Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ 2025: ಶಕ್ತಿ ದೇವತೆ ಹಬ್ಬ ಯಾವಾಗ ಆರಂಭ? ಯಾವ ದಿನ ಯಾವ ಪೂಜೆ ನೋಡಿ!
ಹಿಂದೂಗಳಿಗೆ ಅತ್ಯಂತ ಶುಭಕರ ದಿನಗಳಲ್ಲಿ ಹಾಗೆ ಹಬ್ಬಗಳಲ್ಲಿ ಒಂದಾಗಿರುವ ನವರಾತ್ರಿ ಇನ್ನೇನು ಆರಂಭಗೊಳ್ಳುತ್ತಿದೆ. ನವರಾತ್ರಿಯಲ್ಲಿ ಹಿಂದೂ ಸಮುದಾಯ ಸತತ 9 ದಿನಗಳ ಕಾಲ ಆಧ್ಯಾತ್ಮಿಕವಾಗಿ ಹಬ್ಬ ಆಚರಿಸೋದು ನೋಡಬಹುದು. ಹಾಗೆ 9 ದಿನಗಳ ಕಾಲ ಅದ್ದೂರಿಯಾಗಿ ಈ ಹಬ್ಬ ಆಚರಿಸಲಾಗುತ್ತದೆ. ಅದ್ರಲ್ಲೂ ಕೊನೆಯ ದಿನ ಅಂದರೆ 9ನೇ ದಿನ ಬಹುತೇಕ ಕಡೆ ದೊಡ್ಡ ಹಬ್ಬವನ್ನಾಗಿ ಆಚರಿಸುವುದು ನೋಡಬಹುದು.
ನವರಾತ್ರಿ ಒಂಬತ್ತು ದಿನಗಳ ಸುದೀರ್ಘ ಹಬ್ಬ. ಶುಭ ಕಾರ್ಯಗಳಿಗೆ ನಾಂದಿಹಾಡಲು ಇದು ಸುಸಮಯ. ಈ ಹಬ್ಬದಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ವರ್ಷದಲ್ಲಿ ಬರುವ 5 ನವರಾತ್ರಿಗಳಲ್ಲಿ ಈ ಶರದ್ ನವರಾತ್ರಿ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಇದು ವಿಜಯದ ಸಂಕೇತ ಎಂದು ಹೇಳಲಾಗಿದೆ.

ದಕ್ಷಿಣ ಭಾರತದಲ್ಲಿ ಒಂದು ರೀತಿಯಲ್ಲಿ ಹಾಗೆ ಉತ್ತರ ಭಾರತದಲ್ಲಿ ಮತ್ತೊಂದು ರೀತಿ ಈ ನವರಾತ್ರಿಯನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತಕ್ಕಿಂತಲೂ ಉತ್ತರ ಭಾರತದಲ್ಲಿ ಈ ಹಬ್ಬವು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ದೇಶದಾದ್ಯಂತ ಭಕ್ತರು 9 ದಿನದ ನವರಾತ್ರಿ ಬಣ್ಣಕ್ಕೆ ಅನುಗುಣವಾಗಿ ಉಡುಗೆ ತೊಡುತ್ತಾರೆ, ಇದು ದೇವತೆಯಿಂದ ಆಶೀರ್ವಾದ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾದ ಆಚರಣೆಯಾಗಿದೆ.
ದೇವಿಯ ಒಂದೊಂದು ಅವತಾರವು ಒಂದೊಂದು ಬಣ್ಣವನ್ನು ಪ್ರತಿನಿಧಿಸಲಿದೆ. ನಂಬಿಕೆಗಳ ಪ್ರಕಾರ ಪ್ರತಿಯೊಂದು ಬಣ್ಣವು ಶುದ್ಧತೆ ಶಕ್ತಿ ಸಮತೋಲನ ಮತ್ತು ಕರುಣೆಯಂತಹ ಗುಣಗಳನ್ನು ಸಾಕಾರಗೊಳಿಸುವ ದುರ್ಗಾ ದೇವಿಯ ಅವತಾರಕ್ಕೆ ಸಂಬಂಧಿಸಿದೆ. ಪ್ರತಿಯೊಂದು ಬಣ್ಣವು ಶುದ್ಧತೆ, ಶಕ್ತಿ, ಸಮತೋಲನ ಮತ್ತು ಕರುಣೆಯಂತಹ ಗುಣಗಳನ್ನು ಸಾಕಾರಗೊಳಿಸುವ ದುರ್ಗಾ ದೇವಿಯ ಅವತಾರಕ್ಕೆ ಸಂಬಂಧಿಸಿದೆ.
ನವರಾತ್ರಿ ಯಾವಾಗ ಆರಂಭ?
