Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಚಂದ್ರನ ಮೇಲೆ ರೈಲು ನಿಲ್ದಾಣಕ್ಕೆ ಮುಂದಾದ ನಾಸಾ..!
ಮಾನವರಿಗೆ ಚಂದ್ರ ಅಂದ್ರೆ ಅದೇನು ಪ್ರೀತಿ, ಆತನ ಮೇಲಿನ ನಿಗೂಢತೆ ಅನಾವರಣ ಮಾಡುವ ಸಾಹಸ ಮಾಡುತ್ತಲೇ ಇರುತ್ತಾರೆ. ಭೂಮಿಯನ್ನು ಬಿಟ್ಟರೆ ಮಾನವ ಚಂದ್ರನ ಮೇಲೆ ಹೆಚ್ಚಿನ ಒಲವು. ಆತನ ಮೇಲೆ ಇಳಿಯುವುದು ಆತನ ಮೇಲೆ ಉಪಗ್ರಹ ಉಡಾವಣೆ ಮಾಡಿ ಅಧ್ಯಯನಕ್ಕೆ ಮುಂದಾಗುವುದು ನಡೆಯುತ್ತಲೇ ಇದೆ.
ನಾಸಾ, ಇಸ್ರೋ ಸೇರಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ಕುರಿತ ಅಧ್ಯಯನಕ್ಕೆ ಹಲವು ಯೋಜನೆ ರೂಪಿಸಿ ಯಶಸ್ವಿಯೂ ಆಗಿವೆ. ಚಂದ್ರನ ಮೇಲೆ ನೀರು ಇರುವ ಕುರತಂತೆಯೂ ಅಧ್ಯನ ನಡೆದಿದೆ. ಇದರ ಜೊತೆಗೆ ಚಂದ್ರನ ಮೇಲೆ ಮತ್ತೊಮ್ಮೆ ಮಾನವರ ಇಳಿಸಲು ಈಗಾಗಲೇ ಸಿದ್ಧತೆ ನಡೆಯುತ್ತಿದೆ.

ಇತ್ತ ಚಂದ್ರನ ಮೇಲೆ ಭೂಮಿ ಖರೀದಿ, ಕಾಲೋನಿ ನಿರ್ಮಾಣದಂತಹ ಅಚ್ಚರಿ ಹುಟ್ಟಿಸುವ ಕಾರ್ಯವು ನಡೆದಿದೆ. ಚಂದ್ರನ ಮೇಲೆ ಭೂಮಿ ಖರೀದಿಸಲು ಹಲವರು ಉತ್ಸುಕರಾಗಿದ್ದಾರೆ. ಆದ್ರೆ ಇದೆಲ್ಲದರ ನಡುವೆ ನಾಸಾ ಯಾರು ಊಹಿಸದ ಕಾರ್ಯಕ್ಕೆ ಮುಂದಾಗಿದೆ. ಅದೇನೆಂದರೆ ಚಂದ್ರನ ಮೇಲೆ ರೈಲು ನಿಲ್ದಾಣ ನಿರ್ಮಿಸಲು ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಹೌದು ಅಚ್ಚರಿ ಎನಿಸಬಹುದು. ಭೂಮಿ ಮೇಲೆಯೇ ಇನ್ನು ಅದೆಷ್ಟೋ ಸ್ಥಳಗಳಿಗೆ ಸರಿಯಾದ ಸಂಪರ್ಕವಿಲ್ಲ. ರೈಲು ಮಾರ್ಗವಿಲ್ಲ, ವಿಮಾನ ಸೇವೆಯಂತು ದೂರದ ಮಾತು. ಆದ್ರೆ ಚಂದ್ರನ ಮೇಲೆ ನಾಸಾ ಈಗ ರೈಲು ನಿಲ್ದಾಣ ಮಾಡಲು ಹೊರಟಿದೆ.
ಈ ರೈಲು ನಾವು ಭೂಮಿಯ ಮೇಲಿರುವ ರೈಲುಗಳಿಗಿಂತ ಭಿನ್ನವಾಗಿರುತ್ತದೆ. ಫ್ಲೆಕ್ಸಿಬಲ್ ಲೆವಿಟೇಶನ್ ಆನ್ ಎ ಟ್ರ್ಯಾಕ್ (ಫ್ಲೋಟ್) ಎಂಬ ತಂತ್ರವು ಮೂರು-ಪದರದ ಹೊಂದಿಕೊಳ್ಳುವ ಫಿಲ್ಮ್ ಟ್ರ್ಯಾಕ್‌ನಲ್ಲಿ ಮ್ಯಾಗ್ನೆಟಿಕ್ ಲೆವಿಟೇಶನ್ ಅನ್ನು ಬಳಸುತ್ತದೆ.
ಇವುಗಳು ಶಕ್ತಿಯಿಲ್ಲದ ಮ್ಯಾಗ್ನೆಟಿಕ್ ರೋಬೋಟ್‌ಗಳಾಗಿದ್ದು, ಅವು ಗ್ರ್ಯಾಫೈಟ್ ಪದರದ ಮೇಲೆ ಚಲಿಸುತ್ತವೆ ಮತ್ತು ಡಯಾಮ್ಯಾಗ್ನೆಟಿಕ್ ಲೆವಿಟೇಶನ್ ಬಳಸಿ ಹಳಿಗಳ ಮೇಲೆ ತೇಲುತ್ತವೆ. ಇದೇ ಮಾದರಿಯಲ್ಲಿ ಈ ತಂತ್ರಜ್ಞಾನ ಬಳಸಿ ನಾಸಾ ಈಗ ರೈಲು ಮಾರ್ಗ ಮಾಡಲು ಹೊರಟಿದೆ.
