Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕೆಂಪು ಬಣ್ಣದ ಲಿಪ್‌ಸ್ಟಿಕ್ ಬ್ಯಾನ್ ಮಾಡಿದ ಉತ್ತರ ಕೊರಿಯಾ..! ಯಾಕೆ ಗೊತ್ತಾ?
ನಿಮಗೆ ಉತ್ತರ ಕೊರಿಯಾ ದೇಶದ ಕುರಿತು ತಿಳಿದಿರಬಹುದು. ಅಲ್ಲಿ ಸಾವಿರಾರು ನಿಯಮಗಳು, ಹತ್ತಾರು ನಿರ್ಬಂಧಗಳು, ಈ ದೇಶ ಹೆಸರಾಗಿರುವುದೇ ನಿರ್ಬಂಧಗಳಿಂದ. ಅಲ್ಲಿನ ನಾಯಕ ಕಿಮ್ ಜಾಂಗ್ ಉನ್ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುವುದರಿಂದಲೇ ಫೇಮಸ್.
ನಿಯಮ ಮಾತ್ರವಲ್ಲ ಯುದ್ಧ ಭೀತಿಯಿಂದಲೂ ಉತ್ತರ ಕೊರಿಯಾ ತುಂಬಾನೆ ಭಯಾನಕ ದೇಶವಾಗಿದೆ. ಅಲ್ಲಿನ ಮಿಲಿಟರಿ ಎಷ್ಟು ಕಟ್ಟು ನಿಟ್ಟಾಗಿ ಕೆಲಸ ಮಾಡುತ್ತೆ ಅಂದ್ರೆ ನಿಮಗೆ ಯಾವ ಸ್ವಾತಂತ್ರ್ಯವು ಆ ದೇಶದಲ್ಲಿ ಇಲ್ಲ. ಅಲ್ಲವೂ ಬೇರೆಯವರ ಹಿಡಿತ, ನೀವು ಹೇಗೆ ಬಟ್ಟೆ ಧರಿಸಬೇಕು? ಯಾವಾಗ ಏಳಬೇಕು? ಹೇಗಿರಬೇಕು ಎಂಬುದೆಲ್ಲ ಪೂರ್ವ ನಿರ್ಧರಿತ.

ಇನ್ನು ಆ ದೇಶದಲ್ಲಿ ಪ್ರತಿಯೊಂದಕ್ಕೂ ಒಂದೊಂದು ನಿಯಮವಿದೆ. ಈ ನಿಯಮ ಮುರಿದವರಿಗೆ ಕಠಿಣ ಶಿಕ್ಷ, ದಂಡ ಹೀಗೆ ವಿವಿಧ ರೂಪದ ಶಿಕ್ಷೆ ಇದೆ.
ಇನ್ನು ಉತ್ತರ ಕೊರಿಯಾದಲ್ಲಿ ಮಹಿಳೆಯರಿಗಂತು ಇನ್ನಿಲ್ಲದ ನಿಯಮಗಳಿವೆ. ಈಗ ಮಹಿಳೆಯರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸಬಾರದು ಎಂಬ ಕಟ್ಟಪ್ಪಣೆ ಹೊರಡಿಸಲಾಗಿದೆ. ಈ ಅಸಾಮಾನ್ಯ ನಿಯಮ ಚರ್ಚೆಯ ಜೊತೆಗೆ ಜಗತ್ತಿನ ಗಮನ ಸೆಳೆದಿದೆ.
ಕೆಂಪು ಬಣ್ಣವು ಕಮ್ಯುನಿಸಂನೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದ್ದರೂ ಸಹ, ಉತ್ತರ ಕೊರಿಯಾ ಕೆಂಪು ಲಿಪ್ಸ್ಟಿಕ್ ಅನ್ನು ನಿಷೇಧಿಸಿದೆ, ಏಕೆಂದರೆ ನಾಯಕತ್ವವು ಅದನ್ನು ಬಂಡವಾಳಶಾಹಿಯ ಸಂಕೇತವೆಂದು ಪರಿಗಣಿಸುತ್ತದೆ ಮತ್ತು ಕಮ್ಯುನಿಸ್ಟ್ ಕಲ್ಪನೆಗಳಲ್ಲ ಎಂದು ತಿಳಿದುಬಂದಿದೆ. ವಾಸ್ತವವಾಗಿ ಉತ್ತರ ಕೊರಿಯಾದಲ್ಲಿ ಭಾರೀ ಮೇಕ್ಅಪ್ ಮಾಡಿಕೊಳ್ಳುವುದನ್ನು ವಿರೋಧಿಸಲಾಗುತ್ತದೆ. ಮೇಕ್ ಅಪ್ ಸಂಸ್ಕೃತಿ ಪಾಶ್ಚಿಮಾತ್ಯ ದೇಶಗಳ ಪ್ರಭಾವದ ಸಂಕೇತವಾಗಿ ನೋಡಲಾಗುತ್ತದೆ. ಹೀಗಾಗಿ ಅಲ್ಲಿ ಮೇಕ್‌ಅಪ್‌ಗೆ ಪ್ರತಿರೋಧವೂ ಇದೆ.
