Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಿಗ್ನಲ್ ಲೈಟ್‌ಗೆ ಹೊಸ ಲುಕ್..! ಇನ್ನು ಮುಂದೆ ಮೂರಲ್ಲ ನಾಲ್ಕು ಬಣ್ಣ !
ನೀವು ಟ್ರಾಫಿಕ್‌ನಲ್ಲಿದ್ದಾಗ ನಿಮ್ಮ ಮುಂದೆ ಲೈಟ್ ಬೀಳುವುದು ನೋಡಿರುತ್ತೀರಿ. ಈ ಮೂರು ಲೈಟ್‌ಗಳು ಏನು ಸೂಚಿಸುತ್ತವೆ ಎಂಬುದು ಸಹ ಎಲ್ಲರಿಗೂ ತಿಳಿದೆ ಇದೆ. ಕೆಂಪು ಲೈಟ್ ಇದ್ದರೆ ನಿಲ್ಲುವಂತೆ, ಹಳದಿ ಹೊರಡಲು ಸಿದ್ಧರಾಗಿ ಹಾಗೂ ಹಸಿರು ಲೈಟ್ ಹೋಗಿ ಎಂಬ ಸೂಚನೆ ನೀಡುತ್ತವೆ. ಇದು ವಿಶ್ವದ ಯವುದೇ ಮೂಲೆ ಹೋದರು ಅನ್ವಯವಾಗುವ ನಿಯಮವಾಗಿದೆ. ಹಲವು ವರ್ಷದಿಂದಲೂ ಈ ಮೂರು ಬಣ್ಣವೇ ಬಳಕೆಯಲ್ಲಿದೆ.
ಅದ್ರೆ ಈ ಲೈಟ್‌ನ ಸಾಲಿಗೆ ಹೊಸದೊಂದು ಬಣ್ಣ ಸೇರಿಕೊಳ್ಳುತ್ತಿದೆ. ಇಂಗ್ಲೆಂಡ್‌ನಲ್ಲಿ ಈ ರೀತಿಯ ಪ್ರಯೋಗಕ್ಕೆ ಮುಂದಾಗುವುದಾಗಿ ತಿಳಿದುಬಂದಿದೆ. ಈ ನಾಲ್ಕನೇ ಬಣ್ಣವು ಡ್ರೈವರ್ ಲೆಸ್ ಕಾರುಗಳಿಗೆ ಅನ್ವಯವಾಗಲಿದೆಯಂತೆ. ಚಾಲಕ ರಹಿತ ಕಾರುಗಳಿಗೆ ಬಿಳಿ ಬಣ್ಣದ ಹೊಸ ಲೈಟ್ ಜಾರಿ ಮಾಡಲು ಅಧ್ಯಯನ ನಡೆದಿದೆ.

ವೇಮೊ, ಸ್ವಯಂ-ಚಾಲನಾ ಟ್ಯಾಕ್ಸಿ ಕಂಪನಿ, ಕ್ಯಾಲಿಫೋರ್ನಿಯಾ ಮತ್ತು ಅರಿಜೋನಾದಲ್ಲಿ ಸುಮಾರು ಐದನೇ ಹಂತ ಅಥವಾ SAE4 ಅನ್ನು ತಲುಪಿದೆ. ಟೆಸ್ಲಾಗಳು ಮತ್ತು ಇತರ ಚಾಲಕ ರಹಿತ ವಾನಗಳು ಜನಪ್ರಿಯತೆ ಗಳಿಸುತ್ತಿವೆ. ಏತನ್ಮಧ್ಯೆ, ಕೆಲವು ವಿನಾಯಿತಿಗಳೊಂದಿಗೆ ಇಂಗ್ಲೆಂಡ್ ರಸ್ತೆಗಳಲ್ಲಿ ಸ್ವಯಂ-ಚಾಲಿತಾ ಕಾರುಗಳು ಬಳಸಬಹುದು. ಆದರೆ ಅಧಿಕೃತವಾಗಿ ಅನುಮತಿ ನೀಡಲಾಗಿಲ್ಲ. ಸ್ವಯಂಚಾಲಿತ ವಾಹನಗಳ ಕಾಯಿದೆಯು 2026 ರ ಮುಂಚೆಯೇ ಅವುಗಳನ್ನು ಅನುಮತಿಸಬಹುದು.
ಆದರೆ ಮುಂದೊಂದು ದಿನ ರಸ್ತೆಯಲ್ಲಿ ಚಾಲಕ ರಹಿತ ಕಾರುಗಳಿಂಧ ಹಾಗೂ ಚಾಲಕರಿರುವ ಕಾರುಗಳು ಸಹ ಓಡಾಡಲಿವೆ. ಹೀಗಾಗಿ ಈ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆ ಜಾರಿ ಮಾಡಲು ತಜ್ಞರ ತಂಡ ಮುಂದಾಗಿದೆ.
