Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಎರಡು ರಾಜ್ಯ ಸುತ್ತುವ ಈ ರೈಲಿಗೆ ಟಿಕೆಟ್ ಬೇಡ..! 75 ವರ್ಷದಿಂದ ಉಚಿತ ಪ್ರಯಾಣ.!!
ಭಾರತೀಯ ರೈಲ್ವೆ ದೇಶದ ಮೂಲೆ ಮೂಲೆಯನ್ನು ಸಂಪರ್ಕಿಸುವ ಒಂದು ಕೊಂಡಿಯಾಗಿದೆ. ಸುಮಾರು 13 ಸಾವಿರ ರೈಲು ಹೊಂದಿರುವ ನಮ್ಮ ದೇಶದಲ್ಲಿ ದೇಶದ ಎಲ್ಲಾ ಕಡೆ ರೈಲು ನಿಲ್ದಾಣವಿದೆ. ಕಠಿಣ ಪ್ರದೇಶಗಳ ಹೊರತುಪಡಿಸಿ ಉಳಿದಂತೆ ಬಹುತೇಕ ಭಾಗಕ್ಕೆ ರೈಲ್ವೆ ಸಂಪರ್ಕವಿದೆ. ನಿತ್ಯ ಲಕ್ಷ ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಹೀಗಾಗಿ ಭಾರತೀಯ ರೈಲ್ವೆ ವಿಶ್ವದಲ್ಲೇ ಅತ್ಯುತ್ತಮ ಸೇವೆ ಹಾಗೂ ಸಂಪರ್ಕಕ್ಕೆ ಹೆಸರುವಾಸಿಯಾಗಿದೆ.
ಇನ್ನು ಭಾರತೀಯ ರೈಲ್ವೆ ಹಲವು ದಾಖಲೆಗಳ ತನ್ನ ಹೆಸರಲ್ಲಿ ಇಟ್ಟುಕೊಂಡಿದೆ. ಹಾಗೆ ಹಲವು ವಿಶೇಷತೆಗಳ ಹೊಂದಿದೆ. ಕೆಲವೊಂದು ರೈಲು ಮಾರ್ಗಗಳು ಪ್ರವಾಸಕ್ಕಿಂತ ಕಡಿಮೆಯಿಲ್ಲ. ಕೊಂಕಣ ರೈಲ್ವೆ ಪ್ರಯಾಣ ಅತ್ಯಂತ ಸಾಹಸಮಯ ಪ್ರಯಾಣ ಎಂಬ ಕೀರ್ತಿ ಪಡೆದಿದೆ. ಹಾಗೆ ಅತೀ ಹೆಚ್ಚು ನೌಕರರ ಹೊಂದಿರುವ ಇಲಾಖೆ ಕೂಡ ಇದಾಗಿದೆ.

ಇನ್ನು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಖರೀದಿಸುವು ಕಡ್ಡಾಯ, ಅದ್ರಲ್ಲೂ ಟಿಕೆಟ್ ಅನ್ನು ಆಫ್‌ಲೈನ್ಲ, ಆನ್‌ಲೈನ್ ಎರಡು ಕಡೆಗಳಲ್ಲೂ ಖರೀದಿಸಬಹುದು. ಈಗ ಟಿಕೆಟ್ ಖರೀದಿ ಬಹಳ ಸುಲಭವೂ ಆಗಿದೆ. ಆದ್ರೆ ಟಿಕೆಟ್ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಕೂಡ ಅಷ್ಟೆ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ರೈಲ್ವೆ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ದಂಡ ವಿಧಿಸುವ ಮೂಲಕವೇ ಕೋಟಿ ಗಳಿಕೆ ಮಾಡುತ್ತಿದೆ.
ಆದ್ರೆ ಈ ಒಂದು ರೈಲಿನಲ್ಲಿ ಪ್ರಯಾಣಿಸಲು ಯಾವುದೇ ಟಿಕೆಟ್‌ನ ಅಗತ್ಯವಿಲ್ಲ, ಈ ರೈಲಿನಲ್ಲಿ ಪ್ರಯಾಣ ಎಲ್ಲರಿಗೂ ಉಚಿತ ಇದು ಒಂದು ದಿನವಲ್ಲ, ಒಂದು ವಾರವಲ್ಲ, ಒಂದು ತಿಂಗಳೂ ಅಲ್ಲ ದಶಕಗಳಿಂದಲೂ ಈ ರೈಲು ಉಚಿತವಾಗಿ ಪ್ರಯಾಣಿಸುತ್ತಿದೆ. ನಿಮಗೆ ಅಚ್ಚರಿಯಾಗಬಹುದು. ಈ ರೈಲು ಇಂದಿಗೂ ಉಚಿತವಾಗಿ ಚಲಿಸುತ್ತಿದೆ. ಹಾಗೆ ಪ್ರಯಾಣಿಕರು ಎಂದಿಗೂ ಟಿಕೆಟ್ ಖರೀದಿಸುವುದಿಲ್ಲ, ಟಿಕೆಟ್ ಇಲ್ಲದೆ ಇದರಲ್ಲಿ ಪ್ರಯಾಣಿಸಬಹುದು.
