Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶೌಚಾಲಯ ಬಳಸಬೇಕಾದ್ರೆ ಜಾಹೀರಾತು ನೋಡಿ..ಇಲ್ಲವೆ ಶುಲ್ಕ ಪಾವತಿಸಿ! ಇದೇನು ಹೊಸ ತಂತ್ರ!
ಸಾರ್ವಜನಿಕ ಶೌಚಾಲಯಗಳು ಬಹುತೇಕ ದೇಶದಲ್ಲಿ ಉಚಿತ ಬಳಕೆಗೆ ತೆರೆದಿರುತ್ತವೆ. ಇಡೀ ನಗರವನ್ನು ಬಯಲು ಶೌಚದಿಂದ ಮುಕ್ತರಾಗಿಸಲು ಸರ್ಕಾರವೇ ನಡೆಸುವ ಒಂದು ಕಾರ್ಯಕ್ರಮ ಇದಾಗಿದೆ. ಇನ್ನು ಹಲವು ದೇಶದಲ್ಲಿ ಶೌಚಾಲಯ ಬಳಕೆ ಉಚಿತವಾಗಿ ಉಳಿದಿಲ್ಲ. ಭಾರತದಲ್ಲೂ ಟೆಂಡರ್ ಕರೆಯಲಾದ ಶೌಚಾಲಯಗಳು ಹಣ ನೀಡಿ ಬಳಸಬೇಕಾಗುತ್ತದೆ.
ಆದ್ರೆ ಬಹುತೇಕ ಕಡೆಗಳಲ್ಲಿ ಉಚಿತ ಬಳಕೆಗೆ ಶೌಚಾಲಯಗಳು ಸಿಗಲಿವೆ. ಆದ್ರೆ ಆಧುನಿಕ ಕಾಲದಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ, ನೀವಿಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಆದರು ಅದಕ್ಕೆ ಶುಲ್ಕ ಪಾವತಿಸಿಯೇ ಬಳಸಿರುತ್ತೀರಿ. ಹಾಗೆ ಈಗ ಶೌಚಾಲಯವೂ ಕೂಡ ಉಚಿತವಾಗಿ ಉಳಿಯುವುದಿಲ್ಲ ಎಂಬ ಅನುಮಾನ ಮೂಡಲು ಆರಂಭವಾಗಿದೆ.

ಇತ್ತೀಚಿಗೆ ನೀವು ಎಲ್ಲಿ ಕಣ್ಣು ಹಾಯಿಸಿದರು ಜಾಹಿರಾತುಗಳ ನೋಡುತ್ತೀರಿ. ಅದ್ರಲ್ಲೂ ಗ್ಯಾಜೆಟ್‌ಗಳಲ್ಲಂತು ಜಾಹಿರಾತುಗಳ ಯಾವಾಗಲು ನೋಡಬೇಕಾಗಿದೆ. ಈಗ ಚೀನಾದ ಶೌಚಾಲಯ ಬಳಸಬೇಕಾದರೂ ನೀವು ಜಾಹಿರಾತು ನೋಡಬೇಕು, ಜಾಹಿರಾತು ನೇಡ ಎಂದಾದರೆ ನೀವು ಶುಲ್ಕ ಪಾವತಿಸಬೇಕು.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ನಿಮಗೆ ಟಿಶ್ಯೂ ಪೇಪರ್ ಪಡೆಯಲು ಶುಲ್ಕ ನೀಡಬೇಕು ಇಲ್ಲವೆ ಜಾಹೀರಾತು ವೀಕ್ಷಿಸಬೇಕು ಎಂಬುದನ್ನು ವಿವರಿಸಿಲಿದೆ. ಶೌಚಾರಲಯದಲ್ಲಿ ಟಿಶ್ಯೂ ಪೇಪರ್ ಬಳಸಲು ಅಲ್ಲಿ ಇರುವ ಒಂದು ಬಾಕ್ಸ್‌ನ ಕ್ಯೂರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ತಕ್ಷಣವೇ ಟಿಶ್ಯೂ ಬೇಕಾದರೆ ಶುಲ್ಕ ಪಾವತಿಸಿ ಮುಂದುವರೆಯಬೇಕು. ಶುಲ್ಕ ಪಾವತಿಯಿಂದ ವಿನಾಯಿತಿ ಪಡೆಯಬೇಕಾದರೆ ಜಾಹಿರಾತು ನೋಡಬೇಕಾಗುತ್ತದೆ. ಈ ಜಾಹಿರಾತು ಮುಗಿದ ತಕ್ಷಣ ನಿಮಗೆ ಟಿಶ್ಯೂ ಪೇಪರ್ ಅದೇ ಯಂತ್ರದ ಸಹಾಯದಿಂದ ಹೊರಬರಲಿದೆ.
