Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೀಲ್‌ಚೇರ್‌ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್‌ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
ಹಣ ಯಾರ ಕೈಯಲ್ಲಿ ಏನು ಬೇಕಾದ್ರೂ ಮಾಡಿಸೋ ಶಕ್ತಿ ಇರೋ ದುರಾಸೆಯ ಮೂಲ. ಹಣಕ್ಕಾಗಿ ಜನ ಕೆಲಸಕ್ಕಾದ್ರು ಕೈ ಹಾಕ್ತಾರೆ. ಹಣ ಮಾಡಬೇಕು ಅನ್ನೋದೆ ಮಾನವ ಜೀವನ ಅಂತಿಮ ಗುರಿಯೂ ಆಗಿರುತ್ತೆ. ಇದಕ್ಕಾಗಿ ಕೆಲವರು ಒಳ್ಳೆಯ ಮಾರ್ಗ ಆರಿಸಿಕೊಂಡರೆ ಇನ್ನು ಕೆಲವರು ಅನ್ಯ ದಾರಿ ಹಿಡಿಯುತ್ತಾರೆ.
ಹೇಗಾದರು ಮಾಡಿ ಹಣ ಮಾಡಬೇಕು, ಐಷಾರಾಮಿ ಜೀವನ ಮಾಡಬೇಕು ಅನ್ನೋದೆ ಹಲವರ ಗುರಿಯಾಗಿರುತ್ತೆ. ಇಂತಹ ಮನಸ್ಥಿತಿಯಲ್ಲಿ ಹಣ ಯಾವ ಕೆಲಸ ಬೇಕಾದರು ಮಾಡಿಸಿಬಿಡುತ್ತೆ. ಹಣ ಅಂದ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಆದ್ರೆ ಹಣಕ್ಕಾಗಿ ಹೆಣ ಬ್ಯಾಂಕ್‌ಗೆ ಬಂದಿದ್ದ ಘಟನೆ ಎಲ್ಲಾದ್ರು ಕೇಳಿದ್ದೀರಾ? ಹೌದು ನಿಮಗಿದು ಅಚ್ಚರಿ ಎನಿಸಬಹುದು. ಒಬ್ಬಾಕೆ ಹಣ ಪಡೆಯಲೆಂದು ಹೆಣವನ್ನೇ ಬ್ಯಾಂಕ್‌ಗೆ ತಂದು ನಾಟಕವಾಡಿರುವ ವಿಚಿತ್ರ ಘಟನೆ ಇದು.

ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಮಹಿಳೆಯೊಬ್ಬರು ಬ್ಯಾಂಕ್‌ಗೆ ಬಂದು ಲೋನ್ ಪಡೆಯುವ ಪ್ರಕ್ರಿಯೆಗೆ ಮುಂದಾಗಿದ್ದರು ಆದರೆ ಆಕೆಯ ಹೆಸರಿನಲ್ಲಿ ಅಲ್ಲ ಬದಲಿಗೆ ತನ್ನ ಜೊತೆ ಕರೆತಂದಿದ್ದ ಹೆಣದ ಹೆಸರಿನಲ್ಲಿ. ಹೌದು ಆಕೆ ಬ್ಯಾಂಕ್‌ಗೆ ತನ್ನ ಅಂಕಲ್ ಜೊತೆ ಬಂದಿದ್ದಳು, ಆದರೆ ಆತ ಮೃತಪಟ್ಟು ವೀಲ್ ಚೇರ್ ಮೇಲೆ ಕುಳಿತಿದ್ದ. ಆತ ಹೆಣವೆಂದು ಗೊತ್ತಿದ್ದರೂ ಆಕೆ ಅಂಕಲ್ ಬಳಿ ಲೋನ್ ಅರ್ಜಿಗೆ ಸಹಿ ಹಾಕುವಂತೆ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಇರೋದೇನು?
ವೀಲ್ ಚೇರ್‌ನಲ್ಲಿ ಬ್ಯಾಂಕ್‌ಗೆ ಬರುವ ಮಹಿಳೆಯೊಬ್ಬರು ಲೋನ್ ಫಾರ್ಮ್ ಕೇಳಿ ಪಡೆದು ಅಲ್ಲಿನ ಸಿಬ್ಬಂದಿ ಜೊತೆ ಮಾತಿಗೆ ಮುಂದಾಗಿದ್ದಾಳೆ. ವೀಲ್ ಚೇರ್‌ನಲ್ಲಿದ್ದ ವ್ಯಕ್ತಿಯನ್ನ ತನ್ನ ಸಂಬಂಧಿ ಎಂದು ಆಕರ ಪರಿಚಯ ಮಾಡಿಕೊಳ್ಳುತ್ತಾಳೆ. ಆದರೆ ಬ್ಯಾಂಕ್ ಸಿಬ್ಬಂದಿಗೆ ಅದಾಗಲೇ ವೀಲ್ ಚೇರ್‌ನಲ್ಲಿರುವುದು ಹೆಣ ಎಂದು ತಿಳಿದುಬಂದಿದೆ.
