Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ದಂಪತಿಗೆ ಮೀನಿಗೆ ಗಾಳ ಹಾಕಿದಾಗ ಸಿಕ್ತು ಬ್ಯಾಗ್ ತುಂಬಾ ದುಡ್ಡು, ಅದೃಷ್ಟ ಅಂದರೆ ಇದೆ ಅಲ್ವಾ?
ಅದೃಷ್ಟ ಯಾರಿಗೆ ಯಾವಾಗ ಅದೃಷ್ಟ ಒಲಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನ್ಯೂಯಾರ್ಕ್‌ನ ದಂಪತಿಗೆ ಕೆರೆ ಕಂಡರೆ ಇಬ್ಬರು ಜೊತೆಯಾಗಿ ಹೋಗಿ ಮೀನಿಗೆ ಗಾಳ ಹಾಕಲು ತೀರ್ಮಾನಿಸುತ್ತಾರೆ, ಆದರೆ ಮೀನಿಗೆ ಗಾಳ ಹಾಕಿದವರೇ ಲಕ್ಷಗಟ್ಟಲೆ ಹಣ ದೊರೆಯುತ್ತದೆ ಎಂಬ ಚಿಕ್ಕ ಕಲ್ಪನೆಯೂ ಇರಲಿಲ್ಲ, ಅದೃಷ್ಟ ಅಂದರೆ ಹೀಗೆ ಅಲ್ವಾ?
ಆ ದಂಪತಿ ವಿಹಾರಕ್ಕೆಂದು ಹೋಗಿದ್ದರು, ಅಲ್ಲಿಯ ಕೆರೆಯಲ್ಲಿ ಮೀನು ಹಿಡಿಯುವ ಎಂದು ತೀರ್ಮಾನಿಸಿ ಗಾಳ ಹಾಕುತ್ತಾರೆ, ಮೀನಿಗೆ ಗಾಳ ಹಾಕಿದರೆ ಗಾಳಕ್ಕೆ ಮೀನು ಬದಲು ಒಂದು ಬ್ಯಾಗ್ ಸಿಕ್ಕಿಕೊಳ್ಳುತ್ತದೆ, ಅದರಲ್ಲಿ ಏನಿದೆ ಎಂದು ನೋಡುವ ಕುತೂಹಲದಿಂದ ಆ ಬ್ಯಾಗ್ ಅನ್ನು ಎಳೆಯುತ್ತಾರೆ.

ನಂತರ ಬ್ಯಾಗ್ ತೆಗೆದು ನೋಡಿದವರಿಗೆ ದಿಗ್ಭ್ರೆಮೆ ಆಯ್ತು, ಏಕೆಂದರೆ ಅದರಲ್ಲಿ ಕಂತೆ ಕಂತೆ ಹಣ ಇತ್ತು, ಆ ಬ್ಯಾಗ್‌ನಲ್ಲಿ ಇದ್ದದ್ದು ಬರೋಬರಿ 83 ಲಕ್ಷ. ಯಾರಾದರೂ ಕದ್ದ ಹಣವಿರಬಹುದು ಎಂದು ಅವರು ಈ ವಿಷಯವನ್ನು ಪೊಲೀಸರಿಗೆ ತಿಳಿಸುತ್ತಾರೆ, ಆದರೆ ಪೊಲೀಸರು ಆ ಹಣವನ್ನು ಅವರಿಗೇ ಕೊಟ್ಟಿದ್ದಾರೆ.
ನ್ಯೂಯಾರ್ಕ್‌ನ ಜೇಮ್ಸ್ ಕೇನ್, ಬಾರ್ಬಿ ಅಗೋಸ್ಟಿನಿ ದಂಪತಿಗೆ ಈ ಅದೃಷ್ಟ ಒಲಿದಿದ್ದು ಇದೀಗ ಈ ಸುದ್ದಿ ವೈರಲ್ ಆಗುತ್ತಿದೆ, ಆ ಕೆರೆಯಲ್ಲಿ ಮೀನಿಗಾಗಿ ಬಲೆ ಹಾಕಿದವರು ಈ ಅದೃಷ್ಟ ನನಗೆ ಒದಗಿ ಬರಬಾರದಿತ್ತಾ ಎಂದು ಯೋಚಿಸುತ್ತಿರಬಹುದು ಅಲ್ವಾ?
