Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈಗ ಈ ನಂದಿನಿಯದ್ದೇ ಹವಾ... ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಬಾಯಲ್ಲಿ 'ನಾನು ನಂದಿನಿ'
ಈಗ ಎಲ್ಲೆಲ್ಲಿಯೂ 'ನಾನು ನಂದಿನಿ, ಬೆಂಗಳೂರಿಗ್ ಬಂದೀನಿ, ಪಿಜಿಯಲ್ಲಿ ಇರ್ತೀನಿ, ಐಟಿ ಕೆಲಸ ಮಾಡ್ತೀನಿ....... ಎಂಬ ಹಾಡೇ ಕಿವಿಗೆ ಬೀಳ್ತಾ ಇರಬಹುದು ಅಲ್ವಾ, ಈ ಹಾಡು ವೈರಲ್ ಆಗುವ ಮೂಲಕ ಇಂಟರ್‌ನೆಟ್ ಜಗತ್ತಿನಲ್ಲಿ ಹೊಸ ದಾಖಲೆಯನ್ನೇ ಬರಿದಿದೆ. ನಾಲ್ಕು ದಿನದ ಹಿಂದಿ ಪೋಸ್ಟ್ ಆದ ಈ ಹಾಡು ಇದೀಗ 16 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆ ಕಂಡಿದೆ. ಒಮ್ಮೆ ಕೇಳಿದರೆ ಮತ್ತೆ-ಮತ್ತೆ ಕೇಳಬೇಕೆನಿಸುವ ಈ ಹಾಡು ಕನ್ನಡಿಗರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈಗ ಮುದ್ದುಕುಮಾರ ವಿಕಾಸ್ ಅವರದ್ದೇ ಹವಾ....

vickypedia ಎಂಬ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತುಂಬಾನೇ ಕ್ರಿಯೇಟಿವ್ಸ್ ರೀಲ್ಸ್ ಮಾಡಿ ಹಾಕುವ ಮೂಲಕ ಮುದ್ದುಕುಮಾರ್ ವಿಕಾಸ್ ಗಮನ ಸೆಳೆಯುತ್ತಿರುತ್ತಾರೆ. ಇವರ ಕಂಟೆಂಟ್‌ಗಳು ತುಂಬಾನೇ ಕ್ರಿಯೇಟಿವ್, ಫನ್, ಜೊತೆಗೆ ವಾಸ್ತವಕ್ಕೆ ಸಮೀಪವಾಗಿರುತ್ತದೆ. ಹಾಗಾಗಿಯೇ ಇವರ ರೀಲ್ಸ್ ತುಂಬಾನೇ ಗಮನ ಸೆಳೆಯುತ್ತದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಂದಿನಿಯದ್ದೇ ಸದ್ದು... ಈ ರೀಲ್ಸ್ ಸೂಪರ್ ಹಿಟ್ ಆಗಲು ಪಾತ್ರಧಾರಿಗಳ ವೇಷ-ಭೂಷಣಗಳು ಕಾರಣವಾಗಿದೆ ಎಂಬುವುದರಲ್ಲಿ ನೋ ಡೌಟ್.
ಹಳ್ಲಿಯಿಂದ ಬಂದು ಮಾಡರ್ನ್ ಆಗಲು ನಮ್ಮ ಹೇರ್‌ಗೆ ಕಲರ್ ಹಾಕಿದರೂ ಹಣೆಯಲ್ಲಿ ದೊಡ್ಡದಾದ ಬಿಂದಿ ನಮ್ಮ ಮೂಲ ಬೇರಿನ ಸೊಗಡು ಬಿಡಲ್ಲ ಎಂದು ಹೇಳುವಂತಿದೆ. ಈ ಹಾಡಿನ ವೀಡಿಯೋ ನೋಡುತ್ತಿದ್ದರೆ ಮತ್ತೆ-ಮತ್ತೆ ನೋಡಬೇಕು, ಹಾಡು ಮತ್ತೆ ಕೇಳಬೇಕು ಎಂದನಿಸುವುದು, ಈಗಾಗಲೇ ಎಲ್ಲರ ಬಾಯಲ್ಲಿ ಈ ಹಾಡು ಗುನುಗುತ್ತಿದೆ.
