Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಎಚ್ಚರ ಕ್ಯಾನ್ಸರ್ ಸಂತಾನೋತ್ಪತ್ತಿಗೆ ಹಾನಿ: ಆಘಾತ ಮೂಡಿಸಿದೆ ನೂಡಲ್ಸ್ ಪ್ಯಾಕೆಟ್ ಮೇಲಿನ ಬರಹ!!
ನೂಡಲ್ಸ್‌ಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುವ ಸ್ನ್ಯಾಕ್ಸ್ ಕೆಲವರು ಈ ನೂಡಲ್ಸ್ ಅನ್ನು ಬೆಳಗ್ಗೆ ತಿಂಡಿಗೂ ಸವಿಯುವುದು ನೋಡಬಹುದು. ಹಾಗೆ ಸಂಜೆ ಸಮಯದಲ್ಲಿ ನೂಡಲ್ಸ್‌ನಿಂದ ಮಾಡುವ ಹಲವು ರೀತಿ ಖಾದ್ಯಗಳ ಸವಿಯಲು ಇಷ್ಟಪಡುವವರು ಇದ್ದಾರೆ. ಮಕ್ಕಳಂತೂ ಎರಡು ನಿಮಿಷದಲ್ಲಿ ಇನ್ನು ಮಾಡಿ ಸವಿಯಲು ಇಷ್ಟಪಡುತ್ತಾರೆ. ಹಾಗೆ ಇದೊಂದು ಅಭ್ಯಾಸವನ್ನಾಗಿಯೂ ಹಲವರು ಮಾಡಿಕೊಂಡಿರುತ್ತಾರೆ.
ಏಕೆಂದರೆ ಸಮಯ ಇಲ್ಲದಾಗ, ಗಡಿಬಿಡಿಯಲ್ಲಿ ಇದ್ದಾಗ, ಹೊಟ್ಟೆ ಹಸಿದಾಗ ಇದನ್ನು ಸವಿಯುವುದು ನೋಡಬಹುದು. ಹಾಗೆ ನೂಡಲ್ಸ್‌ಗಳಿಂದ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಎದುರಾಗಲಿದೆ ಎಂಬುದನ್ನು ಕೂಡ ನಾವು ಗಮನಿಸಿರಬಹುದು. ನೂಡಲ್ಸ್ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶ ಈಗಾಗಲೇ ದೃಢವಾಗಿದೆ. ಮೂಳೆಗಳ ಆರೋಗ್ಯದಿಂದ ಹಿಡಿದು ಹೆಪಟೈಟಿಸ್, ಜೀರ್ಣಕ್ರಿಯೆಯ ಮೇಲೂ ಕೂಡ ಇದು ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

ಆದ್ರೆ ಈಗ ನೂಡಲ್ಸ್ ಪ್ರಿಯರಿಗೆ ಆಘಾತ ನೀಡುವಂತಹ ಸುದ್ದಿ ಹೊರಬಿದ್ದಿದೆ. ಅದ್ರಲ್ಲೂ ರಾಮೆನ್ ನೂಡಲ್ಸ್ ಎಲ್ಲರು ಇಷ್ಟಪಡುವ ಖಾದ್ಯ, ಆದ್ರೆ ಈಗ ಈ ರಾಮನ್ ನೂಡಲ್ಸ್‌ನ ಪ್ಯಾಕೆಟ್ ಮೇಲೆ ಕ್ಯಾನ್ಸರ್ ಕುರಿತಾದ ಎಚ್ಚರಿಕೆಯ ಬರಹಗಳು ಗ್ರಾಹಕರಲ್ಲಿ ಶಾಕ್ ತಂದಿದೆ. ಈ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು ನೋಡಿದವರು ಆಘಾತಕ್ಕೊಳಗಾಗಿದ್ದಾರೆ.