ಆದರೆ ಮಹಿಳೆ ಮಾತ್ರ ಅಂಕಲ್ ನಿಮಗೆ ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ.? ಈ ಫಾರ್ಮ್‌ಗೆ ಸಹಿ ಮಾಡಿ ಎಂದು ಕೇಳುತ್ತಿದ್ದಾಳೆ. ಆತನನ್ನು ಎಬ್ಬಿಸುವ ಯತ್ನ ಮಾಡುತ್ತಿದ್ದಾಳೆ. ಆತ ಹೆಣವಲ್ಲ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ಆಕೆ ಹೆಣವನ್ನು ನೇರವಾಗಿ ಕುಳಿತುಕೊಳ್ಳುವಂತೆ ಹೆಣದ ತಲೆ ಅಲುಗಾಡದಂತೆ ಮಾಡಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಆದರೆ ಈ ವೇಳೆ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಬ್ಯಾಂಕ್‌ಗೆ ಕರೆಸಿದ್ದಾರೆ. ಈ ವೇಳೆ ಪೊಲೀಸರು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಖಚಿತವಾಗಿದೆ. ಹೀಗಾಗಿ ವಂಚನೆ ಎಸಗುವ ಉದ್ದೇಶದಿಂದ ಮಹಿಳೆ ಈ ಯತ್ನಕ್ಕೆ ಮುಂದಾಗಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ.
ತನಿಖೆಯಲ್ಲಿ ಆಕೆ ಸೊಸೆ ಎಂದು ಹೇಳಿಕೊಂಡಿದ್ದಾಳೆ. ಆತ ಮೃತಪಟ್ಟಿರುವುದು ತಿಳಿದಿದ್ದರೂ ಬ್ಯಾಂಕ್‌ನಿಂದ 17,000 ರಾಯಸ್, ( $3,250) ಸಾಲ ಪಡೆಯುವುದು ಆಕೆಯ ಗುರಿಯಾಗಿತ್ತಂತೆ. ಆದರೆ ಆತ ಸತ್ತಿರುವುದು ಆಕೆಗೆ ತಿಳಿದೆಯೇ ಇರಲಿಲ್ಲವಂತೆ. ಬ್ಯಾಂಕ್‌ಗೆ ಕರೆದುಕೊಂಡು ಬಂದ ಮೇಲೆ ಆತ ಮೃತಪಟ್ಟಿದ್ದಾನೆ ಎಂದು ಆಕೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
ವಿಮಾ ಹಣಕ್ಕಾಗಿ ತನ್ನ ಕಾಲನ್ನೇ ಕತ್ತರಿಸಿಕೊಂಡಿದ್ದ ವ್ಯಕ್ತಿ
ಹಣಕ್ಕಾಗಿ ಹೆಣ ತರುವುದು ಒಂದು ಕಡೆಯಾದರೆ ಇಲ್ಲೊಬ್ಬ ವ್ಯಕ್ತಿ ವಿಮಾ ಹಣ ಪಡೆಯಲು ತನ್ನ ಕಾಲನ್ನು ಕತ್ತರಿಸಿಕೊಳ್ಳಲು ಸುಪಾರಿ ನೀಡಿ ವ್ಯಕ್ತಿಯನ್ನು ನೇಮಿಸಿಕೊಂಡಿದ್ದ. ಈ ಘಟನೆ ನಡೆದಿರುವುದು ಅಮೆರಿಕದ ಮಿಸೌರಿ ಪ್ರದೇಶದ ಹೋವೆಲ್ ಕೌಂಟಿಯಲ್ಲಿ ಟ್ರ್ಯಾಕ್ಟರ್ ಹೊಂದಿದ್ದ ಆತ ಹಣಕ್ಕಾಗಿ ಈ ರೀತಿಯ ಯೋಜನೆ ರೂಪಿಸಿದ್ದ ತನ್ನ ಎರಡೂ ಕಾಲುಗಳನ್ನು ಕತ್ತರಿಸಲು ವ್ಯಕ್ತಿಯೊಬ್ಬನಿಗೆ ಹಣ ನೀಡಿ ನೇಮಿಸಿದ. ಬಳಿಕ ಟ್ರ್ಯಾಕ್ಟರ್ ಅಪಘಾತದಲ್ಲಿ ಕಾಲು ಕಳೆದುಕೊಂಡಂತೆ ಪ್ಲಾನ್ ಮಾಡಿದ್ದ.
ವಿಲೋ ಸ್ಪ್ರಿಂಗ್ಸ್‌ನ 60 ವರ್ಷದ ವ್ಯಕ್ತಿಯೊಬ್ಬರು ಬ್ರಷ್ ಹಾಗ್ (ಟ್ರ್ಯಾಕ್ಟರ್ ಹಿಂದೆ ಇರುವ ರೋಟರಿ) ಅಪಘಾತದಿಂದ ಬಳಲುತ್ತಿದ್ದ ನಂತರ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ರೋಟರಿಗೆ ಸಿಲುಕಿ ಕಾಲು ಕಳೆದುಕೊಂಡಿರುವುದಾಗಿ ಆತ ಹೇಳಿಕೊಂಡಿದ್ದ. ಆದರೆ ಇದೊಂದು ವಿಮಾ ಪಾಲಿಸಿ ಹಣಕ್ಕೆ ಮಾಡಿದ ಪ್ಲಾನ್ ಎಂದು ಪೊಲೀಸರ ತನಿಖೆ ವೇಳೆ ಬಯಲಾಗಿತ್ತು. ಆತನನ್ನು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.



Click it and Unblock the Notifications
