Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೀತಾ ಅಂಬಾನಿ ಬಳಿ ಇದೆ ಭಾರತದ ದುಬಾರಿ ಕಾರು..! ಅದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರನ ವಿವಾಹ ಸದ್ಯ ವಿಶ್ವದ ಗಮನ ಸೆಳೆಯುತ್ತಿದೆ. ದೇಶದ ಐಷಾರಾಮಿ ಮದುವೆ ಇದಾಗಿದ್ದು, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಈ ಮದುವೆ ಮಾಡಲಾಗುತ್ತಿದೆ. ಈ ಮದುಗೆಗೆ ವಿಶ್ವದ ಶ್ರೀಮಂತರು, ಖ್ಯಾತನಾಮರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಸಹ ಇಡೀ ವಿಶ್ವದ ಗಮನ ಸೆಳೆದಿತ್ತು, ಅದರ ಅದ್ದೂರಿತನದಿಂದ ಹಾಗೂ ಸಾಮಾರಂಭಕ್ಕೆ ಆಗಮಿಸಿದ್ದ ಗಣ್ಯರ ಮೂಲಕ ಇಡೀ ವಿಶ್ವ ಈ ವಿವಾಹದತ್ತ ತಿರುಗಿ ನೋಡಿತ್ತು. ಈ ವೇಳೆ ವಧು ವರರಿಗಿಂತಲೂ ಮುಕೇಶ್ ಅಂಬಾನಿ ಹಾಗು ನೀತಾ ಅಂಬಾನಿ ಸುದ್ದಿಯಾಗಿದ್ದರು.

ಹೌದು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಧರಿಸಿದ್ದ ಬಟ್ಟೆ ಚಪ್ಪಲಿ, ಶೂ, ಆಭರಣೆ ಹೀಗೆ ಪ್ರತಿಯೊಂದು ವಿಚಾರವಾಗಿ ಅವರು ಸುದ್ದಿಯಾಗಿದ್ದರು. ಅದರಲ್ಲೂ ನೀತಾ ಅಂಬಾನಿ ಧರಿಸಿದ್ದ ಪಚ್ಚೆ ಹರಳಿನ ಹಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಹಾರ ಸುಮಾರು 400 ಕೋಟಿ ರೂಪಾಯಿ ಮೌಲ್ಯದ್ದು ಎನ್ನಲಾಗಿತ್ತು.
ಇದರ ಜೊತೆಗೆ ಆಕೆ ಉಟ್ಟಿದ್ದ ಸೀರೆ ಸಹ ಕೋಟಿ ಕೋಟಿ ರೂಪಾಯಿಯದ್ದು ಎಂಬುದು ತಿಳಿದುಬಂದಿತ್ತು. ಆದರೆ ನಿಮಗೆ ಗೊತ್ತಾ ಬರೀ ಆಭರಣ ಮಾತ್ರವಲ್ಲ ಆಕೆ ಐಷಾರಾಮಿ ಕಾರು ಸಹ ಹೊಂದಿದ್ದಾರೆ. ಅದು ಭಾರತದಲ್ಲೇ ಅತ್ಯಂತ ದುಬಾರಿ ಕಾರು ಇದಾಗಿದ್ದು, ಬೇರೆ ಯಾರ ಬಳಿಯೂ ಈ ಕಾರಿಲ್ಲ ಎಂಬುದು ನಿಮಗೆ ಗೊತ್ತಾ?
ನೀತಾ ಅಂಬಾನಿ ಬಳಿ ಇರುವ ಆಡಿ ಎ9 ಕ್ಯಾಮಿಲೋನ್ ಕಾರು ಹೊಂದಿದ್ದಾರೆ. ಈ ಕಾರಿನ ವಿಶೇಷ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ. ಕಾರಿನ ವಿಶೇಷ ಬಿಡಿ ಅದರ ಬೆಲೆ ಕೇಳಿದರೆ ನಿಮಗೆ ತಲೆ ಸುತ್ತು ಬರುವುದು ಖಚಿತ. ಏಕೆಂದರೆ ಈ ಕಾರಿನ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ. ಇದು ಭಾರತದಲ್ಲಿರುವ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆ ಸಹ ಪಡೆದಿದೆ.
