Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಚಂದ್ರಘಂಟಾ ದೇವಿಗೆ ನಿಮ್ಮ ರಾಶಿ ಪ್ರಕಾರ ಈ ವಸ್ತುಗಳನ್ನು ಅರ್ಪಿಸಿ
ನವರಾತ್ರಿ 3ನೇ ದಿನ ಚಂದ್ರಘಂಟಾ ದೇವಿಯ ಆರಾಧನೆ ಮಾಡುತ್ತೇವೆ. ಚಂದ್ರಘಂಟಾ ದೇವಿಯನ್ನು ಆರಾಧನೆ ಮಾಡುವಾಗ ಗೋಲ್ಡನ್ ಅಥವಾ ಬ್ಲೂ ಬಣ್ಣದ ಡ್ರೆಸ್ ಧರಿಸಿದರೆ ಇನ್ನೂ ಒಳ್ಳೆಯದು. ಚಮದ್ರಘಂಟಾ ದೇವಿ ನಮ್ಮೊಳಗಿನ ಅವ್ಯಕ್ತ ಭಯವನ್ನು ಹೊರದೂಡಲು ಸಹಾಯ ಮಾಡುತ್ತಾಳೆ. ಚಂದ್ರಘಂಟಾ ದೇವಿಗೆ ನಿಮ್ಮ ರಾಶಿಯ ಪ್ರಕಾರ ನೈವೇದ್ಯ ಅರ್ಪಿಸಿದರೆ ಇನ್ನೂ ಒಳ್ಳೆಯದು. ಯಾವ ರಾಶಿಯವರು ಯಾವ ವಸ್ತುಗಳನ್ನು ಅರ್ಪಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ: ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಯನ್ನು ಅರ್ಪಿಸಿ, ಮಂತ್ರ ಪಠಣೆ ಮಾಡುತ್ತಾ ಕೆಂಪು ಹೂಗಳನ್ನು ಅರ್ಪಿಸಿ.
ವೃಷಭ ರಾಶಿ: ದೇವಿಗೆ ಬಿಳಿ ಹೂ ಹಾಗೂ ಶ್ರೀ ಗಂಧವನ್ನು ಅರ್ಪಿಸಿ
ಮಿಥುನ ರಾಶಿ: ಸಿಹಿ ಕಡಬು ದೇವಿಗೆ ಅರ್ಪಿಸಿ
ಕರ್ಕ ರಾಶಿ: ಮೊಸರು, ಅನ್ನ, ಕಡ್ಲೆಯನ್ನು ಅರ್ಪಿಸಿ
ಸಿಂಹ ರಾಶಿ: ಕುಂಕುಮ, ಕೇಸರಿ ಅರ್ಪಿಸಿ ಕರ್ಪೂರದಿಂದ ಆರತಿ ಮಾಡಿ
ಕನ್ಯಾ ರಾಶಿ: ಅಕ್ಕಿ ಪಾಯಸ ಅರ್ಪಿಸಿ
ತುಲಾ ರಾಶಿ: ದೇವಿಗೆ ಕೆಂಪು ಬಣ್ಣದ ವಸ್ತ್ರವನ್ನು ಅರ್ಪಿಸಿ
ಧನು ರಾಶಿ: ದುರ್ಗಾ ಮಂತ್ರ ಪಠಿಸಿ
ಮಕರ ರಾಶಿ: ಬಿಳಿ ಸಿಹಿ ತಿಂಡಿಯನ್ನು ಅರ್ಪಿಸಿ
ಕುಂಭ ರಾಶಿ: ದೇವಿಗೆ ಕೆಂಪು ಹೂಗಳನ್ನು ಅರ್ಪಿಸಿ
ಮೀನ ರಾಶಿ: ಬಾಳೆಹಣ್ಣನ್ನು ಅರ್ಪಿಸಿ
ಚಂದ್ರಘಂಟಾ ದೇವಿಯ ಮಂತ್ರ
||ಓಂ ದೇವಿ ಚಂದ್ರಘಂಟಾಯೈ ನಮಃ||
ಚಂದ್ರಘಂಟಾ ದೇವಿ ಸ್ತುತಿ
ಅಥ ದೇವೀ ಸರ್ವಭೂತೇಷು ಮಾಂ ಚನ್ದ್ರಘಂಟಾ ರೂಪೇಣ ಸಂಸ್ಥಾ । ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋ ನಮಃ॥
ಚಂದ್ರಘಂಟಾ ಮಂತ್ರ
ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ
ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ
ಚಂದ್ರಘಂಟಾ ದೇವಿಯ ಸ್ತೋತ್ರ
ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ
ಅನಿಮಾದಿ ಸಿದ್ಧಿಧಾತ್ರಿ
ಚಂದ್ರಘಂಟೇ ಪ್ರಣಮಾಮ್ಯಹಂ
ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ ಧನಧಾತ್ರಿ,
ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ
ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ
ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ



Click it and Unblock the Notifications
