Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಚಿಕನ್ ಟೇಸ್ಟ್‌ನ ಟೂತ್‌ಪೇಸ್ಟ್ ಹೊರತಂದ ಕೆಎಫ್‌ಸಿ..! ಬ್ರಷ್ ಕೂಡ ಲಭ್ಯ..!
ಕೆಎಫ್‌ಸಿ ಈ ಹೆಸರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ, ಚಿಕನ್ ಪ್ರೊಡಕ್ಟ್‌ಗೆ ಹೆಸರಾಗಿರುವ ಕೆಎಫ್‌ಸಿ ಈಗ ಇಡೀ ಜಗತ್ತಿನಾದ್ಯಂತ ಅತ್ಯಂತ ಪ್ರಸಿದ್ಧ ಕಂಪನಿ. ಭಾರತದಲ್ಲಿಯೂ ನೂರಾರು ಮಳಿಗೆಗಳ ಹೊಂದಿರುವ ಕಂಪನಿಯಾಗಿದೆ. ಕೆಎಫ್‌ಸಿ ಚಿಕನ್ ಸವಿಯಲು ಔಟ್‌ಲೆಟ್‌ನಲ್ಲಿ ಸಾಲುಗಟ್ಟಿ ನಿಲ್ಲುವುದು ಸಹ ನಾವು ನೋಡುತ್ತೇವೆ. ಕೆಎಫ್‌ಸಿಯು ಯುವ ಸಮುದಾಯದ ನೆಚ್ಚಿನ ಖಾದ್ಯದಲ್ಲಿ ಒಂದು.
ಇದೇ ಕೆಎಫ್‌ಸಿ ಈಗ ನೀವು ಯಾರು ಸಹ ಊಹಿಸದಂತೆ ಕೆಲಸವೊಂದಕ್ಕೆ ಕೈ ಹಾಕಿದ್ದು, ವಿಶ್ವಕ್ಕೆ ಅಚ್ಚರಿ ಮೂಡಿಸಿದೆ. ಇಷ್ಟ ವರ್ಷದಿಂದ ಫುಡ್ ಐಟಂಗಳ ಪರಿಚಯಿಸಿದ್ದ ಸಂಸ್ಥೆ ಈಗ ಏಕಾಏಕಿ ಟೂತ್ ಪೇಸ್ಟ್ ವಲಯಕ್ಕೆ ಕಾಲಿಟ್ಟಿದೆ. ಅದೂ ಅಂತಿತಾ ಟೂತ್ ಪೇಸ್ಟ್ ಅಲ್ಲ ಬದಲಿಗೆ ನಾನ್ ವೆಜ್ ಟೂತ್ ಪೇಸ್ಟ್. ಹೌದು ನಿಮಗೆ ಕೇಳುತ್ತಿದ್ದರೆ ಅಚ್ಚರಿ ಎನಿಸಬಹುದು. ಕೆಎಫ್‌ಸಿ ಈಗ ಚಿಕನ್ ಫ್ಲೇವರ್ ಟೂತ್ ಪೇಸ್ಟ್ ಹೊರತಂದಿದೆ.

ಆಸ್ಟ್ರೇಲಿಯಾದ ಹಲ್ಲು ಆರೈಕೆ ಸಂಸ್ಥೆಯಾಗಿರುವ ಹಿಸ್ಮೈಲ್ ಸಹಯೋಗದೊಂದಿಗೆ. ಕೆಎಫ್‌ಸಿ ಫ್ರೈಡ್ ಚಿಕನ್ ಫ್ಲೇವರ್ ಹೊಂದಿರುವ ಟೂತ್‌ಪೇಸ್ಟ್ ಅನ್ನು ಪರಿಚಯಿಸಿದೆ. ಇದು ಸಂಪೂರ್ಣ ಫ್ರೈಡ್ ಚಿಕನ್‌ನಂತಹ ಸ್ವಾದ ನೀಡಲಿದೆಯಂತೆ. ಆದರೆ ಇದು ಅಲ್ಪಾವಧಿಗೆ ಮಾತ್ರ ಲಭ್ಯವಿದ್ದು, ಈ ಪೇಸ್ಟ್ ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ ಎಲ್ಲವೂ ಸೋಲ್ಡ್ ಔಟ್ ಆಗಿದೆ.
ಆದರೆ ಈ ಕುರಿತಂತೆ ಎರಡೂ ಕಂಪನಿಗಳು ಏಪ್ರಿಲ್ 1ರಂದು ಮಾಹಿತಿ ಹಂಚಿಕೊಂಡಿದ್ದವು. ಹೀಗಾಗಿ ಇದು ಏಪ್ರಿಲ್ ಫೂಲ್ ಇರಬಹುದು ಎಂದು ಎಲ್ಲರು ಭಾವಿಸಿದ್ದರು. ಆದ್ರೆ ಇದನ್ನು ಕೆಎಫ್‌ಸಿ ನಿಜವಾಗಿಸಿದೆ. ಇದು ತಪಾಷೆಯ ವಿಚಾರ ಅಲ್ಲವೇ ಅಲ್ಲ, ಇಷ್ಟು ದಿನ ಬೆರಳು ಚೀಪುತ್ತಿದ್ದವರಿಗೆ ಸ್ವಾದ ಹೆಚ್ಚಿಸುವ ಸಮಯ ಬಂದಿದೆ ಎಂದು ಸಂಸ್ಥೆ ಹೇಳಿಕೊಂಡಿತ್ತು.