ಇದು ಸುಮಾರು 600 ಹಾರ್ಸ್ ಪವರ್ ಮತ್ತು 4.0-ಲೀಟರ್ V8 ಎಂಜಿನ್ ಅನ್ನು ಹೊಂದಿದೆ. ಅದರ ಅಸಾಧಾರಣ ವೈಶಿಷ್ಟ್ಯವೆಂದರೆ ನವೀನ ಎಲೆಕ್ಟ್ರಾನಿಕ್ ಪೇಂಟ್ ಸಿಸ್ಟಮ್, ಅಂದರೆ ಈ ಕಾರು ಊಸರವಳ್ಳಿಯಂತೆ ಬಣ್ಣ ಬದಲಿಸುತ್ತದೆ. ಅಚ್ಚರಿ ಎನಿಸಿದರು ಅತ್ಯವೇ ಕಾರಿನ ಚಾಲಕ ಒಂದು ಬಟನ್ ಒತ್ತಿದರೆ ಸಾಕು ನಿಮಗೆ ಇಷ್ಟವಾದ ಬಣ್ಣಕ್ಕೆ ಈ ಕಾರು ತಿರುಗುತ್ತದೆ. ಇದರ ಬೆಲೆ ಸುಮಾರು 90 ಕೋಟಿ ರೂಪಾಯಿಯಾಗಿದ್ದು, ತೆರಿಗೆ ಸೇರಿದರೆ 100 ಕೋಟಿ ರೂಪಾಯಿ ದಾಟುತ್ತದೆ.
ಇನ್ನು ಮುಕೇಶ್ ಅಂಬಾನಿ ಮನೆಯಲ್ಲಿ ಮತ್ತೊಂದು ದುಬಾರಿ ಕಾರಿದ್ದು, ಇದು ಸಂಪೂರ್ಣ ಬುಲೆಟ್ ಪ್ರೂಫ್ ಆಗಿದೆ. ಇದು ಸುಮಾರು 10 ಕೋಟಿ ಬೆಲೆಯ BMW 760 Li ಆರ್ಮರ್ಡ್ ಕಾರಾಗಿದ್ದು ಇದು Z- ಮಟ್ಟದ ಭದ್ರತಾ ವೈಶಿಷ್ಟ್ಯ ಹೊಂದಿದೆ.
ನೆಕ್ಸ್ಲೆಸ್ ಬೆಲೆ ಬರೋಬ್ಬರಿ 400-500 ಕೋಟಿ
ನೀತಾ ಅಂಬಾನಿ ಪ್ರಿವೆಡ್ಡಿಂಗ್ ಸಮಾರಂಭದ ವೇಳೆ ದುಬಾರಿ ಪಚ್ಚೆಯ ವಜ್ರದ ಆಭರಣಗಳನ್ನು ಧರಿಸಿದ್ದರು. ಅದರಲ್ಲಿ ಎರಡು ದೊಡ್ಡ ಗಾತ್ರದ ಪೆಂಡೆಂಟ್‌ಗಳಿಗೆ ಜೋಡಿಸಲಾದ ಎಮರಾಲ್ಡ್ ಹವಳದ ಒಳಗೊಂಡಿರುವ ಉದ್ದನೆಯ ನೆಕ್ಲೇಸ್ ಅನ್ನು ಧರಿಸಿದ್ದರು, ಜೊತೆಗೆ ಮ್ಯಾಚಿಂಗ್ ಸ್ಟಡ್ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರವನ್ನು ಧರಿಸಿದ್ದರು. ಅನ್‌ಕಟ್ ಡೈಮಂಡ್‌ನಂತೆ ಕಂಡರೂ ಕಸೂತಿ ಕೆಲಸವೂ ಇಡೀ ಆಭರಣದಲ್ಲಿ ಕಾಣುತ್ತಿತ್ತು. ಪಿಒಪಿ ಡೈರೀಸ್‌ನಲ್ಲಿನ ವರದಿಯ ಪ್ರಕಾರ, ನೀತಾ ಅವರ ಆಭರಣಗಳ ಬೆಲೆ ಸುಮಾರು 400-500 ಕೋಟಿ ರೂಪಾಯಿ ಎಂದು ವರದಿಯಾಗಿತ್ತು.



Click it and Unblock the Notifications

