Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಸಹರಾ ಇನ್ಮುಂದೆ ಮರುಭೂಮಿ ಅಲ್ಲ..! ಹಸಿರಾಗಿ ಬದಲಾಗುತ್ತಿದೆ ಒಣಭೂಮಿ
ಮರುಭೂಮಿ ಅಂದರೆ ನಮಗೆ ಭಾರತದಿಂದ ಪಾಕ್‌ವರೆಗೂ ಹರಡಿರುವ ಥಾರ್ ಮರುಭೂಮಿ ನೆನಪಾಗಬಹುದು. ಮತ್ತೆ ಕೆಲವರಿಗೆ ಸೌಧಿ ಅರೇಬಿಯಾದ ವಿಸ್ತಾರವಾದ ಮರುಭೂಮಿಗಳು ಕಣ್ಣ ಮುಂದೆ ಬರಬಹುದು. ಮರುಭೂಮಿ ಅಂದರೆ ಅಲ್ಲಿ ಮರುಳು ಬಿಟ್ಟರೆ ಬೇರೆನು ಇರುವುದಿಲ್ಲ ಒಂದು ಹನಿ ನೀರು ಸಹ ಸಿಗುವುದಿಲ್ಲ ಎಂದು ನಾವು ನಂಬಿದ್ದೇವೆ.
ಬಹುತೇಕ ಎಲ್ಲಾ ಮರುಭೂಮಿಗಳು ಸಹ ಇದೇ ರೀತಿ ಇವೆ. ಅಲ್ಲಿ ಅಲ್ಲೊಂದು ಇಲ್ಲೊಂದು ಮರ ಗಿಡಗಳು, ಸಣ್ಣ ಪುಟ್ಟ ಜೀವಿಗಳು ಕಾಣಸಿಗುತ್ತವೆ. ವಿಶ್ವದ ಅತ್ಯಂತ ದೊಡ್ಡ ಮರುಭೂಮಿಯಲ್ಲಿ ಸಹರಾ ಮರುಭೂಮಿ ಸಹ ಒಂದಾಗಿದೆ. ಆಫ್ರಿಕಾ ಖಂಡದಾದ್ಯಂತ ಆವರಿಸಿರುವ ಸಹರ ಮರುಭೂಮಿ ಕುರಿತು ನೀವೆಲ್ಲ ತಿಳಿದಿರುತ್ತೀರಿ.

ಮಾನವರ ವಾಸ ಕಡಿಮೆ ಇರುವ ಈ ಭಾಗದಲ್ಲಿ ನೀವು ಕಣ್ಣು ಹಾಯಿಸಿದಷ್ಟು ದೂರ ಬರಿ ಮರಳು ಬಿಟ್ಟು ಬೇರೇನು ಕಾಣುವುದಿಲ್ಲ. ಆದ್ರೆ ಈಗ ಈ ಮರುಭೂಮಿ ಹಸಿರು ಭೂಮಿಯಾಗಿ ಬದಲಾಗುತ್ತಿದೆ. ಹೌದು ಒಂದು ಕಡೆ ಅರಣ್ಯ ಭೂಮಿ ನಾಶವಾಗಿ ನಾವೇ ಮರುಭೂಮಿ ಸೃಷ್ಟಿಸುತ್ತಿದ್ದೇವೆ. ಆದ್ರೆ ಈ ಮರುಭೂಮಿ ಈಗ ಹಸಿರಾಗಿ ಬದಲಾಗುತ್ತಿದೆ.
ನಾಸಾ ತನ್ನ ಉಪಗ್ರಹದ ಮೂಲಕ ಸೆರೆಹಿಡಿದಿರುವ ಇತ್ತೀಚಿನ ಫೋಟೋಗಳನ್ನು ಬಿಡುಗಡೆ ಮಾಡಿದೆ. ಈ ಫೋಟೋದಲ್ಲಿ ಸಹರಾ ಮರುಭೂಮಿ ಯಾರು ಊಹಿಸದ ರೀತಿಯಲ್ಲಿ ಮರುಭೂಮಿ ಬದಲಾಗುತ್ತಿದೆ. ಈ ಮೊದಲು ಸೌದಿಯ ಮರುಭೂಮಿ ಹಸಿರಾಗುತ್ತಿರುವ ಕುರಿತು ನಾಸಾ ತನ್ನ ಫೋಟೋಗಳಲ್ಲಿ ಹಾಗೂ ಕೆಲವು ವಿಡಿಯೋಗಳು ಹರಿದಾಡಿದ್ದವು. ಅದರಲ್ಲಿ ಸೌಧಿಯ ಮರುಭೂಮಿ ಹಸಿರು ಹಸಿರಾಗಿ ಬದಲಾಗುತ್ತಿರುವುದು ಕಂಡುಬಂದಿತ್ತು.