2025ರ ನವರಾತ್ರಿಯೂ ಈ ಸೆಪ್ಟೆಂಬರ್ 22ರಿಂದ ಆರಂಭವಾಗುತ್ತಿದೆ. ಹಾಗೆ ಅಕ್ಟೋಬರ್ 2ರಂದು ಕೊನೆಯಾಗುತ್ತಿದೆ. ಈ 9 ದಿನಗಳ ಕಾಲ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ. ಹಾಗಾದ್ರೆ 9 ದಿನಗಳ ಕಾಲ ಯಾವ ಯಾವ ರೀತಿಯ ಬಣ್ಣದ ಮೂಲಕ ಈ ಹಬ್ಬ ಆಚರಿಸುವುದು ನೋಡಬಹುದು.
ಮೊದಲ ದಿನ: ಬಿಳಿ ವಸ್ತ್ರ: ನವರಾತ್ರಿಯು ಬಿಳಿ ಬಣ್ಣದಿಂದ ಪ್ರಾರಂಭವಾಗುತ್ತದೆ, ಇದು ಶುದ್ಧತೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ ಮತ್ತು ನವರಾತ್ರಿಗೆ ಶುಭವಾಗಿ ಇದು ಆರಂಭವಾಗುತ್ತದೆ. ಈ ದಿನ ಪುರುಷರು, ಮಹಿಳೆಯರು ಬಿಳಿ ಬಣ್ಣದ ವಸ್ತ್ರ ಧರಿಸಿ ಪೂಜೆ ಮಾಡುತ್ತಾರೆ.
ಎರಡನೇ ದಿನ ಕೆಂಪು ವಸ್ತ್ರ: ಶಕ್ತಿಯ ಬಣ್ಣ ಮತ್ತು ದೇವಿಯ ಇಷ್ಟದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಹಾಗೆ ಈ ದಿನದಂದು ಶಕ್ತಿ ದೇವತೆಯ ರೂಪದಲ್ಲಿ ದೇವತೆಯ ಪೂಜೆ ಮಾಡಲಾಗುತ್ತದೆ. ಬ್ರಹ್ಮಚಾರಿಣಿಯಾಗಿ ಪೂಜಿಸುವುದು ನೋಡಬಹುದು.
ಮೂರನೇ ದಿನ ನೀಲಿ ಬಣ್ಣ: ಸೊಗಸಾದ ಮತ್ತು ರಾಜಮನೆತನದ, ರಾಯಲ್ ನೀಲಿ ಆಳ ಮತ್ತು ನೆಮ್ಮದಿಯನ್ನು ಪ್ರತಿನಿಧಿಸುತ್ತದೆ. ಬೆಳ್ಳಿ ಆಭರಣಗಳೊಂದಿಗೆ ನೀಲಿ ಬಣ್ಣದ ವಸ್ತ್ರ ಧರಿಸಲಾಗುತ್ತದೆ.
ನಾಲ್ಕನೆ ದಿನ ಹಳದಿ ಬಣ್ಣ: ಪ್ರಕಾಶಮಾನವಾದ ಹಳದಿ ಬಣ್ಣವು ಸಂತೋಷ ಹಾಗೂ ಆಶಾವಾದಿತನ ಪ್ರತಿನಿಧಿಸಲಿದೆ. ಚಿನ್ನದ ಬಾರ್ಡರ್ ಹೊಂದಿರುವ ಸೀರೆ ಹಾಗೆ ಪುರುಷರು ಕುರ್ತ ಧಿರಿಸಿದರೆ ಹಬ್ಬ ಮತ್ತಷ್ಟು ಸಂಭ್ರಮದಿಂದ ಕೂಡಿರಲಿದೆ.
ಐದನೇ ದಿನ ಹಸಿರು ಬಣ್ಣ: ಸಮೃದ್ಧಿ ಮತ್ತು ಸಾಮರಸ್ಯವನ್ನು ಸಂಕೇತಿಸುವುದು ಹಸಿರು ಬಣ್ಣವಾಗಿದೆ.
ಆರನೇ ದಿನ ಬೂದು ಬಣ್ಣ: ಕಪ್ಪು ಮತ್ತು ಬಿಳಿ ಬಣ್ಣದ ಮಿಶ್ರಣದಿಂದ ಮಾಡಲ್ಪಟ್ಟ ಬಣ್ಣ ಬೂದು. ಇದು ಪರಿಪೂರ್ಣತೆ ಹಾಗೂ ಕಾತ್ಯಾಯನಿಯಾಗಿ ಆಕೆಯನ್ನು ಪೂಜಿಸಲಾಗುತ್ತದೆ.
