Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿಯೊಂದು ಡಿಜಿಟಲ್ ಮೂಲಕವೇ ನಡೆಯುತ್ತದೆ. ಮೊಬೈಲ್ ಫೋನ್ ಒಂದಿದ್ದರೆ ಸಾಕು ಇಡೀ ಪ್ರಪಂಚ ಅಂಗೈಯಲ್ಲಿ ತರಬಹುದು. ಅದರಲ್ಲೂ ಮುಂದುವರೆದ ರಾಷ್ಟ್ರಗಳಲ್ಲಿ ಡಿಜಿಟಲ್ ಯುವ ಎಷ್ಟು ಮುಂದುವರೆದಿದೆ ಅಂದ್ರೆ ನಾವು ನೀವು ಊಹಿಸಲು ಸಹ ಸಾಧ್ಯವಿಲ್ಲ.
ಮಾನವ ಮಾಡುತ್ತಿದ್ದ ಪ್ರತಿಯೊಂದು ಕೆಲಸವೂ ಈಗ ರೋಬಾಟ್‌ಗಳು ಮಾಡುತ್ತಿವೆ. ಅದರಲ್ಲೂ ಜಪಾನ್, ಚೀನಾ, ಅಮೆರಿಕಾದಂತಹ ಟೆಕ್ ದೈತ್ಯ ರಾಷ್ಟ್ರಗಳು ಡಿಜಿಟಲ್ ಲೋಕವನ್ನೇ ಸೃಷ್ಟಿಸಿಕೊಂಡಿವೆ. ಭಾರತವೂ ಇದರಿಂದ ಹಿಂದೆಬಿದ್ದಿಲ್ಲ. ಭಾರತದಲ್ಲಿ ಈ ಡಿಜಿಟಲ್ ಕ್ರಾಂತಿಯ ಯಶಸ್ಸು ಉತ್ತುಂಗದಲ್ಲಿದೆ. ಪ್ರತಿಯೊಂದು ಸೇವೆಗಳು ಡಿಜಿಟಲ್ ಆಗುತ್ತಿದೆ.

ಇನ್ನು ಈ ಡಿಜಿಟಲ್ ಕ್ರಾಂತಿಯ ಯಶಸ್ಸಿನಲ್ಲಿ ಕ್ಯಾಶ್‌ಲೆಸ್ ಸೇವೆಯೂ ಒಂದಾಗಿದೆ. ಈಗ ಯಾರು ಸಹ ಜೇಬಿನಲ್ಲಿ ಹಣವಿಟ್ಟುಕೊಂಡು ಓಡಾಡುವುದೇ ಇಲ್ಲ ಎನ್ನುವಂತಾಗಿದೆ. ಎಲ್ಲರು ತಮ್ಮ ಡಿಜಿಟಲ್ ಪಾವತಿ ಮೂಲಕವೇ ಹೆಚ್ಚು ವ್ಯವಹಾರ ನಡೆಸುತ್ತಾರೆ. ಮೊಬೈಲ್ ಮೂಲಕ ತಮ್ಮ ಬ್ಯಾಂಕಿಂಗ್ ಸೇರಿದಂತೆ ಹಣಕ್ಕೆ ಸಂಬಂಧಿಸಿದ ವ್ಯವಹಾರ ನಡೆಯುತ್ತಿದೆ.
ಆದರೆ ಚೀನಾ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಅಲ್ಲಿ ಡಿಜಿಟಲ್ ಪಾವತಿ ಎಂಬುದು ಮತ್ತೊಂದು ಹಂತ ತಲುಪಿದೆ. ಅಲ್ಲಿ ಡಿಜಿಟಲ್ ಪಾವತಿಗೆ ಹಣ, ಮೊಬೈಲ್, ಗ್ಯಾಜೆಟ್ ಯಾವುದೂ ಬೇಕಾಗಿಯೇ ಇಲ್ಲ. ಕೇವಲ ನಿಮ್ಮ ಹಸ್ತದ ಸಹಾಯದಿಂದಲೇ ಹಣ ಪಾವತಿ ಮಾಡುವ ವಿಶೇಷ ತಂತ್ರಜ್ಞಾನ ಅಲ್ಲಿದೆ.
ನಿಮಗೆ ಈ ವಿಚಾರ ತಿಳಿದರೆ ಅಚ್ಚರಿ ಆಗಬಹುದು. ಚೀನಾದಲ್ಲಿ ಕೇವಲ ಹಸ್ತ ಮಾತ್ರ ಬಳಸಿ ಡಿಜಿಟಲ್ ಪೇಮೆಂಟ್ ಮಾಡಲಾಗುತ್ತದೆ. ಅಲ್ಲಿ ಹಣ ಪಾವತಿಗೆ ಯಾವ ಗ್ಯಾಜೆಟ್‌ನ ಅಗತ್ಯವೇ ಇಲ್ಲ. ಕೇವಲ ಹಸ್ತವನ್ನು ಯಂತ್ರದ ಮೇಲೆ ತೋರಿಸಿದರೆ ನಿಮ್ಮ ಹಣ ಸಂದಾಯವಾಗುವ ಅಚ್ಚರಿ ಹುಟ್ಟಿಸುವ ಡಿಜಿಟಲ್ ಕ್ರಾಂತಿ ಅಲ್ಲಿದೆ.
