Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೆಟ್ ಗಾಲಾದಲ್ಲಿ ಸೆಲೆಬ್ರಿಟಿಗಳ ರಂಗು: ಈರುಳ್ಳಿ, ಬೆಳ್ಳುಳ್ಳಿ ನಿಷೇಧ..! ಏಕೆ ಗೊತ್ತಾ?
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತ್ಯಂತ ದೊಡ್ಡ ಫ್ಯಾಷನ್ ಈವೆಂಟ್ ಆಗಿರುವ ಮೆಟ್ ಗಾಲಾ ಈಗ ಭಾರೀ ಸದ್ದು ಮಾಡ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ರೆಡ್ ಕಾರ್ಪೆಟ್ ಮೇಲೆ ಮಿಂಚು ಹರಿಸಿದ್ದರು. ನ್ಯೂಯಾರ್ಕ್ ಮೆಟ್ರೋಪಾಲಿಟನ್ ಮ್ಯೂಜಿಯಂ ಆಫ್ ಆರ್ಟ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೆಟ್ ಗಾಲಾ ಸಂಭ್ರಮದಿಂದ ಆರಂಭಗೊಂಡಿದೆ.
ವಿಶ್ವದ ಮೂಲೆ ಮೂಲೆಯಿಂದಲೂ ಇಲ್ಲಿಗೆ ನಟ-ನಟಿಯರು ಸೆಲೆಬ್ರಿಟಿಗಳು ಆಗಮಿಸುತ್ತಾರೆ. ವಿಚಿತ್ರ, ವಿಶೇಷ ಎನ್ನುವಂತಹ ಆಕರ್ಷಕ ರೀತಿಯ ಬಟ್ಟೆಗಳ ಧರಿಸಿ ಅವರು ವಾಕ್ ಮಾಡುತ್ತಾರೆ. ಬಾಲಿವುಡ್ ನಟ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಈ ಮೆಟ್ ಗಾಲಾ ಮೇಳದಲ್ಲಿ ಭಾಗಿಯಾಗಿದ್ದರು. ಅವರು ಕಪ್ಪು ಬಣ್ಣದ ಬ್ಲೇಜರ್ ಹಾಗೆ ಕುತ್ತಿಗೆಯಲ್ಲಿ ಸರಗಳ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಇಟ್ಟಿದ್ದರು. ಅವರ ಕುತ್ತಿಗೆಯಲ್ಲಿ K ಎಂಬ ಅಕ್ಷರ ಲಾಕೆಟ್ ಎಲ್ಲರ ಗಮನ ಸೆಳೆದಿತ್ತು. ಸಬ್ಯಸಾಚಿ ಮುಖರ್ಜೀ ಅವರ ಡಿಸೈನರ್ ಆಗಿದ್ದಾರೆ.

ಆದ್ರೆ ಈಗ ಈ ಮೆಟ್ ಗಾಲಾ ವಿಚಿತ್ರ ಕಾರಣವೊಂದರಿಂದ ಸುದ್ದಿಯಾಗುತ್ತಿದೆ. ಇದು ಶ್ರೀಮಂತ ಸೆಲೆಬ್ರಿಟಿಗಳು ಒಟ್ಟಿಗೆ ಸೇರುವ ಏಕೈಕ ಈವೆಂಟ್ ಎನ್ನಬಹುದು. ಹೀಗಾಗಿ ಅವರ ಜೀವನ ಶೈಲಿ, ಆಹಾರ ಕ್ರಮ ಹೇಗಿರಲಿದೆ ಎಂಬ ಕುತೂಹಲ ಇದ್ದವರು ಈ ಈವೆಂಟ್ ನೋಡಲು ಇಷ್ಟಪಡುತ್ತಾರೆ. ಈ ಈವೆಂಟ್‌ನಲ್ಲಿ ಈಗ ಕೆಲವೊಂದು ನಿಯಮಗಳು, ಆಹಾರ ಸೇವನೆಯಲ್ಲಿ ಕೆಲವು ನಿಷೇಧಗಳ ನೋಡಬಹುದು.
ಸೆಲೆಬ್ರಿಟಿಗಳೆಂದರೆ ಅವರು ಕಠಿಣ ಡಯೆಟ್ ಫಾಲೋ ಮಾಡುವವರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಹಾಗೆ ಈ ಮೆಟ್ ಗಾಲಾದಲ್ಲಿ ಡಯೆಟ್ ವಿಚಾರವಾಗಿ ಬಹಳ ಕಟ್ಟು ನಿಟ್ಟಿನ ಕ್ರಮವಿದೆ. ಅಲ್ಲಿ ಅಡುಗೆಗಳಿಗೆ ಒಂದು ಚಿಟಿಕೆಯಷ್ಟು ಕೂಡ ಬೆಳ್ಳುಳ್ಳಿ ಬಳಸದೆ ಇರಲು ನಿರ್ಧರಿಸಲಾಗಿದೆ.
ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ ಇಲ್ಲ
ಎಷ್ಟೇ ದೊಡ್ಡ ಸೆಲೆಬ್ರಿಟಿ ಆಗಿದ್ದರೂ ಅವರು ಈರುಳ್ಳಿ, ಬೆಳ್ಳುಳ್ಳಿ ಸವಿಯಬೇಕು ಅಂದರೆ ಚಿಟಿಕೆ ಅಷ್ಟೂ ಇಲ್ಲಿ ಸಿಗುವುದಿಲ್ಲವಂತೆ. ಯಾವುದೇ ಅಡುಗೆಯಲ್ಲಿ ನೀವು ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ ಹಾಗೆ ಬಹಳ ಸಮಯದವರೆಗೆ ಅಗಿದು ತಿನ್ನುವಂತಹ ಯಾವುದೇ ಖಾದ್ಯ ಸಿಗುವುದಿಲ್ಲವಂತೆ. ಆದ್ರೆ ಈ ರೀತಿ ನಿರ್ಧಾರಕ್ಕೆ ಬಂದಿರುವ ಹಿಂದೆ ದೊಡ್ಡ ಕಾರಣವೂ ಇದೆಯಂತೆ. ಈ ಈವೆಂಟ್‌ನಲ್ಲಿ ಅಡುಗೆ ಕಾಂಟ್ರಾಕ್ಟ್ ಪಡೆದಿರುವ ವಿಶ್ವದ ಪ್ರಸಿದ್ಧ ಗ್ರೇಟ್ ಟೇಸ್ಟ್ ಕ್ಯಾಟರಿಂಗ್‌ನ ಮಾಲಿಕ ಜೋಶ್ ಜಾಕ್ಸನ್ ಪ್ರಕಾರ. ಈ ಎಲ್ಲಾ ಖಾದ್ಯವು ಸೆಲೆಬ್ರಿಟಿಗಳಿಗೆ ಉತ್ತಮವಲ್ಲವಂತೆ. ಇವು ಪ್ರಸಿದ್ಧ ವ್ಯಕ್ತಿಗಳ ಉಸಿರಾಟದ ಮೇಲೆ ಪರಿಣಾಮ ಬೀರಬಹುದು. ಹಾಗೆ ಹಲ್ಲುಗಳ ಮೇಲೆ ಕಲೆಗಳ ಉಳಿಸುವುದು, ಹಾಗೆ ಕೃತಕ ಹಲ್ಲುಗಳಿದ್ದರೆ ಈ ಖಾದ್ಯಗಳು ಹಾನಿ ಮಾಡುತ್ತವೆ ಜೊತೆಗೆ ದುಬಾರಿ ಗೌನ್‌ಗಳು, ಬ್ಲೇಜರ್ ಮೇಲೆ ಟೊಮೆಟೋ ಕಲೆ ಬಿದ್ದರೆ ಅದು ಸಂಪೂರ್ಣ ಹಾಳಾಗುತ್ತದೆ. ಹೀಗಾಗಿ ಅಲಿಖಿತ ನಿಷೇಧವಿದೆ ಎಂದಿದ್ದಾರೆ.
ಹಾಗೆ ಈ ಸೆಲೆಬ್ರಿಟಿಗಳು ಇಡೀ ದಿನ ಲವಲವಿಕೆಯಿಂದ ಕೂಡಿರಬೇಕು. ಬೆಳ್ಳುಳ್ಳಿ, ಹಾಗೂ ಈರುಳ್ಳಿ ಅವರಲ್ಲಿ ಆಲಸ್ಯ ಉಂಟು ಮಾಡುತ್ತದೆ. ನಿದ್ರೆ ಸಹಕಾರಿಯಾಗುವ ಅಂಶ ಅದರಲ್ಲಿದೆ. ಹೀಗಾಗಿ ಮೆಟ್ ಗಾಲಾದ ಈ ಈವೆಂಟ್‌ನಲ್ಲಿ ಈ ರೀತಿಯ ವಸ್ತು ನೋಡಲು ಸಿಗಲ್ಲ. ಇನ್ನು 75 ಸಾವಿರ ಡಾಲರ್ ಬೆಲೆಯ ಟಿಕೆಟ್ ಪಡೆದು ಒಳಬರುವ ಮಂದಿ ಇಷ್ಟವಾದ ಖಾದ್ಯ ಸವಿಯಬಹುದು. ಆದ್ರೆ ಅವರಿಗೆ ಇಷ್ಟದ ಸೆಲೆಬ್ರಿಟಿಗಳ ಜೊತೆಗೆ ಊಟ ಮಾಡಲು ಅವಕಾಶವಿಲ್ಲ.



Click it and Unblock the Notifications