ನೀವು ಜಾಹೀರಾತನ್ನು ವೀಕ್ಷಿಸಲು ಬಯಸದಿದ್ದರೆ, 0.5 RMB ಅಂದರೆ ಭಾರತೀಯ ರೂಪಾಯಿಯಲ್ಲಿ ಇದು 6 ರೂಪಾಯಿ ಆಗಲಿದೆ. ಇದನ್ನು ಪಾವತಿಸಬಹುದು. ಅಧಿಕಾರಿಗಳ ಪ್ರಕಾರ ಈ ವ್ಯವಸ್ಥೆ ತ್ಯಾಜ್ಯವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ, ಏಕೆಂದರೆ ಕೆಲವರು ಉಚಿತವಾಗಿ ಸಿಗುವ ಟಿಶ್ಯೂ ಪೇಪರ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಇಂತಹ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆದ್ರೆ ಇದಕ್ಕೂ ಬುದ್ದಿವಂತರಾದ ಜನರು ಈಗ ಟಾಯ್ಲೆಟ್ ತೆರಳಲು ತಾವಾಗಿಯೇ ಸ್ವಂತ ಟಿಶ್ಯೂ ಪೇಪರ್ ಅನ್ನು ತರಲು ಆರಂಭಿಸಿದ್ದಾರೆ. ಹಾಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲು ಸಮಸ್ಯೆಗಳು ಎದುರಾಗುವುದು ವರದಿಯಾಗಿದೆ. ಆದ್ರೆ ಬಹುತೇಕರು ಜಾಹಿರಾತು ವೀಕ್ಷಿಸಿದ ಬಳಿಕ ಟಿಶ್ಯೂ ಬಳಸುತ್ತಿರುವುದು ಕಂಡುಬಂದಿದೆ.
ಈಗ ಚೀನಾದ ಪ್ರಮುಖ ನಗರಗಳಲ್ಲಿ ಈ ರೀತಿಯ ಕ್ಯೂಆರ್ ಕೋಡ್ ಅನೇಬಲ್ಡ್ ಶೌಚಾಲಯಗಳು ಆರಂಭಗೊಂಡಿವೆ. ಹಲವರು ಬಳಕೆಯನ್ನು ಮಾಡುತ್ತಿದ್ದಾರೆ. ಚೀನಾ ಈ ರೀತಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು ಇದೇ ಮೊದಲೇನಲ್ಲ, 2017ರಲ್ಲಿ ಬೀಜಿಂಗ್‌ನ ಟೆಂಪಲ್ ಆಫ್ ಹೆವನ್ ಪಾರ್ಕ್‌ನಲ್ಲಿ, ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುವ ವಿಶೇಷ ಟಾಯ್ಲೆಟ್ ಪೇಪರ್ ವಿತರಕಗಳನ್ನು ಸ್ಥಾಪಿಸಲಾಯಿತು. ಜನರು ಹೆಚ್ಚು ಪೇಪರ್ ಬಳಸುವುದನ್ನು ಪಡೆಯುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು.
ಪ್ರತಿಯೊಬ್ಬರಿಗೂ ನಿಗದಿತ ಪ್ರಮಾಣದಲ್ಲಿ ಮಾತ್ರವೇ ಟಾಯ್ಲೆಟ್ ಪೇಪರ್ ಬಳಕೆಗೆ ಅವಕಾಶ ನೀಡಲಾಗಿತ್ತು. ಹೆಚ್ಚು ಪೇಪರ್ ಬಳಸಿದ್ದರೆ ಮತ್ತೊಮ್ಮೆ ಪಡೆಯಲು ಅವರು 9 ನಿಮಿಷಗಳ ಕಾಲ ಕಾಯಬೇಕಿತ್ತು. ಸದ್ಯ ಈಗ ಈ ಕ್ಯೂಆರ್ ಕೊಡ್ ಟಾಯ್ಲೆಟ್ ಪೇಪರ್ ವೈರಲ್ ಆಗುತ್ತಿದೆ. ಹಾಗೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಹಿಳೆಯೊಬ್ಬರು ಈ ಟಾಯ್ಲೆಟ್ ಬಳಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿವೆ.



Click it and Unblock the Notifications