ಈ ಪ್ಲೋಟಿಂಗ್ ರೋಬೋಟ್‌ಗಳು ಯಾವುದೇ ಚಲಿಸುವ ವಸ್ತುಗಳ ಹೊಂದಿರುವುದಿಲ್ಲ. ಚಂದ್ರನ ಧೂಳಿನ ಸವೆತ ಕಡಿಮೆ ಮಾಡಲು ಟ್ರ್ಯಾಕ್‌ನ ಮೇಲೆ ಚಲಿಸುತ್ತವೆ ಎಂದು ನಾಸಾ ಹೇಳಿದೆ. ಇಲ್ಲಿ ಚಂದ್ರನ ಮೇಲೆ ಯಾವುದೇ ಕಾಮಗಾರಿ ನಡೆಸುವ ಅಗತ್ಯವಿರುವುದಿಲ್ಲ.
ಫ್ಲೋಟ್ ವಿನ್ಯಾಸದ ರೋಬೋಟ್‌ಗಳು ಪ್ರತಿ ಸೆಕೆಂಡಿಗೆ 0.5 ಮೀಟರ್‌ಗಳಷ್ಟು ವಿವಿಧ ರೂಪಗಳ ಪೇಲೋಡ್‌ಗಳನ್ನು ಸಾಗಿಸಬಲ್ಲವು, ಆದರೆ ದೊಡ್ಡ-ಪ್ರಮಾಣದ ಫ್ಲೋಟ್ ವ್ಯವಸ್ಥೆಯು ದಿನಕ್ಕೆ 1,00,000 ಕೆಜಿ ರೆಗೋಲಿತ್ ಅನೇಕ ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ.
ಈ ಯೋಜನೆಯಲ್ಲಿ ರೋಬೋಟ್fಗಳು ಚಂದ್ರನ ಮೇಲ್ಮೈ ಮೇಲಿನ ಎಲ್ಲಾ ಹಂತದ ಅಧ್ಯಯನಕ್ಕೆ ನೆರವಾಗಲಿದೆಯಂತೆ. ಈ ಈ ರೋಬೋಟ್‌ಗಳು ಸ್ವಯಂ ಎಲೆಕ್ಟ್ರಿಕ್ ವಾಹಕಗಳ ಮೂಲಕ ಕೆಲಸ ಮಾಡಲಿದೆ, ಸೋಲಾರ್ ಮೂಲಕ ಚಾರ್ಜ್ ಆಗಿ ಕಾರ್ಯನಿರ್ವಹಿಸಲಿವೆ. ಈ ತಂತ್ರಜ್ಞಾನವನ್ನು ನಾಸಾ ಬಳಕೆ ಮಾಡಲು ಮುಂದಾಗಿದೆ.
ಅದೇನೆ ಇರಲಿ ಮಾನವ ಭೂಮಿ ಮೇಲಿನ ಅನ್ವೇಷಣೆ, ಇಲ್ಲಿನ ಸೌಲಭ್ಯಗಳ ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಬದಲು ಚಂದ್ರನ ಮೇಲೆ ಸಂಪರ್ಕ ಕ್ರಾಂತಿಗೆ ಮುಂದಾಗಿದ್ದಾನೆ. ಚಂದ್ರನ ಮೇಲಿನ ಮಾನವನ ಕುತೂಹಲ ಇನ್ನೆಲ್ಲಿಗೆ ಕರೆದೊಯ್ಯಲಿದೆ ಎಂಬ ಕುತೂಹಲ ಮೂಡಿದೆ. ಇದಕ್ಕೂ ಮೊದಲು ನಾಸಾ ಚಂದ್ರನ ಮೇಲೆ ಕಾಲೋನಿ ನಿರ್ಮಿಸುವುದಾಗಿ ತಿಳಿಸಿತ್ತು. ಜೊತೆಗೆ ಚಂದ್ರನಲ್ಲಿ ರೋವರ್ ಇಳಿಸಿದ್ದ ಇಸ್ರೋ ಅಲ್ಲಿ ನೀರನ ಕುರಿತ ಅಚ್ಚರಿಯ ಮಾಹಿತಿ ಹಂಚಿಕೊಂಡಿತ್ತು. ದಕ್ಷಿಣ ದ್ರುವದಲ್ಲಿ ಈವೆರೆಗೆ ದಾಖಲಾಗದ ಹಲವು ಕುತೂಹಲಕಾರಿ ಅಂಶಗಳ ಬಯಲು ಮಾಡಿತ್ತು. ಮಂಜುಗಡ್ಡೆ ರೂಪದಲ್ಲಿ ನೀರು ಇರುವುದಾಗಿ ಇಸ್ರೋ ತಿಳಿಸಿತ್ತು.



Click it and Unblock the Notifications