ಆದ್ರೆ ಯಾವು ಊಹಿಸದ ರೀತಿ ಸಹರ ಮರುಭೂಮಿ ಕೂಡ ಹಸಿರಾಗುತ್ತಿದೆ. ನಾಸಾದ ಉಪಗ್ರಹ ಚಿತ್ರಗಳು ಸೆಪ್ಟೆಂಬರ್ 7 ಮತ್ತು 8 ರಂದು ವಾಯುವ್ಯ ಆಫ್ರಿಕಾದ ಭಾಗಗಳನ್ನು ಸೆರೆಹಿಡಿದಿದೆ. ಮೊರಾಕೊ, ಅಲ್ಜೀರಿಯಾ, ಟುನೀಶಿಯಾ ಮತ್ತು ಲಿಬಿಯಾದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಇದು ಸಹರ ಮರುಭೂಮಿಯ ಅಂಚಿನಲ್ಲಿ ಕಂಡು ಬರುವ ಪ್ರದೇಶವಾಗಿದೆ. ಆದರೆ ಅಚ್ಚರಿಯಾಗಿ ಈ ಪ್ರದೇಶಗಳು ಹಸಿರಾಗಿ ಬದಲಾಗಿವೆ.
ಕೆಲ ವರ್ಷದಲ್ಲಿ ಈ ಭಾಗದಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದೆ. ಈ ಮಳೆಯಿಂದ ಅಲ್ಲಿನ ಅಂತರ್ಜಲ ಮಟ್ಟದಲ್ಲಿ ಭಾರೀ ಬದಲಾವಣೆಯಾಗಿದೆ ಎಂದು ತಿಳಿದುಬಂದಿದೆ. ಸಹಾರದ ಈಗಿನ ಮರುಭೂನಿ ಪ್ರದೇಶವು 11,000 ಮತ್ತು 5,000 ವರ್ಷಗಳ ಹಿಂದೆ ಸಸ್ಯವರ್ಗ ಮತ್ತು ಸರೋವರಗಳಿಂದ ಆವೃತವಾಗಿತ್ತು ಎಂದು ಡಿ ಮೆನೋಕಲ್ ಅವರ ಹಿಂದಿನ ಸಂಶೋಧನೆಯು ಸೂಚಿಸುತ್ತದೆ. ಕಾಲಾನುಕ್ರಮದಲ್ಲಿ ಅಲ್ಲಿನ ಪರಿಸರ ಹಾನಿ ಹಾಗೂ ಮಳೆ ಕೊರತೆಯೂ ಭೂಮಿಯನ್ನು ಬರಡಾಗಿಸಿತ್ತು. ಆದರೆ ಈಗ ಮತ್ತೆ ಹಸಿರು ಪೊದೆಯ ಕುರುಚಲು ಗಿಡಗಳು ಬೆಳೆಯಲು ಆರಂಭಿಸಿದೆ ಎಂದು ತಿಳಿದುಬಂದಿದೆ.
ಇನ್ನು ಸೌಧಿಯ ಬೃಹತ್ ವಿಸ್ತಾರವಾದ ಮರುಭೂಮಿಯೂ ಕೂಡ ಹಸಿರಾಗಿ ಪರಿವರ್ತನೆಯಾಗುತ್ತಿರುವ ಕುರಿತಿ ಈ ಹಿಂದೆ ಹತ್ತು ಹಲವು ವಿಡಿಯೋಗಳು ಹರಿದಾಡಿದ್ದವು, ಜನ ಇದು ಹೇಗೆ ಸಾಧ್ಯ ಎಂದು ಹುಬ್ಬೇರಿಸಿ ನೋಡುವಂತಾಗಿತ್ತು.



Click it and Unblock the Notifications











