Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಚಿನ್ನ ಲೇಪಿತ ನೀರು ಕುಡಿಯುವ ಅಂಬಾನಿ ಪತ್ನಿ..! ಇದರ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!
ನೀತಾ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಪತ್ನಿಯಾಗಿದ್ದು, ಆಕೆಯ ಆಸ್ತಿ ಸಹ ಕೋಟಿ ಕೋಟಿ ದಾಟಿದೆ. ಹಲವು ಉದ್ಯಮಗಳ ಮುನ್ನಡೆಸುತ್ತಿರುವ ಅವರು ಹಲವು ಬಾರಿ ಸುದ್ದಿಯಾಗಿದ್ದಾರೆ. ಅವರು ಬಳಸುವ ಒಂದೊಂದು ವಸ್ತುಗಳು ಐಷಾರಾಮಿ ವಸ್ತುಗಳಾಗಿದ್ದು, ಐಷಾರಾಮಿ ಬದುಕಿನ ಕಾರಣಕ್ಕೆ ಅವರು ಸುದ್ದಿಯಾಗುತ್ತಾರೆ.
ಇತ್ತೀಚಿಗೆ ಅವರು ಪುತ್ರನ ಪ್ರಿ ವೆಡ್ಡಿಂಗ್ ವೇಳೆ ಧರಿಸಿದ್ದ ವಜ್ರದ ಆಭರಣ ಹಾಗೂ ಸೀರೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಏಕೆಂದರೆ ಈ ಆಭರಣ 400 ಕೋಟಿ ಮೌಲ್ಯ ಹಾಗೂ ಸೀರೆ ಸಹ ಲಕ್ಷ ಲಕ್ಷ ರೂಪಾಯಿ ಬೆಲೆಯದ್ದಾಗಿತ್ತು. ಹೀಗಾಗಿ ಅವರ ಪುತ್ರನ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಎಲ್ಲರ ಕೇಂದ್ರ ಬಿಂದು ಆಗಿದ್ದರು.

ಆದರೆ ಈಗ ಅವರು ಕುಡಿಯುವ ನೀರಿನ ಕಾರಣದಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಏಕೆಂದರೆ ಅವರು ಕುಡಿಯುವ ಒಂದು ಬಾಟಲಿ ನೀರಿನ ಬೆಲೆ ಲಕ್ಷ ಲಕ್ಷ ರೂಪಾಯಿಯದ್ದು ಎಂದು ವರದಿಯಾಗಿದೆ. ಹೌದು ನೀತಾ ಅಂಬಾನಿ ಕುಡಿಯುವ ಒಂದು ಬಾಟಲಿ ನೀರಿಗೆ ಬರೋಬ್ಬರಿ 49 ಲಕ್ಷ ರೂಪಾಯಿ ಎನ್ನಲಾಗಿದೆ.
ಆಕೆ ಚಿನ್ನದ ಲೇಪನವಿರುವ ವಿಶೇಷವಾಗಿ ವಿನ್ಯಾಸಗೊಳಸಲಾಗಿರುವ ಬಾಟಲಿಯಲ್ಲಿ ನೀರು ಕುಡಿಯುತ್ತಾರೆ. ಇದು ಆಕೆಯ ಸೌಂದರ್ಯದ ಗುಟ್ಟಾಗಿದೆ. ಜನಪ್ರಿಯ ಮೆಕ್ಸಿಕನ್ ಡಿಸೈನರ್ ಫರ್ನಾಂಡೋ ಅಲ್ಟಮಿರಾನೊ ವಿನ್ಯಾಸಗೊಳಿಸಿದ ಕಸ್ಟಮೈಸ್ ಮಾಡಿದ ಬಾಟಲಿಯ ಮೂಲಕ ಅವರು ನೀರು ಕುಡಿಯುತ್ತಾರೆ.
