Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
2025ರಲ್ಲಿ ಸಂಭವಿಸಲಿದೆ ಯುದ್ಧ..ವೈರಸ್ ಕಾಟ..! ನಾಸ್ಟ್ರಾಡಾಮಸ್ ಹೇಳಿದ್ದೇನು?
ನಿಮಗೆ ನಾಸ್ಟ್ರಾಡಾಮಸ್ ಬಗ್ಗೆ ಗೊತ್ತಿರಬಹುದು. ವಿಶ್ವದಲ್ಲಿ ಸಂಭವಿಸಬಹುದಾದ ಎಲ್ಲಾ ಘಟನೆಗಳನ್ನು ಮೊದಲೇ ಬರೆದಿಟ್ಟಿದ್ದ ಅತೀಂದ್ರಿಯ ವ್ಯಕ್ತಿ ಆತ. ನಾಸ್ಟ್ರಾಡಾಮಸ್ 16ನೇ ಶತಮಾನದಲ್ಲಿ ಬಾಳಿದ ವ್ಯಕ್ತಿ, 16ನೇ ಶತಮಾನದಲ್ಲಿಯೇ ಮುಂದೆ ಜಗತ್ತು ಹೇಗಿರಲಿದೆ ಎಂದು ಹಲವಾರು ಭವಿಷ್ಯ ನುಡಿದಿದ್ದಾನೆ. ಹಾಗೆ ಆತ 2025ರಲ್ಲಿ ಏನೆಲ್ಲಾ ನಡೆಯಲಿದೆ ಎಂಬುದನ್ನು ಕೂಡ ಶತಮಾನಗಳ ಹಿಂದೆಯೇ ಹೇಳಿಬಿಟ್ಟಿದ್ದಾನೆ.
ನಾಸ್ಟ್ರಾಡಾಮಸ್ ದುರಂತಗಳ ಭವಿಷ್ಯವನ್ನೇ ನುಡಿದು ಹೆಚ್ಚು ಫೇಮಸ್ ಆಗಿದ್ದ. ಪ್ರತಿ ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಜನರ ಆಸಕ್ತಿಗಳು ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯತ್ತ ತಿರುಗುತ್ತವೆ. ನೈಸರ್ಗಿಕ ವಿಕೋಪಗಳು ಮತ್ತು ರಾಜಕೀಯ, ಯುದ್ಧ, ಕಾಯಿಲೆ, ಸಾವು ನೋವು ಹೀಗೆ ಹಲವು ವಿಚಾರಗಳ ಕುರಿತು ಭವಿಷ್ಯ ನುಡಿದಿದ್ದಾನೆ.

ಹಾಗಾದ್ರೆ ನಾಸ್ಟ್ರಾಡಾಮಸ್ 2025ರ ಕುರಿತು ಹೇಳಿರುವ ಭವಿಷ್ಯವೇನು? ಆತ ತನ್ನ ಗಾರ್ಡನ್ ಆಫ್ ದಿ ವರ್ಲ್ಡ್ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ. ಆತ ಹೇಳಿರುವ ಭವಿಷ್ಯ ಎಷ್ಟು ಭಯಾನಕವಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬ್ರೆಜಿಲ್‌ನಲ್ಲಿ ನೈಸರ್ಗಿಕ ವಿಪತ್ತು
2025ರಲ್ಲಿ ನಾಸ್ಟ್ರಾಡಾಮಸ್‌ನ ಅತ್ಯಂತ ಆಘಾತಕಾರಿ ಭವಿಷ್ಯ ಏನೆಂದರೆ ಬ್ರೆಜಿಲ್‌ನಲ್ಲಿ ಬಹುದೊಡ್ಡ ನೈಸರ್ಗಿಕ ವಿಕೋಪಗಳು ಉಂಟಾಗಲಿದೆಯಂತೆ. ಅಂದರೆ ಬ್ರೆಜಿಲ್‌ನಲ್ಲಿರುವ ಅಮೇಜಾನ್ ಕಾಡುಗಳ ನಾಶ ಇಡೀ ವಿಶ್ವಕ್ಕೆ ಹಾನಿ ಮಾಡಲಿದೆಯಂತೆ. ಇದು ಬಹುದೊಡ್ಡ ಅನಾಹುತಗಳಿಗೆ ಕಾರಣವಾಗಲಿದೆಯಂತೆ. ಜ್ವಾಲಾಮುಖಿಗಳು ಸಿಡಿಯಲಿವೆ ಎಂದು ಆತ ಹೇಳಿದ್ದಾನೆ.
ಯುರೋಪ್‌ನಲ್ಲಿ ವೈರಸ್‌ಗಳ ಕಂಟಕ
ಈ ಮೊದಲು ಕೋವಿಡ್ ವೈರಸ್ ಯುರೋಪ್‌ನಲ್ಲಿ ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಿದ್ದವು ಎಂಬುದನ್ನು ನಾವು ನೋಡಿದ್ದೇವೆ. ಈಗ 2025ರಲ್ಲೂ ಯುರೋಪ್‌ನಲ್ಲಿ ವೈರಸ್‌ನ ಅಪಾಯಗಳಿವೆ ಎಂಬುದನ್ನು ನಾಸ್ಟ್ರಾಡಾಮಸ್ ಹೇಳಿದ್ದಾನೆ. ಅಲ್ಲದೆ ಹೊಸ ಹೊಸ ಕಾಯಿಲೆಗಳು ಹರಡಲಿದೆ ಎಂಬುದು ಆತನ ಭವಿಷ್ಯವಾಗಿದೆ.