ಕಳೆದ 75 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭಾಕ್ರಾ-ನಂಗಲ್ ರೈಲು ಈ ರೀತಿಯ ವಿಶೇಷತೆಗೆ ಹೆಸರಾಗಿದೆ. ಪಂಜಾಬ್‌ನ ನಂಗಲ್ ಹಾಗೂ ಹಿಮಾಚಲ ಪ್ರದೇಶದ ಭಾಕ್ರಾ ನಡುವೆ ಸುಮಾರು 13 ಕಿ.ಮೀ ದೂರ ಕ್ರಮಿಸುವ ಈ ರೈಲು 1948ರಿಂದ ಕಾರ್ಯ ನಿರ್ವಹಿಸುತ್ತಿದೆ. ಈ ರೈಲು ಪ್ರಸಿದ್ಧ ಸಟ್ಲೆಜ್ ನದಿ, ಶಿವಾಲಿಕ್ ಬೆಟ್ಟಗಳು, ಸುಪ್ರಸಿದ್ಧ ಭಾಕ್ರಾ-ನಂಗಲ್ ಅಣೆಕಟ್ಟು ಹೀಗೆ ಹಲವು ಪ್ರಮುಖ ಪ್ರದೇಶಗಳ ಮೂಲಕ ಹಾದು ಹೋಗಲಿದೆ.
1953ರಲ್ಲಿ ಅಮೇರಿಕದಿಂದ ಆಮದು ಮಾಡಿಕೊಂಡ ಡೀಸೆಲ್ ಇಂಜಿನ್‌ಗಳು ಭಾರತೀಯ ರೈಲ್ವೆ ಸೇರಿದಾಗ ಈ ರೈಲು ಕೂಡ ಹೊಸ ಇಂಜಿನ್ ಪಡೆದಿತ್ತು. ಈ ನಡುವೆ ಹೊಸ ಕೋಚ್‌ಗಳು ಕೂಡ ಬಂದವು. ಈ ರೈಲು ಬಹಳ ಕಾಲದಿಂದ ಚಲಿಸುತ್ತಿದ್ದ ಕಾರಣ ಆ ದಾಖಲೆ ಹಾಗೆಯೇ ಉಳಿಸಲು ಟಿಕೆಟ್ ಉಚಿತ ಮಾಡಲಾಗಿತ್ತು.
ಪ್ರತಿದಿನ 800 ಕ್ಕೂ ಹೆಚ್ಚು ಜನರು ಈ ರೈಲನ್ನು ತಮ್ಮ ಪ್ರಯಾಣಕ್ಕೆ ಬಳಸುತ್ತಾರೆ. ಇದು ಅನೇಕ ಜನರಿಗೆ ಪ್ರಯಾಣಿಸಲು ಜನಪ್ರಿಯ ಮತ್ತು ಅನುಕೂಲಕರ ಮಾರ್ಗವಾಗಿ ಉಳಿದಿದೆ. ಇದೇ ರೈಲಿನಲ್ಲಿ ಪ್ರಯಾಣಿಸುವಾಗ ಪ್ರಸಿದ್ಧ ಭಾಂಕ್ರಾ-ನಂಗಲ್ ಅಣೆಕಟ್ಟು ವೀಕ್ಷಿಸಬಹುದು. ಹೀಗಾಗಿ ಪ್ರವಾಸಿಗರ ಮೆಚ್ಚಿನ ತಾಣಗಳು ಇದೇ ರೈಲು ಸಂಪರ್ಕಿಸುತ್ತೆ.
ಪ್ರತಿದಿನ ಬೆಳಗ್ಗೆ 7:05ಕ್ಕೆ, ರೈಲು ನಂಗಲ್ ರೈಲು ನಿಲ್ದಾಣದಿಂದ ಹೊರಟು ಬೆಳಗ್ಗೆ 8:20ಕ್ಕೆ ಭಾಕ್ರಾ ತಲುಪುತ್ತದೆ. ಈ ಪ್ರಯಾಣದಲ್ಲಿ 18ರಿಂದ 20 ಲೀಟರ್ ಡೀಸೆಲ್ ಅನ್ನು ಇದು ಬಳಸುತ್ತದೆ. ಹಾಗೆ ರೈಲು 3:05pm ಕ್ಕೆ ನಂಗಲ್‌ನಿಂದ ಮತ್ತೊಂದು ಟ್ರಿಪ್‌ಗೆ ನಿರ್ಗಮಿಸುತ್ತದೆ, 4:20pm ಕ್ಕೆ ಭಾಕ್ರಾ ನಿಲ್ದಾಣಕ್ಕೆ ತಲುಪುತ್ತದೆ. ಈ ಪ್ರಯಾಣ ಸಂಪೂರ್ಣ ಉಚಿತವಾಗಿರುತ್ತದೆ. ಈ ಸಂಪ್ರದಾಯ ಉಳಿಸುವ ಉದ್ದೇಶದಿಂದ ಇಂದಿಗೂ ಈ ರೈಲು ಉಚಿತವಾಗಿಯೇ ಪ್ರಯಾಣ ಬೆಳೆಸುತ್ತಿದೆ.



Click it and Unblock the Notifications