ಇಬ್ಬರಿಗೆ ಮೀನು ಹಿಡಿಯುವುದು ಹವ್ಯಾಸವಾಗಿತ್ತು
ಇಬ್ಬರು ತಮ್ಮ ಫ್ರೀ ಟೈಮ್‌ನಲ್ಲಿ ಮೀನಿಗೆ ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಇವರಲ್ಲಿ ಇತ್ತು, ಹಾಗಾಗಿ ನ್ಯೂಯಾರ್ಕ್‌ನ ಆ ಕೆರೆಯಲ್ಲಿ ಮೀನು ಹಿಡಿಯುವ ಎಂದು ಗಾಳ ತಯಾರಿಸಿ ಕೆರೆಯ ನೀರಿಗೆ ಗಾಳ ಹಾಕಿ ಮೀನು ಸಿಕ್ಕಾಕಿಕೊಳ್ಳಬಹುದು ಎಂದು ಕಾಯುತ್ತಾರೆ.
ಆದರೆ ಮೀನು ಮಾತ್ರ ಸಿಗಲ್ಲ, ಗಾಳ ಬೇರೆ ಕಡೆ ಹಾಕೋಣ ಎಂದರೆ ಅದರಲ್ಲಿ ಒಂದು ಬ್ಯಾಗ್ ಸಿಕ್ಕಾಕಿಕೊಂಡಿದೆ, ಅದನ್ನು ನೋಡಿದಾಗ ಅವರಿಗೆ ಕುತೂಹಲ, ಅದರಲ್ಲಿ ಏನಿದೆ ಎಂದು ನೋಡುವ ಎಂದು ಬ್ಯಾಗ್‌ನ ಜಿಪ್ ತೆಗೆದವರಿಗೆ ತಮ್ಮ ಕಣ್ಣುಗಳನ್ನೇ ನಂಬಲೇ ಸಾಧ್ಯವಾಗಲಿಲ್ಲ, 100 ಅಮೆರಿಕನ್ ಡಾಲರ್ ನೋಟುಗಳು ಆ ಬ್ಯಾಗ್‌ನಲ್ಲಿ ಪತ್ತೆಯಾಯ್ತು..
ಯಾರೋ ಕದ್ದ ಹಣವಾಗಿರಬಹುದು, ಸಿಕ್ಕಾಕಿಕೊಳ್ಳುವ ಭಯದಲ್ಲಿ ಕೆರೆಗೆ ಎಸೆದಿರಬಹುದು ಎಂದು ಪೊಲೀಸರಿಗೆ ತಿಳಿಸಲಾಯ್ತು, ಅದರೆ ಯಾವುದೇ ಕಳ್ಳತನ ಬಗ್ಗೆ ಪೊಲೀಸ್ ಸ್ಟೇಷನ್‌ಗೆ ದೂರು ಬಂದಿರಲಿಲ್ಲ, ಯಾರು ಬ್ಯಾಗ್ ಎಸೆದಿದ್ದಾರೆ ಎಂಬುವುದು ಕೂಡ ಸಿಸಿಟಿವಿಯಲ್ಲಿ ಇಲ್ಲ ಹಾಗಾಗಿ ಈ ಹಣವನ್ನು ದಂಪತಿಗೇ ಕೊಟ್ಟಿದ್ದಾರೆ ಪೊಲೀಸರು.
ಅದೃಷ್ಟ ಎಂಬುವುದು ಹೀಗೆ ಅಲ್ವಾ?
ಇವರಿಗೆ ಅದೃಷ್ಟ ಒಲಿದಿದೆ, ಹಾಗಾಗಿ ಈ ಬ್ಯಾಗ್ ಇವರಿಗೆ ಸಿಕ್ಕಿದೆ, ಒಂದು ವೇಳೆ ಅದು ಯಾವುದೋ ಬ್ಲ್ಯಾಕ್ ಹಣ ಆಗಿರಬಹುದು ಹಾಗಾಗಿ ಆ ಹಣ ನನ್ನದೆಂದು ಯಾರೂ ಬಂದಿಲ್ಲ, ಏನೇ ಆಗಲಿ ಇವರಿಗೆ ಮಾತ್ರ ಬಂಪರ್ ಲಾಟರಿ ಹೊಡೆದಿದೆ..... ಇದೀಗ ನ್ಯೂಯಾರ್ಕ್ ಬೇರೆ ರಾಷ್ಟ್ರಗಳಲ್ಲಿಯೂ ಈ ಸುದ್ದಿ ಗಮನ ಸೆಳೆದಿದೆ.



Click it and Unblock the Notifications