ಕ್ಷುದ್ರಗ್ರಹ ದಾಳಿ
ನಾಸ್ಟ್ರಾಡಾಮಸ್‌ನ ಭೂಮಿಗೆ ಉಂಟಾಗಲಿರುವ ಅಪಾಯ ಕುರಿತಂತೆಯ ಹೇಳಿದ್ದಾನೆ. 2025ರಲ್ಲಿ ಕ್ಷುದ್ರಗ್ರಹ ದಾಳಿಯ ಭವಿಷ್ಯ ನುಡಿದಿದ್ದಾನೆ. ಕ್ಷುದ್ರಗ್ರಹವು 2025 ರಲ್ಲಿ ಭೂಮಿಗೆ ಬೆದರಿಕೆ ಹಾಕುತ್ತದೆ ಎಂಬುದಕ್ಕೆ ಯಾವುದೇ ಕಾಂಕ್ರೀಟ್ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಗಳನ್ನು ನಂಬುವವರು ಅದನ್ನು ಭಯಪಡುತ್ತಾರೆ.
ಹೆಚ್ಚಾಗಲಿದೆ ಯುದ್ದ
ನಾಸ್ಟ್ರಾಡಾಮಸ್ ಪ್ರಕಾರ 2025ರಲ್ಲಿ ವಿಶ್ವದ ಹಲವು ರಾಷ್ಟಗಳಲ್ಲಿ ಯುದ್ಧ ಸಾಮಾನ್ಯವಾಗಲಿದೆಯಂತೆ, ಈಗಾಗಲ ರಷ್ಯಾ-ಉಕ್ರೇನ್ ಸಂಘರ್ಷವು ತಾರಕಕ್ಕೇರಿದೆ. ಹಾಗೆ ಹತ್ತಾರು ದೇಶಗಳಲ್ಲಿ ಯುದ್ಧ ಭೀತಿಯೂ ಇದೆ. ಆಂತರಿಕ ಯುದ್ಧಗಳು ಕೂಡ ಹಲವು ದೇಶಗಳ ನಿದ್ದೆ ಗೆಡಿಸಲಿದೆಯಂತೆ. ಯುದ್ಧವು ಎರಡೂ ದೇಶಗಳ ಮಿಲಿಟರಿ ಮತ್ತು ಆರ್ಥಿಕ ಬಲವನ್ನು ಅಸ್ಥಿರಗೊಳಿಸುತ್ತದೆ.
ಅನ್ಯಗ್ರಹಗಳ ಅನ್ವೇಷಣೆ
ಆಕಾಶಕಾಯಗಳತ್ತ ವಿಶೇಷ ಕಾಳಜಿ ಹೊಂದಿದ್ದ ಆತ ಹೊಸ ಗ್ರಹಗಳ ಕುರಿತಂತೆಯೂ ಭವಿಷ್ಯ ನುಡಿದಿದ್ದಾನೆ. ಮಾನವ ಹೊಸ ಗ್ರಹಗಳ ಕಂಡು ಹಿಡಿಯಲಿದ್ದಾನೆ. ಹಾಗೆ ಭುಮಿಯ ಬಿಟ್ಟು ಸೌರ ಮಂಡಲದ ಬೇರೊಂದು ಗ್ರಹದ ಕಡೆ ವಿಶೇಷ ಅಧ್ಯಯನ ನಡೆಸಲಿದ್ದಾನಂತೆ. ಹಾಗೆ ಅನ್ಯಗ್ರಹ ಜೀವಿಗಳ ಕುರಿತಂತೆ ಮಹತ್ವದ ವಿಚಾರಗಳು ಜಗತ್ತಿಗೆ ತಿಳಿಯಲಿದೆ ಎಂದಿದ್ದಾನೆ.
ಮುಳುಗು ನಗರ
ನಾಸ್ಟ್ರಾಡಾಮಸ್ ಪ್ರಕಾರ 2025ರಲ್ಲಿ ಸಮುದ್ರ ಮಟ್ಟ ಏರಿಕೆ ಕುರಿತು ಈ ರೀತಿ ಹೇಳಿದ್ದಾನೆ ಎನ್ನಲಾಗಿದೆ. ಸಮುದ್ರ ಮಟ್ಟ ಏರಿಕೆಯಾಗುವುದು ನಗರಗಳ ಮುಳುಗುವಿಕೆಗೆ ಕಾರಣವಾಗಲಿದೆ. ಇಲ್ಲವೆ ಪ್ರವಾಹ ಕುರಿತಂತೆ ಆತ ಹೇಳಿರುವ ಭವಿಷ್ಯ ಇದಾಗಿರಬಹುದು ಎಂದು ಶಂಕಿಸಲಾಗಿದೆ.



Click it and Unblock the Notifications