Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗಡ್ಡ ಬಿಟ್ಟಿರುವ ಹುಡುಗ ನಮಗೆ ಬೇಡ: ಬೋರ್ಡ್ ಹಿಡಿದು ಬೀದಿಗಿಳಿದ ಯುವತಿಯರು!
ನೀವು ನೋ ಶೇವ್ ನವೆಂಬರ್ ಆಚರಣೆಯನ್ನ ನೀವೆಲ್ಲಾ ಕೇಳಿರಬಹುದು. ಅಂದ್ರೆ ನವೆಂಬರ್‌ನಲ್ಲಿ ಶೇವಿಂಗ್, ಟ್ರಿಮ್ಮಿಂಗ್ ಮಾಡದೆ ಇರುವ ಒಂದು ಅಭಿಯಾನವಾಗಿದೆ, ಪಾಶ್ಚಾತ್ಯ ಸಮುದಾಯದಲ್ಲಿ ಈ ಆಚರಣೆಯ ಶಿಸ್ತು ಬದ್ಧವಾಗಿ ಜಾರಿಯಲ್ಲಿದೆ. ಏಕೆಂದರೆ ಇದರಿಂದ ಆರೋಗ್ಯಕರ ಲಾಭಗಳು ಕೂಡ ಇದೆ ಅನ್ನೋದು ಆ ಸಮುದಾಯದ ವಾದವಾಗಿದೆ.
ಆದ್ರೆ ಇಲ್ಲೊಂದು ಕಡೆ ಯುವತಿಯರೆಲ್ಲಾ ಸೇರಿ ಶೇವಿಂಗ್ ಮಾಡದೇ ಇರುವ ಕ್ಲೀನ್ ಶೇವ್ ಮಾಡದ ಯುವಕನನ್ನು ಮದುವೆಯಾಗುವುದಿಲ್ಲ ಲವ್ ಮಾಡುವುದಿಲ್ಲ ಎಂದು ಪ್ರತಿಭಟಿಸಿರುವ ಘಟನೆಯೂ ವರದಿಯಾಗಿದೆ. ಇಂದೋರ್‌ನಲ್ಲಿ ಇಂತಹದೊಂದು ಮೆರವಣಿಗೆ ನಡೆದಿರುವುದು ಭಾರೀ ವೈರಲ್ ಆಗುತ್ತಿದೆ.

ಈ ಮೆರವಣಿಗೆಯಲ್ಲಿ ಕ್ಲೀನ್ ಶೇವ್ ಮಾಡದ ಹುಡುಗರನ್ನು ಮದುವೆಯಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನ ಯುವತಿಯರ ಗುಂಪು ಇತ್ತೀಚೆಗೆ ಕ್ಲೀನ್ ಶೇವ್ ಮಾಡಿದ ಬಾಯ್‌ಫ್ರೆಂಡ್‌ಗಳನ್ನು ಹೆಚ್ಚಾಗಿ ಇಷ್ಟೊಡುತ್ತಿದ್ದಾರೆ. ವಿಡಿಯೋದಲ್ಲಿ ಯುವತಿಯರು ಗಡ್ಡ ಹಟಾವೋ, ನೋ ಕ್ಲೀನ್ ಶೇವ್, ನೋ ಲವ್ ಎಂದು ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು.
ಈ ಮೆರವಣಿಗೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಹಲವು ರೀತಿಯ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ಅದ್ರೆ ಯಾವುದೋ ಕಂಪನಿ ತಮ್ಮ ಬ್ರಾಂಡ್‌ನ ಪ್ರಚಾರಕ್ಕಾಗಿ ಈ ರೀತಿ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. ಆದ್ರೆ ಇದು ಯುವತಿಯರು ತಮ್ಮ ಸ್ವ ಪ್ರೇರಣೆಯಿಂದ ಮೆರವಣಿಗೆ ನಡೆಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
ಆದ್ರೆ ಈ ರೀತಿಯ ಮೆರವಣಿಗೆ ಮಾಡಲು ನಿಜವಾದ ಕಾರಣ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ಆದ್ರೆ ಯುವತಿಯರಿಗೆ ಹುಡುಗರ ಗಡ್ಡದಿಂದ ಏನು ಸಮಸ್ಯೆ? ಗಡ್ಡ ಬಿಟ್ಟಿರುವ ಹುಡುಗರನ್ನು ಏಕೆ ಮದುವೆಯಾಘುವುದಿಲ್ಲ. ಇದರ ಹಿಂದಿರುವ ಅವರ ಉದ್ದೇಶವೇಣು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಹಾಗೆ ಯುವತಿಯರು ಏಕೆ ಗಡ್ಡದಿಂದ ನೊಂದಿದ್ದಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಹಿಂದೆ ಸ್ವಾತಂತ್ರ್ಯಕ್ಕಾಗಿ ಪ್ರತಿಭಟಿಸುವುದು ಈಗ: ಕ್ಲೀನ್ ಶೇವ್‌ಗಾಗಿ ಪ್ರತಿಭಟಿಸಿ ನಾವು ಬಹಳ ದೂರ ಬಂದಿದ್ದೇವೆ ಎಂದು ಒಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಹಾಗೆ ಇದೊಂದು ಸಣ್ಣ ವ್ಯಾಯಾಮ ಅಷ್ಟೇ ಅವರ ಈ ಬೇಡಿಕೆ ಎಂದಿಗು ನಿಜವಾಗುವುದಿಲ್ಲ. ಬಹುತೇಕ ಯುವತಿಯರು ಮದುವೆಯಾಗದೆ ಉಳಿಯುತ್ತಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದೆಲ್ಲದರ ನಡುವೆ ಯುವತಿರು ಈ ರೀತಿ ಬೋರ್ಡ್‌ಗಳ ಹಿಡಿದು ಮೆರವಣಿಗೆ ಏಕೆ ಹೊರಟ್ಟಿದ್ದರು. ಅದರ ಉದ್ದೇಶವೇನು ಎಂಬುದು ತಿಳಿದುಬಂದಿಲ್ಲ.
