Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಜುಲೈನಲ್ಲಿ ನವಗ್ರಹಗಳ ಪ್ರಭಾವದಿಂದ ಯಾವ ರಾಶಿಯವರಿಗೆ ಶುಭ, ಯಾರಿಗಲ್ಲ?
ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳ ರಾಶಿಚಕ್ರ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಎಲ್ಲಾ 9 ಗ್ರಹಗಳಲ್ಲಿ ಕೆಲವು ಗ್ರಹಗಳನ್ನು ಹೊರತುಪಡಿಸಿ, ಇತರ ಎಲ್ಲಾ ಗ್ರಹಗಳು ಪ್ರತಿ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತದೆ. ಗುರು, ಶನಿ ಮತ್ತು ರಾಹು-ಕೇತುಗಳನ್ನು ಹೊರತುಪಡಿಸಿ, ಎಲ್ಲಾ ಇತರ ಗ್ರಹಗಳು ಪ್ರತಿ ತಿಂಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರಯಾಣಿಸುತ್ತವೆ. ಗ್ರಹಗಳ ರಾಶಿಯಲ್ಲಿ ಬದಲಾವಣೆಯುಂಟಾದಾಗ, ಅದರ ಶುಭ ಮತ್ತು ಅಶುಭ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಇರುತ್ತದೆ.

ಜುಲೈ ತಿಂಗಳಿನಲ್ಲಿ ನವಗ್ರಹಗಳ ಪ್ರಭಾವದಿಂದಾಗ ಯಾವ ರಾಶಿಯವರಿಗೆ ಶುಭ, ಯಾರಿಗೆ ಶುಭವಲ್ಲ, ಯಾರಿಗೆ ಸರಾಸರಿಯಾಗಿದೆ ಎಂದು ನೋಡೋಣ ಬನ್ನಿ:
ಜುಲೈನಲ್ಲಿ ಚಂದ್ರನ ಸಂಚಾರ
ಚಂದ್ರನು ಪ್ರತೀ ಎರಡೂವರೆ ದಿನಕ್ಕೊಮ್ಮೆ ತನ್ನ ರಾಶಿ ಬದಲಾಯಿಸುತ್ತದೆ.
ಸೂರ್ಯ ಸಂಚಾರ
ಸೂರ್ಯ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಜುಲೈ 16 ರಂದು ಸೂರ್ಯನು ಕರ್ಕ ರಾಶಿಗೆ ಬದಲಾಗುತ್ತಾನೆ. ಕರ್ಕ ರಾಶಿಯ ಅಧಿಪತಿ ಚಂದ್ರ, ಸೂರ್ಯನು ಇದೇ ರಾಶಿಗೆ ಸಂಚರಿಸಲಿದೆ.
ಮಂಗಳ ಸಾಗಣೆ
ಜುಲೈ 01 ರಂದು, ಧೈರ್ಯ ಮತ್ತು ಶೌರ್ಯಕ್ಕೆ ಕಾರಣವಾಗುವ ಮಂಗಳವು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಮಂಗಲದೇವರು ಮೇ 10 ರಿಂದ ಕರ್ಕಾಟಕ ರಾಶಿಯಲ್ಲಿದ್ದಾರೆ ಮತ್ತು ಈಗ ಜುಲೈ 1 ರಂದು ಸೂರ್ಯನ ರಾಶಿಚಕ್ರ ಚಿಹ್ನೆ ಸಿಂಹವನ್ನು ಪ್ರವೇಶಿಸಲಿದ್ದಾರೆ.
ಬುಧ ಸಂಚಾರ
ಜುಲೈ 8 ರಂದು ಮಧ್ಯಾಹ್ನ 12.05 ಕ್ಕೆ ಬುಧ ಮಿಥುನ ರಾಶಿಯನ್ನು ಬಿಟ್ಟು ಕರ್ಕ ರಾಶಿಯನ್ನು ಪ್ರವೇಶಿಸಲಿದೆ.
ಗುರುವಿನ ಸಂಚಾರ
ಈ ತಿಂಗಳಿನಲ್ಲಿ ಗುರು ಸಂಚಾರವಿಲ್ಲ. ಗುರು ಮೇಷ ರಾಶಿಯಲ್ಲಿದೆ, ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಇರಲಿದೆ.
ಶನಿ ಸಂಚಾರ
ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ನವೆಂಬರ್ 4ರವರೆಗೆ ಶನಿಯು ಹಿಮ್ಮುಖ ಚಲನೆಯಲ್ಲಿ ಇರಲಿದೆ.
ರಾಹು-ಕೇತು
ರಾಹು ಮತ್ತು ಕೇತುಗಳನ್ನು ಯಾವಾಗಲೂ ಹಿಮ್ಮುಖ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಈ ವರ್ಷ, ಅಕ್ಟೋಬರ್ 30, 2023 ರಂದು, ಹಿಮ್ಮುಖ ದಿಕ್ಕಿನಲ್ಲಿ ಚಲಿಸುವ ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮತ್ತೊಂದೆಡೆ, ಕೇತು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ.
ಜುಲೈನಲ್ಲಿ ನವಗ್ರಹಗಳ ಪ್ರಭಾವ ದ್ವಾದಶ ರಾಶಿಗಳಿಗೆ ಹೇಗಿರಲಿದೆ
ಯಾರಿಗೆಲ್ಲಾ ಶುಭ?
ವೃಷಭ, ಮಿಥುನ, ಧನು ಮತ್ತು ಕುಂಭ ರಾಶಿಯವರಿಗೆ ಶುಭವಾಗಿದೆ.
ಯಾರು ಜಾಗ್ರತೆವಹಿಸಬೇಕು?
ಮೇಷ, ಕನ್ಯಾ ಮತ್ತು ತುಲಾ ರಾಶಿಯವರು ತಿಂಗಳಿನಲ್ಲಿ ಜಾಗ್ರತೆವಹಿಸಬೇಕು.
ಯಾರಿಗೆ ಸರಾಸರಿ ಇರಲಿದೆ?
ಕರ್ಕ, ಸಿಂಹ, ವೃಶ್ಚಿಕ, ಮಕರ ಮತ್ತು ಮೀನ ರಾಶಿಯವರಿಗೆ ಸರಾಸರಿ ಇರಲಿದೆ.



Click it and Unblock the Notifications
