Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮದುವೆ ಆಗದೆ ಹುಡುಗ ಹುಡುಗಿ ಒಟ್ಟಿಗೆ ಇರುವಂತಿಲ್ಲ..! ಈ ದೇಶಗಳಲ್ಲಿ ಕಠಿಣ ಶಿಕ್ಷೆ..!
ಪತಿ ಪತ್ನಿಯ ಸಂಬಂಧ ಅನ್ನೋದು ಬಹುತೇಕ ಎಲ್ಲಾ ದೇಶದಲ್ಲೂ ಪವಿತ್ರ ಅಂತಲೇ ಭಾವಿಸಲಾಗುತ್ತೆ. ಎಲ್ಲಾ ಧರ್ಮದಲ್ಲೂ ಒಂದೊಂದು ರೀತಿ ಸಂಪ್ರದಾಯ ಆಚರಣೆಯ ಮೂಲಕ ವಿವಾಹ ನಡೆಯುವುದು ನಾವು ನೋಡಬಹುದು. ಆದ್ರೆ ಈಗ ಸಂಬಂಧಗಳ ಕಾಪಾಡಿಕೊಳ್ಳುವುದು ದೊಡ್ಡ ಸವಾಲು ಎನ್ನುವುದಾದರೆ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಜನರೀಗ ಜೀವನಶೈಲಿಯ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಈಗ ಡೇಟಿಂಗ್ ಸಂಸ್ಕೃತಿ ಎಲ್ಲಾ ಕಡೆ ಹಬ್ಬಿದೆ.
ಹುಡುಗ ಹುಡುಗಿ ಮದುವೆಯಾಗದೆಯೆ ಒಟ್ಟಿಗೆ ಒಂದಿಷ್ಟು ದಿನ ಕಳೆದು ಅನಂತರ ಮದುವೆ ಆಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಾರೆ. ಈ ಸಂಸ್ಕೃತಿ ಈಗ ಎಲ್ಲಾ ಕಡೆಯೂ ಹಬ್ಬಿದೆ. ಹಾಗೆ ಅಕ್ರಮ ಸಂಬಂಧದಂತಹ ಪ್ರಕರಣಗಳ ನಾವು ನೋಡಿರುತ್ತೇವೆ. ಆದ್ರೆ ವಿಶ್ವದ ಹಲವು ದೇಶದಲ್ಲಿ ಮದುವೆಗೂ ಮುನ್ನ ಅನ್ಯ ಸಂಬಂಧದಲ್ಲಿ ಇರುವು ಮಹಾ ಅಪರಾಧ. ಅಲ್ಲಿ ಲಿವ್ ಇನ್ ರಿಲೇಷನ್ ಎನ್ನುವುದು ದೊಡ್ಡ ಅಪರಾಧ.

ಹಾಗಾದ್ರೆ ಯಾವೆಲ್ಲಾ ದೇಶದಲ್ಲಿ ಅಕ್ರಮ ಸಂಬಂಧ ಅಪರಾಧವಾಗಿದೆ. ಅಲ್ಲಿ ಯಾವ ರೀತಿಯ ಶಿಕ್ಷೆ ಇದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಮದುವೆಯಾಗದೆ ಒಟ್ಟಿಗೆ ಇರುವುದು ಈ ದೇಶಗಳಲ್ಲಿ ದೊಡ್ಡ ಅಪರಾಧ. ಹಾಗಾದ್ರೆ ಆ ದೇಶಗಳು ಯಾವುದು ಎಂಬುದನ್ನು ನಾವು ನೋಡೋಣ.
ಸೌದಿ ಅರೇಬಿಯಾ
ಸೌದಿ ಅರೇಬಿಯಾದಲ್ಲಿ ಕಟ್ಟುನಿಟ್ಟಾದ ಷರಿಯಾ ಕಾನೂನುಗಳಿವೆ, ಹುಡುಗ ಹುಡುಗಿ ವಿವಾಹವಾಗದೆ ಒಟ್ಡಿಗರ ಇರುವುದು ಕಾನೂನು ಬಾಹಿರವಾಗಿದೆ. ಒಂದು ಈ ರೀತಿ ಒಟ್ಟಿಗೆ ಇರುವುದು ತಿಳಿದರೆ ದಂಡದ ಜೊತೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅದರಲ್ಲೂ ವಿದೇಶಿಗರು ಇದ್ದರೆ ಅವರನ್ನು ಗಡಿಪಾರು ಮಾಡಲಾಗುತ್ತದೆ. ಆದ್ರೆ ಪ್ರವಾಸಿಗರು ಹೋಟೆಲ್‌ನಲ್ಲಿ ಉಳಿಯಬಹುದು. ಆದ್ರೆ ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ, ಪ್ರಣಯದಲ್ಲಿ ತೊಡಗುವಂತಿಲ್ಲ.