ಕನ್ನಡ ಮೀಡಿಯಂನಲ್ಲಿ ಓದಿನ ಹಳ್ಳಿಯು ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದಾಗ ಅವಳು ಎದುರಿಸುವ ಸಮಸ್ಯೆಗಳ ಬಗ್ಗೆ ತುಂಬಾ ಫನ್ ಆಗಿ ಹೇಳಲಾಗಿದೆ. ಹಳ್ಳಿಯಿಂದ ಬೆಂಗಳೂರಿನಂಥ ದೊಡ್ಡ ಸಿಟಿಯಲ್ಲಿ ಪಿಜಿಯಲ್ಲಿ ನಿಂತು ಅವರು ಹಾಕುವ ಬಾಯಿಗೆ ರುಚಿಯಿಲ್ಲದ ಆಹಾರ ತಿಂದು ಕೆಲಸಕ್ಕೆ ಹೋಗುವ ಹುಡುಗಿ ಅಲ್ಲಿ ಎದುರಿಸುವ ಇಂಗ್ಲಿಷ್ ಭಾಷೆ ಸಮಸ್ಯೆ, ಅವಳ ಬಾಸ್ ಇಂಗ್ಲಿಷ್ ಕಲಿಯದಿದ್ದರೆ ಇಲ್ಲಿ ಕಷ್ಟ ಎಂದು ಹೇಳಿದಾಗ ಆತ್ಮವಿಶ್ವಾಸದಿಂದ I can try, I can Talk, But What Speak Is Butteler English ಎಂದು ಹೇಳುವ ರೀತಿ ಎಲ್ಲವೂ ತುಂಬಾನೇ ಇಷ್ಟವಾಗುವುದು.
ಈ ಹಾಡು ಇಷ್ಟೊಂದು ಇಷ್ಟವಾಗಲು ಕಾರಣ ಹಾಡು ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಇದೆ. ದೂರದ ಹಳ್ಳಿಯಿಂದ ಬೆಂಗಳೂರಿನಂಥ ಸಿಟಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ, ಪಿಜಿಯ ರುಚಿಯಿಲ್ಲದ ಆಹಾರ ತಿಂದು ಮನೆಗೆ ಹಣ ಕಳುಹಿಸುತ್ತಾರೆ, ಹೊರಗಡೆ ಬಂದರೆ ಅಲ್ಲಿಯೂ ಅವರಿಗೆ ಕೆಲವು ಸವಾಲುಗಳು, ಆಫೀಸ್‌ಗೆ ಹೋದರೆ ಭಾಷೆ, ಟಾರ್ಗೆಟ್ ಹೀಗೆ ನೂರಾರು ಬವಣೆಗಳ ಬದುಕು. ಈ ಹಾಡಿನಲ್ಲಿ ಅದೆಲ್ಲವನ್ನೂ ತುಂಬಾನೇ ಚೆನ್ನಾಗಿ ನಟಿಸಿ ತೋರಿಸಿದ್ದಾರೆ.
ಬಾರ್ಬಿ ಸಿನಿಮಾದಲ್ಲಿ ಕಮಾನ್ ಬೇಬಿ, ಲೆಟ್ಸ್ ಗೋ ಪಾರ್ಟಿ ಎಂಬ ಹಾಡಿನ ರೀತಿ ಕನ್ನಡದಲ್ಲಿ ಒಂದು ಹಾಡನ್ನು ರೆಡಿ ಮಾಡೋಣ ಎಂದು ವಿಕಾಸ್ ಯೋಚಿಸಿದಾಗ ಹುಟ್ಟಿಕೊಂಡಿದ್ದೇ ನಾನು ನಂದಿನಿ ಹಾಡು. ಇದು ಇಷ್ಟೊಂದು ಹಿಟ್ ಆಗಲು ಕಾರಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಹಾಡು ತುಂಬಾನೇ ಇಷ್ಟವಾಗಿದೆ.



Click it and Unblock the Notifications