ಕೆಂಪು ಲಿಪ್ಸ್ಟಿಕ್ ಧರಿಸಿರುವ ಮಹಿಳೆಯರು ತುಂಬಾ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎಂದು ಸರ್ಕಾರ ಚಿಂತಿಸುತ್ತದೆ, ಇದರಿಂದಾಗಿ ವಿಷಯಗಳನ್ನು ಸರಳ ಮತ್ತು ಸಾಧಾರಣವಾಗಿ ಇಟ್ಟುಕೊಳ್ಳುವ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ. ಆದ್ದರಿಂದ, ಕಾನೂನಿನ ಪ್ರಕಾರ ಮಹಿಳೆಯರಿಗೆ ಕನಿಷ್ಠ ಮೇಕ್ಅಪ್ ಧರಿಸಲು ಅವಕಾಶವಿದೆ ಎಂದು ತಿಳಿಸಲಾಗಿದೆ.
ಕಿಮ್ ಜಾಂಗ್ ಉನ್ ಆಡಳಿತವು ಸ್ಕಿನ್ನಿ ಅಥವಾ ನೀಲಿ ಜೀನ್ಸ್, ಉದ್ದನೆಯ ಕೂದಲಿನಂತಹ ಕೆಲವು ಕೇಶವಿನ್ಯಾಸಗಳನ್ನು ಒಳಗೊಂಡಂತೆ ಬಂಡವಾಳಶಾಹಿ ಸಿದ್ಧಾಂತಕ್ಕೆ ಸಂಬಂಧಿಸಿರುವ ಹಲವಾರು ಇತರ ವಸ್ತುಗಳು ಮತ್ತು ಶೈಲಿಗಳನ್ನು ನಿಷೇಧಿಸಿದೆ. ಪುರುಷರು ಮತ್ತು ಮಹಿಳೆಯರಿಗೆ ರಾಜ್ಯವು ಅನುಮೋದಿಸಿದ ಕೇಶವಿನ್ಯಾಸವನ್ನು ಮಾತ್ರ ಅನುಮತಿಸಲಾಗಿದೆ.
ಈ ನಿಯಮಗಳ ಉಲ್ಲಂಘಿಸುವವರ ಮೇಲೆ ಕಣ್ಣಿಡಲೆಂದೇ ಸರ್ಕಾರ ನಿಯೋಜಿತ ತಂಡ ಕೆಲಸ ಮಾಡುತ್ತದೆ. ನಿಯಮ ಉಲ್ಲಂಘಿಸುವವರು ಎಲ್ಲಿಯೇ ಸಿಕ್ಕರು ಅವರನ್ನು ತಡೆಯಲಾಗುತ್ತದೆ. ಸಾರ್ವಜನಿಕವಾಗಿಯೇ ಅವರ ನಿಯಮ ಉಲ್ಲಂಘಟನೆಗೆ ಶಿಕ್ಷೆ ವಿಧಿಸುತ್ತಾರೆ. ದಂಡ ಕಟ್ಟುವಂತೆ ಮಾಡುತ್ತಾರೆ. ಅಲ್ಲದೆ ಇನ್ನು ಮುಂದೆ ನಿಯಮ ಮುರಿಯದಂತೆ ಎಚ್ಚರಿಕೆ ನೀಡುತ್ತಾರೆ.
ಉತ್ತರ ಕೊರಿಯಾ ಕುರಿತ ಸತ್ಯ ಬಹಿರಂಗಪಡಿಸಿದ್ದಳು ಯುವತಿ
ಒನ್ ಯಂಗ್ ಎಂಬ ವಿಶ್ವದ ಯುವಸಮ್ಮೇಳನದಲ್ಲಿ ಯುವತಿಯೊಬ್ಬಳು ಉತ್ತರ ಕೊರಿಯಾದ ಕುರಿತ ನಗ್ನ ಸತ್ಯಗಳ ಬಹಿರಂಗಪಡಿಸಿದ್ದಳು. ತನ್ನ ಗದ್ಗದಿತ ಮಾತುಗಳಲ್ಲಿಯೇ ಸ್ಪಷ್ಟವಾಗಿ ತನ್ನ ದೇಶದ ಜನರನ್ನು ಹೇಗೆ ಹಿಂಸಿಸಲಾಗುತ್ತಿದೆ ಮತ್ತು ಕ್ರೂರ ಕಾನೂನುಗಳ ಅಡಿಯಲ್ಲಿ ಹಿಂಸಿಸಲಾಗುತ್ತಿದೆ ಮತ್ತು ಕೊಲ್ಲಲಾಗುತ್ತಿದೆ ಎಂಬುದನ್ನು ವಿವರಿಸುತ್ತಾಳೆ. ಈಕೆಯ ಸ್ನೇಹಿತೆಯ ತಾಯಿಯನ್ನು ಕೇವಲ ಹಾಲಿವುಡ್ ಸಿನೆಮಾ ನೋಡಿದ ಕ್ಷುಲ್ಲುಕ ಕಾರಣಕ್ಕೆ ಕೊಲ್ಲಲಾಗಿತ್ತು ಎಂಬ ಸತ್ಯ ಆಕೆ ಹೇಳಿದ್ದಳು, ಈ ಘಟನೆ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆದರೆ ಇದಾದರೂ ಅಲ್ಲಿನ ನಾಯಕತ್ವ ಬದಲಾಗಲಿಲ್ಲ. ಹಾಗೂ ಜನರ ಮೇಲಿನ ದಬ್ಬಾಳಿಕೆ ನಿಲ್ಲಲಿಲ್ಲ.



Click it and Unblock the Notifications