Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
11 ಎಕರೆ ಭೂಮಿಯ ಬರೀ 38 ಜನರು ವಾಸುತ್ತಿರುವ ದೇಶವಿದು! ಹೊಸ ವರ್ಷಕ್ಕೆ ಇಲ್ಲಿಗೆ ಹೋಗಬೇಕೆಂದರೆ ಪಾಲಿಸಲೇಬೇಕು ಈ ರೂಲ್ಸ್
ವಿಶ್ವದ ಹಲವು ರಾಷ್ಟಗಳಿಗೆ ಪ್ರವಾಸಕ್ಕೆ ತೆರಳಬೇಕು ಎಂಬುದು ಹಲವರ ಕನಸಾಗಿರುತ್ತೆ. ಅದ್ರಲ್ಲೂ ಹೊಸ ವರ್ಷದಿಂದ ಹೊಸದೇನಾದರು ಮಾಡಬೇಕು ಎನ್ನುವವರಿಗೆ ಈ ದೇಶ ಒಳ್ಳೆಯ ಥ್ರಿಲ್ ನೀಡಲಿದೆ.
ನೀವೇನಾದ್ರು ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಹೋಗುವ ಹವ್ಯಾಸ ಬೆಳೆಸಿಕೊಂಡಿದ್ದರೆ ನಾವೀಗ ಹೇಳುವ ಈ ಪುಟ್ಟ ದೇಶಕ್ಕೊಮ್ಮೆ ಭೇಟಿ ನೀಡಿ. ಅಮೆರಿಕದೊಳಗಿರುವ ಈ ಪುಟ್ಟ ದೇಶದ ಹೆಸರು 'ಮೊಲೋಶಿಯಾ'. ವಿಶೇಷವೆಂದರೆ ಈ ದೇಶದ ಒಟ್ಟು ಜನಸಂಖ್ಯೆ 38 ಮಾತ್ರ. ಹೌದು ಕೇವಲ 38 ಮಂದಿ ಈ ದೇಶದ ಪೌರತ್ವ ಪಡೆದಿದ್ದಾರೆ. ಹಾಗಾದ್ರೆ ಈ ಪುಟ್ಟ ದೇಶದ ವಿಶೇಷವೇನೆಂದು ನೋಡಿ.

ಸುಮಾರು 11 ಎಕರೆ ಸುತ್ತಳತೆಯಲ್ಲಿರುವ ಈ ಪುಟ್ಟ ದೇಶಕ್ಕೆ ವರ್ಷಕ್ಕೆ ಬೆರಳೆಣಿಕೆಯ ಮಂದಿ ಮಾತ್ರ ಪ್ರವಾಸ ಕೈಗೊಳ್ಳುತ್ತಾರೆ. ಇದಿಷ್ಟೇ ಅಲ್ಲ ಈ ದೇಶ ಹತ್ತು ಹಲವು ವಿಚಿತ್ರಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಮೇ 26 1977ರಲ್ಲಿ ಮೊಲೋಶಿಯಾ ಉದಯವಾಯಿತು. ಪೋರ್ಟ್‌ಲ್ಯಾಂಡ್ ಬಳಿ ಈ ಪುಟ್ಟ ದೇಶ ಉದಯವಾಗಿತ್ತು. ಈ ರಾಷ್ಟ್ರವು 'ಪ್ರಜಾಪ್ರಭುತ್ವ' ಘೋಷಿಸಿಕೊಂಡಿದ್ದರೂ, ಅಧ್ಯಕ್ಷ ಕೆವಿನ್ ಬಾಗ್ 1995 ರಲ್ಲಿ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದ, ಇದರಿಂದಾಗಿ ರಾಷ್ಟ್ರದಲ್ಲಿ ಮಿಲಿಟರಿ ಸರ್ವಾಧಿಕಾರ ಘೋಷಣೆಯಾಗಿತ್ತು. ಇಲ್ಲಿರೋದು ಅವನೊಬ್ಬನೇ ಸೈನಿಕ, ರಾಜ, ದಂಡಾಧಿಕಾರಿ ಎಲ್ಲವೂ.
ಈರುಳ್ಳಿ-ಸೊಪ್ಪು ತಿಂದರೆ ಜೈಲು ಗ್ಯಾರಂಟಿ
ಈ ಪುಟ್ಟ ದೇಶದಲ್ಲಿ ಚಿತ್ರ ವಿಚಿತ್ರ ನಿಯಮಗಳು, ಕಟ್ಟುಪಾಡುಗಳಿವೆ. ಈ ನಿಯಮಗಳ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ. ಇಲ್ಲಿರುವ ಒಟ್ಟು 38 ಮಂದಿ ಜನರ ಪೈಕಿ ಮೂರು ನಾಯಿಗಳು ಎಂದು ಅಲ್ಲಿನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಹಾಗೆ ಈ ದೇಶದೊಳಗೆ ಈರುಳ್ಳಿ, ಯಾವುದೇ ಸೊಪ್ಪು ತರುವುದು ಅಪರಾಧವಾಗಿದ್ದು, ಒಂದು ವೇಳೆ ನೀವು ಈರುಳ್ಳಿ-ಸೊಪ್ಪು ತಿಂದರೆ ಅಥವಾ ಅದರ ಜೊತೆ ಕಾಣಿಸಿಕೊಂಡರೆ ಜೈಲು ಕಟ್ಟಿಟ್ಟಬುತ್ತಿ.