ನವೆಂಬರ್‌ನಲ್ಲಿ ಗಡ್ಡ ಏಕೆ ತೆಗೆಯಬಾರದು?
ನೋ ಶೇವ್ ನವೆಂಬರ್ ಅಂದರೆ ನವೆಂಬರ್ ತಿಂಗಳಲ್ಲಿ ಶೇವಿಂಗ್, ಕಟ್ಟಿಂಗ್ ಏನು ಮಾಡದೆ ಇರುವ ಅಭಿಯಾನವಾಗಿದೆ, ಇದೊಂದು ಒಳ್ಳೆಯ ಕಾರಣಕ್ಕೆ ಆರಂಭಗೊಂಡಿದ್ದ ಅಭಿಯಾನ. ಒಂದು ತಿಂಗಳ ಕಾಲ ಶೇವಿಂಗ್, ಕಟ್ಟಿಂಗ್ ಇಲ್ಲದೆ ಅದರಿಂದ ಉಳಿದ ಹಣವನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ದೇಣಿಗೆ ನೀಡುವಂತಹ ಅತ್ಯಂತ ಪವಿತ್ರ ಕೆಲಸ ಇದಾಗಿದೆ.
ಪಾಶ್ಚಾತ್ಯ ದೇಶದಲ್ಲಿ ಈ ಆಚರಣೆ ಅತ್ಯಂತ ಕಠಿಣ ನಿಯಮಗಳ ಅನುಸರಿಸುವ ಮೂಲಕ ಮಾಡುತ್ತಾರೆ. ಅವರು ಹೆಚ್ಚಾಗಿ ತಿಂಗಳ ಕೊನೆಯಲ್ಲಿ ತಮ್ಮ ಕೂದಲನ್ನು ದಾನವಾಗಿ ನೀಡುವ ಆಚರಣೆಯೂ ಕೂಡ ಇದೆ.
ಗಡ್ಡ ಬಿಡುವುದು ಚರ್ಮಕ್ಕೆ ಒಳ್ಳೆಯದು
ಇನ್ನು ನವೆಂಬರ್‌ನಲ್ಲಿ ಚಳಿಗಾಲ ವಿಪರೀತವಾಗಿರುತ್ತದೆ. ಪಾಶ್ಚಿಮಾತ್ಯ ದೇಶದಲ್ಲೂ ಕೂಡ ಚಳಿಯ ಕಾಲ. ಈ ಕಾಲದಲ್ಲಿ ದಟ್ಟವಾಗಿ ಗಡ್ಡ ಬಿಡುವುದು ನಿಮ್ಮ ಮುಖದ ಚರ್ಮಕ್ಕೆ ತೇವಾಂಶ ಗಾಳಿಯಿಂದ ತಡೆಯಲು ಸಹಕಾರಿಯಾಗುತ್ತದೆ. ಬೇಗ ಚರ್ಮ ಒಣಗುವುದು, ಚಳಿಯಲ್ಲಿ ಒಡೆಯುವುದು ಉಂಟಾಗುವುದಿಲ್ಲ. ಹೀಗಾಗಿ ಹೆಚ್ಚಿನ ಜನ ನೋ ಶೇವ್ ನವೆಂಬರ್ ಆಚರಿಸುತ್ತಾರೆ.



Click it and Unblock the Notifications