ಏಲನೆ ದಿನ ಕಿತ್ತಳೆ ಬಣ್ಣ: ಕಿತ್ತಳೆ ಬಣ್ಣವನ್ನು ಧರಿಸಿರುವ ನವದುರ್ಗಾ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯ ದೈಹಿಕ ಸಮಸ್ಯೆಗಳ ನಿವಾರಣೆ ಸಾಧ್ಯವಿದೆ. ಈ ಬಣ್ಣವು ಧನಾತ್ಮಕ ಶಕ್ತಿಯಿಂದ ತುಂಬಿರುತ್ತದೆ ಮತ್ತು ವ್ಯಕ್ತಿಯನ್ನು ಲವಲವಿಕೆಯಿಂದ ಇಡುತ್ತದೆ. ಈ ದಿನವನ್ನು ಮಾ ಕಾಳರಾತ್ರಿಯನ್ನು ದೈವಿಕ ಪ್ರಕಾಶವೆಂದು ಪರಿಗಣಿಸಲಾಗುತ್ತದೆ.
ಎಂಟನೆ ದಿನ ನವಿಲು ಹಸಿರು: ವಿಶಿಷ್ಟ ಮತ್ತು ಬೆರಗುಗೊಳಿಸುವ, ನೀಲಿ ಮತ್ತು ಹಸಿರು ಮಿಶ್ರಣವು ಪ್ರತಿಯೊಂದು ಕಾರಣ ಮತ್ತು ಋತುವಿಗೂ ಜನಸಮೂಹದ ನೆಚ್ಚಿನದು. ಮಹಾಗೌರಿ ದೇವಿಯಾಗಿ ಪೂಜಿಸಲಾಗುತ್ತದೆ. ಬಣ್ಣವು ಸಹಾನುಭೂತಿ ಮತ್ತು ತಾಜಾತನದಂತಹ ಈ ಎರಡೂ ಬಣ್ಣಗಳಿಗೆ ಸಂಬಂಧಿಸಿದ ಗುಣಗಳನ್ನು ಹೊರಹಾಕುತ್ತದೆ.
ಒಂಬತ್ತನೇ ದಿನ ಗುಲಾಬಿ: ಹಬ್ಬದ ಕೊನೆಯ ದಿನ ವಿಜಯದಶಮಿಯಂದು ಗುಲಾಬಿ ಬಣ್ಣದ ದೇವಿಯ ಪೂಜಿಸಲಾಗುತ್ತದೆ. ಸಿದ್ಧಿದಾತ್ರಿ ಎಂದು ಆಕೆಯನ್ನು ಕರೆಯಲಾಗಿದೆ. ಸಿದ್ಧಿದಾತ್ರಿಯು ಎಲ್ಲಾ ಸಿದ್ಧಿಗಳ ಮೂಲವಾಗಿದೆ ಮತ್ತು ಎಲ್ಲಾ ಎಂಟು ಅಷ್ಟಸಿದ್ಧಿಗಳನ್ನು ಹೊಂದಿದೆ.
ಶರದ್ ನವತಾತ್ರಿಯ ದಿನಾಂಕಗಳು
- 22 ಸೆಪ್ಟೆಂಬರ್ 2025 - ಪ್ರತಿಪದ (ಶೈಲಪುತ್ರಿ ಪೂಜೆ)
- 23 ಸೆಪ್ಟೆಂಬರ್ 2025 - ದ್ವಿತೀಯ (ಬ್ರಹ್ಮಚಾರಿಣಿ ಪೂಜೆ)
- 24 ಸೆಪ್ಟೆಂಬರ್ 2025 - ತೃತೀಯಾ (ಚಂದ್ರಘಂಟ ಪೂಜೆ)
- 26 ಸೆಪ್ಟೆಂಬರ್ 2025 - ಚತುರ್ಥಿ (ಕೂಷ್ಮಾಂಡ ಪೂಜೆ)
- 27 ಸೆಪ್ಟೆಂಬರ್ 2025 - ಪಂಚಮಿ (ಸ್ಕಂದಮಾತಾ ಪೂಜೆ)
- 28 ಸೆಪ್ಟೆಂಬರ್ 2025 - ಮಹಾ ಷಷ್ಠಿ (ಕಾತ್ಯಾಯನಿ ಪೂಜೆ)
- 29 ಸೆಪ್ಟೆಂಬರ್ 2025 - ಮಹಾ ಸಪ್ತಮಿ (ಕಾಳರಾತ್ರಿ ಪೂಜೆ)
- 30 ಸೆಪ್ಟೆಂಬರ್ 2025 - ಮಹಾ ಅಷ್ಟಮಿ (ಮಹಾಗೌರಿ ಪೂಜೆ)
- 1 ಅಕ್ಟೋಬರ್ 2025 - ಮಹಾ ನವಮಿ (ಸಿದ್ಧಿದಾತ್ರಿ ಪೂಜೆ)
- 2 ಅಕ್ಟೋಬರ್ 2025 - ವಿಜಯದಶಮಿ



Click it and Unblock the Notifications