ಹೌದು ರಾಮೆನ್ ನೂಡಲ್ಸ್ ಪ್ಯಾಕೆಟ್‌ನ ಹಿಂಭಾಗದಲ್ಲಿ ಎಚ್ಚರಿಕೆ ಕ್ಯಾನ್ಸರ್ ಮತ್ತು ಸಂತಾನೋತ್ಪತ್ತಿ ಹಾನಿ ಎಂದು ಬರೆಯಲಾಗಿದೆ. ಇದನ್ನು ಗಮನಿಸಿದ ಗ್ರಾಹಕರು ಶಾಕ್ ಆಗಿದ್ದಾರೆ. ರಾಮೆನ್ ಪ್ಯಾಕೆಟ್ ಹಿಂಭಾಗದಲ್ಲಿ ಸಣ್ಣ ಅಕ್ಷರದಲ್ಲಿ ಈ ಎಚ್ಚರಿಕೆಯನ್ನು ಮುದ್ರಿಸಲಾಗಿದೆ. ಒಂದೇ ಪ್ಯಾಕೇಟ್ ಅಲ್ಲ ಬದಲಿಗೆ
ಹಲವಾರು ರಾಮೆನ್ ಪ್ಯಾಕೆಟ್‌ಗಳನ್ನು ತಿರುಗಿಸಿ ಸಣ್ಣ ಫಾಂಟ್‌ನಲ್ಲಿ ಮುದ್ರಿಸಲಾದ ಸಣ್ಣ ಎಚ್ಚರಿಕೆ ಸೂಚನೆಯನ್ನು ಬಹಿರಂಗಪಡಿಸಿದರು. ರಾಮೆನ್ ನೂಡಲ್ಸ್ ಈ ಎಚ್ಚರಿಕೆಯೊಂದಿಗೆ ಬರುತ್ತದೆಯೇ? ಕ್ಯಾನ್ಸರ್ + ಸಂತಾನೋತ್ಪತ್ತಿ ಹಾನಿ?? ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ, ಎಂದು ಇನ್‌ಸ್ಟಾಗ್ರಾಮರ್ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿದವರು ಆಘಾತಕ್ಕೊಳಗಾಗಿದ್ದಾರೆ. ಅದ್ರಲ್ಲೂ ಈ ನೂಡಲ್ಸ್ ಸವಿಯುತ್ತಿದ್ದವರು ಎಚ್ಚರಿಕೆ ಸಂದೇಶ ನೋಡಿ ಶಾಕ್ ಆಗಿದ್ದಾರೆ. ಮತ್ತೆ ಕೆಲವರು ಗೊಂದಲಕ್ಕೊಳಗಾಗಿದ್ದಾರೆ. ಇಷ್ಟು ದಿನದಿಂದ ಈ ಎಚ್ಚರಿಕೆ ಸಂದೇಶಗಳು ಪ್ಯಾಕೆಟ್‌ನ ಮೇಲೆ ಇರಲಿಲ್ಲ. ಈಗ ಹೊಸದಾಗಿ ಮುದ್ರಣಗೊಂಡಿವೆ ಎಂದು ಹೇಳಿದ್ದಾರೆ.
ನಾವು ತಿನ್ನುವ ಬಹುತೇಕ ಎಲ್ಲವೂ, ನಾವು ಆಗಾಗ್ಗೆ ಅದನ್ನು ಅತಿಯಾಗಿ ತಿಂದರೆ ಹಾನಿಯನ್ನುಂಟುಮಾಡಬಹುದು. ನಾನು ಅದನ್ನು ಕೆಲವು ಬಾರಿ ಬಹುಶಃ ವರ್ಷಕ್ಕೆ 6 ಬಾರಿ ಸೇವಿಸಿದ್ದೇನೆ. ನಾನು ಅದನ್ನು ಹೆಚ್ಚು ತಿನ್ನುತ್ತಿದ್ದೆ ಆದರೆ ಅದು ತುಂಬಾ ಖಾರವಾಗಿರುತ್ತದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಹಾಗೆ ಪ್ಯಾಕೆಟ್‌ನಲ್ಲಿ ಸಿಗುವ ಯಾವುದೇ ಸಂಸ್ಕರಿಸಿದ ಆಹಾರವು ಇದರಿಂದ ಹೊರತಾಗಿಲ್ಲ. ಎಲ್ಲವೂ ಆರೋಗ್ಯಕ್ಕೆ ಹಾನಿ ಮಾಡುವುದು ಖಚಿತ ಎಂದು ಬರೆದುಕೊಂಡಿದ್ದಾರೆ.
ಹಲವು ಬಾರಿ ಪ್ಯಾಕೇಜಿಂಗ್ ಸ್ವತಃ ವಿಷಕಾರಿಯಾಗಿದೆ. ಶಾಖ-ಮುದ್ರಿತ ಹೊದಿಕೆಗಳು ನಿಮ್ಮ ಚರ್ಮಕ್ಕೆ ಕನಿಷ್ಠ ನಿರ್ಧರಿಸಿದ ಸುರಕ್ಷಿತ ಮಾನ್ಯತೆ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ರಾಸಾಯನಿಕಗಳನ್ನು ಸೋರಿಕೆ ಮಾಡುತ್ತವೆ. ಅದು ಅವರಿಗೆ ಕ್ಯಾನ್ಸರ್/ಹಾರ್ಮೋನ್ ಅಡ್ಡಿಪಡಿಸುವ ಎಚ್ಚರಿಕೆಯನ್ನು ಅನ್ವಯಿಸುವ ಅಗತ್ಯವಿದೆ" ಎಂದು ಮೂರನೇ ಬಳಕೆದಾರರು ವಿವರಿಸಿದರು.
ಮಸಾಲೆಯುಕ್ತ ಆಹಾರವನ್ನು ಆಗಾಗ್ಗೆ ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಬಹುದು. ಆವರ್ತನವನ್ನು ಪ್ರತಿ 4 ತಿಂಗಳಿಗೊಮ್ಮೆ ಕಡಿಮೆ ಮಾಡುವುದು ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಈ ಉತ್ಪನ್ನವನ್ನು ಮಾರಾಟ ಮಾಡಲು ಹೇಗೆ ಅನುಮತಿ ನೀಡಲಾಗಿದೆ. ಆಹಾರದ ಮೇಲೆಯೇ ಅದರಿಂದ ಹಾನಿ ಇದೆ ಎಂದು ಬರೆದು ಮಾರಾಟ ಮಾಡಬಹುದೇ ಎಂದು ಮತ್ತೊಬ್ಬರು ಗಂಭೀರ ಪ್ರಶ್ನೆ ಮಾಡಿದ್ದಾರೆ.



Click it and Unblock the Notifications