ನೀರಿನ ಬಾಟಲಿಯು ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊ ಎ ಮೊಡಿಗ್ಲಿಯಾನಿ ಎಂದು ಹೆಸರಿಸಲಾದ ವಿಶ್ವದ ಅತ್ಯಂತ ದುಬಾರಿ ನೀರನ್ನು ಒಳಗೊಂಡಿದೆ. ನೀರಿನಲ್ಲಿ 24-ಕ್ಯಾರಟ್ ಚಿನ್ನದ ಕಣಗಳು ಮತ್ತು ಫಿಜಿ ಮತ್ತು ಫ್ರಾನ್ಸ್‌ನ ನೈಸರ್ಗಿಕ ಬುಗ್ಗೆಯ ನೀರು ಇರಲಿದೆ. ಐಸ್‌ಲ್ಯಾಂಡ್‌ನ ಹಿಮನದಿ ನೀರು ಮತ್ತು 23-ಕ್ಯಾರಟ್ ಚಿನ್ನದ ಕಣಗಳು ಈ ನೀರಿನಲ್ಲಿದೆ.
ಇದನ್ನು ಕುಡಿದ ನಂತರ, ಇದು ಚರ್ದ ಹೊಳಪು ನೀಡುವ ಜೊತೆಗೆ ಸೌಂದರ್ಯ ವರ್ಧಕವಾಗಿ ಕೆಲಸ ಮಾಡಲಿದೆ. ಇಷ್ಟು ಮಾತ್ರವಲ್ಲದೆ ನೀತಾ ಅಂಬಾನಿ ಅವರ ವಾರ್ಡ್ ರೋಬ್ ಸಂಗ್ರಹ ನೂರಾರು ಮಂದಿಯ ಕನಸಾಗಿರುತ್ತೆ. ಅವರ ಬಟ್ಟೆಯ ಕಲೆಕ್ಷನ್ ಸಹ ಅತ್ಯಂತ ದುಬಾರಿ ಹಾಗು ಐಷಾರಾಮಿ ವಸ್ತುಗಳಿಂದ ಕೂಡಿದೆ.
ದೆ. ಒಮ್ಮೆ, ಅವರು ಭಾರತದ ಮುಂಬೈನಲ್ಲಿ ನಡೆದ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಧರಿಸಿರುವ ತನ್ನ ಆಭರಣದ ತುಂಡುಗಳೊಂದಿಗೆ ತಲೆ ತಿರುಗಿಸಿದಳು. ದಿನಕ್ಕಾಗಿ, ಅವರು ಕೈಮಗ್ಗದ ಸೀರೆಯನ್ನು ಧರಿಸಿದ್ದರು ಮತ್ತು ಅವರ ಪರೋಪಕಾರಿ ಕೆಲಸಕ್ಕಾಗಿ 'ಬ್ಯೂಟಿ ವಿತ್ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್' ಅನ್ನು ಪಡೆದರು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೊದಲ ವಿವಾಹಪೂರ್ವ ಸಮಾರಂಭಗಳಲ್ಲಿ ಅಂತಿಮ ಕಾರ್ಯಕ್ರಮಕ್ಕಾಗಿ, ನೀತಾ ಅಂಬಾನಿ ಅವರು ರಿಲಯನ್ಸ್‌ನ ಮತ್ತೊಂದು ಸಂಸ್ಥೆ ಸ್ವದೇಶ್ ನಿರ್ಮಿತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು. ಜೊತೆಗೆ ಅವರು ಧರಿಸಿದ್ದ ಪಚ್ಚೆ ವಜ್ರದ ಆಭರಣವು 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹಾಗೂ 200ಕ್ಕೂ ಹೆಚ್ಚು ಕ್ಯಾರೆಟ್‌ನ ವಜ್ರ ಹೊಂದಿತ್ತು.
ಈಗ ಪುತ್ರ ಅನಂತ್ ಅಂಬಾನಿಯ 2ನೇ ಪ್ರಿವೆಡ್ಡಿಂಗ್ ಅಂತ್ಯಗೊಂಡಿದ್ದು ಜುಲೈ 12ರಂದು ಇಬ್ಬರ ವಿವಾಹ ಮಹೋತ್ಸವ ನಡೆಯಲಿದೆ. ಪ್ರಿ ವೆಡ್ಡಿಂಗ್‌ಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿರುವ ಕುಟುಂಬ ಮದುವೆ ಸಮಾರಂಭಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಿದೆ. ಈ ಐಷಾರಾಮಿ ಮದುವೆಯ ಕುರಿತು ಇಡೀ ವಿಶ್ವದ ಗಮನ ನೆಟ್ಟಿದೆ.



Click it and Unblock the Notifications