ಈ ಒಂದು ಪೇಸ್ಟ್‌ನ ಬೆಲೆ ಬರೋಬ್ಬರಿ 13 ಡಾಲರ್ ಆಗಿದೆ ಅಂದರೆ ಸರಿ ಸುಮಾರು 1,123 ರೂಪಾಯಿಗಳು. ಹಿಸ್ಮೈಲ್ ವೆಬ್‌ಸೈಟ್‌ನಲ್ಲಿ ಮಾತ್ರವೇ ಈ ಟೂತ್ ಪೇಸ್ಟ್ ಅನ್ನು ಮಾರಾಟ ಮಾಡಲಾಗಿದೆ. ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ ಸೋಲ್ಡ್ ಔಟ್ ಕೂಡ ಆಗಿವೆ. ಹಾಗೆ ಕೆಎಫ್‌ಸಿ ಬ್ರಾಂಡ್‌ನ ಎಲೆಕ್ಟ್ರಿಕ್ ಟೂತ್ ಬ್ರಷ್ ಸಹ ಮಾರಾಟಕ್ಕೆ ಲಭ್ಯವಿದೆ. 5097 ರೂಪಾಯಿಗೆ ಈ ಟೂತ್ ಬ್ರಷ್ ಸಹ ಮಾರಾಟವಾಗುತ್ತಿದೆ. ಇದು ಲಿಮಿಟೆಡ್ ಅಡಿಷನ್ ಎಂದು ಹಿಸ್ಮೈಲ್ ಹೇಳಿಕೊಂಡಿದೆ.
ಕೆಎಫ್‌ಸಿಯ ಚಿಕನ್ ಫ್ರೈಡ್ ಟೂತ್ ಪೇಸ್ಟ್ ಫ್ಲೇವರ್ ರುಚಿ ನೋಡಲು ಮುಂದಿ ಮುಗಿಬಿದ್ದು ಇದನ್ನು ಖರೀದಿಸಿದ್ದಾರೆ, ಹಾಗೆ ಅದರ ರುಚಿ ನೋಡಿದ ಮಂದಿ ಅಚ್ಚರಿಗೊಳಗಾಗಿದ್ದಾರೆ. ಕೆಎಫ್‌ಸಿಯ ಎಲ್ಲಾ 11 ಗಿಡಮೂಲಿಕೆಗಳು ಮತ್ತು ಮಸಾಲೆಗಳಿಂದ ಪ್ರೇರಿತವಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಹಾಗೆ ಈ ಪೇಸ್ಟ್ ಅನ್ನು ಟೇಸ್ಟ್ ಮಾಡಿದ ಕೈಲ್ ಕ್ರೂಗರ್ ಎಂಬಾತ ಈ ಕುರಿತ ವಿಡೊಯೋ ಮಾಡಿ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನನಗೆ ಕೆಂಟುಕಿ ಫ್ರೈಡ್ ಚಿಕನ್-ಫ್ಲೇವರ್ಡ್ ಟೂತ್‌ಪೇಸ್ಟ್ ಸಿಕ್ಕಿದೆ ಎಂದು ಆತ ಹೇಳಿದ್ದು ಕೈಯಲ್ಲಿ ಕೆಎಫ್‌ಸಿಯ ಎಲೆಕ್ಟ್ರಿಕ್ ಬ್ರಷ್ ಹಿಡಿದು ಹಲ್ಲುಜ್ಜುತ್ತಿರುವುದು ನೋಡಬಹುದು. ಹಾಗೆ ಇದು ಫ್ರೈಡ್ ಚಿಕನ್‌ನಂತೆಯೇ ಟೇಸ್ಟ್ ನೀಡುತ್ತಿದೆ ಎಂದು ಆತ ಹೇಳಿಕೊಂಡಿದ್ದಾನೆ. ಹಾಗೆ ಕೊನೆಯಲ್ಲಿ ಇದು ಗ್ರೀಸ್‌ನಂತೆ ಬಾಯಲ್ಲಿ ಉಳಿದಿದೆ ಎಂದು ಆತ ಹೇಳಿರುವುದು ನೋಡಬಹುದು. ಆದ್ರೆ ಆತ ಈ ಟೂತ್‌ಪೇಸ್ಟ್‌ನಿಂದ ಸಂತೋಷಗೊಂಡಂತೆ ಕಾಣಿಸುವುದಿಲ್ಲ.
ಹಾಗೆ ರಿಯಲ್ ಚಿಕನ್ ಸವಿದಷ್ಟೇ ಆನಂದ ಉಂಟಾಗಬೇಕು ಎಂಬ ಉದ್ದೇಶಕ್ಕೆ ಈ ರೀತಿ ವಿಶೇಷ ಹಾಗೂ ಲಿಮಿಟೆಡ್ ಎಡಿಷನ್‌ನ ಪೇಸ್ಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ತಿಳಿದುಬಂದಿದೆ.



Click it and Unblock the Notifications