ಪ್ಲಾಸ್ಟಿಕ್, ಸೇಲ್ಸ್‌ಮ್ಯಾನ್ ಸಹ ಬ್ಯಾನ್
ಈ ಪುಟ್ಟ ದೇಶದಲ್ಲಿ ಹಲವಾರು ವಸ್ತುಗಳು ನಿಷೇಧಕ್ಕೊಳಗಾಗಿವೆ. ಈರುಳ್ಳಿ, ಸೊಪ್ಪಿನ ಜೊತೆಗೆ ಸೇಲ್ಸ್‌ಮನ್, ಪ್ಲಾಸ್ಟಿಕ್ ಚೀಲಗಳು, ಮಿಷನರಿಗಳು, ಕ್ಯಾಟ್ ಫಿಶ್, ಪ್ರಕಾಶಮಾನವಾದ ಲೈಟ್ ಬಲ್ಬ್, ಕಡಲ ಸಿಂಹ, ತಂಬಾಕು, ಮದ್ದುಗುಂಡುಗಳು, ಸ್ಫೋಟಕಗಳು, ಬಂದೂಕು, ಡ್ರಗ್ಸ್ ಸಹ ಈ ದೇಶದಲ್ಲಿ ನಿಷೇಧಕ್ಕೊಳಗಾಗಿವೆ.
ಈ ದೇಶದ ನಿಯಮವನ್ನು ಯಾವುದೇ ಪ್ರವಾಸಿಗರು ಸಹ ಮುರಿದರು ಅವರಿಗೆ ಜೈಲು ಖಾಯಂ. ಪ್ರಜಾಪ್ರಭುತ್ವ ಘೋಷಿಸಿಕೊಂಡ ಬಳಿಕವೂ ರಾಜನ ಸರ್ವಾಧಿಕಾರತ್ವದಲ್ಲಿ ಈ ನಿಯಮಗಳು ಜಾರಿಯಾಗಿವೆ. ಸರ್ವಾಧಿಕಾರಿ ಕೆವಿನ್ ಬಾಗ್ ಈರುಳ್ಳಿ ಸೇವಿಸದ ಕಾರಣ ದೇಶದಲ್ಲಿ ಈರುಳ್ಳಿ ಬ್ಯಾನ್ ಮಾಡಲಾಗಿದೆ ಅನ್ನೋದು ಮತ್ತೊಂದು ವಿಚಿತ್ರ.
ಪ್ರವಾಸಿಗರಿಗೆ 3 ಗಂಟೆ ಮಾತ್ರ ಪ್ರವೇಶ
ಈ ದೇಶ ವಿಚಿತ್ರ ನಿಯಮಗಳಿಂದಲೇ ಸುದ್ದಿಯಾಗುತ್ತಿದೆ. ಈ ದೇಶಕ್ಕೆ ಬರುವ ಪ್ರವಾಸಿಗರಿಗೆ ಕೇವಲ 3 ಗಂಟೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಅಮೆರಿಕ ಹೊರತುಪಡಿಸಿ ಉಳಿದೆಲ್ಲಾ ದೇಶಗಳಿಂದ ಬರುವ ಪ್ರವಾಸಿಗರಿಗೆ ಪಾಸ್‌ಪೋರ್ಟ್ ಕಡ್ಡಾಯವಾಗಿದೆ.
15ನೇ ವರ್ಷದಲ್ಲಿ ಪುಟ್ಟ ರಾಷ್ಟ್ರದ ಕನಸು
ಸರ್ವಾಧಿಕಾರಿಯಾಗಿರುವ ಕೆವಿನ್ ಬಾಗ್ ತನ್ನ 15ನೇ ವರ್ಷದಲ್ಲಿಯೇ ಈ ರೀತಿ ಪುಟ್ಟ ರಾಷ್ಟ್ರ ಕಟ್ಟುವ ಮೂಲಕ ಆ ದೇಶಕ್ಕೆ ಅಧ್ಯಕ್ಷನಾಗುವ ಕನಸು ಕಂಡಿದ್ದನಂತೆ. ವಿವಾಹದ ಬಳಿಕ ಆತನ ಪತ್ನಿ ಅಡ್ರೈನ್ ಬಾಗ್ ಜೊತೆ ಸೇರಿ ಈ ದೇಶ ಕಟ್ಟಿದ್ದನಂತೆ. ಇದಾದ ಬಳಿಕ ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ನೇವಿ, ಹಣ, ಪೋಸ್ಟ್ ಆಫಿಸ್ ಹೀಗೆ ಒಂದೊಂದೆ ಆರಂಭಿಸಿ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಳ್ಳಲಾಗಿದೆ. ಆದ್ರೆ ಅಮೆರಿಕ ಈ ಪುಟ್ಟ ದೇಶವನ್ನು ಅಧಿಕೃತವಾಗಿ ಗುರುತಿಸಿಲ್ಲ.



Click it and Unblock the Notifications