ಹಸ್ತದಿಂದ ಹಣ ಪಾವತಿ ಹೇಗೆ?
ಚೀನಾದಲ್ಲಿ ಟೆನ್ಸೆಂಟ್ ಎಂಬ ದೈತ್ಯ ಪೇಮೆಂಟ್ ಗೇಟ್‌ವೇ ಸಂಸ್ಥೆ ಇದೆ. ಈ ಸಂಸ್ಥೆ ವಿಶ್ವದ ಬಹುಪಾಲು ಆನ್‌ಲೈನ್ ಹಾಗೂ ಡಿಜಿಟಲ್ ಪಾವತಿ ಹಾಗೂ ಹತ್ತಾರು ಆಪ್‌ಗಳ ನಿರ್ವಹಿಸುತ್ತದೆ. ಇದೇ ಕಂಪನಿ ಈ ಹೊಸ ರೀತಿಯ ಡಿಜಿಟಲ್ ಪೇಮೆಂಟ್ ವಿಧಾನವನ್ನು ಪರಿಚಯಿಸಿದೆ. ವಿ ಚಾಟ್ ಎಂಬ ಆಪ್ ಮೂಲಕ ಈ ಪೇಮೆಂಟ್ ಸಾಧ್ಯವಾಗುತ್ತದೆ. ಈ ಕಂಪನಿ ಗ್ರಾಹಕರ ಕೈ ಯಲ್ಲಿರುವು ಗುರುತನ್ನು ಪಡೆದುಕೊಂಡು ಅದರೊಂದಿಗೆ ಪೇಮೆಂಟ್ ಗೇಟ್‌ವೇಗೆ ಅನುಮತಿ ನೀಡುವ ಹೊಸ ತಂತ್ರಜ್ಞಾನ ಪರಿಚಯಿಸಿದೆ.
ಈಗ ಚೀನಾದ ಮೆಟ್ರೋ ನಿಲ್ದಾಣಗಳಲ್ಲಿರುವ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಈ ರೀತಿಯ ಪೇಮೆಂಟ್ ಮಾಡಬಹುದು. ನೀವು ಕೇವಲ ಹಸ್ತವನ್ನು ಯಂತ್ರ ಮುಂದೆ ಹಿಡಿದುಕೊಂಡರೆ ಕ್ಷಣ ಮಾತ್ರದಲ್ಲಿ ಅದು ಹಣ ಸಂದಾಯ ಮಾಡುತ್ತದೆ. ಇದು ಪ್ರತಿಯೊಬ್ಬ ಗ್ರಾಹಕರ ಬೆರಳಚ್ಚಿನ ಸಹಾಯದಿಂದ ಕೆಲಸ ಮಾಡುತ್ತದೆ. ಇದರಲ್ಲಿ ಓಟಿಪಿ, ಪಿನ್ ಯಾವುದನ್ನು ಬಳಕೆ ಮಾಡುವ ವ್ಯವದಾನವೇ ಇರುವುದಿಲ್ಲ. ನಿಮ್ಮ ಪೇಮೆಂಟ್ ಅನ್ನು ಬೇರೊಬ್ಬರು ಮಾಡಲು ಸಹ ಬರುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಯಾವುದೇ ವ್ಯವಹಾರವು ನಡೆಯುವುದಿಲ್ಲ.
ಹೀಗಾಗಿ ಈ ರೀತ ಹ್ಯಾಂಡ್ ವೇ ಪೇಮೆಂಟ್ ಚೀನಾದಲ್ಲಿ ಈಗ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ಮುಂದೊಂದು ದಿನ ಇದೇ ರೀತಿಯ ವ್ಯವಸ್ಥೆ ಜಗತ್ತಿನ ಬಹುತೇಕ ರಾಷ್ಟ್ರಗಳು ಅಳವಡಿಸಿಕೊಳ್ಳಬಹುದು. ಮೊದಲು ಫಿಸಿಕಲ್ ಹಣದಿಂದ ಆರಂಭವಾಗಿದ್ದ ವ್ಯವಹಾರ ಬಳಿಕ ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್‌ಗೆ ಬಂದಿತ್ತು. ಇದಾಗಿ ಕಾರ್ಡ್ ಲೆಸ್ ಆಗಿತ್ತು, ಬಳಿಕ ಕ್ಯಾಶ್ ಲೆಸ್ ಆಗಿದೆ. ಮುಂದೆ ಗ್ಯಾಜೆಟ್ ಲೆಸ್ ಪೇಮೆಂಟ್ ವಿಧಾನ ಸಹ ನಮ್ಮ ಮುಂದೆ ಬರಬಹುದು.



Click it and Unblock the Notifications