ಬಿಳಿ ಹಂತದ ಪರಿಕಲ್ಪನೆಯು ಹೊಸ ಟ್ರಾಫಿಕ್ ಸಿಗ್ನಲ್ ಅನ್ನು ಸಂಯೋಜಿಸುತ್ತದೆ, ಇದರಿಂದಾಗಿ ಮಾನವ ಚಾಲಕರು ತಾವು ಏನು ಮಾಡಬೇಕು ಎಂಬುದನ್ನು ತಮ್ಮ ಕಾರಿನ ಪರದೆ ಮೇಲೆ ಮೂಡುವಂತೆ ಮಾಡಲಾಗುತ್ತದೆ. ಕೆಂಪು ಲೈಟ್‌ಗಳ ನಿಲ್ಲುವ ಸೂಚನೆ ನೀಡಿದರೆ ಹಸಿರು ದೀಪಗಳು ಮುಂದೆ ಹೋಗಲು ಹಾಗೂ ಬಿಳಿಯ ಲೈಟ್‌ಗಳು ಕಾರನ್ನು ಸರಳವಾಗಿ ಓಡಿಸಲು ಮಾನವ ಚಾಲಕರಿಗೆ ಸೂಚನೆ ನೀಡಲಿವೆ ಎಂದು ತಿಳಿದುಬಂದಿದೆ.
ಪ್ರಯಾಣದ ಸಮಯ, ಇಂಧನ ದಕ್ಷತೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಹೊಸ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದೃಶ್ಯೀಕರಿಸಲು ಡಾ ಹಜ್ಬಾಬೈ ಅವರ ತಂಡದೊಂದಿಗೆ ಹಲವಾರು ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಮಾಡಿದ್ದಾರೆ. ಈಗ ಪ್ರಾಯೋಗಿಕವಾಗಿ ಎಲ್ಲಾ ಕಾರುಗಳು ಸ್ವಾಯತ್ತ ವಾಹನಗಳಾಗುವವರೆಗೆ ಸಾಂಪ್ರದಾಯಿಕ ಕೆಂಪು, ಹಳದಿ ಮತ್ತು ಹಸಿರು ದೀಪಗಳನ್ನು ಹೆಚ್ಚಿನ ಸಮಯದವರೆಗೆ ಬಳಸಲಾಗುತ್ತದ. ಈ ಬಿಳಿ ಲೈಟ್ ಪರಿಕಲ್ಪನೆಯು ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆ ಎಂದು ತಂಡ ತಿಳಿಸಿದೆ.
ಆದರೆ ಈಗ ಎಲ್ಲಾ ಕಡೆಗಳಲ್ಲೂ ಈ ಮೂರು ಬಣ್ಣದ ಸಿಗ್ನಲಿಂಗ್ ವ್ಯವಸ್ಥೆಯನ್ನೇ ಎಲ್ಲಾ ಕಾರುಗಳು ಅನುಸರಿಸುತ್ತಿವೆ. ಇದೇ ನಿಯಮವನ್ನೆ ಅವುಗಳು ಸಹ ಪಾಲಿಸುತ್ತಿವೆ. ಸ್ವಯಂ ಚಾಲಿತ ಕಾರುಗಳು ಮುಂದೆ ಚಲಿಸುವ ಕಾರುಗಳನ್ನು ಹಿಂಬಾಲಿಸಿಕೊಂಡು ಟ್ರಾಫಿಕ್ ಕುರಿತ ಮಾಹಿತಿ ಪಡೆಯುತ್ತವೆ, ಹಾಗೆಯೆ ಗೂಗಲ್ ಮ್ಯಾಪಿಂಗ್ ಮೂಲಕ ಮಾಹಿತಿ ಕಲೆಹಾಕಿರುತ್ತವೆ. ಸಿಗ್ನಲ್ ಇದ್ದಾಗ ಸ್ವಯಂ ಆಗಿ ರೆಡ್ ಲೈಟ್ ಬಂದಾಗ ನಿಲ್ಲುವ ಸೂಚನೆಗೆ ಅವು ಬದ್ಧವಾಗಿರುತ್ತವೆ. ಆದ್ರೆ ಬಿಳಿ ಬಣ್ಣದ ಕುರಿತು ಅವುಗಳ ಕಂಪ್ಯೂಟಿಂಗ್ ಅಗತ್ಯವಾಗಿದೆ.
ಈ ನಾಲ್ಕನೆ ಬಣ್ಣದ ಕುರಿತಂತೆ ಅಧ್ಯಯನಗಳು ಆರಂಭವಾಗಿದ್ದು ಕಾರಿನ ಕಂಪ್ಯೂಟಿಂಗ್ ನಡೆಯುವುದು ಇನ್ನೂ ಬಾಕಿ ಉಳಿದಿದೆ. ಈ ಪ್ರಯೋಗ ಯಶಸ್ವಿಯಾದರೆ ಸಿಗ್ನಲ್ ಲೈಟ್‌ಗಳಲ್ಲಿ ನಾವು ಇನ್ನು ಮುಂದೆ ನಾಲ್ಕು ಬಣ್ಣವನ್ನ ನೋಡಬಹುದು. ಇದು ಇಂಗ್ಲೆಂಡ್‌ನಲ್ಲಿ ಪ್ರಯೋಗಿಕವಾಗಿ ಜಾರಿಯಾಗಲಿದೆ.



Click it and Unblock the Notifications
