Latest Updates
-
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕರ್ನಾಟಕದ ಈ ಸ್ಥಳದಲ್ಲಿ ಮಾತ್ರ ರಾಷ್ಟ್ರಧ್ವಜ ತಯಾರಾಗುತ್ತೆ: ಈ 9 ಗಾತ್ರದಲ್ಲಿ ಮಾತ್ರ ರಾಷ್ಟ್ರಧ್ವಜ ಮಾಡಬೇಕು
ನಮ್ಮ ರಾಷ್ಟ್ರಧ್ವಜವನ್ನು ನೋಡುವುದೇ ಆಕರ್ಷಕ. ಕೇಸರಿ, ಬಿಳಿ , ಹಸಿರು ಮಧ್ಯದಲ್ಲಿ ಅಶೋಕ ಚಕ್ರದ ಇರುವ ಧ್ವಜವು ನಮ್ಮ ಗುರುತು. ಭಾರತೀಯರು ಹೊರದೇಶದಲ್ಲಿ ಹೋಗಿ ಸಾಧನೆ ಮಾಡಿದಾಗ ಅವರ ಕೈಲ್ಲಿರುವ ಅಥವಾ ಮೈಯಲ್ಲಿರುವ ರಾಷ್ಟ್ರಧ್ವಜವನ್ನು ನಮ್ಮ ಮೈ ರೋಮಾಂಚನವಾಗುವುದು.

ತ್ರಿವಣ ಧ್ವಜ ನಿಮಗೆ ದೇಶದ ಉದ್ದಗಲದಲ್ಲಿ ಕಾಣಬಹುದು ಅದರಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ಹೀಗೆ ರಾಷ್ಟ್ರ ಹಬ್ಬಗಳಲ್ಲಿ ಪ್ರತಿ ಆಫೀಸ್ ಮುಂದೆ ತ್ರಿವರ್ಣ ಧ್ವಜ ಹಾರಾಡುತ್ತಿರುತ್ತಿದೆ, ಇದನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ನಮ್ಮ ಈ ರಾಷ್ಟ್ರಧ್ವಜವನ್ನು ಮಾಡುವುದು ದೇಶದ ಒಂದೇ ಒಂದು ಜಾಗದಲ್ಲಿ ಮಾತ್ರ ಅದು ಕರ್ನಾಟದ ಹುಬ್ಬಳ್ಳಿಯಲ್ಲಿ.
1.
ಕರ್ನಾಟಕದ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದವರು ಮಾತ್ರ ರಾಷ್ಟ್ರ ಧ್ವಜವನ್ನು ತಯಾರಿಸುತ್ತಾರೆ. ಇಲ್ಲಿ ರಾಷ್ಟ್ರಧ್ವಜ ತಯಾರಾಗಿ ಇಡೀ ದೇಶಕ್ಕೆ ಪೂರೈಕೆಯಾಗುವುದು.
ಕೆಕೆಜಿಎಸ್ಎಸ್ ಇತಿಹಾಸದ ಬಗ್ಗೆ ಕಿರು ಮಾಹಿತಿ:
ಕರ್ನಾಟಕದ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವನ್ನು 1957 ನವೆಂಬರ್ 1ಕ್ಕೆ ಸ್ಥಾಪಿಸಲಾಯಿತು. 2006ರಲ್ಲಿ ಇಲ್ಲಿ ತಯಾರಾದ ಧ್ವಜಕ್ಕೆ BIS standard(ureau of Indian Standards)ಸಿಕ್ಕಿದೆ. ಎಲ್ಲಾ ಧ್ವಜಗಳನ್ನು ಬಿಐಎಸ್ ಸ್ಟ್ಯಾಂಡರ್ಡ್‌ನಲ್ಲಿಯೇ ತಯಾರಿಸಲಾಗಿದೆ.
2.
BIS ಸ್ಟ್ಯಾಂಡರ್ಡ್ ಪಡೆಯುವುದು ಅಷ್ಟು ಸುಲಭವಲ್ಲ
ರಾಷ್ಟ್ರಧ್ವಜವನ್ನು ತಯಾರಿಸಲು ಕೆಲವೊಂದು ಮಾನದಂಡಗಳಿವೆ, ಅದರಂತೆಯೇ ತಯಾರಿಸಬೇಕು.
ಈ ಸೈಜ್‌ಗಳಲ್ಲಿ ರಾಷ್ಟ್ರಧ್ವಜವನ್ನು ಮಾಡಲಾಗುವುದು
6300 x 4200 (ಮಿ.ಮೀ): ಅಶೋಕ ಚಕ್ರ-1295 ಮಿಮೀ
3600 x 2400 (ಮಿ.ಮೀ) ಅಶೋಕ ಚಕ್ರ-740 ಮಿಮೀ
2700 x 1800 (ಮಿ.ಮೀ) ಅಶೋಕ ಚಕ್ರ-555 ಮಿಮೀ
1800 x 1200 (ಮಿ.ಮೀ) ಅಶೋಕ ಚಕ್ರ-370 ಮಿಮೀ
1350 x 900 (ಮಿ.ಮೀ) ಅಶೋಕ ಚಕ್ರ-280 ಮಿಮೀ
900 x 600 (ಮಿ.ಮೀ)ಅಶೋಕ ಚಕ್ರ-185 ಮಿಮೀ
450 x 300 (ಮಿ.ಮೀ)ಅಶೋಕ ಚಕ್ರ-90 ಮಿಮೀ
225 x 150 (ಮಿ.ಮೀ)ಅಶೋಕ ಚಕ್ರ-40ಮಿಮೀ
150 x 100 (ಮಿ.ಮೀ)ಅಶೋಕ ಚಕ್ರ-25 ಮಿಮೀ
3.
ರಾಷ್ಟ್ರಧ್ವಜದಲ್ಲಿ ಚಿಕ್ಕ ವ್ಯತ್ಯಾಸವಾದರೂ ಶಿಕ್ಷೆ ಅನುಭವಿಸಬೆಕು
ರಾಷ್ಟ್ರಧ್ವಜದಲ್ಲಿ ಯಾವುದೇ ಲೋಪ ಇರಬಾರದು. ಅದರ ಬಣ್ಣದಲ್ಲಿ ಆಗಲಿ, ಬಳಸಿದ ನೂಲಿನಲ್ಲಾಗಲಿ, ಗಾತ್ರದಲ್ಲಿಯಾಗಲಿ ಒಂದಿಷ್ಟೂ ವ್ಯತ್ಯಾಸ ಉಂಟಾಗಬಾರದು, ರಾಷ್ಟ್ರದ್ವಜ ತಪ್ಪಾಗಿ ಪ್ರಿಂಟ್ ಮಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಿ ಶಿಕ್ಷೆ ನೀಡಲಾಗುವುದು.
4.
ಯಾವುದೇ ಮೆಷಿನ್ ಬಳಸಿ ಇದನ್ನು ಮಾಡುವುದಿಲ್ಲ
ಇದನ್ನು ಮೆಷಿನ್‌ನಲ್ಲಿ ಮಾಡುವುದಿಲ್ಲ, ಕೈಯಿಂದಲೇ ನೇಯ್ದು ಮಾಡಲಾಗುವುದು, ಮಹಿಳೆಯರು ರಾಷ್ಟ್ರ್ರಧ್ವಜವನ್ನು ತಯಾರಿಸುತ್ತಾರೆ.



Click it and Unblock the Notifications











