Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
2024ರಲ್ಲಿ ಪೋಷಕರಿಗೆ ಹೊರೆಯಾಗಿರುವುದು ಹೆಣ್ಣು ಮಕ್ಕಳಲ್ಲ ಗಂಡು ಮಕ್ಕಳು..! ಹೇಗೆ ಗೊತ್ತಾ?
ಹಿಂದೆ ಹೆಣ್ಣು ಮಗು ಹುಟ್ಟಿತ್ತೆಂದರೆ ಸಂತೋಷ ಪಟ್ಟವರಿಗಿಂತ ಚಿಂತೆ ಮಾಡಿದವರೇ ಹೆಚ್ಚು ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಹೆಣ್ಣು ಗಂಡು ಎಂಬ ಭಾವನೆ ಸ್ವಲ್ಪ ದೂರವಾದರೆ ಮಕ್ಕಳು ಮಾತ್ರ ಗಂಡಾಗಲಿ ಎಂಬ ಭಾವನೆಯಲ್ಲೇ ಪೋಷಕರಿರುತ್ತಾರೆ. ಅದರಲ್ಲೂ ಮೊದಲು ಮಗು ಗಂಡಾಗಬೇಕು ಅನ್ನೋರು ಸಹ ನಮ್ಮ ನಡುವೆ ಇದ್ದಾರೆ.
ಇನ್ನು ಈ ಲಿಂಗಾನುಪಾತ ಸಮನಾಗಿಸಬೇಕು ಎಂದು ಸರ್ಕಾರಗಳು ಸಹ ಹೊಸ ಹೊಸ ನಿಯಮ, ಕಾರ್ಯಕ್ರಮಗಳ ಜಾರಿ ಮಾಡಿ ಜನರಲ್ಲಿ ಅರಿವು ಮೂಡಿಸಲು ಕಾರ್ಯ ಮಾಡುತ್ತಲೇ ಇವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಈ ಲಿಂಗತಾರಮತ್ಯ ಹಾಗೂ ಗಂಡು ಮಕ್ಕಳ ಬಗೆಗಿನ ವ್ಯಾಮೋಹ ಕೊಂಚ ಕಡಿಮೆಯಾದಂತೆ ಕಂಡುಬರುತ್ತದೆ.

ಹಿಂದೆಲ್ಲಾ ಹೆಣ್ಣು ಮಕ್ಕಳ ಹೆರುವುದೇ ದೊಡ್ಡ ಅಪರಾದದಂತೆ ಬಿಂಬಿಸುತ್ತಿದ್ದ ಕಾಲವಿತ್ತು. ಹೆಣ್ಣು ಮಗು ಹೆತ್ತ ಪತ್ನಿಗೆ ವಿಚ್ಛೇದನ ನೀಡುವುದು ಸೇರಿ ಆಕೆಯ ಚಿತ್ರಹಿಂಸೆ ಕೊಡುತ್ತಿದ್ದ ಘಟನೆಗಳು ಸಹ ನಡೆಯುತ್ತಿದ್ದವು. ಆದರೆ ಬರು ಬರುತ್ತಾ ಈ ಗಂಡು ಮಕ್ಕಳ ಬಗೆಗಿನ ವ್ಯಾಮೋಹ ಕಡಿಮೆಯಾಗುತ್ತಾ ಸಾಗಿದ್ದು ಗಂಡಾಗಲಿ ಹೆಣ್ಣಾಗಲಿ ಮಗು ಒಂದಿರಲಿ ಎಂಬ ಭಾವನೆಗೆ ಜನ ಬಂದಿದ್ದಾರೆ.
ಹಿಂದೆ ಹೆಣ್ಣು ಮಕ್ಕಳ ಹೆರುವುದು ಅಂದರೆ ಅವರು ಹೊರೆಯಾಗುತ್ತಾರೆ ಎಂಬುದೇ ಪೋಷಕರ ಚಿಂತೆಯಾಗಿತ್ತು. ಹೆಣ್ಣು ಮಕ್ಕಳು ಹುಟ್ಟಿದರೆ ಖರ್ಚು, ಕುಟುಂಬಕ್ಕೆ ಹೊರೆ ಎಂಬ ತಾತ್ಸಾರದ ಭಾವನೆ ಸಮಾಜದಲ್ಲಿತ್ತು.
