Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರಾಷ್ಟ್ರೀಯ ಬಾಹ್ಯಾಕಾಶ ದಿನ:ಚಂದ್ರನಲ್ಲಿ ನಿಧಿ ಶೋಧನೆ, ಹೀಗೆ ನಾಸಾಗೆ ಪೈಪೋಟಿ ನೀಡುತ್ತಿದೆ ನಮ್ಮ ಇಸ್ರೋ
ಅಕ್ಟೋಬರ್ 23ಕ್ಕೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುವುದು. ಈ ವರ್ಷ ಮೊದಲ ಬಾರಿಗೆ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುವುದು. ಆಗಸ್ಟ್ 23, 2022 ಭಾರತದ ಪಾಲಿಗೆ ಸುವರ್ಣ ಅಕ್ಷರಗಳಿಂದ ಇತಿಹಾಸ ಮಾಡಿದ ದಿನ, ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡಿದ ದಿನ. ಇಸ್ರೋ ನಿರ್ಮಿಸಿದ ಚಂದ್ರಯಾನ 3 ಬಾಹ್ಯಾಕಾಶ ನೌಕೆಯನ್ನು ಶ್ರೀಹರಿ ಕೂಟದಿಂದ ಉಡಾವಣೆ ಮಾಡಿ, ಅದು ಚಂದ್ರನ ಮೇಲ್ಮೈಯಲ್ಲಿ ಇಳಿದ(ಲ್ಯಾಂಡ್ ಆದ ದಿನ).

ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿದ ಮೊದಲ ದೇಶ ಭಾರತ
ಬಾಹ್ಯಾಕಾಶದಲ್ಲಿ ನಮ್ಮ ಸಾಧನೆ ದೊಡ್ಡದು ಎಂದು ಸಾಧಿಸಲು ನಾಸಾ ಪ್ರಯತ್ನಿಸುತ್ತಲೇ ಇದೆ, ಆದರೆ ನಾಸಾ ಮಾಡುವುದಕ್ಕಿಂತ ಮೊದಲೇ ನಮ್ಮ ಇಸ್ರೋ ಚಂದ್ರ ಲೋಕದಲ್ಲಿ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ತಲುಪಿದ ಮೊಟ್ಟ ಮೊದಲ ರಾಷ್ಟ್ರವೆಂದರೆ ಅದು ನಮ್ಮ ಭಾರತ. ಇದೀಗ ಉಪಗ್ರಹ ಉಡಾವಣೆ ಸೇರಿದಂತೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹಲವು ವಿಚಾರಗಳಿಗೆ ಭಾರತದ ಸಹಾಯ ಕೇಳುತ್ತಿದೆ ಹಲವು ರಾಷ್ಟ್ರಗಳು, ಆ ಮಟ್ಟಕ್ಕೆ ಭಾರತದ ಸಾಧನೆ ಬೆಳೆಯುವಂತೆ ಮಾಡಿದ, ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಲೇ ಇರುವ ಇಸ್ರೋದ ಅಷ್ಟೂ ವಿಜ್ಞಾನಿಗಳಿಗೆ ಅವರ ಬುದ್ಧಿವಂತಿಕೆ, ಪರಿಶ್ರಮಕ್ಕೆ ನಮ್ಮದೊಂದು ಸಲಾಂ.
ಪ್ರಗ್ಯಾನ್ ರೋವರ್ ಸಾಧನೆ
ಯಶಸ್ವಿಯಾಗಿ ಚಂದ್ರನ ಧಕ್ಷಿಣ ದ್ರುವ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದಿರುವ ವಿಕ್ರಮ್ ಲ್ಯಾಂಡರ್ ಅಲ್ಲಿಯ ತಾಪಾಮಾನ, ಅಲ್ಲಿಯ ಮಣ್ಣು, ಅಲ್ಲಿಯ ಕಂಪನ, ಖನಿಜಾಂಶಗಳ ಸಮಶೋಧನೆ ಮಾಡುತ್ತಿದೆ, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಭೂಮಿಗೆ ಕಳುಹಿಸುತ್ತಿದೆ. ಅಲ್ಲಿ ಯಾವೆಲ್ಲಾ ಖನಿಜಾಂಶಗಳಿವೆ ಅದರಿಂದ ಭೂಲೋಕಕ್ಕೆ ಆಗುವ ಪ್ರಯೊಜನಗಳ ಬಗ್ಗೆ ನಿಧಿ ಶೋಧನೆ ಕೂಡ ಮಾಡುತ್ತಿದೆ.
