Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವಿಚಿತ್ರ ಮೂಲದಿಂದ ರೇಡಿಯೋ ತರಂಗ ಸ್ವೀಕರಿಸಿದ ನಾಸಾ..!
ಅನ್ಯಗ್ರಹ ಜೀವಿಗಳು ಹಾಗೂ ಬೇರೆ ಗ್ರಹದ ಕುರಿತ ಕುತೂಹಲ ಜನರಲ್ಲಿ ಹಾಗೂ ವಿಜ್ಞಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ನಿತ್ಯವೂ ಒಂದಲ್ಲಾ ಒಂದು ಅಚ್ಚರಿ ಹುಟ್ಟಿಸುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಜಗತ್ತಿನ ಮೂಲೆ ಮೂಲೆಯಲ್ಲಿ ಈ ಏಲಿಯನ್‌ಗಳು, ಯುಎಫ್‌ಓಗಳ ಕುರಿತು ಕುತೂಹಲಕಾರಿ ಘಟನೆಗಳು ನಡೆಯುತ್ತಲೇ ಇವೆ.
ಆದ್ರೆ ಈಗ ಮತ್ತೊಂದು ಘಟನೆಯಿಂದ ನಾಸಾ ಮಾತ್ರವಲ್ಲ ಇಡೀ ವಿಜ್ಞಾನಿಗಳ ತಂಡ ಅಚ್ಚರಿಗೆ ಒಳಗಾಗಿದೆ. ಬಾಹ್ಯಾಕಾಶದಲ್ಲಿ ವಿಚಿತ್ರ ರೇಡಿಯೋ ಸಿಗ್ನಲ್‌ಗಳು ನಾಸಾದ ವಿಜ್ಞಾನಿಗಳ ನಿದ್ದೆ ಗೆಡಿಸಿದೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ನಾವು ಅನೇಕ ವಿಚಿತ್ರ ಸುದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಅನೇಕರು ಏಲಿಯನ್‌ಗಳು ಇವೆ ಎಂದು ನಂಬಿದ್ದಾರೆ.

ಹಲವಾರು ಬಾಹ್ಯಾಕಾಶ ಸಂಸ್ಥೆಗಳು ಹೊಸ ಗ್ರಹ, ಹೊಸ ಜೀವಿಗಳು, ಏಲಿಯನ್‌ಗಳ ಜಾಡು ಪತ್ತೆಗೆ ಮುಂದಾಗಿರುತ್ತಾರೆ. ಆದರೆ ಇದಕ್ಕೆ ಪುರಾವೆ ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ಆದರೆ ಇತ್ತೀಚಿಗೆ ನಾಸಾ ವಿಚಿತ್ರ ಸಿಗ್ನಲ್‌ಗಳ ಸ್ವೀಕರಿಸಿರುವ ಕುರಿತ ಸುದ್ದಿ ಹರಿದಾಡುತ್ತಿದ್ದು, ಕುತೂಹಲ ಮೂಡಿಸಿದೆ.
The Conversation.com ವರದಿಯ ಪ್ರಕಾರ, ಖಗೋಳಶಾಸ್ತ್ರಜ್ಞರು ಇತ್ತೀಚೆಗೆ ಕೆಲವು ಅಸಾಮಾನ್ಯ ರೇಡಿಯೋ ತರಂಗಗಳನ್ನು ಪತ್ತೆಹಚ್ಚಿದ್ದಾರೆ. ಖಗೋಳಶಾಸ್ತ್ರಜ್ಞರು ಇಲ್ಲಿಯವರೆಗೆ ಅಂತಹ ಸಂಕೇತಗಳನ್ನು ಸ್ವೀಕರಿಸಿರಲಿಲ್ಲವಂತೆ. ವರದಿ ಜನರಲ್ಲಿ ಕುತೂಹಲ ಮತ್ತು ಭಯ ಮೂಡಿಸಿದೆ. ಮಧ್ಯಂತರ ಸಂಕೇತದ ಪ್ರತಿ ಚಕ್ರವು ಸುಮಾರು ಒಂದು ಗಂಟೆಯವರೆಗೆ ಇರುತ್ತದೆ ಎಂದು ಖಗೋಳಶಾಸ್ತ್ರಜ್ಞರು ಸಿಗ್ನಲ್‌ಗಳು ಆಶ್ಚರ್ಯಕರವಾಗಿವೆ ಎಂದು ಹೇಳಿದ್ದಾರೆ.
