Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
'ನ್ಯಾನೋ ಬನಾನಾ' ಫೋಟೋ ಆರ್ಟ್ ವೈರಲ್: ನಿಮ್ಮ ಫೋಟೋ ಹೀಗೆ ಮಾಡೋದು ಹೇಗೆ?
ಈಗ ಪ್ರತಿಯೊಂದು ಟೆಕ್ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಈಗ ಎಐ ಹಿಂದೆ ಬಿದ್ದಿವೆ. ಎಲ್ಲಾ ಕೆಲಸಗಳಲ್ಲೂ ಎಐ ಬಳಕೆ ನೋಡಬಹುದು. ಎಐ ಬಳಸಿಕೊಂಡು ಹಲವು ದೊಡ್ಡ ದೊಡ್ಡ ಕಂಪನಿಗಳು ಕೆಲಸವನ್ನು ಸುಲಭವಾಗಿಸುತ್ತಿವೆ. ಇನ್ನು ಮಾನವರಿಂದ ಮಾಡಲು ಸಾಧ್ಯವಾಗದಂತಹ ಕೆಲವು ಕೆಲಸವನ್ನು ಮಾಡುತ್ತಿರುವುದು ಸಹ ನೋಡಬಹುದು.
ಈ ಹಿಂದೆ ಗಿಬ್ಲಿ ಆರ್ಟ್ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಚಾಟ್ ಜಿಪಿಟಿಯಲ್ಲಿ ನಿಮ್ಮ ಫೋಟೋ ಹಾಕಿದರೆ ಕಾರ್ಟೂನ್ ರೀತಿಯಲ್ಲಿ ಬದಲಾಯಿಸಿ ಕೊಡುತ್ತಿತ್ತು. ಈ ಆರ್ಟ್ ಸುದ್ದಿಯಾದ ಬಳಿಕ ಈಗ 'ನ್ಯಾನೋ ಬನಾನಾ' ಎಂಬ ಹೊಸ ಟ್ರೆಂಡ್ ಆರಂಭಗೊಂಡಿದೆ.

ನಿಮ್ಮ ಫೋಟೋವನ್ನ 3ಡಿ ಯಾಗಿ ಬದಲಾಯಿಸುವ ನೀಡುವ ಎಐ ತಂತ್ರಜ್ಞಾನ ಇದಾಗಿದೆ. ಇದರಲ್ಲಿ ನಿಮ್ಮ ಫೋಟೋವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿ ಕೊಡಲಿದೆ. ಇದು ಈಗ ಟ್ರೆಂಡ್ ಆಗುತ್ತಿರುವ ಎಐ ಫೋಟೋ ಆಗಿದೆ. ಗೂಗಲ್ ಜೆಮಿನಿ ಇಂತಹ ಟ್ರೆಂಡ್ ಸೃಷ್ಟಿಗೆ ಕಾರಣವಾಗಿದೆ. ಈ ಟ್ರೆಂಡ್ ಅನ್ನು ಸೆಲೆಬ್ರಿಟಿಗಳಿಂದ ಹಿಡಿದು ಪ್ರಾಣಿಗಳ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಂದು ಫೋಟೋ ಅಪ್‌ಲೋಡ್ ಮಾಡಿದ್ರೆ ಸಾಕು ಮೂರು ಮೂರು ರೀತಿಯ ಹಾಗೆ ಅದನ್ನು ಸಣ್ಣದಾಗಿ ಚೊಕ್ಕದಾದ ಫ್ರೇಮ್‌ನಲ್ಲಿ 3ಡಿ ಚಿತ್ರಣ ಮಾಡಿ ನಿಮ್ಮ ಮುಂದಿಡಲಿದೆ. ನೀವು ಗೂಗಲ್ ಬೆಂಬಲಿತ ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ ಅದರಲ್ಲಿ ಜೆಮಿನಿ ಎಐ ಆಪ್ ಇರಲಿದೆ. ಇಲ್ಲದಿದ್ದರೆ ಗೂಗಲ್‌ನಲ್ಲಿ ಜೆಮಿನಿ ಎಐ ಸರ್ಚ್ ಮಾಡಿ ಲಾಗಿನ್ ಆಗುವ ಮೂಲಕ ಸುಲಭವಾಗಿ ನೀವು ಕೂಡ ಈ ಫೋಟೋಗಳ ರಚಿಸಬಹುದು.
ಇದನ್ನು ಬಹಳ ಸುಲಭವಾಗಿ ಹಾಗೆ ಸರಳವಾಗಿ ಮಾಡಬಹುದು. ನಿಮ್ಮ ಫೋಟೋವನ್ನು ಗೂಗಲ್ ಜೆಮಿನಿಯಲ್ಲಿ ಅಪ್‌ಲೋಡ್ ಮಾಡಿ ನಂತರ ಒಂದು ಸಣ್ಣ ಟೆಕ್ಷ್ಟ್ ಪ್ರಾಂಮ್ಟ್ ಹಾಕಿದರೆ ನಿಮಿಷದೊಳಗೆ ಈ ರೀತಿಯ ಫೋಟೋ ಬರಲಿದೆ. ಹಾಗಾದ್ರೆ ಈ ಫೋಟೋವನ್ನು ನೀವು ಕೂಡ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದಿಕೊಳ್ಳೋಣ.
ಮೊದಲು ಗೂಗಲ್ ಜೆಮಿನಿ ಓಪನ್ ಮಾಡಿ ಅದರಲ್ಲಿ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿ. ನಂತರ ಅದರ ಕೆಳಗೆ "Create a 1/7 scale commercialised figurine of the characters in the picture, in a realistic style, in a real environment. The figurine is placed on a computer desk. The figurine has a round transparent acrylic base, with no text on the base. The content on the computer screen is a 3D modelling process of this figurine. Next to the computer screen is a toy packaging box, designed in a style reminiscent of high-quality collectible figures, printed with original artwork. The packaging features two-dimensional flat illustrations." ಎಂಬ ಪ್ರಾಂಮ್ಟ್ ಅನ್ನೆ ಯಥಾವತ್ತಾಗಿ ಬಳಸಿ.
ನಿಮಗೆ ಈ ಫೋಟೋ ಬೇಡವಾದರೆ ಮೇಲೆ ನೀಡಿರುವ ಇಂಗ್ಲಿಷ್ ಪ್ರಾಂಮ್ಟ್ ಅನ್ನು ಬದಲಾಯಿಸಿಕೊಳ್ಳಬಹುದು. ನೀವು ನೀಡಿದ ಮಾಹಿತಿಯನ್ನು ಆಧರಿಸಿ ನಿಮ್ಮ ಫೋಟೋ ರೆಡಿ ಮಾಡಿ ನೀಡಲಿದೆ. ನೀವು ಸಹ ಈ ರೀತಿ ಫೋಟೋವನ್ನು ಟ್ರೈ ಮಾಡಿ ನೋಡಿ.



Click it and Unblock the Notifications











