Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಬಜೆಟ್ 2025: ಬಿಹಾರ್ ಬಜೆಟ್ ಎಂದು ಮೀಮ್ಸ್‌ಗಳ ಸುರಿಮಳೆ.! ಇಲ್ಲಿವೆ ತಮಾಷೆಯ ಫೋಟೋಸ್..!
ಸಂಸತ್‌ನಲ್ಲಿಂದು 2025-26ನೇ ಬಜೆಟ್ ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ ಮಂಡಿಸಿದ್ದಾರೆ, ಹಾಗೆ 8ನೇ ಬಾರಿ ಬಜೆಟ್ ಮಂಡಿಸಿ ಅತ್ಯಂತ ಸುದೀರ್ಘ ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 50 ಲಕ್ಷ ಕೋಟಿ ರೂಪಾಯಿಯ ಬಜೆಟ್ ಇದು ಎನ್ನಲಾಗಿದೆ. ಹಾಗೆ ಈ ಬಾರಿಯ ಬಜೆಟ್ ಎಲ್ಲಾ ಅಂಶಗಳಿಂದ ಮೆಚ್ಚುಗೆಗೂ ಪಾತ್ರವಾಗಿದೆ.
ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಬಜೆಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೆಲವೊಂದು ರಾಜ್ಯಗಳ ಕಡಗಣನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅದರಲ್ಲೂ ದಕ್ಷಿಣ ರಾಜ್ಯಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ. ಹಾಗೆ ಈ ಬಜೆಟ್‌ನಲ್ಲಿ ಬಿಹಾರ ಸಿಂಹಪಾಲು ಪಡೆದುಕೊಂಡಿದೆ.

ಬಿಹಾರಕ್ಕೆ ಕೇಂದ್ರ ಸರ್ಕಾರ ಈ ಬಾರಿ ಬರಪೂರ ಕೊಡುಗೆ ನೀಡಿದೆ. ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಕೂಡ ಇದೆ, ಹೀಗಾಗಿ ಈ ಬಜೆಟ್ ಈ ಚುನಾವಣೆ ಪೂರಕವಾಗಿ ಮಂಡಿಸಲಾಗಿದೆ ಎಂಬ ಚರ್ಚೆ ಕೂಡ ಹುಟ್ಟುಹಾಕಿದೆ. ಹಾಗೆ ಅವರು ಈ ಸೀರೆಯ ವಿಶೇಷತೆಯೆಂದರೆ ಪದ್ಮಪ್ರಶಸ್ತಿ ವಿಜೇತೆ ಬಿಹಾರದ ದುಲಾರಿ ದೇವಿ ಗೌರವಾರ್ಥವಾಗಿ ನಿರ್ಮಲಾ ಸೀತಾರಾಮನ್ ಅವರು ಈ ಸೀರೆ ಧರಿಸಿದ್ದರು.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಜೆಟ್ ಕುರಿತಂತೆ ಮೀಮ್‌ಗಳ ಸುರಿಮಳೆ ಎದ್ದಿದೆ. ಇದು ಭಾರತದ ಬಜೆಟ್ ಅನ್ನುವುದಕ್ಕಿಂತ ಬಿಹಾರದ ಬಜೆಟ್ ಎಂದು ಹಲವು ಸಂಬೋಧಿಸಿದ್ದಾರೆ. ಹಾಗೆ ಸಾಮಾಜಿಕ ಜಾಲತಾಣದಲ್ಲಿ ಈ ಮೀಮ್ಸ್‌ಗಳು ಹರಿದಾಡುತ್ತಿವೆ. ನಾವು ಕೆಲವೊಂದನ್ನು ಆಯ್ಕೆ ಮಾಡಿ ನಿಮ್ಮ ಮುಂದಿಟ್ಟಿದ್ದೇವೆ ನೋಡಿ.
ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಈ ಬಜೆಟ್ ಅತ್ಯಂತ ದೊಡ್ಡ ಘೋಷಣೆ ಎನ್ನಲಾಗಿದೆ. ಬಿಹಾರದಲ್ಲಿ ವಾಯುಯಾನ ಸೇವೆ ವಿಸ್ತರಿಸುವ ಭಾಗವಾಗಿ ಪರಿಚಯಿಸಲಾಗಿದೆ. ಇದರ ಜೊತೆಗೆ ಪಾಟ್ನಾ ವಿಮಾನ ನಿಲ್ದಾಣದ ವಿಸ್ತರಣೆಯು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲಿದೆ ಎಂದು ಸೀತಾರಾಮನ್ ಹೇಳಿದರು.
ಹಾಗೆ ಬಿಹಾರದ ಕೃಷಿಕರಿಗೆ ಬಂಪರ್ ಕೊಡುಗೆಗಳ ಘೋಷಿಸಿದರು, ಮಾರುಕಟ್ಟೆ, ಉಗ್ರಾಣ, ಸಂಶೋದನಾ ಕೇಂದ್ರಗಳು ಸೇರಿ ಹಲವು ರೀತಿಯ ಕೊಡುಗೆ ನೀಡಲಾಗಿದೆ.
ಕೃಷಿಯಲ್ಲಿ, ನೀರಾವರಿ ಮತ್ತು ನೀರಿನ ನಿರ್ವಹಣೆಯನ್ನು ಹೆಚ್ಚಿಸಲು, ಸ್ಥಳೀಯ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರ ಮಿಥಿಲಾಂಚಲ್‌ನಲ್ಲಿರುವ ಕೋಸಿ ಕಾಲುವೆ ಯೋಜನೆಗೆ ಹಣಕಾಸು ಒದಗಿಸುತ್ತದೆ. ರೈತ ಉತ್ಪಾದಕರ ಸಂಸ್ಥೆಗಳೊಂದಿಗೆ (FPOs) ಮಂಡಳಿಯು ಸಹಯೋಗ ಹೊಂದಿದ್ದು, ಕೃಷಿ ಪದ್ಧತಿಗಳನ್ನು ಉನ್ನತೀಕರಿಸಲು ತರಬೇತಿ ನೀಡಲು ಹಲವು ಕ್ರಮಕ್ಕೆ ಮುಂದಾಗಲಾಗಿದೆ. ಇದಿಷ್ಟೆ ಅಲ್ಲ ಬಿಹಾರಕ್ಕೆ ಈ ಬಾರಿಯ ಅತೀ ಹೆಚ್ಚು ಅನುದಾನ ಕೂಡ ನೀಡಲಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಮೀಮ್‌ಗಳ ಸುರಿಮಳೆಯಾಗಿದೆ.
ಕೆಲವರು ಇದನ್ನು ಬಿಹಾರ್ ಬಜೆಟ್ ಎಂದು ಕರೆದಿದ್ದಾರೆ. ಹಾಗೆ ಮತ್ತೆ ಕೇಂದ್ರ ಬಜೆಟ್ 2025ರ ನಂತರ ಬಿಹಾರ್ ಬಜೆಟ್ ಎಂದು ಕರೆಯಲಾಗಿದೆ. ಈ ಬಜೆಟ್ ಬಿಹಾರಕ್ಕೆ ಮಾತ್ರ, ಹಾಗಾದ್ರೆ ಕೇಂದ್ರ ಬಜೆಟ್ ಮಂಡನೆ ಯಾವಾಗ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇಂತಹ ಸಾವಿರಾರು ಮೀಮ್‌ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಿಹಾರ ನಾಳೆಯಿಂದ ಹೇಗಿರಲಿದೆ ಎಂಬ ಎಐ ಇಮೇಜ್ ಸಹ ಹಂಚಿಕೊಂಡಿರುವ ಬಳಕೆದಾರರು ಒಂದೇ ದಿನ ಬಿಹಾರ್ ಸಿಂಗಾಪೂರ್‌ನಂತೆ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳ ಹೊಂದಿರುವ ಚಿತ್ರ ಇದಾಗಿದೆ. ಆಗೆ ಉಳಿದ ರಾಜ್ಯಗಳು ನೀರಿನಲ್ಲಿ ಮುಳುಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದು ತಮಾಷೆಯಾಗಿ ಇದೊಂದು ಬಿಹಾರ್ ಬಜೆಟ್ ಎಂದು ಬರೆದಿದ್ದಾರೆ.



Click it and Unblock the Notifications