ಈ ವಿಚಿತ್ರ ಸಂಕೇತಗಳು ಕೆಲವೊಮ್ಮೆ ದೀರ್ಘವಾದ ಶಬ್ದವನ್ನು ಹೋಲುತ್ತವೆ ಮತ್ತು ಕೆಲವೊಮ್ಮೆ ಇದು ಪ್ರಕಾಶಮಾನವಾದ ಫ್ಲ್ಯಾಷ್‌ನಂತೆ ಗೋಚರಿಸುತ್ತದೆ ಎಂದು ವರದಿ ಹೇಳಿದೆ. ಮೊದಲ ಸ್ಥಿತಿಯಲ್ಲಿ, ನಾವು ಪ್ರಕಾಶಮಾನವಾದ, ರೇಖಾತ್ಮಕವಾಗಿ ಅಂದರೆ ನೇರವಾಗಿ ಯಾವ ಏರಿಳಿತ ಇಲ್ಲದ 10 ರಿಂದ 50 ಸೆಕೆಂಡುಗಳವರೆಗೆ ಈ ಸಂದೇಶ ನೋಡುತ್ತೇವೆ. ಎರಡನೆಯ ಸ್ಥಿತಿಯಲ್ಲಿ, ಈ ಸಂದೇಶ ವೃತ್ತಾಕಾರವಾಗಿ ಕೇವಲ 370 ಮಿಲಿ ಸೆಕೆಂಡುಗಳ ವರೆಗೆ ಕಂಡುಬಂದಿದೆ. ಆದರೆ ಮೂರನೇ ಸ್ಥಿತಿಯಲ್ಲಿ ಯಾವುದೇ ಏರಿಳಿತವಿಲ್ಲದೆ ನೀಳವಾದ ತರಂಗವಾಗಿದೆ. ಆದರೆ ಈ ನ್ಯೂಟ್ರಾನ್ ಅಲೆಗಳು ಎಲ್ಲಿಂದ ಬಂದಿವೆ ಎಂಬುದನ್ನು ತಿಳಿಯಲು ವಿಜ್ಞಾನಿಗಳು ಮುಂದಾಗಿದ್ದಾರೆ.
ಇಷ್ಟು ದೀರ್ಘಾವಧಿಯೊಂದಿಗೆ ಸಿಗ್ನಲ್‌ನ ಮೂಲವು ನಿಗೂಢವಾಗಿಯೇ ಉಳಿದಿದೆ ಎಂದು ವರದಿ ಹೇಳಿದೆ. ನಿಧಾನವಾಗಿ ಸುತ್ತುತ್ತಿರುವ ನ್ಯೂಟ್ರಾನ್ ನಕ್ಷತ್ರದಿಂದ ಸಂಕೇತಗಳು ಬರುತ್ತಿವೆ ಎಂದು ಖಗೋಳಶಾಸ್ತ್ರಜ್ಞರು ಶಂಕಿಸಿದ್ದಾರೆ. ಆದರೆ ಇದು ಎಲ್ಲಿಂದ ಬಂದಿವೆ ಎಂಬ ಮೂಲದ ಕುರಿತು ಪತ್ತೆ ಮಾಡಲಾಗಿಲ್ಲ.
ಇನ್ನು ಇತ್ತೀಚಿಗೆ ನಾಸಾ ಹೊಸ ಗ್ರಹವೊಂದು ಪತ್ತೆಯಾಗಿರುವುದಾಗಿ ನಾಸಾ ತಿಳಿಸಿತ್ತು. ಭೂಮಿಯನ್ನೇ ಹೋಲುವ ಗ್ರಹ ಇದಾಗಿದ್ದು, ವಾಸಾಯೋಗ್ಯ ವಾತಾವರಣವೂ ಇದೆ ಎಂದಿತ್ತು. ಆದರೆ ನಮ್ಮ ಸೌರಮಂಡಲದಿಂದ ಲಕ್ಷ ಲಕ್ಷ ಬೆಳಕಿನ ವರ್ಷಗಳ ದೂರದಲ್ಲಿ ಈ ಗ್ರಹವಿದೆ ಎಂದು ತಿಳಿಸಿತ್ತು, ಸದ್ಯ ಭೂಮಿಗೆ ಹತ್ತಿರವಿರುವ ವಾಸಯೋಗ್ಯ ಗ್ರಹಗಳಲ್ಲಿ ಇದು ಅತ್ಯಂತ ಸಮೀಪದ್ದು ಎಂದಿತ್ತು.
ಇದಿಷ್ಟೇ ಅಲ್ಲ ಈ ಮೊದಲು ಅಮೆರಿಕ, ಜಪಾನ್ ಸೇರಿ ಹಲವು ಭಾಗದಲ್ಲಿ ವಿಚಿತ್ರ ವಸ್ತುಗಳು ಆಕಾಶದಲ್ಲಿ ಕಂಡು ಬಂದಿತ್ತು. ಆಕಾಶದಲ್ಲಿ ವಿಚಿತ್ರ ಹಾರುವ ತಟ್ಟೆಗಳಂತಹ ವಸ್ತುಗಳು, ಬೆಳಕು ಮೂಡಿ ಅಚ್ಚರಿಗೆ ಕಾರಣವಾಗಿತ್ತು, ಆದರೆ ಇದ್ಯಾವುದಕ್ಕೂ ನಿಖರ ಮೂಲ ಹಾಗೂ ಕಾರಣ ತಿಳಿದುಬಂದಿರಲಿಲ್ಲ. ಆದರೆ ಈ ರೀತಿಯ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದ ಕಾರಣ ಭಾರೀ ಆತಂಕ ಹಾಗೂ ಕುತೂಹಲ ಹೆಚ್ಚುವಂತೆ ಮಾಡಿತ್ತು. ಅದರಲ್ಲೂ ಯುಎಫ್‌ಒಗಳು ಪತ್ತೆಯಾದ ಕುರಿತು ವರದಿಗಳು ಆನ್‌ಲೈನ್‌ಗಳು ವೈರಲ್ ಆಗುತ್ತಿದ್ದ ಬಳಿಕ ಹಲವು ಚರ್ಚೆ ಆರಂಭವಾಗಿತ್ತು.



Click it and Unblock the Notifications