲ್ಲಿ ಟುರಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ್ದರು. ಪದವಿ ಮುಗಿಸಿದ ಅವರು ರಾಜಕೀಯದತ್ತ ಒಲುವು ಹೊಂದಿದರು. ಎನ್‌ಸಿಪಿಯ ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ದೊಡ್ಡ ಹುದ್ದೆಗಳ ಅಲಂಕರಿಸಿದ್ದರು. ಸಂಗ್ಮಾ ಮತ್ತು ಅವರ ಅಣ್ಣ ಜೇಮ್ಸ್ 2008 ರಲ್ಲಿ ಮೇಘಾಲಯ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಏಕಕಾಲದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅವರು ಸಚಿವರೂ ಆದರು. ಹಾಗೆ ಕೇವಲ 10 ದಿನದಲ್ಲಿ ತಮ್ಮ ಮೊದಲ ಬಜೆಟ್ ಅನ್ನು ಸಹ ಮಂಡಿಸಿ ಎಲ್ಲರ ಗಮನ ಸೆಳೆದಿದ್ದರು.
ಸದ್ಯ ಈಗ ಅವರು ಮೇಘಾಲಯ ಸಿಎಂ ಆಗಿ ಕರ್ತವ್ಯದಲ್ಲಿದ್ದಾರೆ. ಹಾಗೆ ಪತ್ನಿ ಕೂಡ ಅದೇ ಪಾರ್ಟಿಯಿಂದ ಗೆದ್ದು ಶಾಸಕಿಯೂ ಆಗಿದ್ದಾರೆ. ಈಗ ವಿಧಾನಸಭೆ ಅಧಿವೇಶನದಲ್ಲಿ ಪತಿಗೆ ಪತ್ನಿಯೇ ಅಭಿವೃದ್ಧಿ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ. ಹಾಗೆ ಸಿಎಂ ಕೂಡ ಪತ್ನಿಯ ಪ್ರಶ್ನೆಗೆ ಸರ್ಕಾರದ ಅಡಿಯಲ್ಲಿ ನೀಡಬೇಕಾದ ಮಾಹಿತಿಯೊಂದಿಗೆ ಉತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಕರ್ತವ್ಯ ಬದ್ಧತೆ ಎಲ್ಲರ ಗಮನಸೆಳೆದಿದೆ.



Click it and Unblock the Notifications