ಚಂದ್ರನಲ್ಲಿ ಪತ್ತೆಯಾಗಿದೆ ಪ್ರಾಚೀನ ಶಿಲಾಪಾಕ ಸಾಗರ (Ancient Magma Ocean)
ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವವು ದ್ರವ ಶಿಲಾಪಾಕದಿಂದ ಆವೃತವಾಗಿದೆ. ಅಂದರೆ ಚಂದ್ರನ ಒಳಗೆ ಹಾಗೂ ಹೊರಗೆ ಲಾವಾ ಇದೆ ಎಂದು ಹೇಳಿದೆ ಚಂದ್ರನ ಮೇಲಿನ ಮಣ್ಣು ಏಕಶಿಲೆಯಂತಹ ಫೆರಾನ್ ಅನರ್ಥೋಸೈಟ್‌ನಿಂದ ಮಾಡಲ್ಪಟ್ಟಿದೆ. ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಎರಡು ಪ್ರೋಟೋಪ್ಲಾನೆಟ್‌ಗಳು ಪರಸ್ಪರ ಡಿಕ್ಕಿ ಹೊಡೆದಾಗ ಚಂದ್ರ ರೂಪುಗೊಂಡಿತು ಎಂದು ಹೇಳಲಾಗುತ್ತಿದೆ. ಚಂದ್ರ ಲೋಕದಲ್ಲಿ ಹೆಚ್ಚಿನ ಸಾಧನೆಗೆ ಚಂದ್ರಯಾನ 3 ಯಶಸ್ವಿಯಾಗಿರುವುದು ತುಂಬಾನೇ ಸಹಕಾರಿಯಾಗಿದೆ.
ಬಾಹ್ಯಾಕಾಶ ದಿನವನ್ನು ಹೇಗೆ ಆಚರಿಸಲಾಗುತ್ತಿದೆ?
ಬಾಹ್ಯಾಕಾಶ ದಿನವನ್ನು ಆಗಸ್ಟ್ 23ಕ್ಕೆ ಆಚರಿಸಿ ಬಾಹ್ಯಕಾಶದಲ್ಲಿ ಭಾರತ ಮಾಡಿದ ಸಾಧನೆಗಳನ್ನು ಮೆಲುಕು ಹಾಕಿ ಮಾಡಲಿರುವ ಸಾಧನೆಗಳ ಬಗ್ಗೆ ಅವಲೋಕಿಸಲಾಗುವುದು. ಬಾಹ್ಯಾಕಾಶ ದಿನದ ಅಂಗವಾಗಿ ಹಲವು ಚಟುವಟಿಕೆಗಳು ನಡೆಯಲಿದೆ, ಇದು ಒಂದು ದಿನಕ್ಕೆ ಸೀಮಿತವಾಗಿಲ್ಲ ಇನ್ನೂ ಕೆಲವು ದಿನಗಳವರೆಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರದರ್ಶನ, ವಿಚಾರಗೋಷ್ಠಿ, ಚಂದ್ರಯಾನ 3 ಸಾಕ್ಷ್ಯ ಚಿತ್ರ ಪ್ರದರ್ಶನ ಹೀಗೆ ಹಲವು ಚಟುವಟಿಕೆಗಳನ್ನು ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಡಿಬೇಟ್, ಕ್ವಿಜ್ ಮುಂತಾದ ಕಾರ್ಯಕ್ರಮಗಳು ಕೂಡ ನಡೆಯಲಿದೆ.



Click it and Unblock the Notifications