ಆದರೆ ಇದೆಲ್ಲದರ ನಡುವೆ ಈಗ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳ ಕುರಿತ ಚರ್ಚೆಯಲ್ಲಿ ನಿಜವಾಗಲು ಪೋಷಕರಿಗೆ ಹೊರೆಯಾಗುತ್ತಿರುವವರು ಯಾರು ಎಂಬುದು ಈಗ ಚರ್ಚಾ ವಿಷಯವಾಗಿದೆ. ಅಚ್ಚರಿ ಎಂದರೆ ಈಗ ಪೋಷಕರಿಗೆ ನಿಜವಾಗಲು ಹೊರೆಯಾಗಿರುವುದು ಹೆಣ್ಣು ಮಕ್ಕಳಲ್ಲ ಬದಲಿಗೆ ಗಂಡು ಮಕ್ಕಳು ಎಂಬ ವಾದವೊಂದು ಹೊರಬಂದಿದೆ.
ಹೌದು ಎಲ್ಲಾ ವಿಚಾರದಲ್ಲೂ ಈಗ ಪುರುಷರ ಮೀರಿಸುತ್ತಿರುವ ಮಹಿಳೆಯರು ಈಗ ಈ ವಿಚಾರದಲ್ಲಿ ಮುಂದೆ ಹೋಗಿದ್ದಾರೆ. ಮನೆಯಲ್ಲಿ ಪೋಷಕರಿಗೆ ನಿಜವಾಗಲು ಹೊರೆಯಾಗುವುದು ಗಂಡು ಮಕ್ಕಳೆ ಎಂಬ ಚರ್ಚೆ ಹೊರಬಿದ್ದಿದೆ. ಇಲ್ಲೊಂದು ಕಾರಿನ ಹಿಂಭಾಗದಲ್ಲಿ ಈ ರೀತಿಯ ಸಾಲುಗಳಿದ್ದು, ಇದರಲ್ಲಿ ಪೋಷಕರಿಗೆ ಹೊರೆಯಾಗುತ್ತಿರುವುದು ಗಂಡು ಮಕ್ಕಳು ಎಂದು ಬರೆಯಲಾಗಿದೆ.
ಕಾರಿನ ಗಾಜಿನ ಮೇಲೆ ''2024ರಲ್ಲಿ ಹುಡುಗಿಯರಲ್ಲ ಬದಲಿಗೆ ಕೆಲಸವಿಲ್ಲದೆ ಮನೆಯಲ್ಲಿರುವ ಹುಡುಗರು ತಂದೆ ತಾಯಿಗೆ ನಿಜವಾದ ಹೊರೆ'' ಎಂದು ಬರೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಸಹ ಇದರ ಪರವಾಗಿಯೇ ಚರ್ಚೆ ನಡೆಸಿದ್ದಾರೆ.
2024ರಲ್ಲಿ ನಿರುದ್ಯೋಗದಿಂದ ಮನೆಯಲ್ಲಿರುವ ಯುವಕರ ಸಂಖ್ಯೆ ಏರಿಕೆಯಾಗಿರುವುದು ಗೊತ್ತಿರುವ ಸಂಗತಿ ಹೀಗಾಗಿ ಈ ಯುವಕರ ಸಾಕುತ್ತಿರುವುದು ಪೋಷಕರೇ, ಆದರೆ ಇದೇ ವೇಳೆ ಯುವತಿಯರು ಮದುವೆಯಾಗಿಯೋ ಇಲ್ಲವೆ ಓದಿಕೊಂಡು ಸಣ್ಣ ಪುಟ್ಟ ಕೆಲಸವಾದರೂ ಮಾಡುತ್ತಿದ್ದಾರೆ. ಆದರೆ ಯುವಕರ ಪಾಡು ಮನೆಯಲ್ಲೇ ಉಳಿಯಬೇಕಾಗಿದೆ. ಹೀಗಾಗಿ ಈಗ ಹೊರೆಯಾಗಿರುವುದು ಹೆಣ್ಣು ಮಕ್ಕಳಲ್ಲ ಗಂಡು ಮಕ್ಕಳು ಎಂಬ ವಾದ ಎದ್ದಿದೆ.
ಈ ಸಾಲುಗಳ ಕಂಡವರು ಅಕ್ಷರಶಃ ಇದು ಸತ್ಯವಾದ ಮಾತು ಎನ್ನುತ್ತಿದ್ದಾರೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹಿಂದಿನಿಂದಲೂ ಇದೆ. ಆದರೆ ಅತೀ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ದೇಶದಲ್ಲಿ ಅಷ್ಟೇ ಪ್ರಮಾಣದ ಉದ್ಯೋಗದ ಸೃಷ್ಟಿಯೂ ಆಗಬೇಕಿದೆ. ಆದರೆ ಶಿಕ್ಷಿತರಾಗಿ ಹೊರಬರುವ ಯುವ ಸಮುದಾಯ ಈಗ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ಇದು ತಂದೆ ತಾಯಿಗೆ ನಿಜವಾದ ಹೊರೆ ಎಂಬುದು ನೆಟ್ಟಿಗರ ವಾದವಾಗಿದೆ.



Click it and Unblock the Notifications