ಕತಾರ್
ಕತಾರ್‌ನಲ್ಲಿನ ಕಟ್ಟುನಿಟ್ಟಿನ ಕಾನೂನಿನ ಅಡಿಯಲ್ಲಿ ವಿವಾಹಪೂರ್ವ ಸಂಬಂಧಗಳು ಕಾನೂನುಬಾಹಿರವಾಗಿದೆ. ಮದುವೆಯಾಗದೆ ಇಬ್ಬರು ಒಟ್ಟಿಗೆ ಇರುವುದು, ಹೋಟೆಲ್‌ನಲ್ಲಿ ಉಳಿಯುವುದು ಕೂಡ ಅಲ್ಲಿ ನಿಷೇಧ. 2022ರ ಕತಾರ್ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯ ವೇಳೆ ಹೋಟೆಲ್‌ನಲ್ಲಿ ಅವಿವಾಹಿತ ಹುಡುಗ ಹುಡುಗಿ ಉಳಿಯುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಇಂಡೋನೇಷ್ಯಾ
ಇಂಡೋನೇಷ್ಯಾ ಇತ್ತೀಚೆಗೆ ವಿವಾಹಪೂರ್ವ ಲೈಂಗಿಕತೆ ಮತ್ತು ಲಿವ್ ಇನ್ ರಿಲೇಶನ್‌ಶಿಪ್ ನಿಷೇಧಿಸುವ ಕಾನೂನನ್ನು ಅಂಗೀಕರಿಸಿದೆ. ಅವಿವಾಹಿತ ಹುಡುಗ ಹುಡುಗಿ ತಪ್ಪಿತಸ್ಥರೆಂದು ಸಾಬೀತಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಿದೆ.
ಮಲೇಷ್ಯಾ
ಮಲೇಷ್ಯಾದಲ್ಲಿ ಇಸ್ಲಾಮಿಕ್ ಕಾನೂನು ಹುಡುಗ ಹುಡುಗಿ ಮದುವೆ ಆಗದೆ ಒಟ್ಟಿಗೆ ವಾಸಿಸುವುದನ್ನು ನಿಷೇಧಿಸಿದೆ. ಸಲಿಂಗಕಾಮವನ್ನು ಸಹ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸುವವರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುತ್ತದೆ.
ಪಾಕಿಸ್ತಾನ
ಪಾಕಿಸ್ತಾನದಲ್ಲಿ ಷರಿಯಾ ಕಾನೂನಿನಲ್ಲಿ ವಿವಾಹೇತರ ಸಂಬಂಧಗಳನ್ನು ಅಥವಾ ಲಿವ್-ಇನ್ ಸಂಬಂಧಗಳನ್ನು ಹೊಂದುವಂತಿಲ್ಲ. ಒಂದು ತಪ್ಪಿತಸ್ಥರು ಎಂದು ತಿಳಿದುಬಂದರೆ ಶಿಕ್ಷೆಗೆ ಗುರಿ ಮಾಡಲಾಗುತ್ತದೆ.
ಇರಾನ್
ಇರಾನ್‌ನಲ್ಲಿನ ಷರಿಯಾ ಕಾನೂನು ಅವಾಹೇತರ ಸಂಬಂಧವನ್ನು ಅಪರಾಧ ಎಂದು ಘೋಷಿಸಲಿದೆ. ಹೀಗಾಗಿ ಲಿವ್ ಇನ್ ರಿಲೇಶನ್‌ಶಿಪ್ ಕಠಿಣ ಶಿಕ್ಷೆ ಗುರಿ ಮಾಡುತ್ತದೆ.
ಕುವೈತ್
ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಸಹಬಾಳ್ವೆ ಮಾಡುವುದು ಅಥವಾ ವಿವಾಹಪೂರ್ವ ಸಂಬಂಧಗಳನ್ನು ಹೊಂದುವುದು ಕಾನೂನುಬಾಹಿರವಾಗಿದೆ. ಅಂತಹ ಅವಿವಾಹಿತ ಸಂಬಂಧದಲ್ಲಿ ಭಾಗಿಯಾದರೆ ದಂಡ, ಶಿಕ್ಷೆ, ಗಡಿಪಾರು ಮಾಡುವ ಕಾನೂನು ಜಾರಿಯಲ್ಲಿದೆ.



Click it and Unblock the Notifications
