Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗೊಂಡಬಾಳದ ಕರು ಜನಿಸಿದ ಎರಡೇ ದಿನದಲ್ಲಿ ಹಾಲು ನೀಡುತ್ತಿದೆ: ಅಚ್ಚರಿಯ ವೀಡಿಯೋ ವೈರಲ್
ಫೇಸ್‌ಬುಕ್‌ನಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ, ಕರು ಹಾಲು ನೀಡುತ್ತಿದೆ, ಜನಿಸಿ ಎರಡು ದಿನವಾಗಿದ್ದಷ್ಟೇ... ವಿಚಿತ್ರಗಳಲ್ಲಿ ವಿಚಿತ್ರವಾದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಗೊಂಡಬಾಳದ ಗ್ರಾಮದಲ್ಲಿ ಈ ಕರು ಇದೆ ಎಂಬ ಮಾಹಿತಿ ವೀಡಿಯೋದಲ್ಲಿ ಇದೆ. ಮನೆಯಲ್ಲಿ ಹಸು ಕರುವಿಗೆ ಜನ್ಮ ನೀಡುತ್ತಿದೆ ಎಂದಾಗ ಇಡೀ ಮನೆಯಲ್ಲಿ ಹರ್ಷದ ವಾತಾವರಣ ತುಂಬಿರುತ್ತದೆ.

ಆ ಪುಟ್ಟ ಕರು ಕುಣಿದು ಕುಪ್ಪಳಿಸುತ್ತಾ ಅಂಗಳದಲ್ಲಿ ಓಡಾಡುವ ಪರಿ, ಹಸುವಿನ ಗಿಣ್ಣು, ಹಾಲು ಇವೆಲ್ಲಾ ನಮ್ಮ ಸಂಭ್ರಮ ಹೆಚ್ಚಿಸುತ್ತದೆ, ಹಾಗಾಗಿ ಹಸು ಗಬ್ಬ ಎಂದು ಗೊತ್ತಾದಾಗ ತುಂಬಾನೇ ಖುಷಿಯಾಗುವುದು. ಪೌಷ್ಠಿಕಾಂಶದ ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು ಅದನ್ನು ಸಾಕಿದವರು ಆದಾಯಕ್ಕೂ ಒಳ್ಳೆಯದು.
ಆದರೆ ಜನಿಸಿದ ಕರು ಹಾಲು ನೀಡುತ್ತಿದೆ ಎಂದರೆ ಖಂಡಿತ ಖುಷಿಪಡಲು ಸಾಧ್ಯವಿಲ್ಲ
ಹೌದು ಜನಿಸಿ ಎರಡು ದಿನವಾಗಿದೆಯಷ್ಟೇ ಅದಕ್ಕೆ ಕೆಚ್ಚಲು ಇದೆ ಹಾಲು ಬರುತ್ತಿದೆ ಎಂದರೆ ಕಂಡಿತ ಅದು ಸಾಮಾನ್ಯವಲ್ಲ. ಆ ವೀಡಿಯೋದಲ್ಲಿ ಕರುವಿನ ಕೆಚ್ಚಲಿಗೆ ಕೈ ಹಾಕಿ ಹಾಲು ಕರೆದು ತೋರಿಸಿದ್ದಾರೆ. ಹುಟ್ಟಿದಾಗ ಕರುವಿಗೆ ಕೆಚ್ಚಲು ಇರುವುದು ಕೂಡ ಅಚ್ಚರಿಗೆ ಕಾರಣವಾಗಿತ್ತು.
ಹೌದು ಹಸು ಹೆಣ್ಣು ಕರುವಿಗೆ ಜನ್ಮ ನೀಡಿದಾಗ ಕೆಚ್ಚಲು ಇರುವುದಿಲ್ಲ, ತೊಟ್ಟು ಮಾತ್ರ ಕಾಣಿಸುತ್ತೆ, ಆದರೆ ಕೆಚ್ಚಲು ಬರಲು ಅದು ಪ್ರಾಯಕ್ಕೆ ಬರಬೇಕು, ಅದಕ್ಕೆಲ್ಲಾ ಸಮಯಬೇಕು, ಇಂದು ಹುಟ್ಟಿ ನಾಳೆಗೆ ಕರು ಹಾಲು ಕೊಡಲು ಸಾಧ್ಯವಿಲ್ಲ, ಈ ರೀತಿ ಏಕೆ ಆಗಿದೆ ಎಂಬುವುದು ಗೊತ್ತಿಲ್ಲ, ಹುಟ್ಟುವಾಗಲೇ ಕೆಲ ಮಕ್ಕಳ ಬಾಯಲ್ಲಿ ಹಲ್ಲುಗಳಿತ್ತು ಎಂಬ ಸುದ್ದಿ ಕೇಳಿದ್ದೇವೆ ಅದೇ ರೀತಿ ಇದು ಕೂಡ ವಿಚಿತ್ರದಲ್ಲಿ ವಿಚಿತ್ರವಷ್ಟೇ..
ಕಲಿಯುಗ ಎಂದು ಜನರ ಕಮೆಂಟ್
ಈ ರೀತಿ ವಿಚಿತ್ರ ಘಟನೆಗಳು ನಡೆದಾಗ ಜನರು ಕಲಿಯುಗ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ರೀತಿಯ ಈ ಹಿಂದೆ ಬೇರೆ ಕಡೆ ನಡೆದಿದೆಯೋ ಗೊತ್ತಿಲ್ಲ, ಆ ಕರುವಿಗೆ ಏಕೆ ಕೆಚ್ಚಲು ಇದೆ, ಅದರಿಂದ ಏಕೆ ಹಾಲು ಬರುತ್ತಿದೆ ಎಂದು ಪರೀಕ್ಷೆ ಆಗಬೇಕಷ್ಟೇ... ಯಾವುದಾದರೂ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ಆ ರೀತಿಯಾಗಿರಬಹುದು, ವಿಚಿತ್ರದಲ್ಲಿ ವಿಚಿತ್ರ
ಕರು ಎಳೆದು ದೊಡ್ಡದಾಗಿ ಅದು ಗರ್ಭಿಣಿಯಾಗಿ ನಂತರ ಕರುವಿಗೆ ಜನ್ಮ ನೀಡಿ ಹಾಲು ನೀಡುವುದು ಸಹಜ ಪ್ರಕ್ರಿಯೆ ಇದಕ್ಕೆ 2-3 ವರ್ಷ ಬೇಕು, ಇನ್ನು ಈವಾಗ ಹಸುಗಳಿಗೆ ಕೂಡ ಅನೇಕ ಹಾರ್ಮೋನಲ್ ಇಂಜೆಕ್ಷನ್ ನೀಡಲಾಗುವುದು, ಹಾರ್ಮೋನ್ ಇಂಜೆಕ್ಷನ್‌ನ ಅಡ್ಡಪರಿಣಾಮದಿಂದ ಹೀಗಾಯ್ತೇ ಅಥವಾ ನೈಸರ್ಗಿಕವಾಗಿಯೇ ಹೀಗಾಯ್ತೇ ಎಂಬ ಕಾರಣಗಳು ಗೊತ್ತಿಲ್ಲ, ಅದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ



Click it and Unblock the Notifications
